ನಮ್ಮ ವಾಚಕರಿಂದ
ಸನ್ನಿಹಿತ ಸಾವು “ನನ್ನ ಸನ್ನಿಹಿತ ಸಾವಿನಿಂದ ವೈದ್ಯರು ಕಲಿತರು” (ಜನವರಿ 8, 1996) ಎಂಬ ಲೇಖನದ ಕುರಿತು ನಾನು ಬರೆಯುತ್ತಿದ್ದೇನೆ. ಇರಿತ್ರೋಪಾಯಟಿನ್ ರಕ್ತ ಸಸಾರಜನಕವಾದ ಆ್ಯಲ್‌ಬ್ಯೂಮನ್‌ನ ಒಂದು ಚಿಕ್ಕ ಪ್ರಮಾಣದಿಂದ ತಟಸ್ಥೀಕರಿಸಲ್ಪಡುವುದಿಲ್ಲವೊ?
ಆರ್. ಪಿ., ಅಮೆರಿಕ
ಹೌದು, ಕೆಲವೊಂದು ವಿದ್ಯಮಾನಗಳಲ್ಲಿ, ಆ್ಯಲ್‌ಬ್ಯೂಮನ್‌ನ ಚಿಕ್ಕ ಪ್ರಮಾಣಗಳು ಸೇರಿರುವ ವೈದ್ಯಕೀಯ ಚಿಕಿತ್ಸೆಯನ್ನು ಅಂಗೀಕರಿಸಬೇಕೊ ಬೇಡವೊ ಎಂಬುದನ್ನು ಪ್ರತಿಯೊಬ್ಬ ಕ್ರೈಸ್ತನು ವ್ಯಕ್ತಿಪರವಾಗಿ ನಿರ್ಣಯಿಸಬೇಕು. ವಿವರವಾದ ಚರ್ಚೆಗಾಗಿ, ದಯವಿಟ್ಟು ಅಕ್ಟೋಬರ್ 1, 1994 ಮತ್ತು ಜೂನ್ 1, 1990, “ದ ವಾಚ್‌ಟವರ್” ಸಂಚಿಕೆಗಳಲ್ಲಿರುವ “ವಾಚಕರಿಂದ ಪ್ರಶ್ನೆಗಳು” ನೋಡಿ.—ಸಂಪಾ.
ಆ್ಯಲಿಟರೆಸಿ “ಆ್ಯಲಿಟರೆಸಿಯ ಕುರಿತು ಎಚ್ಚರಿಕೆಯಿಂದಿರ್ರಿ” (ಫೆಬ್ರವರಿ 8, 1996) ಎಂಬ ಲೇಖನವನ್ನು ಓದಿ, ನಾನು ಎಷ್ಟೊಂದು ಸಂತೋಷಪಟ್ಟೆನೆಂದರೆ, ನೀವು ಒದಗಿಸುವ ಬೋಧಪ್ರದ ಲೇಖನಗಳಿಗಾಗಿ ಬರೆದು, ಉಪಕಾರ ಹೇಳುವಂತೆ ಪ್ರಚೋದಿಸಲ್ಪಟ್ಟೆ. ವಿಶ್ವದ ಸೃಷ್ಟಿಕರ್ತನನ್ನು ಆತನ ಅಮೂಲ್ಯ ವಾಕ್ಯವಾದ ಬೈಬಲಿನ ಮೂಲಕ ತಿಳಿದುಕೊಳ್ಳುವ ಅವಕಾಶವನ್ನು ವಾಚನವು ನಮಗೆ ಕೊಡುತ್ತದೆ. ಹೀಗೆ ಆತ್ಮಿಕ ಬಲಹೀನತೆ ಮತ್ತು ಆ್ಯಲಿಟರೆಸಿಯ ಮಧ್ಯೆ ಸಂಬಂಧವಿದೆ.
ಆರ್. ಆರ್., ಅಮೆರಿಕ
ನಾನು 28 ವರ್ಷಗಳಿಂದ ಸ್ನಾತ ಕ್ರೈಸ್ತನಾಗಿದ್ದು, ಸೊಸೈಟಿಯ ಪ್ರಕಾಶನಗಳ ಕ್ರಮವಾದ ಓದುಗನಾಗಿದ್ದರೂ, ನಾನು ಓದಲು ಆಲಸ್ಯ ಮಾಡುತ್ತಿದ್ದೆ ಮತ್ತು ನನ್ನ ಓದುವ ಬಯಕೆಯನ್ನು ಕಳೆದುಕೊಳ್ಳುತ್ತಿದ್ದೇನೆಂದು ನನಗೆ ಅನಿಸಿತು. ನಿಮ್ಮ ಲೇಖನ ನನ್ನ ಸಮಸ್ಯೆಯನ್ನು ಗುರುತಿಸಿತು! ಈ ವಿಷಯದ ಕುರಿತ ನಿಮ್ಮ ವಿವೇಚನೆಯು ನನ್ನನ್ನು ಪ್ರಯೋಜನಪಡಿಸಿಕೊಳ್ಳುವುದಕ್ಕಾಗಿ ಓದುವ ಉತ್ತೇಜನವನ್ನು ನನಗೆ ಕೊಟ್ಟಿತು.
ಏ. ಓ., ಕೆನಡ
ನಿರುದ್ಯೋಗ “ನಿರುದ್ಯೋಗ—ಪರಿಹಾರವಿದೆ” (ಎಪ್ರಿಲ್ 8, 1996) ಎಂಬ ಲೇಖನಕ್ಕಾಗಿ ನಿಮಗೆ ಎಷ್ಟೋ ಉಪಕಾರ. ನಾನು ಕೆಲಸವನ್ನು ಹುಡುಕುತ್ತಿದ್ದ, ಆದರೆ ಒಂದೂ ಸಿಕ್ಕದೆ ಇದ್ದ ಸಮಯದಲ್ಲಿ ಅದು ಬಂತು. 11ನೆಯ ಪುಟದಲ್ಲಿ ನೀವು ಹೇಳಿರುವಂತೆ, ಮನೆಯಲ್ಲಿ ಕೆಲಸವನ್ನು ನಿರ್ಮಿಸಲು ನಾನು ಪ್ರಯತ್ನಿಸಿದೆ ಮತ್ತು ಇದು ಸಫಲದಾಯಕವಾಗಿದೆ. ನಿಮಗಾಗಿ ಯೆಹೋವನಿಗೆ ಉಪಕಾರ!
ಜೆ. ಎಮ್., ಫ್ರೆಂಚ್ ಗಿಯಾನ
ನಾನು ಇತ್ತೀಚೆಗೆ ಕಂಡುಕೊಂಡ ಪರಿಸ್ಥಿತಿಯನ್ನು ಆ ಲೇಖನಗಳು ವರ್ಣಿಸಿದವು. ಲೇಖನವೊಂದು ಹೇಳಿದಂತೆ, ಕೆಲವು ತಿಂಗಳುಗಳ ತನಕ ನನಗೆ, “ಎಲ್ಲ ರೀತಿಯ ಕೆಲಸ”ಗಳಿಗೆ ಹೊಂದಿಸಿಕೊಳ್ಳಬೇಕಾಯಿತು. ಆದರೆ ನಾನು ನಿರುತ್ತೇಜನಗೊಳ್ಳಲಿಲ್ಲ. ನಾನು ಇತ್ಯಾತ್ಮಕ ಹೊರನೋಟವುಳ್ಳವನಾಗಲು ಪ್ರಯತ್ನಿಸಿದೆ, ಮತ್ತು ಕೊನೆಯದಾಗಿ, ನಾನು ಸ್ಥಿರವಾದ ಕೆಲಸವನ್ನು ಕಂಡುಕೊಂಡೆ. ಆ ಸಮಯದಲ್ಲಿ, ನನ್ನ ಹೆಂಡತಿಯ ಸಹಾಯ ನನಗಿತ್ತು. ಶಾಪಿಂಗ್ ಮಾಡುವಾಗ ಅವಳು ತುಂಬ ಮಿತವ್ಯಯಿಯಾಗಿದ್ದಳು. ಕಷ್ಟಕರ ಪರಿಸ್ಥಿತಿಗಳಲ್ಲಿ ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳಲು ನಮಗೆ ಸಹಾಯಮಾಡುವ ಮಾಹಿತಿಗಾಗಿ ಪುನಃ ಉಪಕಾರ.
ಯು. ಸಿ., ಇಟಲಿ
“ಮನೆಯಲ್ಲಿ ಕೆಲಸವನ್ನು ಸೃಷ್ಟಿಸುವುದು” ಎಂಬ ರೇಖಾಚೌಕವನ್ನು ನಾನು ವಿಶೇಷವಾಗಿ ಇಷ್ಟಪಟ್ಟೆ. ನಾನು ಕ್ರಮದ ಪಯನೀಯರಳು, ಪೂರ್ಣ ಸಮಯದ ಸೌವಾರ್ತಿಕಳು. ಎರಡು ವರ್ಷಕಾಲ ನಾನು ಮನೆಯಲ್ಲಿ ಲೈಸನ್ಸುಳ್ಳ ಒಂದು ದಿನಾರೈಕೆ ಕೇಂದ್ರವನ್ನು ನಡೆಸಿದೆ. ಶಾಲೆಗೆ ಮೊದಲಾಗಿ ಮತ್ತು ಅನಂತರ ನಾನು ಮಕ್ಕಳನ್ನು ನೋಡಿಕೊಂಡೆ ಮತ್ತು ಅದರಲ್ಲಿ ಒಳ್ಳೆಯ ಸಂಪಾದನೆಯಿತ್ತು. ದಿನದ ಮಧ್ಯಭಾಗದಲ್ಲಿ ಇದು ನನಗೆ ಸಾರುವ ಸ್ವಾತಂತ್ರ್ಯವನ್ನು ಕೊಟ್ಟಿತು ಮತ್ತು ನಾನು ದಿವಸಕ್ಕೆ ನಾಲ್ಕೇ ತಾಸುಗಳ ಕೆಲಸಮಾಡಿದೆ. ಅನೇಕ ಮಂದಿ ಹೆತ್ತವರು ಆಭಾರಿಗಳಾಗಿದ್ದರು, ಏಕೆಂದರೆ ಗುಣಮಟ್ಟದ ಆರೈಕೆ ದೊರೆಯುವುದು ಕಷ್ಟ. ಯೆಹೋವನನ್ನು ಸೇವಿಸಲು ಸಹಾಯಮಾಡುವ ಕೆಲಸವನ್ನು ಇತರರೂ ಕಂಡುಹಿಡಿಯಶಕ್ತರಾಗುವರೆಂದು ನನ್ನ ಹಾರೈಕೆ.
ಟಿ. ಕೆ. ಎಲ್., ಅಮೆರಿಕ
ನಿರುದ್ಯೋಗಿಗಳು ಖಾಸಗಿಯಾಗಿ ಆಸನ ಹೊದಿಕೆಯ ಕೆಲಸ, ಕೇಶಾಲಂಕಾರ, ಕಟ್ಟಡ ನಿರ್ವಾಹಕ ಕೆಲಸ, ಇತ್ಯಾದಿಗಳನ್ನು ಮಾಡಬಲ್ಲರೆಂದು ನೀವು ಸೂಚಿಸಿದಿರಿ. ಕೆಲವು ಪರಿಸ್ಥಿತಿಗಳಲ್ಲಿ ಅವರು ತಮ್ಮ ಸೇವೆಗಳನ್ನು ಪುಕ್ಕಟೆಯಾಗಿ ಅಥವಾ ಕಡಮೆ ವೆಚ್ಚಕ್ಕೆ ಜಾಹೀರಾತು ಮಾಡಬಲ್ಲರೆಂದೂ ನೀವು ಹೇಳಿದಿರಿ. ಇದು ಜರ್ಮನಿಯಲ್ಲಿ ಶಾಸನವಿರುದ್ಧವಾಗಿರದೊ?
ಆರ್. ಟಿ., ಜರ್ಮನಿ
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ನಿಯಮಗಳು ಬದಲಾಗುತ್ತವೆ, ಮತ್ತು ಕೆಲವು ದೇಶಗಳಲ್ಲಿ ಈ ಸೂಚನೆಗಳು ಪ್ರಾಯಶಃ ಶಾಸನವಿರುದ್ಧವಾಗಿರಬಹುದು. ಅದಕ್ಕಾಗಿಯೇ ಪುಟ 9ರಲ್ಲಿ, ಈ ಸಾಹಸಕ್ಕೆ ಇಳಿಯುವ ಮೊದಲು ರಾಜ್ಯಾದಾಯ ಮತ್ತು ತೆರಿಗೆ ನಿಯಮಗಳನ್ನು ತಿಳಿದುಕೊಂಡು ಅವನ್ನು ಗೌರವಿಸುವ ಆವಶ್ಯಕತೆಯನ್ನು ನಾವು ತೋರಿಸಿಕೊಟ್ಟಿದ್ದೇವೆ. ಕ್ರೈಸ್ತರು ತಾವು ಜೀವಿಸುವ ದೇಶಗಳ ನಿಯಮಗಳಿಗೆ ವಿಧೇಯರಾಗಲು ಹಂಗಿಗರು. (ರೋಮಾಪುರ 13:1)—ಸಂಪಾ.
ನನ್ನ ಪ್ರೀತಿಯ ಸ್ನೇಹಿತೆ “ನನ್ನ ಪ್ರೀತಿಯ ಸ್ನೇಹಿತೆ” (ಮಾರ್ಚ್ 8, 1996) ಎಂಬ ಆಹ್ಲಾದಕರವಾದ ಲೇಖನಕ್ಕಾಗಿ ನನ್ನ ಯಥಾರ್ಥ ಗಣ್ಯತೆಯನ್ನು ವ್ಯಕ್ತಪಡಿಸಬಯಸುತ್ತೇನೆ. ಪ್ರಾಯಗಳಲ್ಲಿ ಅಷ್ಟೊಂದು ವ್ಯತ್ಯಾಸವಿರುವಾಗಲೂ ಅಷ್ಟೊಂದು ಸೊಗಸಾದ ಮಿತ್ರತ್ವವು ಅಸ್ತಿತ್ವದಲ್ಲಿತ್ತೆಂಬುದನ್ನು ಓದುವುದು ಸಂತೋಷಕರವಾಗಿತ್ತು. ಯುವ ಜನರಿಗೆ ತಮ್ಮ ವಯಸ್ಸಿನವರು ಮಾತ್ರ ತಮ್ಮ ಅತಿ ನಿಕಟ ಮಿತ್ರರಾಗಿರಬೇಕೆಂದಿಲ್ಲವೆಂಬುದನ್ನು ಇದು ಚಿತ್ರಿಸುತ್ತದೆ. ಅನುಭವ, ವಿವೇಕ ಮತ್ತು ಹಾಸ್ಯದ ವಿಷಯದಲ್ಲಿ ಧಾರಾಳವಾಗಿ ನೀಡಸಾಧ್ಯವಿರುವ ಅನೇಕ ಪ್ರಾಯಸ್ಥರೂ ಇದ್ದಾರೆ.
ಎಸ್. ಟಿ., ಇಂಗ್ಲೆಂಡ್
ಯುವ ಜನರೂ ಪ್ರಾಯಸ್ಥರೂ ಜೊತೆಯಾಗಿ ಉತ್ತಮವಾಗಿ ಹೊಂದಿಕೊಂಡುಹೋಗಸಾಧ್ಯವಿದೆಯೆಂದೂ, ಯುವ ಜನರು ವಯಸ್ಕ ಸಂತತಿಯವರ ಸಮೃದ್ಧ ಅನುಭವದಿಂದ ಲಾಭಪಡೆಯಬಲ್ಲರೆಂದೂ ಆ ಲೇಖನವು ರುಜುಪಡಿಸಿತು. ಒಬ್ಬ ವಯಸ್ಸಾದ ಮಿತ್ರರೊಂದಿಗೆ ನಾನು ತಾನೇ ಅನೇಕ ಆಸಕ್ತಿಕರವಾದ ಹಾಗೂ ಸುಖಾನುಭವದ ತಾಸುಗಳನ್ನು ಕಳೆದಿದ್ದೇನೆ. ಸಮಾನಸ್ಥರ ಒತ್ತಡದಂತಹ ಸಮಸ್ಯೆಗಳನ್ನು ನಿಭಾಯಿಸುವರೆ ಸಹಾಯಮಾಡುವುದರಲ್ಲಿ ಅವರು ನನಗೆ ಬಹಳಷ್ಟನ್ನು ಮಾಡಿದ್ದಾರೆ.
ಡಬ್ಲ್ಯೂ. ಎಸ್., ಆಸ್ಟ್ರಿಯ
ಇದುವರೆಗೆ ನಾನು ಪ್ರಾಯಸ್ಥರಿಂದ ಕಲಿಯಲು ಎಂದೂ ಪ್ರಯತ್ನಮಾಡಿಲ್ಲ. ಈ ಲೇಖನದ ಪರಿಣಾಮವಾಗಿ ಅಂಥವರಿಂದ ನಾನೇನನ್ನು ಕಲಿಯಬಲ್ಲೆನೆಂಬುದು ಈಗ ನನಗೆ ತಿಳಿಯುತ್ತದೆ. ವಿವೇಕಸಮೃದ್ಧರಾದ ಕೆಲವು ಪ್ರಾಯಸ್ಥರ ನಿಕಟ ಸ್ನೇಹಿತೆಯಾಗಲು ನಾನು ಅತಿಯಾಗಿ ಬಯಸುತ್ತೇನೆ.
ಆರ್. ಕೆ., ಜಪಾನ್