ನಮ್ಮ ಭಿದುರಾದ ಭೂಗ್ರಹ ಭವಿಷ್ಯತ್ತಿನ ಕುರಿತೇನು?
ಇನ್ನೂರು ವರ್ಷಗಳ ಹಿಂದೆ, ಅಮೆರಿಕನ್ ರಾಜನೀತಿಜ್ಞ ಪ್ಯಾಟ್ರಿಕ್ ಹೆನ್ರಿ ಹೇಳಿದ್ದು: “ಭವಿಷ್ಯತ್ತಿನ ಕುರಿತು ಕಾಲಜ್ಞಾನ ಹೇಳುವ ಒಂದೇ ಒಂದು ಮಾರ್ಗವು, ಗತಕಾಲದ ಘಟನೆಗಳನ್ನು ಪುನರ್ವಿಮರ್ಶಿಸುವುದಾಗಿದೆ.” ಗತಕಾಲದಲ್ಲಿ ಮನುಷ್ಯನು ಪರಿಸರದ ಮೇಲೆ ದಬ್ಬಾಳಿಕೆ ನಡಸಿದ್ದಾನೆ. ಭವಿಷ್ಯತ್ತಿನಲ್ಲಿ ಅವನು ಹೆಚ್ಚು ಉತ್ತಮವಾದ ಒಂದು ರೀತಿಯಲ್ಲಿ ವರ್ತಿಸಲಾರಂಭಿಸುವನೊ? ಇಷ್ಟರ ವರೆಗೆ, ಸೂಚನೆಗಳು ಉತ್ತೇಜನದಾಯಕವಾಗಿಲ್ಲ.
ಸ್ವಲ್ಪ ಶ್ಲಾಘನೀಯವಾದ ಪ್ರಗತಿಯು ಮಾಡಲ್ಪಟ್ಟಿರುವುದಾದರೂ, ಕಾರಣಗಳಿಗೆ ಬದಲಾಗಿ ರೋಗಲಕ್ಷಣಗಳನ್ನು ಸಂಬೋಧಿಸುತ್ತಾ, ಇದು ಪ್ರಮುಖವಾಗಿ ಮೇಲ್ಮೈಯದ್ದಾಗಿದೆ. ಒಂದು ಮನೆಯಲ್ಲಿ ಮರಕ್ಕೆ ಸುರುಬು ಹಿಡಿದಿರುವುದಾದರೆ, ಮರದ ಸಾಮಾನುಗಳಿಗೆ ಬಣ್ಣಹಾಕುವುದು ಅದರ ಕುಸಿತವನ್ನು ತಡೆಗಟ್ಟದು. ರಚನಾ ಕ್ರಮದ ಒಂದು ಪ್ರಮುಖ ಪುನರ್ ರೂಪಿಸುವಿಕೆಯು ಮಾತ್ರವೇ ಮನೆಯನ್ನು ರಕ್ಷಿಸಬಲ್ಲದು. ತದ್ರೀತಿಯಲ್ಲಿ, ಮನುಷ್ಯನು ಈ ಭೂಗ್ರಹವನ್ನು ಉಪಯೋಗಿಸುವ ರೀತಿಯ ಒಂದು ಪುನರ್ ರಚಿಸುವಿಕೆಯು ಇರಲೇಬೇಕು. ಬರಿಯ ಹಾನಿ ನಿಯಂತ್ರಣವು ಸಾಕಾಗದು.
ಅಮೆರಿಕದಲ್ಲಿನ 20 ವರ್ಷಗಳ ಪರಿಸರೀಯ ನಿಯಂತ್ರಣಗಳ ಫಲಿತಾಂಶಗಳನ್ನು ವಿಶ್ಲೇಷಿಸುತ್ತಾ, ಒಬ್ಬ ಪರಿಣತನು ಮುಕ್ತಾಯಗೊಳಿಸಿದ್ದು: “ಪರಿಸರದ ಮೇಲಿನ ಆಕ್ರಮಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ತಡೆಗಟ್ಟಲ್ಪಡಬೇಕು.” ಸ್ಪಷ್ಟವಾಗಿಯೇ, ಅದರ ಅನಾರೋಗ್ಯಕರ ಪರಿಣಾಮಗಳನ್ನು ವಾಸಿಮಾಡುವುದಕ್ಕಿಂತಲೂ ಮಾಲಿನ್ಯವನ್ನು ತಡೆಗಟ್ಟುವುದು ಹೆಚ್ಚು ಉತ್ತಮ. ಆದರೆ ಅಂತಹ ಒಂದು ಗುರಿಯನ್ನು ಸಾಧಿಸುವುದು, ಮಾನವ ಸಮಾಜದಲ್ಲಿ ಮತ್ತು ದೊಡ್ಡ ವ್ಯಾಪಾರದ ಕೇಂದ್ರದಲ್ಲಿ ಮೂಲಭೂತವಾದ ಬದಲಾವಣೆಯನ್ನು ಅಗತ್ಯಪಡಿಸುತ್ತದೆಂಬುದು ನಿಶ್ಚಯ. ಭೂಮಿಗಾಗಿ ಕಾಳಜಿ ವಹಿಸುವುದು, “ಇಂದು ಬಳಕೆಯಲ್ಲಿರುವಂತಹ ಅಧಿಕಾಂಶ ಮೌಲ್ಯಗಳು, ಆರ್ಥಿಕ ನಿರ್ವಹಣಗಳು ಮತ್ತು ಸಮಾಜಗಳಿಗಿಂತ ವಿಭಿನ್ನವಾದ”ವುಗಳನ್ನು ಅಗತ್ಯಪಡಿಸುತ್ತದೆ, ಎಂದು ಭೂಮಿಗಾಗಿ ಕಾಳಜಿ ವಹಿಸುವುದು (ಇಂಗ್ಲಿಷ್) ಎಂಬ ಪುಸ್ತಕವು ಅಂಗೀಕರಿಸುತ್ತದೆ. ಭೂಗ್ರಹವನ್ನು ರಕ್ಷಿಸಲಿಕ್ಕಾಗಿ ಬದಲಾಯಿಸಲ್ಪಡಬೇಕಾದ ಅಗತ್ಯವಿರುವ ಈ ಮೌಲ್ಯಗಳಲ್ಲಿ ಕೆಲವು ಯಾವುವು?
ಬಿಕ್ಕಟ್ಟಿನ ಸುದೃಢ ಕಾರಣಗಳು
ಸ್ವಾರ್ಥ. ಲೂಟಿ ಮಾಡುವ ಮನುಷ್ಯರ ಅಭಿರುಚಿಗಳಿಗೆ ಮುಂಚಿತವಾಗಿ ಭೂಗ್ರಹದ ಅಭಿರುಚಿಗಳನ್ನು ಇಡುವುದು, ಪರಿಸರವನ್ನು ಸಂರಕ್ಷಿಸುವುದರ ಕಡೆಗಿನ ಪ್ರಥಮವಾಗಿ ಅಗತ್ಯವಾದ ಹೆಜ್ಜೆಯಾಗಿದೆ. ಆದರೆ, ತಮ್ಮ ಭವಿಷ್ಯದ ಸಂತತಿಗಳಿಗಾಗಿ ಇದು ಭೂಗ್ರಹವನ್ನು ಹಾಳುಗೆಡವುತ್ತಿರಬಹುದಾದರೂ, ಸಂಪತ್ಸಮೃದ್ಧ ಜೀವನ ಶೈಲಿಯನ್ನು ತೊರೆದುಬಿಡಲು ಸಿದ್ಧರಾಗಿರುವವರು ಕೊಂಚ ಜನ. ಪಶ್ಚಿಮ ಯೂರೋಪಿನ ಅತ್ಯಂತ ಮಲಿನಗೊಂಡ ದೇಶಗಳಲ್ಲಿ ಒಂದಾದ ನೆದರ್ಲೆಂಡ್ಸ್ನ ಸರಕಾರವು, ಮಾಲಿನ್ಯನಿರೋಧಕ ಚಳವಳಿಯ ಒಂದು ಭಾಗದೋಪಾದಿ ಕಾರು ಪ್ರಯಾಣವನ್ನು ಪರಿಮಿತಗೊಳಿಸಲು ಪ್ರಯತ್ನಿಸಿದಾಗ, ವ್ಯಾಪಕವಾದ ವಿರೋಧವು ಆ ಯೋಜನೆಗೆ ಭಂಗವನ್ನು ತಂದಿತು. ನೆದರ್ಲೆಂಡ್ಸ್ನಲ್ಲಿರುವ ರಸ್ತೆಗಳು, ಲೋಕದಲ್ಲಿನ ಅತ್ಯಂತ ನಿಬಿಡವಾದ ರಸ್ತೆಗಳಾಗಿರುವಾಗ್ಯೂ, ಮೋಟಾರು ವಾಹನ ಚಾಲಕರು ತಮ್ಮ ಸ್ವಾತಂತ್ರ್ಯವನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ.
ನಿರ್ಧಾರ ಮಾಡುವವರನ್ನು ಹಾಗೂ ಸಾಮಾನ್ಯ ಸಾರ್ವಜನಿಕರನ್ನು ಸ್ವಾರ್ಥಾಸಕ್ತಿಯು ಬಾಧಿಸುತ್ತದೆ. ರಾಜಕಾರಣಿಗಳು, ಅವರಿಗೆ ಮತಗಳನ್ನು ನಷ್ಟಮಾಡಬಹುದಾದ ಪರಿಸರೀಯ ಕಾರ್ಯನೀತಿಗಳನ್ನು ನೆರವೇರಿಸಲು ಅನಿಚ್ಛೆಯುಳ್ಳವರಾಗಿದ್ದಾರೆ, ಮತ್ತು ಲಾಭಗಳಿಗೆ ಮತ್ತು ಆರ್ಥಿಕ ಬೆಳವಣಿಗೆಗೆ ಅಪಾಯವನ್ನೊಡ್ಡಬಹುದಾದ ಯಾವುದೇ ಪ್ರಸ್ತಾಪಗಳಿಗೆ, ಕೈಗಾರಿಕೆ ಕಸಬುದಾರರು ತಡೆಹಾಕುತ್ತಾರೆ.
ಲೋಭ. ಲಾಭಗಳು ಮತ್ತು ಸಂರಕ್ಷಣೆಯ ನಡುವಿನ ಆಯ್ಕೆಗೆ ಬರುವಾಗ, ಹಣಕ್ಕೆ ಹೆಚ್ಚಿನ ಶಕ್ತಿ ಮತ್ತು ಪ್ರಭಾವವಿದೆ. ಮಾಲಿನ್ಯ ನಿಯಂತ್ರಣವನ್ನು ಕಡಿಮೆಗೊಳಿಸಲು ಅಥವಾ ಸರಕಾರದ ನಿಬಂಧನೆಗಳನ್ನು ಸಂಪೂರ್ಣವಾಗಿ ತೊರೆಯಲು, ಪ್ರಬಲವಾದ ಉದ್ಯಮಗಳು ಸಾರ್ವಜನಿಕ ಅಧಿಕಾರಿಗಳನ್ನು ಪ್ರೇರೇಪಿಸುತ್ತವೆ. ಓಸೋನ್ ಪದರಕ್ಕಾದ ಹಾನಿಯು ಈ ಸಮಸ್ಯೆಯನ್ನು ಉದಾಹರಿಸುತ್ತದೆ. ಮಾರ್ಚ್ 1988ರಷ್ಟು ಇತ್ತೀಚೆಗೆ, ಪ್ರಧಾನ ಯು.ಎಸ್. ರಾಸಾಯನಿಕ ಕಂಪೆನಿಯೊಂದರ ಅಧ್ಯಕ್ಷರು ಹೇಳಿದ್ದು: “ಈ ಕ್ಷಣದಲ್ಲಿ, ವೈಜ್ಞಾನಿಕ ಪುರಾವೆಯು ಸಿಎಫ್ಸಿಯ ಹೊರಸೂಸುವಿಕೆಯ ಹಠಾತ್ತಾದ ತಗ್ಗುವಿಕೆಗಾಗಿರುವ ಅಗತ್ಯದ ಕಡೆಗೆ ನಿರ್ದೇಶಿಸುವುದಿಲ್ಲ.”
ಆದರೂ, ಅದೇ ಕಂಪೆನಿಯು, ಕ್ಲೋರೋಫ್ಲುಅರೋಕಾರ್ಬನ್ಸ್ (CFCs)ನ ಉತ್ಪಾದನೆಯನ್ನು ಪರ್ಯಾಯ ಕ್ರಮದಿಂದ ಸಂಪೂರ್ಣವಾಗಿ ನಿಲ್ಲಿಸುವುದನ್ನು ಶಿಫಾರಸ್ಸು ಮಾಡಿತು. ಹೃದಯದ ಒಂದು ಬದಲಾವಣೆಯೊ? “ಪರಿಸರವು ಹಾನಿಗೊಳಿಸಲ್ಪಡುತ್ತಿದೆಯೊ ಇಲ್ಲವೊ ಎಂಬುದರೊಂದಿಗೆ ಅದಕ್ಕೆ ಸಂಬಂಧವಿರಲಿಲ್ಲ” ಎಂದು, ವಿಶ್ವ ಸಂಸ್ಥೆಯ ಪರಿಸರ ಕಾರ್ಯಯೋಜನೆ (UNEP)ಯ ಡೈರೆಕ್ಟರ್ ಜನರಲ್ರಾದ ಮುಸ್ತಾಫಾ ಟಾಲ್ಬ ವಿವರಿಸಿದರು. “ಅದೆಲ್ಲವೂ, ಯಾರು [ಆರ್ಥಿಕ] ಪ್ರಯೋಜನವನ್ನು ಗಳಿಸಲಿದ್ದರು ಎಂಬುದರ [ಕುರಿತಾ]ಗಿತ್ತು.” ಓಸೋನ್ ಪದರದ ವಿನಾಶವು, ಇತಿಹಾಸದಲ್ಲಿನ ಅತ್ಯಂತ ಕೆಟ್ಟದ್ದಾದ, ಮಾನವ ನಿರ್ಮಿತ ಪರಿಸರೀಯ ಮಹಾದುರಂತಗಳಲ್ಲಿ ಒಂದಾಗಿದೆಯೆಂದು ಇಂದು ಅನೇಕ ವಿಜ್ಞಾನಿಗಳು ಗ್ರಹಿಸುತ್ತಾರೆ.
ಅಜ್ಞಾನ. ನಮಗೆ ತಿಳಿಯದೆ ಇರುವಂತಹ ಎಷ್ಟೋ ವಿಷಯಗಳಿವೆ. “ಉಷ್ಣವಲಯದ ಮಳೆ ಕಾಡುಗಳಲ್ಲಿನ ಜೀವದ ಸಮೃದ್ಧಿಯ ಕುರಿತು ನಾವು ಇನ್ನೂ ಸಂಬಂಧಸೂಚಕವಾಗಿ ಸ್ವಲ್ಪ ವಿಷಯವನ್ನು ತಿಳಿದಿದ್ದೇವೆ” ಎಂದು, ಮಿಸೂರಿ ಸಸ್ಯೋದ್ಯಾನದ ಡೈರೆಕ್ಟರರಾದ ಪೀಟರ್ ಏಚ್. ರೇವನ್ ವಿವರಿಸುತ್ತಾರೆ. “ಆಶ್ಚರ್ಯಕರವಾಗಿ, ಚಂದ್ರನ ಮೇಲ್ಮೈಯ ಕುರಿತಾಗಿ ನಮಗೆ ಹೆಚ್ಚು—ಅತ್ಯಧಿಕ—ವಿಷಯಗಳು ತಿಳಿದಿವೆ.” ವಾಯುಮಂಡಲದ ಕುರಿತಾಗಿಯೂ ಇದು ಸತ್ಯವಾಗಿದೆ. ಭೌಗೋಲಿಕ ವಾತಾವರಣವನ್ನು ಬಾಧಿಸದೆ, ನಾವು ಆಕಾಶದೊಳಕ್ಕೆ ಎಷ್ಟು ಇಂಗಾಲದ ಡೈಆಕ್ಸೈಡನ್ನು ಪಂಪ್ಮಾಡುತ್ತಾ ಇರಬಲ್ಲೆವು? ಯಾರಿಗೂ ತಿಳಿದಿಲ್ಲ. ಆದರೆ ಟೈಮ್ ಪತ್ರಿಕೆಯು ಹೇಳಿದಂತೆ, “ಪರಿಣಾಮವು ಅವಿದಿತವಾಗಿರುವಾಗ ಮತ್ತು ಸಾಧ್ಯವಿರುವ ಪರಿಣಾಮಗಳು ಪರಿಭಾವಿಸಲು ತೀರ ದಿಗಿಲುಗೊಳಿಸುವಂತಹವುಗಳಾಗಿರುವಾಗ, ನಿಸರ್ಗವನ್ನು ಅಂತಹ ಬೃಹತ್ ಪ್ರಯೋಗಗಳಿಗೆ ಒಳಪಡಿಸುವುದು ಮುಂದಾಲೋಚನೆಯಿಲ್ಲದ್ದಾಗಿದೆ.”
ಯುಎನ್ಈಪಿ ಅಂದಾಜುಗಳಿಗನುಸಾರ, ಈ ದಶಕದ ಅಂತ್ಯದಷ್ಟಕ್ಕೆ, ಓಸೋನಿನ ನಷ್ಟವು ಕಟ್ಟಕಡೆಗೆ ಪ್ರತಿ ವರ್ಷ ಚರ್ಮದ ಕ್ಯಾನ್ಸರಿನ ನೂರಾರು ಸಾವಿರ ಹೊಸ ರೋಗಿಗಳನ್ನು ಉಂಟುಮಾಡುವುದು ಸಾಧ್ಯವಿದೆ. ಬೆಳೆಗಳು ಮತ್ತು ಮೀನುಗಾರಿಕೆಗಳ ಮೇಲಿನ ಪರಿಣಾಮವು ಇನ್ನೂ ಅವಿದಿತವಾಗಿದೆ, ಆದರೆ ಅದು ಗಣನೀಯವಾಗಿರುವುದೆಂದು ನಿರೀಕ್ಷಿಸಲಾಗಿದೆ.
ದೂರದೃಷ್ಟಿಯಿಲ್ಲದ ದೃಷ್ಟಿಕೋನಗಳು. ಇತರ ಮಹಾದುರಂತಗಳಿಗೆ ಅಸದೃಶವಾಗಿ, ಪರಿಸರೀಯ ಸಮಸ್ಯೆಗಳು ನಮ್ಮ ಮೇಲೆ ಅಗೋಚರವಾಗಿ ಬಂದು ಸೇರಿಕೊಳ್ಳುತ್ತವೆ. ಇದು ಶಾಶ್ವತವಾದ ಹಾನಿಯು ಮಾಡಲ್ಪಡುವ ಮೊದಲು ಯೋಜಿತ ಕ್ರಿಯೆಯನ್ನು ನಡೆಸುವ ಪ್ರಯತ್ನಗಳನ್ನು ಪ್ರತಿಬಂಧಿಸುತ್ತದೆ. ಭೂಗ್ರಹವನ್ನು ರಕ್ಷಿಸುವುದು (ಇಂಗ್ಲಿಷ್) ಎಂಬ ಪುಸ್ತಕವು, ನಮ್ಮ ಸದ್ಯದ ಸನ್ನಿವೇಶವನ್ನು, 1912ರಲ್ಲಿ ದುರ್ಬಲವಾದ ಟೈಟ್ಯಾನಿಕ್ನಲ್ಲಿದ್ದ—ದುರ್ಗತಿಗೆ ಗುರಿಪಡಿಸಲ್ಪಟ್ಟ—ಪ್ರಯಾಣಿಕರ ಸನ್ನಿವೇಶಕ್ಕೆ ಹೋಲಿಸುತ್ತದೆ: “ಸಂಭಾವ್ಯ ದುರಂತದ ಅನುಪಾತಗಳ ಕುರಿತು ಕೇವಲ ಕೆಲವರು ಅರಿವುಳ್ಳವರಾಗಿದ್ದಾರೆ.” ರಾಜಕಾರಣಿಗಳು ಮತ್ತು ವ್ಯಾಪಾರಸ್ಥರು ವಾಸ್ತವಿಕತೆಯನ್ನು ಧೈರ್ಯದಿಂದ ಎದುರಿಸಿ, ಅಲ್ಪಾವಧಿಯ ಪ್ರಯೋಜನಗಳಿಗೆ ಬದಲಾಗಿ ದೀರ್ಘಾವಧಿಯ ಜೀವನ ಸಾಮರ್ಥ್ಯದ ಪರಿಭಾಷೆಯಲ್ಲಿ ಅಲೋಚಿಸುವಲ್ಲಿ ಮಾತ್ರವೇ, ಈ ಭೂಗ್ರಹವನ್ನು ರಕ್ಷಿಸಸಾಧ್ಯವಿದೆಯೆಂದು ಲೇಖಕರು ನಂಬುತ್ತಾರೆ.
ಸ್ವವಿಚಾರಾಸಕ್ತ ಮನೋಭಾವಗಳು. “ಸಮಸ್ಯೆಯು ಭೌಗೋಲಿಕವಾಗಿದೆ, ಮತ್ತು ಪರಿಹಾರವೂ ಭೌಗೋಲಿಕವಾಗಿರಲೇಬೇಕು” ಎಂದು, 1992ರಲ್ಲಿನ ಅರ್ತ್ ಸಮಿಟ್ನಲ್ಲಿ, ಸ್ಪ್ಯಾನಿಷ್ ಪ್ರಧಾನ ಮಂತ್ರಿಯಾದ ಫೇಲೀಪೆ ಗೊಂಸಾಲೆಸ್ ಸೂಚಿಸಿದರು. ಅದು ಒಂದು ನೈಜ ಹೇಳಿಕೆಯಾಗಿದೆ, ಆದರೆ ಭೌಗೋಲಿಕವಾಗಿ ಅಂಗೀಕಾರಾರ್ಹವಾಗಿರುವ ಪರಿಹಾರಗಳನ್ನು ಕಂಡುಹಿಡಿಯುವುದು, ಎದೆಗುಂದಿಸುವಂತಹ ಒಂದು ಕೆಲಸವಾಗಿದೆ. ಅರ್ತ್ ಸಮಿಟ್ಗೆ ಬಂದ ಯು.ಎಸ್. ಪ್ರತಿನಿಧಿಯೊಬ್ಬನು ನಿರ್ದಾಕ್ಷಿಣ್ಯವಾಗಿ ಹೇಳಿದ್ದು: “ಅಮೆರಿಕದವರು ತಮ್ಮ ಜೀವನ ಶೈಲಿಯನ್ನು ತೊರೆಯಲಾರರು.” ಇನ್ನೊಂದು ಕಡೆಯಲ್ಲಿ, “ಪೂರ್ವ ದೇಶಗಳಲ್ಲಿ 125ರಷ್ಟು ಹೆಚ್ಚು ಜನರು ವ್ಯಯಮಾಡುವುದನ್ನು, ಪಶ್ಚಿಮ ದೇಶಗಳಲ್ಲಿ ಒಂದು ಮಗುವು ವ್ಯಯಮಾಡುತ್ತದೆ” ಎಂದು ಭಾರತೀಯ ಪರಿಸರವಾದಿ ಮೇನಕಾ ಗಾಂಧಿ ದೂರಿದರು. “ಪೂರ್ವ ದೇಶಗಳಲ್ಲಿನ ಬಹುಮಟ್ಟಿಗಿನ ಎಲ್ಲಾ ಪರಿಸರೀಯ ಅವನತಿಯು, ಪಶ್ಚಿಮ ದೇಶಗಳಲ್ಲಿನ ವ್ಯಯಮಾಡುವಿಕೆಯ ಕಾರಣದಿಂದಾಗಿದೆ” ಎಂದು ಅವರು ಪ್ರತಿಪಾದಿಸಿದರು. ಮತ್ತೆ ಮತ್ತೆ, ಸ್ವವಿಚಾರಾಸಕ್ತ ರಾಷ್ಟ್ರೀಯ ಅಭಿರುಚಿಗಳ ಕಾರಣದಿಂದ, ಪರಿಸರವನ್ನು ಉತ್ತಮಗೊಳಿಸುವ ಅಂತಾರಾಷ್ಟ್ರೀಯ ಪ್ರಯತ್ನಗಳು ಕುಸಿದಿವೆ.
ಮೂಲಭೂತವಾದ ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ, ಭವಿಷ್ಯತ್ತಿನ ಕಡೆಗೆ ಭರವಸೆಯಿಂದ ನೋಡಲು ಕಾರಣಗಳಿವೆ. ಅವುಗಳಲ್ಲಿ ಒಂದು, ನಮ್ಮ ಭೂಗ್ರಹದ ರಕ್ಷಣಾ ವ್ಯವಸ್ಥೆಯ ಸ್ಥಿತಿಸ್ಥಾಪಕತೆಯಾಗಿದೆ.
ಭೂಮಿಯ ಗುಣಪಡಿಸಿಕೊಳ್ಳುವಿಕೆ
ಮಾನವ ಶರೀರದಂತೆ, ಭೂಮಿಗೆ ಸ್ವತಃ ಗುಣಪಡಿಸಿಕೊಳ್ಳುವಂತಹ ಅದ್ಭುತಕರವಾದ ಸಾಮರ್ಥ್ಯವಿದೆ. ಕಳೆದ ಶತಮಾನದಲ್ಲಿ ಇದರ ಪ್ರಮುಖವಾದ ಒಂದು ಉದಾಹರಣೆಯು ಸಂಭವಿಸಿತು. 1883ರಲ್ಲಿ, ಇಂಡೊನೇಶಿಯಾದ ಕ್ರ್ಯಾಕಟಾವು (ಕ್ರ್ಯಾಕಟೋಅ) ಜ್ವಾಲಾಮುಖಿ ದ್ವೀಪವು, ಬಹುತೇಕ 5,000 ಕಿಲೊಮೀಟರ್ನಷ್ಟು ದೂರದಲ್ಲಿ ಕೇಳಲ್ಪಟ್ಟ ವಿಪರೀತ ದೊಡ್ಡ ಸ್ಫೋಟನವೊಂದರಲ್ಲಿ ಹೊರಚಿಮ್ಮಿತು. ಸುಮಾರು 21 ಘನ ಕಿಲೊಮೀಟರ್ನಷ್ಟು ಪದಾರ್ಥವು ಆಕಾಶದೊಳಕ್ಕೆ ಎಸೆಯಲ್ಪಟ್ಟಿತು, ಮತ್ತು ದ್ವೀಪದ ಮೂರನೇ ಎರಡು ಭಾಗವು ಸಮುದ್ರದ ಕೆಳಗೆ ಅದೃಶ್ಯವಾಯಿತು. ಒಂಬತ್ತು ತಿಂಗಳುಗಳ ನಂತರ, ಸೂಕ್ಷ್ಮದರ್ಶಕೀಯ ಜೇಡರ ಹುಳುವು, ಜೀವದ ಒಂದೇ ಒಂದು ಗುರುತಾಗಿತ್ತು. ಇಂದು ನೂರಾರು ಜಾತಿಯ ಪಕ್ಷಿಗಳು, ಸಸ್ತನಿಗಳು, ಹಾವುಗಳು, ಮತ್ತು ಕೀಟಗಳಿಗೆ ಆಶ್ರಯವಾಗಿರುವ, ಸಮೃದ್ಧವಾದ ಉಷ್ಣವಲಯದ ಸಸ್ಯಜೀವನದಿಂದ ಇಡೀ ದ್ವೀಪವು ಆವರಿಸಲ್ಪಟ್ಟಿದೆ. ಊಜಂಗ್ ಕೂಲಾನ್ ರಾಷ್ಟ್ರೀಯ ಉದ್ಯಾನವನದ ಭಾಗದೋಪಾದಿ ದ್ವೀಪವು ಅನುಭೋಗಿಸುವ ಸಂರಕ್ಷಣೆಯಿಂದ, ಈ ಪುನರ್ ಚೈತನ್ಯವು ಪ್ರೋತ್ಸಾಹಿಸಲ್ಪಟ್ಟಿದೆ ಎಂಬುದರಲ್ಲಿ ಸಂಶಯವಿಲ್ಲ.
ಮಾನವ ಹಾನಿಯನ್ನು ಸಹ ತೊಡೆದುಹಾಕಸಾಧ್ಯವಿದೆ. ಸಾಕಷ್ಟು ಸಮಯವಿರುವಲ್ಲಿ, ಭೂಮಿಯು ತನ್ನನ್ನು ಗುಣಪಡಿಸಿಕೊಳ್ಳಬಲ್ಲದು. ಭೂಮಿಗೆ ಅಗತ್ಯವಾಗಿರುವ ವಿರಾಮವನ್ನು ಮನುಷ್ಯರು ಅದಕ್ಕೆ ಕೊಡುವರೊ? ಎಂಬುದು ಪ್ರಶ್ನೆಯಾಗಿದೆ. ಬಹುಶಃ ಇಲ್ಲ. ಆದರೆ ನಮ್ಮ ಭೂಗ್ರಹವು ಸ್ವತಃ ಗುಣಪಡಿಸಿಕೊಳ್ಳುವಂತೆ ಬಿಡಲು ನಿರ್ಧರಿಸಿರುವ ಯಾರೋ ಒಬ್ಬನು ಇದ್ದಾನೆ—ಅದನ್ನು ಸೃಷ್ಟಿಸಿದಾತನೇ.
“ಭೂಮಿಯು ಉಲ್ಲಾಸಗೊಳ್ಳಲಿ”
ಮನುಷ್ಯನು ಭೂಮಿಯನ್ನು ಹಾಳುಮಾಡುವಂತೆ ದೇವರು ಎಂದಿಗೂ ಉದ್ದೇಶಿಸಿರಲಿಲ್ಲ. ಏದೆನ್ ತೋಟದ ‘ವ್ಯವಸಾಯ ಮಾಡುವಂತೆ ಮತ್ತು ಕಾಳಜಿ ವಹಿಸು’ವಂತೆ ಆತನು ಆದಾಮನಿಗೆ ಹೇಳಿದನು. (ಆದಿಕಾಂಡ 2:15, NW) ಪರಿಸರವನ್ನು ಸಂರಕ್ಷಿಸುವುದಕ್ಕಾಗಿರುವ ಯೆಹೋವನ ಆಸಕ್ತಿಯು, ಆತನು ಇಸ್ರಾಯೇಲ್ಯರಿಗೆ ಕೊಟ್ಟಂತಹ ಅನೇಕ ನಿಯಮಗಳಲ್ಲಿ ಸಹ ವ್ಯಕ್ತವಾಗಿತ್ತು. ಉದಾಹರಣೆಗಾಗಿ, ಪ್ರತಿ ಏಳು ವರ್ಷಗಳಿಗೊಮ್ಮೆ—ಸಬ್ಬತ್ ವರ್ಷ—ಹೊಲವನ್ನು ಬೀಳುಬಿಡುವಂತೆ ಅವರಿಗೆ ಹೇಳಲಾಗಿತ್ತು. (ವಿಮೋಚನಕಾಂಡ 23:10, 11) ಈ ಆಜ್ಞೆಯನ್ನು ಮತ್ತು ಇತರ ದೈವಿಕ ಆಜ್ಞೆಗಳನ್ನು ಇಸ್ರಾಯೇಲ್ಯರು ಅನೇಕಾವರ್ತಿ ಕಡೆಗಣಿಸಿದಾಗ, ಅಂತಿಮವಾಗಿ ಯೆಹೋವನು ಆ ದೇಶವನ್ನು ಬಾಬೆಲಿನವರು ನಿರ್ಜನಗೊಳಿಸುವಂತೆ ಅನುಮತಿಸಿದನು, ಇದರಿಂದಾಗಿ “ದೇಶವು ತನ್ನ ಸಬ್ಬತ್ಕಾಲವನ್ನು ಅನುಭವಿಸುವ” ವರೆಗೆ, 70 ವರ್ಷಗಳ ತನಕ ಜನಶೂನ್ಯವಾಗಿ ಉಳಿಯಿತು. (2 ಪೂರ್ವಕಾಲವೃತ್ತಾಂತ 36:21) ಈ ಐತಿಹಾಸಿಕ ಪೂರ್ವನಿದರ್ಶನದ ಕಾರಣದಿಂದ, ಭೂಮಿಯು ಮನುಷ್ಯನ ಪರಿಸರೀಯ ಆಕ್ರಮಣದಿಂದ ಚೇತರಿಸಿಕೊಳ್ಳಸಾಧ್ಯವಾಗುವಂತೆ, ದೇವರು “ಲೋಕನಾಶಕರನ್ನು ನಾಶಮಾಡು”ವನೆಂದು ಬೈಬಲು ಹೇಳುವುದು ಆಶ್ಚರ್ಯಕರವಾಗಿಲ್ಲ.—ಪ್ರಕಟನೆ 11:18.
ಆದರೂ, ಈ ಕ್ರಿಯೆಯು ಕೇವಲ ಪ್ರಥಮ ಹೆಜ್ಜೆಯಾಗಿರುವುದು. ಜೀವಶಾಸ್ತ್ರಜ್ಞರಾದ ಬ್ಯಾರಿ ಕಾಮನರ್ ಸೂಕ್ತವಾಗಿ ಸೂಚಿಸುವಂತೆ, ಭೂಗ್ರಹದ ಪಾರಾಗುವಿಕೆಯು “ನಿಸರ್ಗದೊಂದಿಗಿನ ಯುದ್ಧವನ್ನು ಕೊನೆಗೊಳಿಸುವುದರ ಮೇಲೆ ಮತ್ತು ಸ್ವತಃ ನಮ್ಮ ನಡುವಿನ ಯುದ್ಧಗಳನ್ನು ಕೊನೆಗೊಳಿಸುವುದರ ಮೇಲೆ ಸಮಾನವಾಗಿ ಅವಲಂಬಿಸಿದೆ.” ಆ ಗುರಿಯನ್ನು ಸಾಧಿಸಲಿಕ್ಕಾಗಿ, ಒಬ್ಬರನ್ನೊಬ್ಬರು ಪರಾಮರಿಸಲು ಹಾಗೂ ತಮ್ಮ ಐಹಿಕ ಮನೆಯ ಕಾಳಜಿ ವಹಿಸಲು, ಭೂಮಿಯ ಜನರು “ಯೆಹೋವನಿಂದ ಶಿಕ್ಷಿತ”ರಾಗಿರಬೇಕು. ಫಲಿತಾಂಶವಾಗಿ, ಅವರ ಶಾಂತಿಯು “ಅಧಿಕ”ವಾಗಿರುವುದು.—ಯೆಶಾಯ 54:13.
ಭೂಮಿಯ ಜೀವಿಪರಿಸ್ಥಿತಿ ವ್ಯವಸ್ಥೆಯ ನವೀಕರಣವು ಇರುವುದೆಂದು ದೇವರು ಆಶ್ವಾಸನೆ ಕೊಡುತ್ತಾನೆ. ನಿಷ್ಕಾರುಣ್ಯವಾಗಿ ಅಭಿವೃದ್ಧಿಹೊಂದುವ ಬದಲಾಗಿ, ಮರುಭೂಮಿಗಳು “ಕೇಸರಿಯಂತೆ ಹೂಬಿಡು”ವವು. (ಯೆಶಾಯ 35:1, NW) ಆಹಾರದ ಅಭಾವಗಳಿಗೆ ಬದಲಾಗಿ, “ಭೂಮಿಯ ಮೇಲೆ ಸಮೃದ್ಧವಾಗಿ ಬೆಳೆಯು” ಇರುವುದು. (ಕೀರ್ತನೆ 72:16, NW) ಮಾಲಿನ್ಯದಿಂದ ನಶಿಸಿಹೋಗುವುದಕ್ಕೆ ಬದಲಾಗಿ, ಭೂಮಿಯ ನದಿಗಳು “ಚಪ್ಪಾಳೆಹೊಡೆ”ಯುವವು.—ಕೀರ್ತನೆ 98:8.
ಅಂತಹ ಒಂದು ಪರಿವರ್ತನೆಯು ಯಾವಾಗ ಸಾಧ್ಯವಾಗುವುದು? “ಸ್ವತಃ ಯೆಹೋವನು ರಾಜನಾಗಿ ಪರಿಣಮಿಸಿ”ದಾಗಲೇ. (ಕೀರ್ತನೆ 96:10, NW) ಭೂಮಿಯ ಮೇಲಿರುವ ಪ್ರತಿಯೊಂದು ಸಜೀವ ಜೀವಿಗೆ ದೇವರ ಆಳ್ವಿಕೆಯು ಒಂದು ಆಶೀರ್ವಾದದ ಖಾತ್ರಿಕೊಡುವುದು. “ಭೂಮಿಯು ಉಲ್ಲಾಸಗೊಳ್ಳಲಿ” ಎಂದು ಕೀರ್ತನೆಗಾರನು ಹೇಳುತ್ತಾನೆ. “ಸಮುದ್ರವೂ ಅದರಲ್ಲಿರುವುದೆಲ್ಲವೂ ಪ್ರತಿಧ್ವನಿಸಲಿ; ಹೊಲಗಳೂ ಅವುಗಳಲ್ಲಿ ಇರುವುದೆಲ್ಲವೂ ಹಿಗ್ಗಿಮೆರೆಯಲಿ. ಆಗ ಅರಣ್ಯದ ಎಲ್ಲಾ ಮರಗಳು ಹರ್ಷದಿಂದ ಹಾಡುವವು.”—ಕೀರ್ತನೆ 96:11, 12, ನ್ಯೂ ಇಂಟರ್ನ್ಯಾಷನಲ್ ವರ್ಷನ್.
ಅದರ ಸೃಷ್ಟಿಕರ್ತನಿಂದ ಆಶೀರ್ವದಿಸಲ್ಪಡುವ ಮತ್ತು ನೀತಿಯಿಂದ ಆಳಲ್ಪಡುವ ಒಂದು ಭೂಮಿಗೆ, ಮಹಿಮಾಭರಿತವಾದ ಭವಿಷ್ಯತ್ತು ಇದೆ. ಫಲಿತಾಂಶಗಳನ್ನು ಬೈಬಲು ವರ್ಣಿಸುತ್ತದೆ: “ನೀತಿಯೂ ಸಮಾಧಾನವೂ ಮುದ್ದಿಟ್ಟುಕೊಳ್ಳುವವು. ಸತ್ಯತೆಯು ಭೂಮಿಯಿಂದ ಹುಟ್ಟುವದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವದು. ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವದು.” (ಕೀರ್ತನೆ 85:10-12) ಆ ದಿನವು ಉದಯಿಸುವಾಗ, ನಮ್ಮ ಭೂಗ್ರಹವು ಸದಾ ಕಾಲಕ್ಕೂ ಅಪಾಯದಿಂದ ಮುಕ್ತವಾಗುವುದು.
[ಪುಟ 24 ರಲ್ಲಿರುವ ಚಿತ್ರ]
ಮಾನವ ಶರೀರದಂತೆ, ಭೂಮಿಗೆ ಸ್ವತಃ ಗುಣಪಡಿಸಿಕೊಳ್ಳುವಂತಹ ಅದ್ಭುತಕರವಾದ ಸಾಮರ್ಥ್ಯವಿದೆ