ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 2/8 ಪು. 30
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಲಿಯುತ್ತಾ ಇರಿ—ಹೆಚ್ಚು ಆರೋಗ್ಯವಂತರಾಗಿ ಉಳಿಯಿರಿ!
  • ಮಕ್ಕಳು ಇಷ್ಟಪಡುವ ಮತ್ತು ಇಷ್ಟಪಡದಿರುವ ಸಂಗತಿಗಳು
  • ನಿಮ್ಮ ಆಯ್ಕೆಯನ್ನು ಮಾಡಿರಿ
  • “ಚೀನಾದ ಮುದಿಯಾಗುತ್ತಿರುವ ಜನಸಂಖ್ಯೆ”
  • ಬಾಲ ದುಡಿಮೆ —ಬೆಳೆಯುತ್ತಿರುವ ಒಂದು ಸಮಸ್ಯೆ
  • ಶಾಲೆಯಲ್ಲಿನ ಸಮಸ್ಯೆಗಳೊಂದಿಗೆ ನಿಭಾಯಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡಿರಿ
    ಎಚ್ಚರ!—1994
  • ದಬಾವಣೆಗಾರಿಕೆ ಹಾನಿಯೇನು?
    ಎಚ್ಚರ!—1997
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
  • ಜಗತ್ತನ್ನು ಗಮನಿಸುವುದು
    ಎಚ್ಚರ!—1999
ಇನ್ನಷ್ಟು
ಎಚ್ಚರ!—1997
g97 2/8 ಪು. 30

ಜಗತ್ತನ್ನು ಗಮನಿಸುವುದು

ನಲಿಯುತ್ತಾ ಇರಿ—ಹೆಚ್ಚು ಆರೋಗ್ಯವಂತರಾಗಿ ಉಳಿಯಿರಿ!

“ಹಾಸ್ಯದ ಮೂಲಕ, ಜನರು ಹೆಚ್ಚು ಸಹನಾಶೀಲರಾಗುತ್ತಾರೆ, ಆಶಾಭಂಗಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ, ಮತ್ತು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ,” ಎಂದು ಸಾವ್‌ ಪೌವ್ಲೊ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಸೂಲಿ ಡಾಮರ್ಜ್ಯಾನ್‌ ತಿಳಿಸುತ್ತಾರೆ. ಒ ಎಸ್ಟಾಡೊ ಡಾ ಎಸ್‌. ಪೌವ್ಲೊ ಎಂಬ ಬ್ರೆಸಿಲಿನ ವಾರ್ತಾಪತ್ರಕ್ಕನುಸಾರ, ಹಿತವಾದ ಹಾಸ್ಯವನ್ನು, ಓದುವಿಕೆ ಮತ್ತು ಬರೆಯುವಿಕೆಯಂತೆಯೇ ಕಲಿಯಸಾಧ್ಯವಿದೆ. ಸ್ಪಷ್ಟವಾಗಿ, ಇದು ಒಬ್ಬ ಮುಂಗೋಪಿ ವ್ಯಕ್ತಿಗೆ ತನ್ನ ಆಲೋಚನೆಯಲ್ಲಿ ಬದಲಾವಣೆಯನ್ನು ಅವಶ್ಯಪಡಿಸುತ್ತದೆ. ಮನಶ್ಶಾಸ್ತ್ರದ ಪ್ರೊಫೆಸರರಾದ ರಾಕೆಲ್‌ ರೊಡ್ರಿಗಸ್‌ ಕರ್‌ಬೊ ವಿವರಿಸುವುದು: “ಲೋಕವು ನೀತಿಯುತವಾಗಿರುವಾಗ ಮಾತ್ರವೇ ತಾನು ನಗಸಾಧ್ಯವಿದೆಯೆಂದು ಒಬ್ಬನು ನೆನಸುವಲ್ಲಿ, ಅವನು ಸದಾಕಾಲ ರೇಗುಸ್ವಭಾವದವನಾಗಿರುವನು. ಎಷ್ಟೆಂದರೂ, ಅನ್ಯಾಯಗಳು ಎಲ್ಲಾ ಕಡೆಗಳಲ್ಲೂ ಇವೆ.” ಒಂದು ಕಾರ್ಯಮಗ್ನ ಕಾಲತಖ್ತೆಯೊಂದಿಗೂ, ಒಳ್ಳೇ ಸ್ವಭಾವದ ಜನರು ತಮ್ಮ ಸಾಮಾಜಿಕ ಸಂಪರ್ಕಗಳಲ್ಲಿ ಆನಂದಿಸುತ್ತಾರೆಂದು, ಆ ವರದಿಯು ಗಮನಿಸುತ್ತದೆ. ಅವರು “ಒಂದು ಮಾತುಕತೆ, ಒಂದು ಮಿಠಾಯಿ, ಅಥವಾ ಐದು ನಿಮಿಷಗಳ ಒಳ್ಳೇ ಸಂಗೀತ”ದಂತಹ ಚಿಕ್ಕ ಚಿಕ್ಕ ವಿಷಯಗಳನ್ನು ಅಮೂಲ್ಯವೆಂದೆಣಿಸುತ್ತಾರೆ. ಆದಾಗಲೂ ಡಾಮರ್ಜ್ಯಾನ್‌ ಎಚ್ಚರಿಸುವುದು: “ಒಬ್ಬನು ಹಿತವಾದ ಹಾಸ್ಯವನ್ನು ತಿಳಿಗೇಡಿತನ ಮತ್ತು ಅಸಭ್ಯತೆಯೊಂದಿಗೆ ಗಲಿಬಿಲಿಗೊಳಿಸಬಾರದು.”

ಮಕ್ಕಳು ಇಷ್ಟಪಡುವ ಮತ್ತು ಇಷ್ಟಪಡದಿರುವ ಸಂಗತಿಗಳು

ಮಕ್ಕಳು ಯಾವ ವಿಷಯವನ್ನು ಮಾಡುವುದರಲ್ಲಿ ತೀರ ಕಡಿಮೆ ಆನಂದಿಸುತ್ತಾರೆ? ಇಟಲಿ, ಮಿಲನಿನ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಗಸ್ಟಾವೊ ಪೈಎಟ್ರೊಪೊಲಿ ಶಾರ್ಮೆಟ್‌ರಿಂದ ನಡೆಸಲ್ಪಟ್ಟ, 6ರಿಂದ 11 ವರ್ಷ ಪ್ರಾಯದ ಮಕ್ಕಳ ಒಂದು ಅಧ್ಯಯನದಲ್ಲಿ, ಅಧಿಕಾಂಶ ಮಕ್ಕಳು ಹೇಳಿದ್ದು: “ಟಿವಿ ನೋಡುತ್ತಾ ಮನೆಯಲ್ಲಿ ಇರುವುದು,” ಅಥವಾ “ಶಾಲಾ ಮನೆಕೆಲಸವನ್ನು ಮಾಡಲು ಅಮ್ಮನೊಂದಿಗೆ ಮನೆಯಲ್ಲಿ ಉಳಿಯುವುದು.” ಅವರು ಮಾಡುವಂತಹ ಅತಿ ಅಹಿತಕರವಾದ ಸಂಗತಿ ಯಾವುದೆಂದರೆ, “ಕಾರ್ಯನಿಶ್ಚಯಗಳು ಇರುವುದು,” ಅಂದರೆ, ನೃತ್ಯ, ಇಂಗ್ಲಿಷ್‌ ಭಾಷೆ, ಪಿಯಾನೊ ಮುಂತಾದ ಪಾಠಗಳಿಗಾಗಿ ಓಡಾಡುವುದು ಎಂದು ಲಾ ರಿಪಬ್ಲಿಕಾ ಎಂಬ ವಾರ್ತಾಪತ್ರವು ಹೇಳುತ್ತದೆ. ಅಲ್ಲದೆ “ಒಂಟಿಯಾಗಿರುವುದು” ಸಹ ಸಾಮಾನ್ಯವಾಗಿ ಇಷ್ಟವಾಗದ ಸಂಗತಿಯಾಗಿದೆ. ಇನ್ನೊಂದು ಕಡೆಯಲ್ಲಿ, ಹೆತ್ತವರು “ತಮ್ಮ ಮಕ್ಕಳು ಹೊರಗೆ ಆಡುವಂತೆ ಅನುಮತಿಸು”ವುದನ್ನು ಹುಡುಗರಲ್ಲಿ 49 ಪ್ರತಿಶತ ಮಂದಿ ಬಯಸುತ್ತಾರೆ. ಮತ್ತು ಹೆತ್ತವರು “ತಮ್ಮ ಮಕ್ಕಳೊಂದಿಗೆ ಆಡುವಾಗ ಮಜಾ ಪಡೆಯಬೇಕು” ಎಂಬುದನ್ನು ಹುಡುಗಿಯರು ಆಶಿಸುತ್ತಾರೆ. ಅವರು ಕಾರ್ಯತಃ ಹೇಳುವುದು: ‘ಅಮ್ಮ ನನ್ನೊಂದಿಗೆ ಆಟವಾಡುತ್ತಿರುವಾಗ, ಅವರು ನಿಜವಾಗಿ ಆಟವಾಡಬೇಕು. ಅವರಿಗೆ ಮಜಾ ಆಗದಿರುವಾಗ ನನಗೆ ತಿಳಿಯುತ್ತದೆ, ಆಗ ನನಗೂ ಮಜಾ ಆಗುವುದಿಲ್ಲ.’

ನಿಮ್ಮ ಆಯ್ಕೆಯನ್ನು ಮಾಡಿರಿ

“ನಿಮ್ಮ ವರ್ಷವು ಕೆಟ್ಟದ್ದಾಗಿ ಆರಂಭಿಸಿದೆಯೊ?” ಎಂದು ನ್ಯೂ ಸೈಎಂಟಿಸ್ಟ್‌ ಪತ್ರಿಕೆಯಲ್ಲಿನ ಒಂದು ಲೇಖನವು ಕೇಳಿತು. “ಚಿಂತೆಯಿಲ್ಲ. ಲೋಕದ ಸುತ್ತಲೂ ನೀವು ಆರಿಸಿಕೊಳ್ಳಬಹುದಾದ ಕಡಿಮೆಪಕ್ಷ 14 ಇತರ ಹೊಸ ವರ್ಷಗಳಿವೆ.” ವಾಸ್ತವವಾಗಿ, ಗ್ರೆಗೊರಿಯನ್‌ ಕ್ಯಾಲೆಂಡರನ್ನು ಸ್ವೀಕರಿಸಿರುವ ದೇಶಗಳು ಮಾತ್ರ, ಜನವರಿ 1ನ್ನು ವರ್ಷದ ಪ್ರಥಮ ದಿನವೆಂದು ಎಣಿಸುತ್ತವೆ. ಕ್ಯಾಲೆಂಡರ್‌ ವರ್ಷವು ಜನವರಿ 1ರಂದು ಆರಂಭವಾಗುವುದೆಂಬುದನ್ನು ಸಾ.ಶ.ಪೂ. 46ರಲ್ಲಿ ನಿರ್ಣಯಿಸಿದವನು ಜ್ಯೂಲಿಯಸ್‌ ಸೀಸರ್‌ ಆಗಿದ್ದನು. ಮತ್ತು ಪೋಪ್‌ ಗ್ರೆಗೊರಿ ಆ ಕ್ಯಾಲೆಂಡರನ್ನು 1582ರಲ್ಲಿ ಪರಿಷ್ಕರಿಸಿದಾಗ, ಇದು ಹೀಗೆ ಇಡಲ್ಪಟ್ಟಿತು. ವಿಭಿನ್ನ ಸಂಸ್ಕೃತಿಗಳು ತಮ್ಮ ಸ್ವಂತ ಕ್ಯಾಲೆಂಡರ್‌ ವ್ಯವಸ್ಥೆಗಳನ್ನು ವಿಕಸಿಸಿಕೊಂಡಂತೆ, ಕಡಿಮೆಪಕ್ಷ 26 ವಿಭಿನ್ನ ಹೊಸ ವರ್ಷದ ದಿನಗಳು ಹಠಾತ್ತಾಗಿ ಗೋಚರಿಸಿದವು. ಇಂದು ಉಳಿದಿರುವವುಗಳಲ್ಲಿ, ಚೈನೀಸ್‌ ವ್ಯವಸ್ಥೆಯು ತೀರ ಹಳೆಯದ್ದಾಗಿದೆ. ಅವರಿಗೆ ಹೊಸ ವರ್ಷವು, ಈ ವರ್ಷದ ಫೆಬ್ರವರಿ 7ರಂದು ಆರಂಭವಾಗುತ್ತದೆ. ಯೆಹೂದಿ ಹೊಸ ವರ್ಷವು, ಅಕ್ಟೋಬರ್‌ 2ಕ್ಕೆ ಬರುವುದು. ಪೂರ್ಣವಾಗಿ ಚಾಂದ್ರಮಾನದ್ದಾಗಿರುವ ಮುಸ್ಲಿಮ್‌ ಕ್ಯಾಲೆಂಡರ್‌ ಕೂಡ ತನ್ನ ಸ್ವಂತ ತಾರೀಖನ್ನು ಹೊಂದಿರುವುದು—ಮೇ 8.

“ಚೀನಾದ ಮುದಿಯಾಗುತ್ತಿರುವ ಜನಸಂಖ್ಯೆ”

“ಚೀನಾದ ಮುದಿಯಾಗುತ್ತಿರುವ ಜನಸಂಖ್ಯೆಯು ಏಕಪ್ರಕಾರವಾಗಿ ಹೆಚ್ಚಾಗುತ್ತಿದೆ,” ಎಂದು ಚೈನಾ ಟುಡೇ ಎಂಬ ಪತ್ರಿಕೆಯು ವರದಿಸುತ್ತದೆ. “1994ರ ಅಂತ್ಯದಷ್ಟಕ್ಕೆ ಚೀನಾದಲ್ಲಿ, 60 ವರ್ಷಗಳಿಗಿಂತಲೂ ಹೆಚ್ಚು ಪ್ರಾಯದ 11,69,70,000 ಹಿರಿಯ ನಾಗರಿಕರು ಇದ್ದರು. ಇದು 1990ಕ್ಕಿಂತ 14.16 ಪ್ರತಿಶತ ವೃದ್ಧಿ.” 60ಕ್ಕಿಂತ ಹೆಚ್ಚು ವರ್ಷ ವಯಸ್ಸಿನ ಜನರು ಈಗ ದೇಶದ ಜನಸಂಖ್ಯೆಯಲ್ಲಿ ಸುಮಾರು 10 ಪ್ರತಿಶತವಾಗಿರುತ್ತಾರೆ, ಮತ್ತು ವೃದ್ಧ ಜನಸಂಖ್ಯೆಯು, ಒಟ್ಟು ಜನಸಂಖ್ಯೆಗಿಂತ ಬಹುಮಟ್ಟಿಗೆ ಮೂರು ಪಟ್ಟು ವೇಗದ ಪ್ರಮಾಣದಲ್ಲಿ ಬೆಳೆಯುತ್ತಿದೆ. ಅವರನ್ನು ಹೇಗೆ ಆರೈಕೆ ಮಾಡಲಾಗುತ್ತದೆ? ದುಡಿಮೆಯ ವೇತನಗಳು, ಪೆನ್‌ಷನ್‌ಗಳು, ಸಾಮಾಜಿಕ ವಿಮೆ, ಮತ್ತು ಪರಿಹಾರಕಾರ್ಯವು ಅನೇಕರ ಅಗತ್ಯಗಳನ್ನು ಪೂರೈಸುವಾಗ, ಚೀನಾದ ಹಿರಿಯ ನಾಗರಿಕರಲ್ಲಿ 57 ಪ್ರತಿಶತಕ್ಕಿಂತಲೂ ಹೆಚ್ಚಿನವರು, ತಮ್ಮ ಮಕ್ಕಳು ಅಥವಾ ಇತರ ಸಂಬಂಧಿಕರಿಂದ ಪೋಷಿಸಲ್ಪಡುತ್ತಾರೆ. “ಚೀನಾದಲ್ಲಿ ಕುಟುಂಬ ಸಂಬಂಧಗಳು ಸಂಬಂಧಿತವಾಗಿ ಸ್ಥಿರವಾಗಿರುವುದರಿಂದ, ಮತ್ತು ಚೀನಾದಲ್ಲಿ ವೃದ್ಧ ವ್ಯಕ್ತಿಗಳನ್ನು ಗೌರವಿಸುವ ಹಾಗೂ ಆರೈಕೆ ಮಾಡುವ ಒಂದು ಉತ್ತಮ ಸಂಪ್ರದಾಯವಿರುವುದರಿಂದ, ಹೆಚ್ಚಿನ ಹಿರಿಯ ನಾಗರಿಕರು ತಮ್ಮ ಸಂಬಂಧಿಕರೊಂದಿಗೆ ಜೀವಿಸುತ್ತಾರೆ, ಮತ್ತು ಅವರಿಂದ ಉತ್ತಮವಾಗಿ ಪರಾಮರಿಸಲ್ಪಡುತ್ತಾರೆ” ಎಂದು ಚೈನಾ ಟುಡೇ ಹೇಳುತ್ತದೆ. “ಚೀನಾದ ವೃದ್ಧ ಜನರಲ್ಲಿ ಕೇವಲ 7 ಪ್ರತಿಶತ ಮಂದಿ ತಮ್ಮಷ್ಟಕ್ಕೇ ಜೀವಿಸುತ್ತಾರೆ.”

ಬಾಲ ದುಡಿಮೆ —ಬೆಳೆಯುತ್ತಿರುವ ಒಂದು ಸಮಸ್ಯೆ

ಅಂತಾರಾಷ್ಟ್ರೀಯ ದುಡಿಮೆಯ ಸಂಸ್ಥೆಯಿಂದ ಬಂದ ಇತ್ತೀಚಿನ ವರದಿಗನುಸಾರ, ಲೋಕದ 10 ಮತ್ತು 14ರ ನಡುವಿನ ಪ್ರಾಯದ ಮಕ್ಕಳಲ್ಲಿ 13 ಪ್ರತಿಶತ ಮಕ್ಕಳು—ಸುಮಾರು 7.3 ಕೋಟಿ ಮಕ್ಕಳು—ಕೆಲಸ ಮಾಡುವಂತೆ ಒತ್ತಾಯಿಸಲ್ಪಡುತ್ತಾರೆ. ಹತ್ತು ವರ್ಷ ಪ್ರಾಯದ ಕೆಳಗಿನ ಮಕ್ಕಳ ಮತ್ತು ಪೂರ್ಣ ಸಮಯದ ಗೃಹ ಕೆಲಸದಲ್ಲಿರುವ ಹುಡುಗಿಯರ ವಿಷಯದಲ್ಲಿನ ಅಂಕಿಸಂಖ್ಯೆಗಳು ಲಭ್ಯವಿರುತ್ತಿದ್ದಲ್ಲಿ, ಲೋಕದ ಬಾಲ ದುಡಿಮೆಯ ದಳವು ಕೋಟ್ಯಾನುಕೋಟಿ ಸಂಖ್ಯೆಯಾಗುವುದು ಸಂಭವನೀಯವೆಂದು ಆ ವರದಿಯು ಕೂಡಿಸಿತು. ಜಿನಿವಾದಲ್ಲಿ ನೆಲೆಸಿರುವ ಆ ಸಂಸ್ಥೆಯು, 80 ವರ್ಷಗಳಿಂದ ಬಾಲ ದುಡಿಮೆಯ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿರುವುದಾದರೂ, ಸಮಸ್ಯೆಯು, ವಿಶೇಷವಾಗಿ ಆಫ್ರಿಕ ಮತ್ತು ಲ್ಯಾಟಿನ್‌ ಅಮೆರಿಕದಲ್ಲಿ ವೃದ್ಧಿಯಾಗುತ್ತಾ, ವಿಸ್ತರಿಸುತ್ತಾ ಮುಂದುವರಿದಿದೆ. ಗುಲಾಮ ದುಡಿಮೆ ಮತ್ತು ಕೆಲಸದ ಸ್ಥಳದಲ್ಲಿ ಅಪಾಯಕರವಾದ ಪರಿಸ್ಥಿತಿಗಳು ಈ ಮಕ್ಕಳ ಪಾಡಾಗಿರುವಾಗ, ವೇಶ್ಯಾಟಿಕೆಯು ಒಂದು ವಿಶಿಷ್ಟ ಸಮಸ್ಯೆಯಾಗಿ ಉಲ್ಲೇಖಿಸಲ್ಪಟ್ಟಿತು. ಕೆಲವು ದೇಶಗಳಲ್ಲಿ “ವಯಸ್ಕರು, ಲೈಂಗಿಕ ಉದ್ದೇಶಗಳಿಗಾಗಿ ಮಕ್ಕಳ ಉಪಯೋಗವನ್ನು, [ಏಚ್‌ಐವಿ]ಯ ಸೋಂಕನ್ನು ತಡೆಗಟ್ಟುವ ಅತ್ಯುತ್ತಮ ಮಾಧ್ಯಮವೆಂದು ಪರಿಗಣಿಸುತ್ತಾರೆ” ಎಂದು ಆ ವರದಿಯು ಹೇಳುತ್ತದೆ. ಪ್ಯಾರಿಸಿನ ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ ಹೇಳಿದ್ದೇನೆಂದರೆ, ಆ ಸಂಸ್ಥೆಯು “ಸಮಸ್ಯೆಯನ್ನು ಅಲಕ್ಷಿಸಿದಂತಹ . . . ಸರಕಾರಿ ಅಧಿಕಾರಿಗಳ ಮೇಲೆ ದೋಷಾರೋಪ ಹೊರಿಸಿತು.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ