ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 9/8 ಪು. 23-25
  • ಲಂಡನ್‌ನ ನೀರು ಒಂದು ಹೊಸ ಆಯಾಮ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲಂಡನ್‌ನ ನೀರು ಒಂದು ಹೊಸ ಆಯಾಮ
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹಳೆಯದ್ದರ ಬದಲಿಗೆ ಹೊಸದು
  • ಹೆಚ್ಚುತ್ತಿರುವ ಅಗತ್ಯಗಳ ನಿರೀಕ್ಷಣೆಯಲ್ಲಿ ಯೋಜಿಸುವುದು
  • ಕಂಪ್ಯೂಟರ್‌ ನಿರ್ಮಾಣ
  • ಕಂಪ್ಯೂಟರ್‌ ನಿಯಂತ್ರಣ
  • ಭವಿಷ್ಯತ್ತಿಗಾಗಿ ಯೋಚಿಸುವುದು
  • ಥೇಮ್ಸ್‌ ನದಿ ಇಂಗ್ಲೆಂಡಿನ ಅಪೂರ್ವ ಆಸ್ತಿ
    ಎಚ್ಚರ!—2006
ಎಚ್ಚರ!—1996
g96 9/8 ಪು. 23-25

ಲಂಡನ್‌ನ ನೀರು ಒಂದು ಹೊಸ ಆಯಾಮ

ಬ್ರಿಟನಿನ ಎಚ್ಚರ! ಸುದ್ದಿಗಾರರಿಂದ

ಇಂಗ್ಲೆಂಡಿನ ರಾಜಧಾನಿ ನಗರವಾದ ಲಂಡನ್‌, ಈಗ ಲೋಕದಲ್ಲಿನ ಅತಿ ಮುಂದುವರಿದ ನೀರು ಸರಬರಾಯಿ ವ್ಯವಸ್ಥೆಗಳಲ್ಲಿ ಒಂದನ್ನು ಹೊಂದಿದೆ. ಅದನ್ನು ಕಾಲತಖ್ತೆಗೆ ಎರಡು ವರ್ಷಗಳ ಮುಂಚೆಯೇ, ಸುಮಾರು 37.5 ಕೋಟಿಗಳಷ್ಟು ಡಾಲರುಗಳ ವೆಚ್ಚದಲ್ಲಿ ಪೂರ್ಣಗೊಳಿಸಲಾಯಿತು. ಅದರ ನಿರ್ಮಾಣದಲ್ಲಿ ಗಳಿಸಲ್ಪಟ್ಟ ಕೌಶಲ್ಯವನ್ನು ಈಗಾಗಲೇ ಬೇರೆ ದೇಶಗಳಿಗೆ ವಿಕ್ರಯಿಸಲಾಗುತ್ತಿದೆ.

ಇಂತಹ ದುಬಾರಿಯಾದ ಯೋಜನೆಯೊಂದು ಏಕೆ ಆವಶ್ಯಕವಾಗಿತ್ತು, ಮತ್ತು ಅದು ಏನನ್ನು ಸಾಧಿಸಿದೆ?

ಹಳೆಯದ್ದರ ಬದಲಿಗೆ ಹೊಸದು

ಲಂಡನ್‌ನ ಅತಿ ಹಳೆಯ ಕೇಂದ್ರ ಪ್ರಧಾನ ಕಾಲುವೆಯು 1838ರಲ್ಲಿ ಕಟ್ಟಲ್ಪಟ್ಟಿತು. ನಲ್ವತ್ತು ವರ್ಷಗಳ ಅನಂತರ, ನಗರದ ಹೆಚ್ಚು ದರಿದ್ರ ಕ್ಷೇತ್ರಗಳಲ್ಲಿ, ನೀರನ್ನು ಇನ್ನೂ ಸಾಮುದಾಯಿಕ ಬೀದಿ ನಿಲುಗೊಳವೆಗಳಿಂದ ಬಕೆಟ್‌ಗಳಲ್ಲಿ ಒಯ್ಯಲಾಗುತ್ತಿತ್ತು. “ಮುಂಜಾನೆಯಲ್ಲಿ ಕೀಲಿ ಕೈಯಿದ್ದ ಒಬ್ಬ ಮನುಷ್ಯನಿಂದ ನಲ್ಲಿಯನ್ನು ಹರಿಯ ಬಿಡುವುದು ಪ್ರಾಮುಖ್ಯವುಳ್ಳ ಒಂದು ಘಟನೆಯಾಗಿತ್ತು, . . . ಕೀಲಿ ಕೈಯಿದ್ದ ಮನುಷ್ಯನು ಹೋದಮೇಲೆ, ಮುಂದಿನ ಬೆಳಗ್ಗೆಯ ವರೆಗೆ ಒಂದು ನೀರಿನ ಹನಿಯನ್ನೂ ತೆಗೆಯಲು ಸಾಧ್ಯವಿರುತ್ತಿರಲಿಲ್ಲ,” ಎಂದು ಒಬ್ಬ ಬರಹಗಾರ್ತಿಯು ತಿಳಿಸುತ್ತಾಳೆ.

ವಿಕ್ಟೋರಿಯಾ ರಾಣಿಯ ಕಾಲದ ಇಂಜಿನಿಯರರು, ಈ ನೀರಿನ ಸರಬರಾಯಿಯನ್ನು, ರಸ್ತೆಯ ಮೇಲ್ಮೈಗಳ ಕೆಳಗೆ ವಿವಿಧ ಆಳಗಳಲ್ಲಿ ನೀರಿನ ಲೋಹದ ಪ್ರಧಾನ ಕಾಲುವೆಗಳನ್ನು ಇರಿಸುತ್ತಾ ಮತ್ತು ಕೊಳಾಯಿಗಳನ್ನು ಕಟ್ಟುತ್ತಾ, ವ್ಯಕ್ತಿಗತ ಮನೆಗಳಿಗೆ ವಿಸ್ತರಿಸಿದಾಗ ಒಂದು ಕುಶಲ ಕೆಲಸವನ್ನು ಮಾಡಿದ್ದರು. ಆದಾಗಲೂ, ಅಂದಿನಿಂದ ವಾಹನ ಸಂಚಾರದ ಹೆಚ್ಚುತ್ತಿರುವ ಮೊತ್ತ, ಭಾರ, ಮತ್ತು ಸ್ಪಂದನದೊಂದಿಗೆ, ದೂರದ ಅಂತರಗಳ ವರೆಗೆ—ಕೆಲವು ಕಡೆಗಳಲ್ಲಿ ಸುಮಾರು 30 ಕಿಲೊಮೀಟರ್‌ಗಳ ವರೆಗೆ—ಸಾಕಷ್ಟು ನೀರಿನ ಹರಿವನ್ನು ಖಚಿತಪಡಿಸಲು ಬೇಕಾದ ಹೆಚ್ಚಿನ ಪಂಪು ಒತ್ತಡವು, ಬಿರುಕುಬಿಟ್ಟಿರುವ ಪ್ರಧಾನ ಕಾಲುವೆಗಳಲ್ಲಿ ಫಲಿಸಿದೆ. ಇದು, ನೀರಿನ ಪ್ರಧಾನ ಕಾಲುವೆಯ ರಿಪೇರಿಗಾಗಿ ರಸ್ತೆಗಳನ್ನು ಮುಚ್ಚಬೇಕಾದಾಗ, ಸಂಚಾರ ಅವ್ಯವಸ್ಥೆಯಲ್ಲಿ ಪರಿಣಮಿಸುತ್ತದೆ. ಇಂಗ್ಲೆಂಡಿನಲ್ಲಿನ ಜಲಾಶಯಗಳಿಂದ ತೆಗೆಯಲ್ಪಡುವ ಎಲ್ಲ ನೀರಿನ 25 ಪ್ರತಿಶತವು, ರವಾನೆಯ ಪೈಪುಗಳಲ್ಲಿನ ದೋಷಗಳಿಂದಾಗಿ ನಷ್ಟವಾಗುತ್ತದೆಂದು ಅಂದಾಜುಮಾಡಲಾಗಿದೆ.

ಇದಕ್ಕೆ ಕೂಡಿಸಿ, ಕಳೆದ 150 ವರ್ಷಗಳಲ್ಲಿ ನೀರಿಗಾಗಿರುವ ಲಂಡನ್‌ನ ಬೇಡಿಕೆಯು—ಪ್ರತಿ ದಿನ 33 ಕೋಟಿ ಲೀಟರುಗಳಿಂದ ಇನ್ನೂರು ಕೋಟಿಗಳಿಗಿಂತಲೂ ಹೆಚ್ಚು ಲೀಟರ್‌ಗಳಿಗೆ—ಏರಿದೆ. ವಾಷಿಂಗ್‌ ಮಷೀನ್‌ಗಳು, ಡಿಷ್‌ವಾಷರ್‌ಗಳು, ಕಾರ್‌ ತೊಳೆಯುವಿಕೆ, ಮತ್ತು ಶುಷ್ಕ ಬೇಸಗೆಕಾಲಗಳಲ್ಲಿ ತೋಟಗಳಿಗೆ ನೀರು ಹಾಯಿಸುವಿಕೆ, ಇವೆಲ್ಲವೂ ಬೇಡಿಕೆಯನ್ನು ಹೆಚ್ಚಿಸಲು ನೆರವು ನೀಡಿವೆ. ರಾಜಧಾನಿಗೆ ನೀರಿನ ಸರಬರಾಯಿಯನ್ನು ಉತ್ತಮಗೊಳಿಸುವ ಅಗತ್ಯವು ತುರ್ತಿನದ್ದಾಯಿತು. ಆದರೆ ಏನು ಮಾಡಸಾಧ್ಯವಿತ್ತು?

ಹೆಚ್ಚುತ್ತಿರುವ ಅಗತ್ಯಗಳ ನಿರೀಕ್ಷಣೆಯಲ್ಲಿ ಯೋಜಿಸುವುದು

ಅದೇ ರಸ್ತೆ ವ್ಯವಸ್ಥೆಯ ಕೆಳಗೆ ಹೆಚ್ಚು ಗಟ್ಟಿಯಾದ ಪೈಪುಗಳನ್ನು ಇಡುವ ಮೂಲಕ ಹಳೆಯ ಪೈಪುಗಳನ್ನು ಸ್ಥಾನಭರ್ತಿಮಾಡುವುದು ಅಸಾಧ್ಯವಾಗಿತ್ತು. ವೆಚ್ಚಗಳು, ಲಂಡನ್‌ನಲ್ಲಿರುವವರಿಗೆ ಆಗುವ ತೊಂದರೆಯು ಎಷ್ಟು ಅಸ್ವೀಕರಣೀಯವಾಗಿತ್ತೊ, ಅಷ್ಟೇ ನಿಷೇಧಕವಾಗಿದ್ದವು. ಹೀಗೆ, ಹತ್ತು ವರ್ಷಗಳ ಹಿಂದೆ, ಥೇಮ್ಸ್‌ ವಾಟರ್‌ ರಿಂಗ್‌ ಮೇನ್‌ ಪ್ರಾಜೆಕ್ಟ್‌ ರೂಪುಗೊಂಡಿತು. ಅದು ಲಂಡನ್‌ನ ನೀರಿನ ಸರಬರಾಯಿಯನ್ನು ಮಹತ್ತರವಾಗಿ ಹೆಚ್ಚಿಸಲಿತ್ತು. ಆ ಕಾರ್ಯಯೋಜನೆಯು, ನಗರದ ಅಡಿಯಲ್ಲಿ ಸರಾಸರಿ 40 ಮೀಟರುಗಳ ಆಳದಲ್ಲಿ ಹೂಳಲ್ಪಡುವ 80 ಕಿಲೊಮೀಟರ್‌ ಉದ್ದ, 2.5 ಮೀಟರ್‌ ಅಗಲವಾಗಿರುವ ನೀರಿನ ಪ್ರಧಾನ ಕಾಲುವೆ ಅಥವಾ ಸುರಂಗವಾಗಿದೆ ಮತ್ತು ಅದು ಒಂದು ದಿನದಲ್ಲಿ ನೂರು ಕೋಟಿ ಲೀಟರುಗಳಿಗಿಂತಲೂ ಹೆಚ್ಚು ನೀರನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಂತಹ ಒಂದು ವರ್ತುಲಾಕಾರದ ಪ್ರಧಾನ ಕಾಲುವೆಯು, ಯಾವುದೇ ಸಮಯದಲ್ಲಿ ದುರಸ್ತಿಗಾಗಿ ಯಾವುದೇ ವಿಭಾಗವನ್ನು ಹೊರತೆಗೆಯಲು ಸಾಧ್ಯಮಾಡುತ್ತಾ, ಹರಿವು ಯಾವುದೇ ದಿಕ್ಕಿನಲ್ಲಿ ನಿಯಂತ್ರಿಸಲ್ಪಡುವಂತೆ ಅನುಮತಿಸಲಿತ್ತು. ನೀರು-ಸಂಸ್ಕರಣ ಸ್ಥಾವರಗಳಿಂದ ನೀರನ್ನು ಆಳವಾದ ಸುರಂಗದೊಳಗೆ ಕೆಳಗೆ ಹರಿಯುವಂತೆ ಬಿಡಲಾಗುವುದು ಮತ್ತು ಅನಂತರ ನೆಲೆಸಿರುವ ಸ್ಥಳಿಕ ಪ್ರಧಾನ ಕಾಲುವೆಗಳ ಸರಬರಾಯಿಗಳಿಗೆ, ಅಥವಾ ತಾತ್ಕಾಲಿಕ ಜಲಾಶಯಗಳಿಗೆ ನೇರವಾಗಿ ಪಂಪ್‌ಮಾಡಲಾಗುವುದು.

ಬ್ರಿಟನಿನಲ್ಲಿರುವ ಸುರಂಗಗಳಲ್ಲಿ ಅತಿ ಉದ್ದವಾಗಿರುವ ಈ ಸುರಂಗವು, ಏಕೆ ಇಷ್ಟು ಆಳವಾಗಿರಬೇಕಿತ್ತು? ಯಾಕಂದರೆ ಭೂಗತ ಲಂಡನ್‌, 12 ರೈಲುಮಾರ್ಗದ ವ್ಯವಸ್ಥೆಗಳು ಹಾಗೂ ಸಾರ್ವಜನಿಕ ಸೇವಾ ಸಲಕರಣೆಗಳ ಸಾಮಾನ್ಯವಾದ ರಾಶಿಯಿಂದ ತುಂಬಿದೆ, ಮತ್ತು ಆ ಸುರಂಗವು ವಿಶದವಾಗಿ ಅವುಗಳೆಲ್ಲವನ್ನು ತಾಕದೆ ಮುಂದಕ್ಕೆ ದಾಟಬೇಕಿತ್ತು. ಆರಂಭದ ಸಮೀಕ್ಷೆಯಲ್ಲಿ ಕಂಡುಹಿಡಿಯಲ್ಪಟ್ಟಿರದ, ಒಂದು ಕಟ್ಟಡದ ಆಳವಾದ ಗೋಪುರಾಕಾರದ ತಳಹದಿಗಳನ್ನು ಇಂಜಿನಿಯರರು ಅನಿರೀಕ್ಷಿತವಾಗಿ ಎದುರಿಸಿದಾಗ, ಕೆಲಸವು ಹತ್ತು ತಿಂಗಳುಗಳಿಗಿಂತ ಹೆಚ್ಚು ಸಮಯಕ್ಕೆ ತಡಮಾಡಲ್ಪಟ್ಟಿತು.

ನಿರ್ಮಾಣವನ್ನು ಹಂತಗಳಾಗಿ ನಿಗದಿಪಡಿಸಲಾಯಿತು. ಲಂಡನ್‌ನ ಜೇಡಿಮಣ್ಣನ್ನು ಅಗೆಯುವಾಗ, ಯಾವುದೇ ಮಹತ್ತಾದ ಸಮಸ್ಯೆಗಳು ನಿರೀಕ್ಷಿಸಲ್ಪಟ್ಟಿರಲಿಲ್ಲ, ಆದರೆ ಆರಂಭದ ನಿವೇಶನವಾದ ಟೂಟಿಂಗ್‌ ಬೆಕ್‌ನಲ್ಲಿ, ಥೇಮ್ಸ್‌ ನದಿಯ ದಕ್ಷಿಣಕ್ಕೆ, ಸುರಂಗ ತೋಡುವಿಕೆಯ ಕೆಲಸವು ಒಂದು ವರ್ಷಕ್ಕಿಂತ ಹೆಚ್ಚು ಸಮಯಕ್ಕೆ ತೊರೆಯಲ್ಪಡಬೇಕಾಯಿತು. ಅಲ್ಲಿ ಆ ಸುರಂಗ ತೋಡುವವರು ಉಚ್ಚ ಒತ್ತಡದ ಕೆಳಗೆ ಇರುವ ನೀರು ಅಡಕವಾಗಿದ್ದ ಮರಳಿನ ಪದರವನ್ನು ಪ್ರವೇಶಿಸಿದರು, ಅದು ಕಟ್ಟಕಡೆಗೆ ಕೊರೆದುಹಾಕುತ್ತಿದ್ದ ಯಂತ್ರವನ್ನು ಮುಳುಗಿಸಿಬಿಟ್ಟಿತು. ಈ ಸಮಸ್ಯೆಯನ್ನು ಪರಿಹರಿಸಲು, ಕಾಂಟ್ರ್ಯಾಕ್ಟರ್‌ಗಳು ನಳಿಕೆಯ ರಂಧ್ರಗಳ ಮೂಲಕ ಉಪ್ಪುನೀರಿನ ದ್ರಾವಣವನ್ನು ಮೈನಸ್‌ 28° ಸೆಲ್ಸಿಯಸ್‌ ತಾಪಮಾನದಲ್ಲಿ ಪರಿಚಲಿಸುವ ಮೂಲಕ ನೆಲವನ್ನು ಹೆಪ್ಪುಗಟ್ಟಿಸಲು ನಿರ್ಣಯಿಸಿದರು. ಹತ್ತಿರದಲ್ಲಿ ಇನ್ನೊಂದು ಇಳುಕಲು ತೋಡುದಾರಿಯನ್ನು ಅಗೆಯುತ್ತಾ, ಹೂಳಲ್ಪಟ್ಟಿದ್ದ ಯಂತ್ರವನ್ನು ಹೊರತರಲು ನೀರ್ಗಲ್ಲ ದಿಮ್ಮಿಯನ್ನು ಅಗೆದುಹಾಕಿ, ಡ್ರಿಲಿಂಗನ್ನು ಮುಂದುವರಿಸಲು ಅವರು ಶಕ್ತರಾದರು.

ಈ ಅನುಭವದಿಂದಾಗಿ, ಸುರಂಗವನ್ನು ಕಾಂಕ್ರೀಟಿನೊಂದಿಗೆ ಪದರ ಹಾಕಿಸುವ ಒಂದು ಹೊಸ ವ್ಯವಸ್ಥೆಯನ್ನು ಯೋಜಿಸುವ ಅಗತ್ಯವನ್ನು ಇಂಜಿನಿಯರರು ಕಂಡರು. ಇಂತಹ ಅಸ್ಥಿರವಾದ ನೆಲವನ್ನು ನಿಭಾಯಿಸಲು ಇನ್ನೊಂದು ರೀತಿಯ ಸುರಂಗಕೊರೆಯುವ ಯಂತ್ರದ ಅಗತ್ಯವಿದೆಯೆಂಬುದು ಸಹ ವ್ಯಕ್ತವಾಯಿತು. ಭೂಮಿ ಒತ್ತಡ ಸಮತೋಲನಗೊಳಿಸುವ ಕೆನಡದ ಒಂದು ಯಂತ್ರವು ಪರಿಹಾರವಾಗಿತ್ತು. ಮೂರು ಯಂತ್ರಗಳನ್ನು ಖರೀದಿಸಲಾಯಿತು, ಮತ್ತು ಫಲಸ್ವರೂಪವಾಗಿ, ಸುರಂಗಕೊರೆಯುವ ವೇಗವು ಒಂದು ತಿಂಗಳಿನಲ್ಲಿ 1.5 ಕಿಲೊಮೀಟರ್‌ಗಳಿಗೆ ಇಮ್ಮಡಿಯಾಯಿತು.

ಕಂಪ್ಯೂಟರ್‌ ನಿರ್ಮಾಣ

ಇಳುಕಲು ತೋಡುದಾರಿ ನಿವೇಶನಗಳ ದೃಷ್ಟಿರೇಖೆ ಅಳತೆಗಳನ್ನು ಕೊಡಲಿಕ್ಕಾಗಿ, ಮಾಳಿಗೆಗಳ ಮೇಲಿನಿಂದ ಸಾಂಪ್ರದಾಯಿಕ ಕೋನ ದೂರದರ್ಶಕದ ಜಮೀನು ಸಮೀಕ್ಷೆಗಳನ್ನು ಮಾಡಲಾಯಿತು, ಮತ್ತು ಫಲಿತಾಂಶಗಳನ್ನು ಇಲೆಕ್ಟ್ರಾನಿಕ್‌ ರೀತಿಯಲ್ಲಿ ಪರಿಶೀಲಿಸಲಾಯಿತು. ಈ ವಿಧಾನವು ಆರಂಭದಲ್ಲಿ ಯಥೋಚಿತವಾಗಿತ್ತು, ಆದರೆ ಒಮ್ಮೆ ಸುರಂಗತೋಡುವಿಕೆಯು ಆರಂಭಿಸಿದ ನಂತರ, ನೆಲದ ಕೆಳಗೆ ನಿಷ್ಕೃಷ್ಟವಾದ ತಳ ನಕಾಸೆಯನ್ನು ಹೇಗೆ ಖಚಿತಪಡಿಸಿಕೊಳ್ಳಸಾಧ್ಯವಿತ್ತು?

ಇಲ್ಲಿ, ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌ (ಜಿಪಿಎಸ್‌) ಮೂಲಕ ಆಧುನಿಕ ತಂತ್ರಜ್ಞಾನವು ಕಾರ್ಯಭಾರ ವಹಿಸಿತು. ಈ ಸಮೀಕ್ಷೆಯ ಸಲಕರಣೆಯು, ಭೂಮಿಯನ್ನು ಸುತ್ತುತ್ತಿರುವ ಒಂದು ಜಿಪಿಎಸ್‌ ಆಕಾಶನೌಕೆಯೊಂದಿಗೆ ಅನುಗೊಳಿಸಲ್ಪಟ್ಟಿರುವ ಒಂದು ಉಪಗ್ರಹ ರಿಸೀವರ್‌ ಅನ್ನು ಒಳಗೊಂಡಿರುತ್ತದೆ. ಈ ಸಲಕರಣೆಯು ಸುತ್ತುತ್ತಿರುವ ಹಲವಾರು ಉಪಗ್ರಹಗಳಿಂದ ಬರುವ ಸಂಕೇತಗಳನ್ನು ಹೋಲಿಸಸಾಧ್ಯವಿತ್ತು. ಒಮ್ಮೆ ಈ ಅಳತೆಗಳು ಕಂಪ್ಯೂಟರಿನ ಮೂಲಕ ಸುಸಂಘಟಿಸಲ್ಪಟ್ಟ ನಂತರ, ಆರ್ಡನೆನ್ಸ್‌ ಸರ್ವೇ ನಕ್ಷೆಗಳ ಹಾದಿಯಲ್ಲೆಲ್ಲಾ ಇದ್ದ ಎಲ್ಲ 21 ಇಳುಕಲು ತೋಡುದಾರಿಗಳು ಮತ್ತು 580 ನಳಿಕೆಯ ರಂಧ್ರಗಳ ಸ್ಥಾನಗಳನ್ನು ತೋರಿಸಲಾಯಿತು. ಈ ಮಾಹಿತಿಯೊಂದಿಗೆ, ಸುರಂಗತೋಡುವವರು ನಿಷ್ಕೃಷ್ಟವಾಗಿ ಮಾರ್ಗದರ್ಶಿಸಲ್ಪಟ್ಟರು.

ಕಂಪ್ಯೂಟರ್‌ ನಿಯಂತ್ರಣ

60 ಲಕ್ಷ ಗಿರಾಕಿಗಳ ನೀರಿನ ಅಗತ್ಯಗಳನ್ನು ಪೂರೈಸುವುದು ಒಂದು ಸುಲಭದ ಕೆಲಸವಲ್ಲ. ಬೇಡಿಕೆಯು ಒಂದು ಋತುವಿನಿಂದ ಇನ್ನೊಂದು ಋತುವಿಗೆ ಮಾತ್ರವಲ್ಲ, ದಿನದಿಂದ ದಿನಕ್ಕೆ ಹೆಚ್ಚುಕಡಮೆಯಾಗಬಲ್ಲದು. ಇದು, ಎಲ್ಲಾ ಸಮಯಗಳಲ್ಲಿ ನೀರಿನ ಸರಿಯಾದ ಒತ್ತಡ ಮತ್ತು ಗುಣಮಟ್ಟವನ್ನು ಖಚಿತಗೊಳಿಸಲು ಸತತವಾದ ಗಮನಕೊಡುವಿಕೆಯನ್ನು ಅವಶ್ಯಪಡಿಸುತ್ತದೆ. ಈ ಅತ್ಯಾವಶ್ಯಕವಾದ ಸುಸಂಘಟನೆಯು ಹೇಗೆ ಸಾಧ್ಯ? 50 ಲಕ್ಷ ಡಾಲರುಗಳಷ್ಟು ವೆಚ್ಚವಿರುವ ಒಂದು ಕಂಪ್ಯೂಟರ್‌ ನಿಯಂತ್ರಣ ವ್ಯವಸ್ಥೆಯ ಮೂಲಕವೇ.

ಪ್ರತಿಯೊಂದು ಇಳುಕಲು ತೋಡುದಾರಿ ಪಂಪ್‌ ತನ್ನ ಸ್ವಂತ ಕಂಪ್ಯೂಟರ್‌ನಿಂದ ನಿಯಂತ್ರಿಸಲ್ಪಡುತ್ತದೆ, ಮತ್ತು ದುಬಾರಿಯಲ್ಲದ, ಉಚ್ಚ ಬಿಂದುವಿನಲ್ಲಿರದ ವಿದ್ಯುಚ್ಛಕ್ತಿಯನ್ನು ಉಪಯೋಗಿಸುವ ಮೂಲಕ ವೆಚ್ಚವನ್ನು ಕಡಿಮೆಗೊಳಿಸಲಾಗುತ್ತದೆ. ಲಂಡನ್‌ನ ಪಶ್ಚಿಮ ಭಾಗವಾದ, ಹ್ಯಾಂಪ್ಟನ್‌ನಲ್ಲಿರುವ ಪ್ರಧಾನ ಕಂಪ್ಯೂಟರ್‌ಗಳು, ಇಡೀ ಜಾಲಬಂಧವನ್ನು ನಿಯಂತ್ರಿಸುತ್ತವೆ. ಕಂಪ್ಯೂಟರ್‌ಗಳು, ಸುರಂಗದ ಗೋಡೆಗಳಲ್ಲಿರುವ ನಾಳಗಳಿಗೆ ಜೋಡಿಸಲ್ಪಟ್ಟಿರುವ ಫೈಬರ್‌-ಆಪ್ಟಿಕ್‌ ಕೇಬಲ್‌ಗಳಿಂದ ಮಾಹಿತಿಯನ್ನು ಪಡೆಯುತ್ತವೆ ಮತ್ತು ಅದನ್ನು ಸೀಮಿತ ಮಂಡಲದ ದೂರದರ್ಶಕ ಮಾನಿಟರ್‌ಗಳ ಮೂಲಕ ರವಾನಿಸುತ್ತವೆ.

ನೀರಿನ ಗುಣಮಟ್ಟವನ್ನು ಪ್ರತಿದಿನ, ಸಾಪ್ತಾಹಿಕವಾಗಿ, ಮತ್ತು ಮಾಸಿಕವಾಗಿ ಆಗಾಗ ಪರಿಶೀಲಿಸಲಾಗುತ್ತದೆ. “ನೀರಿನ ಗುಣಮಟ್ಟವನ್ನು ಪರೀಕ್ಷಿಸುವುದರಲ್ಲಿ 120 ದ್ರವ್ಯಗಳಿಗಾಗಿ 60 ಆಜ್ಞಾಪಕ ಪರೀಕ್ಷೆಗಳಿವೆ. ಅವು ನೈಟ್ರೇಟುಗಳು, ಅತಿಸೂಕ್ಷ್ಮ ರಾಸಾಯನಿಕ ಘಟಕಾಂಶಗಳು, ಕೀಟನಾಶಕಗಳು ಮತ್ತು ಇತರ ರಾಸಾಯನಿಕ ದ್ರಾವಣಗಳಂತಹ ದ್ರವ್ಯಗಳಿಗಾಗಿ ಪರಿಶೀಲನೆಯನ್ನು ಒಳಗೂಡಿಸುತ್ತವೆ,” ಎಂದು ದ ಟೈಮ್ಸ್‌ ವಾರ್ತಾಪತ್ರಿಕೆಯು ವಿವರಿಸುತ್ತದೆ. ಈ ಅಳತೆಗಳು ಈಗ ಸ್ವಯಂಚಾಲಿತವಾಗಿ ಮಾಡಲ್ಪಡುತ್ತವೆ ಮತ್ತು ಅಗತ್ಯವಿರುವಂತೆ ಅರ್ಥವಿವರಣೆ ಮತ್ತು ಕ್ರಿಯೆಗಾಗಿ ಕಂಪ್ಯೂಟರ್‌ ಮುಖ್ಯಕಾರ್ಯಾಲಯಗಳಿಗೆ ರವಾನಿಸಲ್ಪಡುತ್ತವೆ. ನೀರಿನ ರುಚಿ ನೋಡಲಿಕ್ಕಾಗಿರುವ ಜನರು ಸಹ ಗುಣಮಟ್ಟದ ನಿಯತಕಾಲಿಕ ಅಳೆಯುವಿಕೆಗಳನ್ನು ಮಾಡುತ್ತಾರೆ.

ಭವಿಷ್ಯತ್ತಿಗಾಗಿ ಯೋಚಿಸುವುದು

ಆಧುನಿಕ ತಂತ್ರಕೌಶಲ್ಯದ ಈ ಅದ್ಭುತವು, ಈಗಾಗಲೇ, ಗ್ರೇಟರ್‌ ಲಂಡನ್‌ನ 1,500 ಚದರ ಕಿಲೊಮೀಟರ್‌ಗಳಲ್ಲೆಲ್ಲಾ ಹರಡಿರುವ ಜನಸಂಖ್ಯೆಗೆ ಪ್ರತಿನಿತ್ಯ 58.3 ಕೋಟಿ ಲೀಟರ್‌ಗಳಷ್ಟು ಕುಡಿಯುವ ನೀರನ್ನು ಒದಗಿಸುತ್ತಿದೆ. ಅದು ಪೂರ್ತಿಯಾಗಿ ಕಾರ್ಯಾಚರಣೆ ನಡಿಸುವಾಗ, ಅದು ಸದ್ಯದ ಬೇಡಿಕೆಯ ಸುಮಾರು 50 ಪ್ರತಿಶತವನ್ನು ಪೂರೈಸುತ್ತಾ, ಸರಬರಾಯಿಯ ಇತರ ಮೂಲಗಳ ಮೇಲಿಂದ ಒತ್ತಡವನ್ನು ತೆಗೆಯುವುದು.

ಇದು ಸಹ ಸಾಕಾಗುವುದಿಲ್ಲ. ಆದುದರಿಂದ, ಮುಂದಿನ ಶತಮಾನದ ಆರಂಭದ ಭಾಗದಲ್ಲಿ ವರ್ತುಲಾಕಾರದ ಪ್ರಧಾನ ಕಾಲುವೆಯನ್ನು ಇನ್ನೊಂದು 60 ಕಿಲೊಮೀಟರುಗಳಿಗೆ ವಿಸ್ತರಿಸಲಿಕ್ಕಾಗಿ ಈಗಲೇ ಯೋಜನೆಗಳನ್ನು ಮಾಡಲಾಗುತ್ತಿದೆ. ಒಂದು ಕಷ್ಟಕರ ಸಮಸ್ಯೆಗೆ ನಿಜವಾಗಿಯೂ ಒಂದು ಚತುರ ಪರಿಹಾರ!

[Diagram on page 23]

ಇತರ ಸುರಂಗ ಸೇವಾಸೌಲಭ್ಯಗಳ ಅಡಿಯಲ್ಲಿ ನೀರಿನ ಕೇಂದ್ರ ಕಾಲುವೆಯನ್ನು ತೋರಿಸುತ್ತಾ, ಲಂಡನ್‌ನ ಅಡಿಯಲ್ಲಿ ಅಡ್ಡಛೇದ

ಉ

ಹೊಸ ನೀರು ಕೇಂದ್ರ ಕಾಲುವೆ ಮತ್ತು ಇಳುಕಲು ತೋಡುದಾರಿಗಳು

ಥೇಮ್ಸ್‌ ನದಿ

ಭೂಗತ ರೈಲುಮಾರ್ಗದ ಸುರಂಗಗಳು

ದ

[ಕೃಪೆ]

Based on photograph: Thames Water

[ಪುಟ 35 ರಲ್ಲಿರುವ ಚಿತ್ರ]

ನೀರಿನ-ಕೇಂದ್ರ ಕಾಲುವೆ ಸುರಂಗಕೊರೆಯುವ ಯಂತ್ರ

[ಕೃಪೆ]

Photograph: Thames Water

[ಪುಟ 36 ರಲ್ಲಿರುವ ಚಿತ್ರ]

ನೀರಿನ-ಕೇಂದ್ರ ಕಾಲುವೆ ನಿರ್ಮಾಣ ಕೆಲಸ

[ಕೃಪೆ]

Photograph: Thames Water

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ