ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 8/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1996
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಾನು ಕ್ರೀಡೆಗಳ ತಂಡವೊಂದನ್ನು ಸೇರಬೇಕೊ?
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1996
ಇನ್ನಷ್ಟು
ಎಚ್ಚರ!—1996
g96 8/8 ಪು. 30

ನಮ್ಮ ವಾಚಕರಿಂದ

ಸದಾಕಾಲ ಜೀವಿಸುವುದು “ಜೀವನವು ಇಷ್ಟು ಅಲ್ಪಕಾಲದ್ದಾಗಿದೆ ಏಕೆ?—ಅದು ಎಂದಾದರೂ ಭಿನ್ನವಾಗಿದ್ದೀತೊ?” (ನವೆಂಬರ್‌ 8, 1995) ಎಂಬ ವಿಷಯಸರಣಿಗಾಗಿ ನಿಮಗೆ ಉಪಕಾರ. ಈ ಲೇಖನಗಳು, ಒಂದು ಪ್ರಮೋದವನ ಭೂಮಿಯಲ್ಲಿ ಒಬ್ಬ ಪರಿಪೂರ್ಣ ಮಾನವನಾಗಿರುವುದರ ಕುರಿತಾದ ಪ್ರತೀಕ್ಷೆಯನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದವು ಮಾತ್ರವಲ್ಲ, ವಿಜ್ಞಾನ ತರಗತಿಯಲ್ಲಿಯೂ ನನಗೆ ಸಹಾಯ ಮಾಡಿದವು. ಈ ಲೇಖನಗಳು ಪ್ರಕಾಶಿಸಲ್ಪಟ್ಟ ಸಮಯದಲ್ಲಿಯೇ, ನಮಗೆ ಜೀವಕೋಶ, ಅದರ ಭಾಗಗಳು ಮತ್ತು ಕೆಲಸಗಳ ಕುರಿತಾಗಿ ಒಂದು ಕಿರುಪರೀಕ್ಷೆಯು ಇತ್ತು. ನೀವು ಅದನ್ನು ಎಷ್ಟು ಸ್ಪಷ್ಟವಾಗಿ ವರ್ಣಿಸಿದಿರಿ! ಒಳ್ಳೆಯ ಗುಣಾಂಕಕ್ಕಾಗಿ ಹಾಗೂ ಸೂಕ್ತವಾದ ಸಮಯದಲ್ಲಿನ ಆತ್ಮಿಕ ಆಹಾರಕ್ಕಾಗಿ ಉಪಕಾರಗಳು.

ಬಿ. ಎಮ್‌., ಅಮೆರಿಕ

ಸ್ಪರ್ಧೆ “ಬೈಬಲಿನ ದೃಷ್ಟಿಕೋನ: ಕ್ರೀಡೆಗಳಲ್ಲಿನ ಸ್ಪರ್ಧೆಯು ತಪ್ಪಾಗಿದೆಯೋ?” (ಜನವರಿ 8, 1996) ಎಂಬ ಲೇಖನವು, ನನ್ನ ಹತ್ತು ವರ್ಷ ಪ್ರಾಯದ ಮಗನಿಗೆ ಸಾಂತ್ವನವನ್ನು ನೀಡಿತು. ಕೆಲವು ದೊಡ್ಡ ಹುಡುಗರು ಅವನನ್ನು ಚೆಂಡಾಟವಾಡಲು ಆಮಂತ್ರಿಸಿದರು. ಅವನು ಎಷ್ಟು ಕೆಟ್ಟದ್ದಾಗಿ ಗೇಲಿಮಾಡಲ್ಪಟ್ಟನೆಂದರೆ, ಅವನು ಬಹಳ ಖಿನ್ನನಾಗಿ ಪರಿಣಮಿಸಿದನು. ನಾವು ಈ ಲೇಖನವನ್ನು ಓದಿದೆವು ಮತ್ತು ಕ್ರೀಡೆಗಳ ಕುರಿತಾಗಿ ಕ್ರೈಸ್ತರು ಒಂದು ಸಮತೂಕದ ನೋಟವನ್ನು ಕಾಪಾಡಿಕೊಳ್ಳಬೇಕು ಮತ್ತು ಕ್ರೀಡೆಯು ಖಿನ್ನತೆಯನ್ನುಂಟುಮಾಡುವಂತಹದ್ದಲ್ಲ, ಬದಲಾಗಿ ಚೈತನ್ಯದಾಯಕವಾಗಿರಬೇಕು ಎಂಬುದನ್ನು ತಿಳಿಯುವ ಮೂಲಕ ಸಾಂತ್ವನವನ್ನು ಕಂಡುಕೊಂಡೆವು. ಕೆಲವು ಕ್ರೀಡೆಗಳು ಬಹಳ ಹಿಂಸಾತ್ಮಕವಾಗಿ ಪರಿಣಮಿಸಿರುವುದರಿಂದ, ನಮ್ಮ ಎಲ್ಲಾ ಎಳೆಯರು ಈ ಲೇಖನವನ್ನು ಓದುವರೆಂದು ನಾನು ನಿರೀಕ್ಷಿಸುತ್ತೇನೆ.

ಎಸ್‌. ಏಚ್‌., ಅಮೆರಿಕ

ಶಾಲೆಯಲ್ಲಿನ ಕ್ರೀಡೆಗಳ ತಂಡವೊಂದರಲ್ಲಿ ಒಳಗೂಡುವುದರ ಕುರಿತಾದ ಒಂದು ನಿರ್ಣಯವನ್ನು ಮಾಡುವುದರಲ್ಲಿ, ಈ ಲೇಖನವು ನಿಜವಾಗಿಯೂ ನನಗೆ ನೆರವನ್ನು ನೀಡಿತು. ಈ ಲೇಖನದಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಶಾಸ್ತ್ರವಚನಗಳು, ನಿಜವಾಗಿಯೂ ಮುಚ್ಚುಮರೆಯಿಲ್ಲದವುಗಳಾಗಿದ್ದವು. ಈ ನಿರ್ದಿಷ್ಟ ತಂಡದೊಂದಿಗೆ ಒಳಗೂಡುವುದು ಬಹಳ ಸ್ಪರ್ಧಾತ್ಮಕವಾಗಿರುತ್ತಿತ್ತು, ಏಕೆಂದರೆ ಸರ್ವಸಾಮಾನ್ಯವಾಗಿ ಕ್ರೀಡಾದಳದ ಶಿಕ್ಷಕರು ನಿಮಗೆ ಕಷ್ಟಪಟ್ಟು ಆಡಿ, ಗೆಲ್ಲುವಂತೆ ಹೇಳುತ್ತಾರೆ. ಜ್ಞಾನೋದಯವನ್ನುಂಟುಮಾಡುವ ಲೇಖನಕ್ಕಾಗಿ ನಿಮಗೆ ಉಪಕಾರ, ಮತ್ತು ಒಂದು ಒಳ್ಳೆಯ ನಿರ್ಣಯವನ್ನು ಮಾಡಲಿಕ್ಕಾಗಿ ಇದು ಇನ್ನಿತರ ಯುವ ಜನರಿಗೆ ಸಹಾಯ ಮಾಡುವುದೆಂದು ನಾನು ನಿರೀಕ್ಷಿಸುತ್ತೇನೆ.

ಎಲ್‌. ಎಮ್‌., ಅಮೆರಿಕ

ಹಾರಾಡುತ್ತಿರುವ ಬಂಡೆಗಳು ಕೆಲವೊಂದು ದಿವಸಗಳ ಹಿಂದೆಯಷ್ಟೇ, ಒಂದು ಉಲ್ಕಾ ನಕ್ಷತ್ರ ಹಾಗೂ ಒಂದು ಉಲ್ಕಾಶಿಲೆಯ ನಡುವಿನ ವ್ಯತ್ಯಾಸದ ಕುರಿತಾಗಿ ನಾನು ಕುತೂಹಲಗೊಂಡೆ. ಈ ಅಂಶವನ್ನೇ ವಿವರಿಸಿದಂತಹ, “ಹಾರಾಡುವ ಬಂಡೆಗಳು” (ಜನವರಿ 8, 1996) ಎಂಬ ಲೇಖನವನ್ನು ನಾನು ಓದಿದಾಗ, ನನಗಾದ ಆಶ್ಚರ್ಯವನ್ನು ಊಹಿಸಿಕೊಳ್ಳಿರಿ. ಯೆಹೋವನ ಸೃಷ್ಟಿಯೊಂದಿಗೆ ನಮ್ಮನ್ನು ಪರಿಚಿತರನ್ನಾಗಿಮಾಡುವ ಲೇಖನಗಳನ್ನು ಪ್ರಕಾಶಿಸಿದುದಕ್ಕಾಗಿ ನಿಮಗೆ ಉಪಕಾರ.

ಆರ್‌. ಪಿ., ಸ್ವಿಟ್ಸರ್ಲೆಂಡ್‌

ಆ್ಯಂಡ್ರೂವಿನಿಂದ ಕಲಿಯುವುದು “ಆ್ಯಂಡ್ರೂವಿನಿಂದ ನಾವು ಕಲಿತ ವಿಷಯ” (ಜನವರಿ 8, 1996) ಎಂಬ, ಡೌನ್ಸ್‌ ಸಿಂಡ್ರೋಮ್‌ ಇರುವ ಯೌವನಸ್ಥನ ಕುರಿತಾದ ಲೇಖನವನ್ನು ಈಗತಾನೇ ನಾನು ಓದಿದೆ. ನಮಗೂ ಸಹ ಮಾನಸಿಕ ದೌರ್ಬಲ್ಯವಿರುವ ಒಂದು ಮಗುವಿದೆ, ಮತ್ತು ಆ್ಯಂಡ್ರೂವಿನ ಹೆತ್ತವರಿಂದ ಕೊಡಲ್ಪಟ್ಟ ಅನೇಕ ಹೇಳಿಕೆಗಳು, ಸ್ವತಃ ನಮಗೆ ಹೇಗನಿಸುತ್ತದೆಂಬುದನ್ನು ಪ್ರತಿಬಿಂಬಿಸುತ್ತವೆ. ಮಾನಸಿಕ ದೌರ್ಬಲ್ಯವಿರುವ ಒಂದು ಮಗುವನ್ನು ಪಡೆದಿರುವುದರಿಂದ ಬರುವ ವಿಶೇಷ ತೊಂದರೆಗಳು ಹಾಗೂ ಕುಟುಂಬದ ಮೇಲೆ ಹೇರಲ್ಪಡುವ ಭಾವನಾತ್ಮಕ ಒತ್ತಡಗಳನ್ನು ಗಣ್ಯಮಾಡುವುದು, ನಮ್ಮ ಕ್ರೈಸ್ತ ಸಹೋದರರಿಗೆ ಅನೇಕವೇಳೆ ಕಷ್ಟಕರವಾಗಿದೆ. ಆದುದರಿಂದ ಈ ಲೇಖನಕ್ಕಾಗಿ ಉಪಕಾರಗಳು.

ಜೆ. ಬಿ., ಇಂಗ್ಲೆಂಡ್‌

ನೀವು ಪ್ರಕಾಶಿಸಿರುವ ಅತ್ಯಂತ ಮನೋಹರವಾದ ಹಾಗೂ ಸಂವೇದನಾತ್ಮಕ ಲೇಖನಗಳಲ್ಲಿ ಇದು ಒಂದಾಗಿತ್ತೆಂಬುದು ನನ್ನ ಅನಿಸಿಕೆ. ಮೂರೇ ಪುಟಗಳಲ್ಲಿ, ಶಾರೀರಿಕ ಅಡಚಣೆಗಳಿರುವವರನ್ನು ನಾವು ಹೇಗೆ ದೃಷ್ಟಿಸಬೇಕೆಂಬುದರ ಕುರಿತಾದ ಒಂದು ಸಂಪೂರ್ಣ ಪ್ರಕರಣ ಗ್ರಂಥವು ಪ್ರಸ್ತುತಪಡಿಸಲ್ಪಟ್ಟಿತು. ಅದು ಮಾನವ ಸಂಬಂಧಗಳ ಕುರಿತಾಗಿ ಒಂದು ಅಗಾಧವಾದ ಪಾಠವನ್ನು ತಿಳಿಯಪಡಿಸಿತು.

ಎಮ್‌. ಎಲ್‌., ಸ್ಪೆಯ್ನ್‌

ಈ ವರ್ಷದ ಆರಂಭದಲ್ಲಿ, ನನ್ನ ಹೆಂಡತಿಯು ಡೌನ್ಸ್‌ ಸಿಂಡ್ರೋಮ್‌ ಇರುವ ಒಬ್ಬ ಹುಡುಗನಿಗೆ ಜನ್ಮನೀಡಿದಳು. ಆ್ಯಂಡ್ರೂವಿನ ಹೆತ್ತವರಿಗಿರುವಂತೆ, ತಮ್ಮ ಮಗುವಿಗೆ ದೌರ್ಬಲ್ಯವಿದೆಯೆಂದು ತಿಳಿದುಕೊಂಡ ಬಳಿಕ ಅನೇಕ ಹೆತ್ತವರಿಗೆ ಯಾವ ಅನಿಸಿಕೆಯಾಗಿದೆಯೋ ಅದೇ ಅನಿಸಿಕೆಯನ್ನು—ಕಡುಸಂಕಟ ಮತ್ತು ದುಃಖ ಹಾಗೂ ಪ್ರಸ್ತುತದ ಮತ್ತು ಭವಿಷ್ಯತ್ತಿನ ಕುರಿತಾದ ಪ್ರಶ್ನೆಗಳು—ನಾವು ಅನುಭವಿಸಿದೆವು. ನಮ್ಮ ಪಾಲಿಗಾದರೋ, ನಾವು ನಮ್ಮ ಮಗುವಿನ ದೌರ್ಬಲ್ಯವನ್ನು ಒಪ್ಪಿಕೊಳ್ಳಲು ಶಕ್ತರಾಗಿದ್ದೇವೆ. ಬೇಗನೆ ಅವನು ಆರು ತಿಂಗಳ ಪ್ರಾಯದವನಾಗುವನು, ಮತ್ತು ಅವನು ಚೆನ್ನಾಗಿ ಪ್ರಗತಿಮಾಡುತ್ತಿದ್ದಾನೆ. ಅವನು ಜನಿಸಿದ ಮರುದಿನ, ನಮ್ಮ ಕ್ರೈಸ್ತ ಸಹೋದರ ಸಹೋದರಿಯರ ಅನೇಕ ಭೇಟಿಗಳಿಂದ ನನ್ನ ಹೆಂಡತಿಯು ಅಕ್ಷರಶಃವಾಗಿ ಭಾವಪರವಶಳಾಗಿದ್ದಳು. ಒಂದು ಆತ್ಮಿಕ ಕುಟುಂಬವನ್ನು ಹೊಂದಿರುವುದರ ಅರ್ಥವು ಏನಾಗಿದೆ ಎಂಬುದನ್ನು ನಾವು ನಿಜವಾಗಿಯೂ ಅನುಭವಿಸಿದೆವು. ಮತ್ತು ನಮ್ಮ ಸಹೋದರ ಸಹೋದರಿಯರ ಪ್ರೀತಿಯು ಮಾತ್ರವಲ್ಲದೆ, ಯೆಹೋವನಿದ್ದಾನೆ. ಈ ಲೇಖನಕ್ಕಾಗಿ ನಿಮಗೆ ಉಪಕಾರ.

ಜಿ. ಕೆ., ಫ್ರಾನ್ಸ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ