ಅವರ ದುರವಸ್ಥೆಗೆ ಜಗಿಯುತ್ತಾ ಹೋಗುವುದು
ಭಾರತದ ಎಚ್ಚರ! ಸುದ್ದಿಗಾರರಿಂದ
ರೇಡಿಯೋದಲ್ಲಿ ಬರುವ ಸುಶ್ರಾವ್ಯವಾದ ಪ್ರಾಸಗಳು, ಅದನ್ನು ಉಪಯೋಗಿಸುವಂತೆ ಜನರನ್ನು ಉತ್ತೇಜಿಸುತ್ತವೆ. ಚಲನ ಚಿತ್ರ ತಾರೆಯರು ಅದನ್ನು ಟಿವಿಯಲ್ಲಿ, ಪತ್ರಿಕೆಗಳಲ್ಲಿ, ಮತ್ತು ವಾರ್ತಾಪತ್ರಿಕೆಗಳಲ್ಲಿ, ರೋಮಾಂಚಕವಾದ ಪ್ರತಿಷ್ಠಾನ್ವಿತ ಜೀವನ ರೀತಿಗೆ ಮುನ್ನಡೆಸಬಹುದಾದ ಯಾವುದೋ ಒಂದು ವಿಷಯದೋಪಾದಿ ಪ್ರವರ್ಧಿಸುತ್ತಾರೆ. ಆದರೆ ಈ ಉತ್ಪನ್ನವನ್ನು ಉಪಯೋಗಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡಸಾಧ್ಯವಿದೆ ಎಂದು ಚಿಕ್ಕ ಮುದ್ರಣವು ಎಚ್ಚರಿಕೆ ನೀಡುತ್ತದೆ. ಅದು ಏನಾಗಿದೆ? ಅದು ವ್ಯಸನಕರವೂ ಹಾನಿಕರವೂ ಆದ ವಸ್ತುವೆಂದು ಪ್ರಸಿದ್ಧವಾಗಿರುವ ಪಾನ್ (ವೀಳ್ಯ).
ಪಾನ್ ಏಷಿಯಾದಲ್ಲಿ ಉಪಯೋಗಿಸಲ್ಪಡುತ್ತದೆ—ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ. ಅದರ ಸಾಂಪ್ರದಾಯಿಕ ರೂಪದಲ್ಲಿ, ಇದು ಅಡಿಕೆ ಪುಡಿ, ಹೊಗೆಸೊಪ್ಪು, ಮತ್ತು ಇತರ ರುಚಿ-ವರ್ಧಕ ಪದಾರ್ಥಗಳ ಮಿಶ್ರಣವನ್ನು ಒಳಗೊಂಡಿದೆ. ಹೊಗೆಸೊಪ್ಪು ಹಾಗೂ ಅಡಿಕೆಗಳು ಈ ಪಾನ್ ಅನ್ನು ವ್ಯಸನಕರವಾದದ್ದಾಗಿ ಮಾಡುತ್ತವೆ. ಇವೆಲ್ಲವೂ ಖನಿಜ ಸುಣ್ಣ ಹಾಗೂ ಒಗರಾದ ಸಸ್ಯೋತ್ಪನ್ನವಾದ ಖದಿರ (ಕ್ಯಾಟಿಚೂ)ದ ಕಣಕದಿಂದ ಲೇಪಿತವಾಗಿರುವ ಒಂದು ವೀಳ್ಯದೆಲೆಯ ಮೇಲೆ ಇಡಲ್ಪಡುತ್ತವೆ. ಈ ಎಲೆಯು ಅದರಲ್ಲಿ ತುಂಬಿಸಲ್ಪಟ್ಟಿರುವುದನ್ನು ಮುಚ್ಚುವಂತೆ ಮಡಚಲ್ಪಟ್ಟು, ತದನಂತರ ಇಡೀ ಕಟ್ಟು ಬಾಯೊಳಗೆ ಇಡಲ್ಪಡುತ್ತದೆ. ಒಂದು ಜನಪ್ರಿಯವಾದ ರೂಪವು ಪಾನ್ ಮಸಾಲ ಆಗಿದೆ, ಅದೇ ಪದಾರ್ಥಗಳು ಒಣ ರೂಪದಲ್ಲಿ ಮಿಶ್ರಮಾಡಲ್ಪಟ್ಟು, ಸುಲಭವಾಗಿ ಒಯ್ಯಸಾಧ್ಯವಿರುವ ಹಾಗೂ ಯಾವುದೇ ಸಮಯದಲ್ಲಿ ಉಪಯೋಗಿಸಲ್ಪಡಸಾಧ್ಯವಿರುವ ಸಣ್ಣ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಲ್ಪಡುತ್ತವೆ.
ಜಗಿಯುವುದು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ದೊಡ್ಡ ಪ್ರಮಾಣಗಳಲ್ಲಿ ಜೊಲ್ಲನ್ನು ಉತ್ಪಾದಿಸುತ್ತದೆ, ಇದನ್ನು ಆಗಾಗ ಹೊರಗೆ ಉಗಿಯಬೇಕು. ಪಾನ್ ಜನಪ್ರಿಯವಾಗಿರುವ ಅಧಿಕಾಂಶ ಮನೆಗಳಲ್ಲಿ ಉಗುಳುಪಾತ್ರೆ ಇದೆ, ಆದರೆ ಮನೆಯ ಹೊರಗೆ ಒಂದು ಕಾಲುಹಾದಿ ಅಥವಾ ಒಂದು ಗೋಡೆಯು ಪಾತ್ರೆಯಾಗಿ ಪರಿಣಮಿಸುತ್ತದೆ. ಭಾರತದಲ್ಲಿನ ಅನೇಕ ಕಟ್ಟಡಗಳ ಮೆಟ್ಟಲಹಾದಿಗಳು ಹಾಗೂ ಮೊಗಸಾಲೆಗಳಲ್ಲಿ ಕಂದು-ಬಣ್ಣದ ಕಲೆಗಳನ್ನು ನೋಡಸಾಧ್ಯವಿರುವುದಕ್ಕೆ ಇದೇ ಕಾರಣವಾಗಿದೆ.
ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟ್ಲ್ ರೀಸರ್ಚ್ನ ಅಧ್ಯಯನಕ್ಕನುಸಾರ, ಪ್ರತಿ ವರ್ಷ ಭಾರತದ ಹೊಸ ಕ್ಯಾನ್ಸರ್ ರೋಗಸ್ಥಿತಿಗಳಲ್ಲಿ 10 ಪ್ರತಿಶತ ಬಾಯಿಯ ಕ್ಯಾನ್ಸರ್ ಆಗಿದೆ—ಜಗತ್ತಿನ ಸರಾಸರಿಗಿಂತ ಸುಮಾರು ಎರಡರಷ್ಟು. ಬಾಯಿ ಮತ್ತು ಮೇಲುದವಡೆ ಹಾಗೂ ಮುಖದ ಶಸ್ತ್ರಚಿಕಿತ್ಸಕರಾದ ಡಾ. ಆರ್. ಗುಣಶೀಲನ್, ಪ್ರಮುಖವಾಗಿ ಪಾನ್ ಜಗಿಯುವಿಕೆಯ ಮೇಲೆ ದೋಷಾರೋಪವನ್ನು ಹೊರಿಸುವುದರಲ್ಲಿ ಇಡೀ ಭಾರತದ ಶಸ್ತ್ರಚಿಕಿತ್ಸಕರೊಂದಿಗೆ ಜೊತೆಗೂಡುತ್ತಾರೆ. ಅವರು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಹೇಳುವುದು: “ಪಾನ್ನ ಎಲ್ಲಾ ರೂಪಗಳು ಬಾಯಿಗೆ ಹಾನಿಕರವಾಗಿವೆ.” ಪಾನ್ “ಖಂಡಿತವಾಗಿಯೂ ಬಾಯಿಯ ಕ್ಯಾನ್ಸರಿಗೆ ನಡೆಸಬಲ್ಲದು” ಮತ್ತು ಅದನ್ನು “ಜಗಿಯುವುದು ಮೌಖಿಕ ವಿರೂಪಗಳನ್ನು ಸ್ವಾಗತಿಸುವಂತಿದೆ” ಎಂದು ಅವರು ಗಮನಿಸಿದರು. ಆದುದರಿಂದ, ಪಾನ್ ಅನ್ನು ಉಪಯೋಗಿಸುವುದು, ಒಬ್ಬನ ದುರವಸ್ಥೆಗೆ ಜಗಿಯುತ್ತಾ ಹೋಗುವುದನ್ನು ಅರ್ಥೈಸಸಾಧ್ಯವಿದೆ.
[ಪುಟ 42 ರಲ್ಲಿರುವ ಚಿತ್ರ]
ಭಾರತದ ಹೊಸ ಕ್ಯಾನ್ಸರ್ ರೋಗಸ್ಥಿತಿಗಳಲ್ಲಿ ಹತ್ತು ಪ್ರತಿಶತ ಬಾಯಿಯ ಕ್ಯಾನ್ಸರ್ ಆಗಿದೆ
[ಕೃಪೆ]
WHO photo by Eric Schwab