ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 9/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸ್ತ್ರೀಯರ ನಡುವೆ ಕೆಟ್ಟ ನಡತೆಯಲ್ಲಿ ವೃದ್ಧಿ
  • ಸಾಮಾನ್ಯವಾದ ಮೂಲಗಳೊ?
  • ಟಿಬಿ—ಒಂದು “ಭೌಗೋಲಿಕ ತುರ್ತುಪರಿಸ್ಥಿತಿ”
  • ಲೋಕದ ಎರಡನೆಯ ಅತ್ಯಂತ ದೊಡ್ಡ “ಉದ್ಯಮ”
  • ಟಿವಿ ಮಟ್ಟಗಳು ಕ್ಷೀಣಿಸುತ್ತಿವೆ
  • ಬಿಷಪ್‌ ಬೈಬಲ್‌ ವಿವೇಕವನ್ನು ಸಂದೇಹಿಸುತ್ತಾರೆ
  • ಭಾರತದ ಏಚ್‌ಐವಿ ತಳಿ
  • 100 ವರ್ಷ ವಯಸ್ಸಿನ ಬೆಂಕಿ ನಂದಿಸಲ್ಪಡುತ್ತದೆ
  • ಅಪ್ರಾಪ್ತ ತಾಯ್ತನ
  • ಅಧಿಕ ರಕ್ತದೊತ್ತಡ ಮತ್ತು ಜ್ಞಾಪಕಶಕ್ತಿಯ ನಷ್ಟ
  • ಆಕಸ್ಮಿಕವಾಗಿ ಗ್ರಹವು ಕಂಡುಹಿಡಿಯಲ್ಪಟ್ಟದ್ದು
  • ಅಕ್ಕಿ ರೈತರಿಗಾಗಿ ಒಂದು ಆಶ್ಚರ್ಯ
  • ವಿಜಯ ಮತ್ತು ವಿಷಾದಾಂತ
    ಎಚ್ಚರ!—1998
  • ಕ್ಷಯರೋಗದ—ಹೋರಾಟದಲ್ಲಿ ಒಂದು ನವೀನ ನಿರೋಧಕ
    ಎಚ್ಚರ!—1999
  • ಕ್ಷಯರೋಗವು ಪುನರಾಕ್ರಮಿಸುತ್ತದೆ!
    ಎಚ್ಚರ!—1996
  • ಒಂದು ಮಾರಕ ಮೈತ್ರಿ
    ಎಚ್ಚರ!—1998
ಇನ್ನಷ್ಟು
ಎಚ್ಚರ!—1996
g96 9/8 ಪು. 28-29

ಜಗತ್ತನ್ನು ಗಮನಿಸುವುದು

ಸ್ತ್ರೀಯರ ನಡುವೆ ಕೆಟ್ಟ ನಡತೆಯಲ್ಲಿ ವೃದ್ಧಿ

• ಆಸ್ಟ್ರೇಲಿಯದಲ್ಲಿನ ಯುವ ಸ್ತ್ರೀಯರು ಅಧಿಕ ಸಂಖ್ಯೆಗಳಲ್ಲಿ ದುರ್ಭಾಷೆಯನ್ನು ಉಪಯೋಗಿಸುತ್ತಿದ್ದಾರೆಂದು ಬ್ರಿಸ್‌ಬೇನ್‌ ಸಂಡೇ ಮೇಲ್‌ ವರದಿಸುತ್ತದೆ. ಆಸ್ಟ್ರೇಲಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮಾಡರ್ನ್‌ ಲ್ಯಾಂಗ್ವೇಜಸ್‌ನ ನಿರ್ದೇಶಕರಾದ, ಪ್ರೊಫೆಸರ್‌ ಮ್ಯಾಕ್ಸ್‌ ಬ್ರ್ಯಾಂಡಲ್‌ ವಿವರಿಸುವುದು: “ಪುರುಷರಿಗೆ ಹೋಲಿಕೆಯಲ್ಲಿ ಸ್ತ್ರೀಯರು ಕುಡಿಯುತ್ತಿದುದಕ್ಕಿಂತ ಹೆಚ್ಚು ಕುಡಿಯುತ್ತಿರುವುದನ್ನು, ಧೂಮಪಾನ ಮಾಡುತ್ತಿದ್ದದಕ್ಕಿಂತ ಹೆಚ್ಚು ಧೂಮಪಾನ ಮಾಡುತ್ತಿರುವುದನ್ನು ನೀವು ಈಗ ಕಂಡುಕೊಳ್ಳುತ್ತೀರಿ. ಅವರು ಹೊಲಸು ಮಾತನ್ನು ಸಹ ಹೆಚ್ಚು ಉಪಯೋಗಿಸುತ್ತಿದ್ದಾರೆ. ದುರ್ಭಾಗ್ಯಕರವಾಗಿ, ಪುರುಷರು ಮತ್ತು ಸ್ತ್ರೀಯರ ನಡುವಿನ ಸಾಂಪ್ರದಾಯಿಕ ಸೌಜನ್ಯಗಳಲ್ಲಿ ಕೆಲವು ಕಡಿಮೆಯಾಗಿರುವುದು ಒಂದು ಫಲಿತಾಂಶವಾಗಿದೆ. ಎರಡೂ ಲಿಂಗಜಾತಿಯವರು ಹೊಲಸು ಮಾತನ್ನು ಉಪಯೋಗಿಸುವಾಗ, ಗತಕಾಲದ ರಂಜನಾತ್ಮಕ ಆತ್ಮವು ಕ್ಷಿಪ್ರವಾಗಿ ಕಣ್ಮರೆಯಾಗುತ್ತದೆ. ಹಿಂದಿನ ಸಂತತಿಗಳಿಂದ ಉಪಯೋಗಿಸಲ್ಪಡುತ್ತಿದ್ದ ಆ ರಂಜನಾತ್ಮಕ ಮಾತಿಗೆ, ಈ ಕ್ಷಣದಲ್ಲಿ ಸಮಾಜದಲ್ಲಿ ಯಾವುದೇ ಸ್ಥಳವಿಲ್ಲ. ಇಂದು ಯುವ ಜನರ ನಡುವೆ ತುಚ್ಛ ಮಾತು ತೀರ ಸಾಮಾನ್ಯವಾಗಿರುವುದನ್ನು ನಾನು ಕಂಡುಕೊಳ್ಳುತ್ತೇನೆ.”

• ಬ್ರೆಸಿಲ್‌ನಲ್ಲಿ ಸ್ತ್ರೀಯರಿಂದ ನಡಿಸಲ್ಪಟ್ಟ ಪಾತಕಗಳ ಮಟ್ಟವು 1995ರಲ್ಲಿ ಇಮ್ಮಡಿಯಾಯಿತು. ಪೊಲೀಸ್‌ ಅಧಿಕಾರಿ ಫ್ರಾನ್ಸಿಸ್ಕೊ ಬಾಸೀಲೇರವರಿಗನುಸಾರ, ಹೆಚ್ಚು ಸ್ತ್ರೀಯರು ದಾಳಿಗಳು, ಕಳ್ಳತನಗಳು, ಮತ್ತು ಅಮಲೌಷಧ ವ್ಯವಹಾರದಲ್ಲಿಯೂ ಒಳಗೂಡುತ್ತಿದ್ದಾರೆಂದು, ಓ ಎಸ್ಟಾಡೊ ಡಾ ಸೌ ಪೌಲೊ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಅನೇಕ ಸ್ತ್ರೀಯರು ತಮ್ಮ ಪಾತಕಿ ಜೀವನವನ್ನು, ಎಲ್ಲಿ ಅಮಲೌಷಧ ಡೀಲರ್‌ಗಳು ಕ್ರ್ಯಾಕ್‌ ಅಮಲೌಷಧವನ್ನು ಹಂಚಿಕೊಡುತ್ತಾರೊ ಆ ಪಾರ್ಟಿಗಳಲ್ಲಿ ಕ್ಯ್ರಾಕ್‌ ಅಮಲೌಷಧವನ್ನು ಸೇದುವ ಮೂಲಕ ಆರಂಭಿಸುತ್ತಾರೆ. ಆ ಸ್ತ್ರೀಯರು ಒಂದು ಅಮಲೌಷಧ ಅವಲಂಬನೆಯನ್ನು ವಿಕಸಿಸಿಕೊಳ್ಳುತ್ತಾರೆ ಮಾತ್ರವಲ್ಲ, ಅವರು ಸ್ವತಃ ಹೆಚ್ಚಾಗಿ ಅಮಲೌಷಧ ಡೀಲರ್‌ಗಳಾಗುತ್ತಾರೆ. ವಾರ್ತಾಪತ್ರಿಕೆಗನುಸಾರ, ಪೊಲೀಸ್‌ ಮುಖ್ಯಸ್ಥರಾದ ಆ್ಯನ್‌ಟೋನಿಯೊ ವಿಲೇಲಾ ವಿವರಿಸುವುದು: “ಅಮಲೌಷಧಗಳನ್ನು ಮಾರುವ ಸ್ತ್ರೀಯರ ಸಂಖ್ಯೆಯು ವೃದ್ಧಿಯಾಗಿರುವ ವಿಧವು ಆಶ್ಚರ್ಯಗೊಳಿಸುವಂತಹದ್ದಾಗಿದೆ . . . , ಮತ್ತು ಅದು ಯಾವುದೇ ನಿರ್ದಿಷ್ಟ ವಯಸ್ಸಿನ ಗುಂಪಿಗೆ ಸೀಮಿತವಾಗಿಲ್ಲ.” ಅನೇಕರು ತಮ್ಮ 20ಗಳಲ್ಲಿರುವ ಯುವ ಸ್ತ್ರೀಯರಾಗಿದ್ದಾರೆ, ಆದರೆ ಕೆಲವರು ತಮ್ಮ 50ಗಳಲ್ಲಿರುವವರಾಗಿದ್ದಾರೆ.

ಸಾಮಾನ್ಯವಾದ ಮೂಲಗಳೊ?

ಪ್ಯಾರಿಸ್‌ನ ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ಗನುಸಾರ, “ದೇವರು, ಮುಸ್ಲಿಮರ ಕೊರಾನ್‌, ಹಿಂದೂ ವೇದಗಳು ಹಾಗೂ ಭಗವದ್ಗೀತೆ ಮತ್ತು ಚೀನಾದ ಟಾವೊ ಮತ ಮತ್ತು ಜಪಾನಿನ ಶಿಂಟೊ ಮತದ ಪವಿತ್ರ ಗ್ರಂಥಗಳಷ್ಟು ನಾನಾ ಬಗೆಯ ಪುಸ್ತಕಗಳ ಮೂಲಕ ಮಾತಾಡಿದ್ದಿರಬಹುದು” ಎಂದು ಪ್ರಭಾವಶಾಲಿ ಜೆಸ್ಯುಟ್‌ ಪತ್ರಿಕೆಯಾದ ಲಾ ಚೀವೀಲ್ಟಾ ಕಾಟೊಲಿಕಾದಲ್ಲಿನ ಲೇಖನವೊಂದು ಪ್ರತಿಪಾದಿಸುತ್ತದೆ. ಈ ಗ್ರಂಥಗಳು ಮತ್ತು ಇತರ ಧಾರ್ಮಿಕ ಬರವಣಿಗೆಗಳು “ಬರಿಯ ಸಾಹಿತ್ಯ ಅಥವಾ ತತ್ವಜ್ಞಾನವನ್ನಲ್ಲ, ಬದಲಾಗಿ ‘ಪ್ರಕಟನೆ’ಯನ್ನು—ಮನುಷ್ಯನ ಮೂಲಕ ದೇವರು ಮಾತಾಡುವುದನ್ನು—ಪ್ರತಿನಿಧಿಸುತ್ತವೆ” ಎಂದು ಆ ಲೇಖನವು ಸೂಚಿಸುತ್ತದೆ. ಆ ಪತ್ರಿಕೆಯ ಲೇಖನಗಳು ವ್ಯಾಟಿಕನಿನ ಪರಾಮರ್ಶಕರಿಂದ ಅನೌಪಚಾರಿಕವಾಗಿ ಪರಿಶೀಲಿಸಲ್ಪಡುವುದರಿಂದ, ಈ ದೃಷ್ಟಿಕೋನಗಳು, ವಿಷಯದ ಮೇಲಿನ ಪೋಪರ ಸ್ವಂತ ದೃಷ್ಟಿಕೋನವನ್ನು ಪ್ರತಿನಿಧಿಸುತ್ತವೊ ಎಂಬ ವಿಷಯದಲ್ಲಿ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ. ಕ್ರಾಸಿಂಗ್‌ ದ ತ್ರೆಷೋಲ್ಡ್‌ ಆಫ್‌ ಹೋಪ್‌ ಎಂಬ ತಮ್ಮ ಪುಸ್ತಕದಲ್ಲಿ, ಜಾನ್‌ ಪಾಲ್‌ II, ಚರ್ಚು ಇತರ ಧರ್ಮಗಳಲ್ಲಿ, ಚರ್ಚಿನ ಬೋಧನೆಗಳೊಂದಿಗೆ ಒಂದು ರೀತಿಯ ಸಾಮಾನ್ಯ ಬೇರನ್ನು ರಚಿಸುವ ಯಾವುದೊ ವಿಷಯಕ್ಕಾಗಿ ಹುಡುಕುತ್ತಿತ್ತು ಎಂಬುದಾಗಿ ಹೇಳಿದರೆಂದು ಟ್ರಿಬ್ಯೂನ್‌ ಹೇಳಿತು.

ಟಿಬಿ—ಒಂದು “ಭೌಗೋಲಿಕ ತುರ್ತುಪರಿಸ್ಥಿತಿ”

ಏಯ್ಡ್ಸ್‌, ಮಲೇರಿಯಾ, ಮತ್ತು ಉಷ್ಣವಲಯದ ರೋಗಗಳು ಒಟ್ಟುಗೂಡಿ ಕೊಲ್ಲುವ ವಯಸ್ಕರ ಸಂಖ್ಯೆಗಿಂತ ಹೆಚ್ಚು ವಯಸ್ಕರನ್ನು ಕ್ಷಯರೋಗ (ಟಿಬಿ) ಪ್ರತಿ ವರ್ಷ ಕೊಲ್ಲುತ್ತದೆಂದು, ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ) ಹೇಳುತ್ತದೆ. ಪ್ರತಿ ಸೆಕೆಂಡಿಗೆ, ಎಲ್ಲಿಯೊ ಯಾರೊ ಒಬ್ಬರು ಟಿಬಿಯಿಂದ ಸೋಂಕಿತರಾಗುತ್ತಾರೆ. ಟಿಬಿ ಏಕಾಣುಜೀವಿಯು ಒಂದು ಕೆಮ್ಮು ಅಥವಾ ಒಂದು ಸೀನಿನ ಮೂಲಕ ದಾಟಿಸಲ್ಪಡಸಾಧ್ಯವಿದೆ. ಮುಂದಿನ ಹತ್ತು ವರ್ಷಗಳಲ್ಲಿ, 30 ಕೋಟಿ ಜನರು ಟಿಬಿಯಿಂದ ಸೋಂಕಿತರಾಗುವರು, ಮತ್ತು ಮೂರು ಕೋಟಿ ಜನರು ಅದರಿಂದಾಗಿ ಸಾಯುವರೆಂದು ಡಬ್ಲ್ಯೂಏಚ್‌ಓ ನಿರೀಕ್ಷಿಸುತ್ತದೆ. ಇನ್ನೂ ಕೆಟ್ಟದ್ದಾಗಿ, ಟಿಬಿಯ ಔಷಧ ಪ್ರತಿರೋಧಕ ತಳಿಯ ಹೊರಹೊಮ್ಮುವಿಕೆಯು, ರೋಗವನ್ನು ಗುಣಪಡಿಸಲಾರದಂತಹದ್ದಾಗಿ ಮಾಡುವ ಬೆದರಿಕೆಯನ್ನೊಡ್ಡುತ್ತದೆ. ಡಬ್ಲ್ಯೂಏಚ್‌ಓಗನುಸಾರ, “ಟಿಬಿಯಿಂದ ಸೋಂಕಿತರಾಗಿರುವ ಜನರಲ್ಲಿ ಕೇವಲ 5-10% ಮಂದಿ ವಾಸ್ತವವಾಗಿ ಅಸ್ವಸ್ಥರಾಗುತ್ತಾರೆ ಅಥವಾ ಸ್ವತಃ ಸಾಂಕ್ರಾಮಿಕರಾಗುತ್ತಾರೆ, ಯಾಕಂದರೆ ಸೋಂಕು ರಕ್ಷೆ ವ್ಯವಸ್ಥೆಯು ಟಿಬಿ ಜೀವಿಗಳನ್ನು ದಮನಮಾಡುತ್ತದೆ.” ಹಾಗಿದ್ದರೂ, ಈ ಸರ್ವವ್ಯಾಪಿ ವ್ಯಾಧಿಯು ಎಷ್ಟು ಗಂಭೀರವಾಗಿದೆಯೆಂದರೆ, ಡಬ್ಲ್ಯೂಏಚ್‌ಓ ಅದನ್ನು ಒಂದು “ಭೌಗೋಲಿಕ ತುರ್ತುಪರಿಸ್ಥಿತಿ” ಎಂದು ಪ್ರಕಟಿಸಿತು—ಡಬ್ಲ್ಯೂಏಚ್‌ಓವಿನ ಇತಿಹಾಸದಲ್ಲೇ ಆ ರೀತಿಯ ಪ್ರಥಮ ಪ್ರಕಟನೆ.

ಲೋಕದ ಎರಡನೆಯ ಅತ್ಯಂತ ದೊಡ್ಡ “ಉದ್ಯಮ”

40,000 ಕೋಟಿ ಡಾಲರುಗಳನ್ನು (ಯು.ಎಸ್‌.) ಮೀರಿಸುವ ಒಂದು ವಾರ್ಷಿಕ ಮೊತ್ತದೊಂದಿಗೆ ಕಾನೂನುಬಾಹಿರ ಅಮಲೌಷಧ ವ್ಯಾಪಾರವು ವರ್ಧಿಸುತ್ತಿದೆ ಎಂದು ಲೋಕಾರೋಗ್ಯ ಸಂಸ್ಥೆಯ ಪತ್ರಿಕೆಯಾದ ವರ್ಲ್ಡ್‌ ಹೆಲ್ತ್‌ ಹೇಳುತ್ತದೆ. ಇದು ಅದನ್ನು ಲೋಕದಲ್ಲಿನ ತೀರ ವೇಗವಾಗಿ ಬೆಳೆಯುತ್ತಿರುವ “ಉದ್ಯಮ”ವನ್ನಾಗಿ ಮಾಡುತ್ತದೆ. ಇದು ಲೋಕದ ಎರಡನೆಯ ಅತ್ಯಂತ ದೊಡ್ಡ ಉದ್ಯಮವೂ ಆಗಿದೆ—ಶಸ್ತ್ರಾಸ್ತ್ರಗಳ ವ್ಯಾಪಾರಕ್ಕೆ ದ್ವಿತೀಯ ಸ್ಥಾನದಲ್ಲಿ, ಆದರೆ ಪೆಟ್ರೋಲಿಯಮ್‌ ಉದ್ಯಮಕ್ಕಿಂತ ದೊಡ್ಡದ್ದು. ಕಳೆದ 30 ವರ್ಷಗಳಲ್ಲಿ, ಕಾನೂನುಬಾಹಿರ ಅಮಲೌಷಧಗಳ ಲಭ್ಯತೆಯು ಆರುಪಟ್ಟು ಹೆಚ್ಚಾಗಿದೆ. ದ್ರಾವಕಗಳು, ವೈದ್ಯನಿಂದ ಸೂಚಿತವಾದ ಔಷಧಗಳು, ಮತ್ತು ಮದ್ಯಪಾನದಂತಹ ಕಾನೂನುಬದ್ಧ ಔಷಧಗಳ ದುರುಪಯೋಗವು ತದ್ರೀತಿಯ ಪ್ರಮಾಣದಲ್ಲಿ ವೃದ್ಧಿಯಾಗುತ್ತಿದೆ.

ಟಿವಿ ಮಟ್ಟಗಳು ಕ್ಷೀಣಿಸುತ್ತಿವೆ

ಟೆಲಿವಿಷನ್‌ ವೀಕ್ಷಕರು, ಹತ್ತು ವರ್ಷಗಳ ಹಿಂದೆ ಲೋಲುಪರಾಗಿದ್ದುದಕ್ಕಿಂತಲೂ ಈಗ ಟಿವಿ ಲೈಂಗಿಕತೆ ಮತ್ತು ನಗ್ನತೆಯಲ್ಲಿ ಹೆಚ್ಚು ಲೋಲುಪರಾಗಿದ್ದಾರೆಂದು, ಲಂಡನಿನ ಇಂಡಿಪೆಂಡೆಂಟ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪರೇಷನ್‌ಗಾಗಿ ನಡಿಸಲ್ಪಟ್ಟ ಒಂದು ಸಮೀಕ್ಷೆಗನುಸಾರ, ಟಿವಿ ಕಾಮ ಮತ್ತು ನಗ್ನತೆಗಾಗಿ ಮಧ್ಯ ವಯಸ್ಸಿನ ಸ್ತ್ರೀಯರ ಸಹಿಷ್ಣುತೆಯು ವೃದ್ಧಿಯಾಗಿದೆ. ಸುಮಾರು 41 ಪ್ರತಿಶತ ವೃದ್ಧ ಸ್ತ್ರೀಯರು ಸಹ ಈಗ ಈ ರೀತಿಯ ಟಿವಿ ಕಾರ್ಯಕ್ರಮವನ್ನು ಆಕ್ಷೇಪಣಾರ್ಹವಲ್ಲದ್ದಾಗಿ ಕಂಡುಕೊಳ್ಳುತ್ತಾರೆ. ಯುವ ಜನರ ನಡುವೆ, ಒಂದು ದಶಕದ ಹಿಂದಿನ ಸಮಯದ 69 ಪ್ರತಿಶತಕ್ಕೆ ಹೋಲಿಸುವಾಗ, ಸುಮಾರು 75 ಪ್ರತಿಶತ ಮಂದಿ ಹೊಲಸು ಮಾತನ್ನು ಸಹಿಸುತ್ತಾರೆ. ಅತಿ ದೊಡ್ಡ ಬದಲಾವಣೆಯು, ಸಲಿಂಗೀ ಕಾಮದ ಕಡೆಗಿನ ಮನೋಭಾವದಲ್ಲಾಗಿದೆ. 55 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟ ವಯಸ್ಸಿನ ಸ್ತ್ರೀಯರಲ್ಲಿ ನಲ್ವತ್ತು ಪ್ರತಿಶತ, 35ರಿಂದ 55 ವರ್ಷ ವಯಸ್ಸಿನ ಪುರುಷರಲ್ಲಿ 56 ಪ್ರತಿಶತ, ಮತ್ತು 18ರಿಂದ 34 ವರ್ಷ ವಯಸ್ಸಿನ ಯುವ ಪುರುಷರಲ್ಲಿ 70 ಪ್ರತಿಶತ ಮಂದಿ ಈಗ, ಟೆಲಿವಿಷನಿನಲ್ಲಿ ಸಲಿಂಗೀ ಕಾಮದ ಜೀವನ ಶೈಲಿಯ ಪ್ರದರ್ಶನವನ್ನು ಅಸಹ್ಯಕರವಲ್ಲದ್ದಾಗಿ ಕಂಡುಕೊಳ್ಳುತ್ತಾರೆ. ಇದು ಕಳೆದ ಹತ್ತು ವರ್ಷಗಳಲ್ಲಿ 20 ಪ್ರತಿಶತ ವೃದ್ಧಿ.

ಬಿಷಪ್‌ ಬೈಬಲ್‌ ವಿವೇಕವನ್ನು ಸಂದೇಹಿಸುತ್ತಾರೆ

ಭಾರತದಲ್ಲಿ “ಕ್ರೈಸ್ತರ ನಡುವೆ ವಿವಾಹ ಮತ್ತು ವಿವಾಹ ವಿಚ್ಛೇದವನ್ನು ಪ್ರಭಾವಿಸುವ ನಿಯಮಗಳು” ಎಂಬ ವಿಷಯದ ಕುರಿತಾದ ಒಂದು ವ್ಯಾಸಂಗದಲ್ಲಿ ಮಾತಾಡುತ್ತಾ, ನೆಸ್ಟೋರಿಯನ್‌ ಬಿಷಪರಾದ ಪೌಲೊಸ್‌ ಮಾರ್‌ ಪೌಲೊಸ್‌ ತಿಳಿಸಿದ್ದೇನಂದರೆ, ಒಬ್ಬ ವ್ಯಕ್ತಿಯು ಬೈಬಲನ್ನು ಒಂದು ನೀತಿಸಂಹಿತೆಯಾಗಿ ಪರಿಗಣಿಸಸಾಧ್ಯವಿಲ್ಲ. ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ವರದಿಸಲ್ಪಟ್ಟಂತೆ, ಅವರು ಹೇಳಿದ್ದೇನೆಂದರೆ, ವಿವಾಹ ವಿಚ್ಛೇದದ ಕುರಿತಾದ ಬೈಬಲ್‌ ಸಂಬಂಧಿತ ಬೋಧನೆಯನ್ನು ಮಾರ್ಪಡಿಸಲಾರದಂತಹದ್ದೆಂದು ಪಟ್ಟುಹಿಡಿಯುವುದು, ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದ ಕುರಿತಾಗಿರುವ ತಿಳಿವಳಿಕೆಯಲ್ಲಿ ಆಧುನಿಕ ಮನುಷ್ಯನು ಮಾಡಿರುವ ಪ್ರಗತಿಯನ್ನು ನಿರಾಕರಿಸುವುದಾಗಿದೆ. ಎಕ್ಸ್‌ಪ್ರೆಸ್‌ಗನುಸಾರ, ಪ್ರತಿ ಶಾಸ್ತ್ರವಚನಕ್ಕೆ ಎರಡು ಪಕ್ಕಗಳಿರುತ್ತವೆ, ಒಂದು ತಾತ್ಕಾಲಿಕ ಮತ್ತು ನಾಶಕರವಾಗಿದ್ದು, ಅವು ಬರೆಯಲ್ಪಟ್ಟ ಸಮಯಾವಧಿಯಲ್ಲಿನ ಜನರ ವಿಚಾರಗಳು ಮತ್ತು ದೇಶಕ್ಕೆ ಸೇರಿದಂತಹದ್ದು, ಮತ್ತು ಇನ್ನೊಂದು ಪಕ್ಕವು ನಿತ್ಯ ಮತ್ತು ನಾಶಕರವಲ್ಲದ್ದಾಗಿದ್ದು, ಎಲ್ಲಾ ಯುಗಗಳು ಮತ್ತು ದೇಶಗಳಿಗೆ ಅನ್ವಯಿಸಸಾಧ್ಯವಿರುವಂತಹದ್ದು ಆಗಿದೆ ಎಂದು ಒಬ್ಬ ಹಿಂದೂ ವಿದ್ವಾಂಸನು ಹೇಳಿರುವುದಾಗಿ ಬಿಷಪರು ಉಲ್ಲೇಖಿಸಿದರು. “ಬೈಬಲ್‌ನಲ್ಲಿ, ನಾವು ತಿರುಳನ್ನು ಚಿಪ್ಪಿನಿಂದ ಪ್ರತ್ಯೇಕಿಸಬೇಕು. ಯಾವುದು ಚಿರಸ್ಥಾಯಿಯಾದ ಸತ್ಯ ಮತ್ತು ಯಾವುದು ಸಾಂಸ್ಕೃತಿಕ ಪೂರ್ವಾಗ್ರಹ ಎಂಬುದನ್ನು ನಾವು ನಿರ್ಧರಿಸಬೇಕು . . . ಮತ್ತು ನಮ್ಮ ಸ್ವಂತ ಜೀವನದ ದಿಕ್ಕನ್ನು ನಿರ್ಣಯಿಸಿಕೊಳ್ಳಬೇಕು” ಎಂದು ಬಿಷಪರು ಹೇಳಿದರು.

ಭಾರತದ ಏಚ್‌ಐವಿ ತಳಿ

ಹಾರ್ವರ್ಡ್‌ ಏಯ್ಡ್ಸ್‌ ಸಂಸ್ಥೆಯ ಡಾ. ಮ್ಯಾಕ್ಸ್‌ ಎಸೆಕ್ಸ್‌ರವರ ನಾಯಕತ್ವದ ಸಂಶೋಧನಕಾರರ ಒಂದು ತಂಡದ ಸಹಕಾರದೊಂದಿಗೆ, ಭಾರತದ ಪುಣೆಯಲ್ಲಿರುವ ರಾಷ್ಟ್ರೀಯ ಏಯ್ಡ್ಸ್‌ ಸಂಶೋಧನಾ ಸಂಸ್ಥೆಯಲ್ಲಿನ ವಿಜ್ಞಾನಿಗಳು, ಭಾರತದ ಅತಿ ಸಾಮಾನ್ಯವಾದ ಏಚ್‌ಐವಿ ತಳಿಯನ್ನು ಬೇರ್ಪಡಿಸಿದ್ದಾರೆ. ಅದು, ಯೂರೋಪ್‌ ಮತ್ತು ಅಮೆರಿಕದಲ್ಲಿ ಸಾಮಾನ್ಯವಾಗಿರುವ ಏಚ್‌ಐವಿ-1ಬಿಗಿಂತ, ಐದರಿಂದ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ರವಾನಿಸಲ್ಪಡುತ್ತದೆಂದು ನಂಬಲಾಗುವ ಏಚ್‌ಐವಿ-1ಸಿ ಆಗಿದೆ. ಇಂಡಿಯನ್‌ ಎಕ್ಸ್‌ಪ್ರೆಸ್‌ಗನುಸಾರ, ಲೋಕದ ಇತರ ಅನೇಕ ಭಾಗಗಳಿಗಿಂತಲೂ ಭಾರತದಲ್ಲಿ ಏಚ್‌ಐವಿಯ ಹರಡುವಿಕೆಯ ಪ್ರಮಾಣವು ತುಂಬ ಉಚ್ಚವಾಗಿರುವುದು ಸಂಭಾವ್ಯವೆಂದು ಡಾ. ಎಸೆಕ್ಸ್‌ ಹೇಳಿದರು. ಏಯ್ಡ್ಸ್‌ ಪ್ರತಿಬಂಧಕಗಳೆಂದು ಭರವಸೆ ತೋರಿಸುತ್ತಿರುವ ಕೆಲವೇ ಲಸಿಕೆಗಳಲ್ಲಿ, ಒಂದೂ ಏಚ್‌ಐವಿ-1ಸಿಗಾಗಿ ಪರಿಣಾಮಕಾರಿಯಾಗಿರುವುದಿಲ್ಲವೆಂದು ವಿಜ್ಞಾನಿಯಾದ ಡಾ. ವಿ. ರಾಮಲಿಂಗಸ್ವಾಮಿ ಹೇಳಿದರು.

100 ವರ್ಷ ವಯಸ್ಸಿನ ಬೆಂಕಿ ನಂದಿಸಲ್ಪಡುತ್ತದೆ

ಸುಮಾರು 100ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಚೀನಾದಲ್ಲಿ, ಇನ್ನೂ ಉಪಯೋಗಿಸಲ್ಪಟ್ಟಿರದ ಕಲ್ಲಿದ್ದಲಿನ ಒಂದು ನಿಕ್ಷೇಪಕ್ಕೆ ಬೆಂಕಿ ಹೊತ್ತಿಕೊಂಡಿತು, ಮತ್ತು ಅದು ಇತ್ತೀಚಿನ ವರೆಗೆ ಉರಿಯುತ್ತಾ ಮುಂದುವರಿದಿದೆ. ಆ ಬೆಂಕಿಯು ಸುಮಾರು ಆರು ಚದರ ಕಿಲೊಮೀಟರುಗಳನ್ನು ಆವರಿಸಿತು ಮತ್ತು ವಾರ್ಷಿಕವಾಗಿ 3,00,000 ಟನ್ನುಗಳಷ್ಟು ಕಲ್ಲಿದ್ದಲನ್ನು ಕಬಳಿಸಿಬಿಟ್ಟಿತು. ಅನೇಕ ವರ್ಷಗಳಿಂದ ಆ ದೊಡ್ಡ ಬೆಂಕಿಯನ್ನು ನಂದಿಸಲು ಮಾಡಲ್ಪಟ್ಟ ಪ್ರಯತ್ನಗಳು ವಿಫಲವಾಗಿವೆ. ಆದಾಗಲೂ, ಬೆಂಕಿ ಆರಿಸುವವರು ಕೊನೆಗೆ ಆ ಬೆಂಕಿಯನ್ನು ನಂದಿಸುವುದರಲ್ಲಿ ಸಫಲರಾಗಿದ್ದಾರೆ ಎಂದು ವರದಿಸಲ್ಪಟ್ಟಿದೆ. ಜ್ವಾಲೆಯನ್ನು ಆರಿಸಲು, ಬೆಂಕಿ ಆರಿಸುವವರು ರಂಧ್ರಗಳನ್ನು ಕೊರೆಯಲಿಕ್ಕಾಗಿ ಸ್ಫೋಟಕಗಳನ್ನು ಉಪಯೋಗಿಸಿದರು ಮತ್ತು ಅನಂತರ ಜ್ವಾಲೆಗಳ ಮೇಲೆ ಮರಳು, ಕಲ್ಲು, ಮತ್ತು ನೀರನ್ನು ಹೊಯ್ದರು.

ಅಪ್ರಾಪ್ತ ತಾಯ್ತನ

ಭೂಗೋಳಶಾಸ್ತ್ರ ಮತ್ತು ಅಂಕಿಸಂಖ್ಯೆಗಳ ಬ್ರೆಸಿಲ್ಯನ್‌ ಸಂಸ್ಥೆಗನುಸಾರ, 1994ರಲ್ಲಿ ಬ್ರೆಸಿಲ್‌ನಲ್ಲಿ, 15 ವರ್ಷ ವಯಸ್ಸಿನ ಕೆಳಗಿನ 11,457 ಹುಡುಗಿಯರು ಜನ್ಮನೀಡಿದರು. ಅಂತಹ ಅಪ್ರಾಪ್ತ ಮಾತೃತ್ವವು, ಕಳೆದ 18 ವರ್ಷಗಳಲ್ಲಿ 391 ಪ್ರತಿಶತ ವೃದ್ಧಿಸಿರುವಾಗ, ಜನಸಂಖ್ಯಾ ಬೆಳವಣಿಗೆಯು ಅದೇ ಸಮಯಾವಧಿಯಲ್ಲಿ ಕೇವಲ 42.5 ಪ್ರತಿಶತ ವೃದ್ಧಿಸಿದೆ. ಜನ್ಮನೀಡಿದ, 15 ಮತ್ತು 19 ವರ್ಷಗಳ ವಯಸ್ಸಿನ ನಡುವಿನ ಹುಡುಗಿಯರ ಸಂಖ್ಯೆಯು 60 ಪ್ರತಿಶತ ವೃದ್ಧಿಸಿತು. ರೀಯೊ ಡೆ ಸಾನೀಯಾರೊ ಫೆಡೆರಲ್‌ ಯೂನಿವರ್ಸಿಟಿಯ ಡಾ. ರೀಕಾರ್ಡೊ ರೇಗೊ ಬಾರೊಸ್‌ ವಿವರಿಸುವುದೇನಂದರೆ, “ಅಪ್ರಾಪ್ತ ಲೈಂಗಿಕತೆಯು ಪರಿಸರ, ಟೆಲಿವಿಷನ್‌, ಪುಸ್ತಕಗಳು, ಮತ್ತು ಪತ್ರಿಕೆಗಳಿಂದ ಪ್ರೇರಿಸಲ್ಪಡುತ್ತದೆ” ಎಂದು ವೇಜಾ ಪತ್ರಿಕೆಯು ಹೇಳುತ್ತದೆ. ಹೆತ್ತವರು ಮತ್ತು ಶಾಲೆಗಳು ಮಕ್ಕಳಿಗೆ ಅಂತಹ ವಿಷಯಗಳಲ್ಲಿ ಶಿಕ್ಷಣ ನೀಡುವುದನ್ನು ಇನ್ನೂ ಕಷ್ಟಕರವಾಗಿ ಕಂಡುಕೊಳ್ಳುತ್ತವೆಂದು ಇನ್ನೊಬ್ಬ ಪರಿಣತನು ಹೇಳಿಕೆಯನ್ನಿತ್ತನು.

ಅಧಿಕ ರಕ್ತದೊತ್ತಡ ಮತ್ತು ಜ್ಞಾಪಕಶಕ್ತಿಯ ನಷ್ಟ

“ಅಧಿಕ ರಕ್ತದೊತ್ತಡವಿರುವ ನಡುವಯಸ್ಸಿನ ಪುರುಷರು, ತಮ್ಮ 70ಗಳ ಕೊನೆಯ ಭಾಗವನ್ನು ಒಮ್ಮೆ ತಲಪಿದಾಗ, ದುರ್ಬಲವಾದ ಜ್ಞಾಪಕಶಕ್ತಿ, ವಿಮರ್ಶನ ಶಕ್ತಿ, ಮತ್ತು ಕೇಂದ್ರೀಕರಿಸುವ ಶಕ್ತಿಯಿಂದ ಕಷ್ಟಾನುಭವಿಸುವ ಸಂಭವವಿದೆಯೆಂದು ಒಂದು ಹೊಸ ಅಧ್ಯಯನವು ತೋರಿಸುತ್ತದೆ,” ಎಂದು ಸೈಕಾಲಜಿ ಟುಡೇ ವರದಿಸುತ್ತದೆ. ಸಂಕೋಚನಗೊಳ್ಳುವ ರಕ್ತದೊತ್ತಡದಲ್ಲಿ ಪ್ರತಿ ಹತ್ತು ಪಾಯಿಂಟ್‌ ವೃದ್ಧಿಗೆ, ಕುಂದಿಸಲ್ಪಟ್ಟಿರುವ ಮಿದುಳು ಕಾರ್ಯಾಚರಣೆಯ ಸಂಭವವು 9 ಪ್ರತಿಶತ ವೃದ್ಧಿಯಾಯಿತೆಂದು ಸಂಶೋಧಕರು ಕಂಡುಕೊಂಡಿದ್ದಾರೆ. “ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಹೊಡೆತ ಮತ್ತು ಹೃದ್ರೋಗದೊಂದಿಗೆ ಸಂಬಂಧಿಸಿದೆಯೆಂದು ನಮಗೆ ತಿಳಿದಿದೆ,” ಎಂದು ಅಧ್ಯಯನದ ನಿರ್ದೇಶಕರಾದ ಲೇನೊರ್‌ ಲಾನರ್‌, ಪಿಎಚ್‌.ಡಿ., ಹೇಳಿ, ಅದನ್ನು “ಕಡಿಮೆಗೊಳಿಸಲು ಇದು ಕೇವಲ ಇನ್ನೊಂದು ಕಾರಣವಾಗಿದೆ” ಎಂದು ಕೂಡಿಸುತ್ತಾರೆ.

ಆಕಸ್ಮಿಕವಾಗಿ ಗ್ರಹವು ಕಂಡುಹಿಡಿಯಲ್ಪಟ್ಟದ್ದು

ಇತ್ತೀಚೆಗೆ ಒಂದು ಚಿಕ್ಕ ಗ್ರಹವು, ಇಂಗ್ಲೆಂಡಿನ ಒಂದು ಹಳ್ಳಿಯಾಗಿರುವ ಬ್ರ್ಯಾಡ್‌ಫೀಲ್ಡ್‌ನಲ್ಲಿರುವ, ಹವ್ಯಾಸಿ ಖಗೋಳಶಾಸ್ತ್ರಜ್ಞ ಜಾರ್ಜ್‌ ಸ್ಯಾಲಿಟ್‌ರಿಂದ, ತಮ್ಮ ತೋಟದ ಷೆಡ್ಡಿನಲ್ಲಿರುವ ಒಂದು ದೂರದರ್ಶಕದ ಮೂಲಕ ಕಂಡುಹಿಡಿಯಲ್ಪಟ್ಟಿತು. “ಅದು ಪೂರ್ತಿಯಾಗಿ ಆಕಸ್ಮಿಕವಾಗಿತ್ತು,” ಎಂದು ಅವರು ಒಪ್ಪಿಕೊಂಡರು. “ನಾನು ಒಂದು ಚಿತ್ರವನ್ನು ತೆಗೆದೆ ಮತ್ತು ನಾನು ಹೆಚ್ಚು ನಿಕಟವಾಗಿ ನೋಡಿದಾಗ, ಚಿತ್ರದಾಚೆ ನಿಧಾನವಾಗಿ ಚಲಿಸುತ್ತಿದ್ದದ್ದು ಒಂದು ಗ್ರಹವಾಗಿತ್ತೆಂದು ಗ್ರಹಿಸಿದೆ.” ಈಗ ಸ್ಯಾಲಿಟ್‌ ಒನ್‌ ಎಂದು ಕರೆಯಲ್ಪಡುವ ಈ ಹೊಸ ಗ್ರಹವು, ವ್ಯಾಸದಲ್ಲಿ ಕೇವಲ ಸುಮಾರು 30 ಕಿಲೊಮೀಟರುಗಳು ಆಗಿದೆ ಮತ್ತು ಭೂಮಿಯಿಂದ ಸುಮಾರು 60 ಕಿಲೊಮೀಟರುಗಳ ದೂರದಲ್ಲಿದೆ. ಅದರ ಪಥವು ಅದನ್ನು ಮಾರ್ಸ್‌ ಮತ್ತು ಜೂಪಿಟರ್‌ ಗ್ರಹಗಳ ನಡುವೆ ಕೊಂಡೊಯ್ಯುತ್ತದೆ. ಉಪಯೋಗಿಸಲ್ಪಟ್ಟ ದೂರದರ್ಶಕವು, 7,000 ಡಾಲರುಗಳ ಬೆಲೆಯಷ್ಟು ಮೌಲ್ಯದ 30 ಸೆಂಟಿಮೀಟರ್‌ಗಳ, ಕಂಪ್ಯೂಟರ್‌ ನಿಯಂತ್ರಿತ ಮಾದರಿಯಾಗಿದ್ದರೂ, ಹಬ್‌ಲ್‌ ದೂರದರ್ಶಕದಲ್ಲಿ ಬಳಕೆಗಾಗಿ ವಿನ್ಯಾಸಿಸಲ್ಪಟ್ಟಿರುವ ಲಘುವರ ಸಲಕರಣೆಯನ್ನು ಉಪಯೋಗಿಸುವಂತಹದ್ದಾಗಿದೆ ಎಂದು ಲಂಡನ್‌ನ ದ ಟೈಮ್ಸ್‌ ವರದಿಸುತ್ತದೆ. ನಮ್ಮ ಸೌರವ್ಯೂಹದಲ್ಲಿ ಅಂತಹ ಸಾವಿರಾರು ಚಿಕ್ಕ ಚಿಕ್ಕ ಗ್ರಹಗಳು, ಅಥವಾ ಕ್ಷುದ್ರಗ್ರಹಗಳು ಇರಬಹುದು.

ಅಕ್ಕಿ ರೈತರಿಗಾಗಿ ಒಂದು ಆಶ್ಚರ್ಯ

ಏಷಿಯಾದಲ್ಲಿನ ಅಕ್ಕಿ ರೈತರು, ಅನೇಕ ವರ್ಷಗಳಿಂದ ಆ ಋತುವಿನ ಆದಿ ಭಾಗದಲ್ಲಿ, ಅಕ್ಕಿ ಗಿಡಗಳ ಎಲೆಗಳನ್ನು ಸಾಯಿಸುವ, ಎಲೆ ಮಡಚುವ ಪತಂಗಗಳ ಮರಿಹುಳುಗಳನ್ನು ಕೊಲ್ಲಲು, ತಮ್ಮ ಬೆಳೆಗಳಿಗೆ ತುಂಬ ಔಷಧವನ್ನು ಚಿಮುಕಿಸುತ್ತಿದ್ದರು. ಆದಾಗಲೂ ಇತ್ತೀಚಿನ ಪ್ರಯೋಗಗಳು ಸೂಚಿಸುವುದೇನಂದರೆ, ಅಕ್ಕಿ ಗಿಡಗಳು ಅವು ಉತ್ಪಾದಿಸುವ ಅಕ್ಕಿಯ ಮೊತ್ತದ ಮೇಲೆ ಯಾವ ಪ್ರಭಾವವನ್ನೂ ಬೀರದೆ, ತಮ್ಮ ಎಲೆಗಳಲ್ಲಿ ಅರ್ಧದಷ್ಟು ಎಲೆಗಳನ್ನು ಕಳೆದುಕೊಳ್ಳಲು ಸಮರ್ಥವಾಗಿವೆ. ವಿಯೆಟ್ನಾಮ್‌ನ ಕೆಲವು ರೈತರನ್ನು ಔಷಧ—ಏಷಿಯದ ರೈತರು ಉಪಯೋಗಿಸುವ ಎಲ್ಲಾ ಕೀಟನಾಶಕದಲ್ಲಿ 30ರಿಂದ 50 ಪ್ರತಿಶತವಾಗುವಂತಹದ್ದು—ಚಿಮುಕಿಸದೆ ಇರುವಂತೆ ಮನಗಾಣಿಸಲಾಯಿತು ಮತ್ತು ಬೆಳೆ ಉತ್ಪಾದನೆಗಳು ಬಾಧಿಸಲ್ಪಡಲೇ ಇಲ್ಲವೆಂಬುದನ್ನು ಕಂಡುಕೊಳ್ಳಲಾಯಿತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ