ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 10/8 ಪು. 31
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1996
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1997
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1994
ಇನ್ನಷ್ಟು
ಎಚ್ಚರ!—1996
g96 10/8 ಪು. 31

ನಮ್ಮ ವಾಚಕರಿಂದ

ಭರವಸೆ ಕೆಲವು ಸ್ನೇಹಿತರು ಮತ್ತು ಸಂಬಂಧಿಕರಿಂದ ನಂಬಿಕೆದ್ರೋಹಕ್ಕೊಳಗಾದ ಕಾರಣ ನನಗೆ ನಿರುತ್ಸಾಹಗೊಂಡ ಅನಿಸಿಕೆಯಿತ್ತು. ನನ್ನ ಸುತ್ತಮುತ್ತಲಿರುವ ಪ್ರತಿಯೊಬ್ಬರ ವಿಶ್ವಾಸಾರ್ಹತೆಯನ್ನು ನಾನು ಸಂಶಯಿಸಲಾರಂಭಿಸಿದೆ. ಆದರೆ “ನೀವು ಯಾರ ಮೇಲೆ ಭರವಸೆಯಿಡಬಲ್ಲಿರಿ?” (ಮಾರ್ಚ್‌ 8, 1996) ಎಂಬ ಸರಣಿಯು, ಭರವಸೆಯ ಕುರಿತಾದ ಹೆಚ್ಚಿನ ಸಮತೂಕದ ನೋಟವನ್ನು ನನಗೆ ನೀಡಿತು. ಅಂಥ ಸಮಯೋಚಿತ ಮಾಹಿತಿಗಾಗಿ ನಿಮಗೆ ಉಪಕಾರ.

ಇ. ಐ., ಕೊರಿಯ

ನನ್ನನ್ನು ದುರಪಯೋಗಿಸಿದ ನನ್ನ ತಂದೆ, ಇಬ್ಬರು ಪತಿಯರು ಮತ್ತು ಒಬ್ಬ ಕ್ರೈಸ್ತ ಸಹೋದರನಿಂದ ನಾನು ನಂಬಿಕೆದ್ರೋಹವನ್ನು, ಅನೇಕ ವರ್ಷಗಳಿಂದ ಅನುಭವಿಸಿದ್ದೇನೆ. ಯಾರೊಬ್ಬರ ಮೇಲೂ ಭರವಸೆಯನ್ನು ಇಡಬಾರದೆಂದು ನಿರ್ಧರಿಸಿದ ಹಂತಕ್ಕೆ ನಾನು ತಲಪಿದೆ. ನನಗೆ ಜನರ ಅಗತ್ಯವಿಲ್ಲವೆಂಬುದಾಗಿ ನನಗೆ ನಾನೇ ಮನವರಿಕೆ ಮಾಡಿಕೊಂಡೆ. ಆದರೆ ಈ ಲೇಖನವು ನನಗೆ ಹೆಚ್ಚು ಸಮಸ್ಥಿತಿಯುಳ್ಳವಳಾಗಿ ಪರಿಣಮಿಸಲು ಸಹಾಯಮಾಡಿತು. ಭರವಸೆಯನ್ನಿಡುವುದು ನನಗೆ ಬಹಳ ಕಷ್ಟವಾಗಿರುವುದಾದರೂ, ನಾನು ಪ್ರಯತ್ನಿಸುತ್ತಾ ಇರುವೆ. ಈ ಬಾರಿ ನಾನು ಯಾರ ಮೇಲೆ ಭರವಸೆಯಿಡಬೇಕು ಎಂಬುದರ ಕುರಿತಾಗಿ ಬಹಳ ಜಾಗರೂಕಳಾಗಿರುವೆನು.

ಕೆ. ಏಚ್‌., ಅಮೆರಿಕ

ಮ್ಯಾಟರ್‌ಹಾರ್ನ್‌ “ಅಪೂರ್ವವಾಗಿರುವ ಮ್ಯಾಟರ್‌ಹಾರ್ನ್‌” (ಮಾರ್ಚ್‌ 8, 1996) ಎಂಬ ಲೇಖನವನ್ನು ನಾನು ಓದಿದೆ. ಈ ಮನೋಹರವಾದ ಪರ್ವತದ ಛಾಯಚಿತ್ರವು ನಿಜವಾಗಿಯೂ ನನ್ನ ಗಮನವನ್ನು ಸೆಳೆಯಿತು! ಆ ಲೇಖನವು ನಾನು ದೇವರ ಸೃಷ್ಟಿಯನ್ನು ಇನ್ನೂ ಹೆಚ್ಚಾಗಿ ಗಣ್ಯಮಾಡುವಂತೆ ಮಾಡಿತು.

ಜೆ. ಡಬ್ಲ್ಯು., ಅಮೆರಿಕ

ಸೇಬುಗಳು “ದಿನಕ್ಕೊಂದು ಸೇಬು ವೈದ್ಯನಿಂದ ದೂರ” (ಮಾರ್ಚ್‌ 8, 1996) ಎಂಬ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರ. ನಮ್ಮ ಚಿಕ್ಕ ಜಮೀನಿನಲ್ಲಿ 100ಕ್ಕಿಂತಲೂ ಹೆಚ್ಚು ಸೇಬಿನ ಮರಗಳು ನಮಗಿರುವುದರಿಂದ ಇದು ನನ್ನ ಆಸಕ್ತಿಯನ್ನು ಕೆರಳಿಸಿತು. ಈ ಮರಗಳು ಚೆನ್ನಾಗಿ ಉತ್ಪಾದಿಸುವಂತೆ ಇವುಗಳನ್ನು ಸಮರುವುದರಲ್ಲಿ ಮತ್ತು ನೀಟಾಗಿಡುವುದರಲ್ಲಿ ನಾವು ಆನಂದಿಸುತ್ತೇವೆ. ನಿಮ್ಮ ಎಲ್ಲ ಲೇಖನಗಳ ನಿಷ್ಕೃಷ್ಟತೆಯನ್ನು ನಾವು ಗಣ್ಯಮಾಡುತ್ತೇವೆ. ಅವು ಚೈತನ್ಯದಾಯಕವಾದ, ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುತ್ತವೆ.

ಪಿ. ಬಿ., ಅಮೆರಿಕ

ಆಂತರಿಕ ನಿರ್ಬಂಧ ವರ್ತನೆ “ಆಂತರಿಕ ನಿರ್ಬಂಧ ವರ್ತನೆ—ಅದು ನಿಮ್ಮ ಜೀವಿತವನ್ನು ನಿಯಂತ್ರಿಸುತ್ತದೊ?” (ಮಾರ್ಚ್‌ 8, 1996) ಎಂಬ ಅತ್ಯುತ್ಕೃಷ್ಟವಾದ ಲೇಖನಕ್ಕಾಗಿ ನಿಮಗೆ ಉಪಕಾರ. ನಾನು ಕೇವಲ 20 ವರ್ಷ ಪ್ರಾಯದವಳಾಗಿದ್ದೇನೆ, ಮತ್ತು ನಾನು ಆಂತರಿಕ ನಿರ್ಬಂಧ ವರ್ತನೆಯಿಂದ ಕಷ್ಟಾನುಭವಿಸುತ್ತೇನೆ. ನನಗೆ ಏನು ಸಂಭವಿಸುತ್ತಿತ್ತು ಎಂಬುದರ ಕುರಿತಾಗಿ ಮಾಹಿತಿಯನ್ನು ನನಗೆ ಕಳುಹಿಸುವಂತೆ ನಾನು ಪದೇ ಪದೇ ಪ್ರಾರ್ಥನೆಯಲ್ಲಿ ಯೆಹೋವನಿಗೆ ಭಿನ್ನಹಿಸಿದ್ದೆ.

ಎಮ್‌. ಎ. ಸಿ., ಸ್ಪೆಯ್ನ್‌

ಒಬ್ಬ ಪೂರ್ಣ ಸಮಯದ ಸೌವಾರ್ತಿಕಳೋಪಾದಿ ಸೇವೆಸಲ್ಲಿಸುತ್ತಾ, ನಾನು ಪಯನೀಯರ್‌ ಸೇವೆಯನ್ನು ಪ್ರಾರಂಭಿಸಿದ ಸಮಯದಲ್ಲಿ ದೇವರ ಕುರಿತಾಗಿ ಅನೈಚ್ಛಿಕವಾದ, ಅಗೌರವಪೂರ್ಣವಾದ ಅನಿಸಿಕೆಗಳಿಂದ ಬಾಧಿಸಲ್ಪಡಲಾರಂಭಿಸಿದೆ. ನಾನು ಒಂದು ಅಕ್ಷಮ್ಯ ಪಾಪವನ್ನು ಗೈದಿದ್ದೆನೆಂದು ಭಾವಿಸಿದೆ ಮತ್ತು ನಾನು ಅನೇಕ ಬಾರಿ ಅತ್ತೆ. ನನ್ನ ಭಾವನೆಗಳು ಬರವಣಿಗೆಯಲ್ಲಿ ವರ್ಣಿಸಲ್ಪಟ್ಟಿರುವುದನ್ನು ನೋಡಿದುದರಿಂದ ನನಗೆ ಈಗ ಹೇಗನಿಸುತ್ತದೆಂಬುದನ್ನು ನೀವು ಊಹಿಸಲಾರಿರಿ. ಇದರಿಂದ ಇತರ ಯಾವುದೇ ವ್ಯಕ್ತಿಯು ಕಷ್ಟಾನುಭವಿಸುತ್ತಿರಲು ಸಾಧ್ಯವಿದೆ ಎಂದು ನಾನೆಂದೂ ನೆನಸಿರಲಿಲ್ಲ. ಸಹೋದರರೇ, ನಮಗೆ ಸಹಾಯಮಾಡಲು ಯಾವಾಗಲೂ ಇರುವುದಕ್ಕಾಗಿ ನಿಮಗೆ ಉಪಕಾರ.

ಕೆ. ಬಿ., ನೈಜೀರಿಯ

ಆ ಲೇಖನವನ್ನು ನಾನು ಪದೇ ಪದೇ ಕಣ್ಣೀರಿಡುತ್ತಾ ಓದಿದೆ. ಅದು ಎಷ್ಟೊಂದು ವಿವರವಾಗಿ ನನ್ನ ಸ್ಥಿತಿಯನ್ನು ವರ್ಣಿಸಿತು! ನಾನು ಹುಚ್ಚಿಯಾಗುತ್ತಿದ್ದೇನೋ ಅಥವಾ ದೆವ್ವಗಳು ನನ್ನ ಮನಸ್ಸನ್ನು ನಿಯಂತ್ರಿಸುತ್ತಿವೆಯೋ ಎಂದು ನಾನು ವಿಸ್ಮಯಗೊಂಡಿದ್ದೆ. ಸಹೋದರರ ನಡುವೆ ಇತರರೂ ಇದೇ ರೀತಿಯ ಅವ್ಯವಸ್ಥೆಯಿಂದ ಕಷ್ಟಾನುಭವಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವದು ಒಂದು ಉಪಶಮನಕಾರಿಯಾದ ವಿಷಯವಾಗಿತ್ತು.

ಕೆ. ಟಿ., ಜಪಾನ್‌

ಈ ಸಮಸ್ಯೆಯ ನೆರವಿಗಾಗಿ ನಾನು ಅನೇಕವೇಳೆ ಯೆಹೋವನೆಡೆಗೆ ತಿರುಗಿದ್ದೆ. ಆದರೆ ಅದು ನಿರರ್ಥಕವಾಗಿತ್ತೆಂದು ಮತ್ತು ನನಗೆ ಯಾವ ವಿಷಯವೂ ಸಹಾಯಮಾಡಸಾಧ್ಯವಿಲ್ಲವೆಂದು ನೆನಸಿದ ಕಾರಣ ನಾನು ಅದನ್ನು ಬಿಟ್ಟುಕೊಡಲು ನಿರ್ಧರಿಸಿದೆ. ಈಗ ನಾನು ನನ್ನ ಕುರಿತಾಗಿ ಅರ್ಥಮಾಡಿಕೊಳ್ಳುತ್ತೇನೆ, ಮತ್ತು ನನಗೆ ಮನಸ್ಸು ಹಗುರವಾದಂತೆ ಅನಿಸಿದೆ. ಲೇಖನವು ಹೆಚ್ಚು ಪ್ರೀತಿಪರವಾಗಿ ಬರೆಯಲ್ಪಟ್ಟಿರುವುದನ್ನು ನಾನು ಸ್ಪಷ್ಟವಾಗಿ ನೋಡಬಲ್ಲೆ. ಯೆಹೋವನು ನಿಜವಾಗಿಯೂ ನಮಗಾಗಿ ಕಾಳಜಿವಹಿಸುತ್ತಾನೆ ಎಂಬ ಖಾತ್ರಿ ನನಗಿದೆ.

ಜೆ. ಎಫ್‌., ಚೆಕ್‌ ರಿಪಬ್ಲಿಕ್‌

ನಾನೀಗ ಏಳು ವರ್ಷಗಳಿಂದ ಆಂತರಿಕ ನಿರ್ಬಂಧ ವರ್ತನೆಯ ಭಾವನೆಗಳಿಂದ ಮಾನಸಿಕವಾಗಿ ಹಿಂಸಿಸಲ್ಪಟ್ಟಿದ್ದೇನೆ. ಅದು ನನಗೆ ನಿತ್ರಾಣಗೊಂಡಂತೆಯೂ ಖಿನ್ನಳಾದಂತೆಯೂ ಆದ ಭಾವನೆಯನ್ನು ಉಂಟುಮಾಡಿದೆ. ಅದರ ಕುರಿತಾಗಿ ಯಾರೊಬ್ಬರೊಂದಿಗೂ ಚರ್ಚಿಸಲಿಕ್ಕೆ ನನಗೆ ತುಂಬ ಲಜ್ಜೆಯ ಮತ್ತು ದೋಷಿಭಾವದ ಅನಿಸಿಕೆಯಾಯಿತು. ನಾನು ನಿಜವಾಗಿಯೂ ಹುಚ್ಚಿಯಾಗಿದ್ದೆನೆಂದು ನೆನಸಿದೆ. ನಾನು ಈ ಲೇಖನವನ್ನು ಓದಿದಾಗ, ನನಗೆ ಅದನ್ನು ನಂಬಲಾಗಲಿಲ್ಲ. ನಾನು ಏನನ್ನು ಅನುಭವಿಸುತ್ತಿದ್ದೆನೋ ಅದನ್ನು ನನ್ನ ಹೊರತು ಇತರ ಜನರು ಅನುಭವಿಸಿದ್ದರೆಂಬುದನ್ನು ತಿಳಿಯಲು ನಾನು ಅತ್ಯಾಶ್ಚರ್ಯಪಟ್ಟೆ! ನನಗೆ ಕಣ್ಣೀರು ಬಂತು. ಇನ್ನುಮುಂದೆ ನಾನು ಏಕಾಂಗಿಯಾಗಿರಲಿಲ್ಲ. ನಾನು ಅಕ್ಷಮ್ಯ ಪಾಪವನ್ನು ಗೈದಿರಲಿಲ್ಲ, ಮತ್ತು ಯೆಹೋವನು ನನ್ನೊಂದಿಗೆ ಕುಪಿತನಾಗಿರಲಿಲ್ಲ.

ಎಸ್‌. ಬಿ., ದಕ್ಷಿಣ ಆಫ್ರಿಕ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ