ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 4/8 ಪು. 19-21
  • ದಬಾವಣೆಗಾರಿಕೆ ಹಾನಿಯೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದಬಾವಣೆಗಾರಿಕೆ ಹಾನಿಯೇನು?
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದಬಾವಣೆಗಾರ ಎಂದರೇನು?
  • ದಬಾವಣೆಗಾರನ ಅವಶ್ಯ ಗುಣಗಳು
  • ಜೀವನಪರ್ಯಂತದ ಪರಿಣಾಮಗಳು
  • ಪರಿವರ್ತನೆ ಹೊಂದುವ ವಿಧ
  • ಶಾಲೆಯಲ್ಲಿ ನನ್ನನ್ನ ರೇಗಿಸಿದರೆ ಏನ್‌ ಮಾಡೋದು?
    ಯುವಜನರ 10 ಪ್ರಶ್ನೆಗಳಿಗೆ ಉತ್ತರ
  • ನನ್ನ ಮಗುವಿಗೆ ಯಾರಾದರೂ ತುಂಬ ತೊಂದರೆ ಕೊಡುತ್ತಿದ್ದರೆ ನಾನೇನು ಮಾಡಲಿ?
    ಸುಖೀ ಸಂಸಾರಕ್ಕೆ ಸಲಹೆಗಳು
  • ಶಾಲೆಯ ಹಿಂಸಕ ಹುಡುಗರ ಕುರಿತು ನೀವೇನು ಮಾಡಸಾಧ್ಯವಿದೆ?
    ಎಚ್ಚರ!—1990
  • ಯಾರಾದ್ರೂ ನಿಮಗೆ ತೊಂದ್ರೆ ಕೊಡ್ತಿದ್ರೆ ಯೆಹೋವನ ಹತ್ರ ಸಹಾಯ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ಎಚ್ಚರ!—1997
g97 4/8 ಪು. 19-21

ಯುವ ಜನರು ಪ್ರಶ್ನಿಸುವುದು . . .

ದಬಾವಣೆಗಾರಿಕೆ ಹಾನಿಯೇನು?

‘ಹೇ! ನಾನು ಮಾಡುತ್ತಿದ್ದುದು ಕೊಂಚ ತಮಾಷೆ, ಅಷ್ಟೆ. ಅದರಲ್ಲೇನಂತೆ ಮಹಾ? ಅಲ್ಲದೆ, ರಾನ್‌ ಅದಕ್ಕೆ ಅರ್ಹ ಖಂಡಿತ.’

ನೀವು ನಿಮ್ಮ ಸಮಾನಸ್ಥರಲ್ಲಿ ಹೆಚ್ಚಿನವರಿಗಿಂತ ದೊಡ್ಡವರೂ ಬಲಿಷ್ಠರೂ ಆಗಿರಬಹುದು. ಅಥವಾ, ನೀವು ಚತುರೋಕ್ತಿಯವರು, ಕೆಣಕು ಮಾತಿನವರು ಮತ್ತು ಆಕ್ರಮಣ ಪ್ರವೃತ್ತಿಯವರು ಆಗಿರಬಹುದು. ಹೇಗಿದ್ದರೂ, ಬೆದರಿಕೆ ಹಾಕುವ, ಗೋಳುಗುಟ್ಟಿಸುವ ಅಥವಾ ಇತರರ ಮರ್ಯಾದೆ ಕೆಡಿಸಿ ನಗಿಸುವ ಪ್ರವೃತ್ತಿ ನಿಮಗೆ ಸುಲಭವಾಗಿ ಬರುವಂತೆ ಕಾಣುತ್ತದೆ.

ಇತರರನ್ನು ದಬಾವಣೆಗೊಳಪಡಿಸುವುದು ನಿಮ್ಮ ಸ್ನೇಹಿತರಿಂದ ನಗೆ ಬರಿಸಬಹುದಾದರೂ ಅದು ಕ್ಷುಲ್ಲಕ ವಿಷಯವಲ್ಲ. ವಾಸ್ತವದಲ್ಲಿ, ಕೆಲವು ಸಂಶೋಧಕರು, ದಬಾವಣೆಗಾರಿಕೆಯು ಅದರ ಆಹುತಿಗೆ ತಾವೆಂದೂ ಎಣಿಸದಿದ್ದಷ್ಟು ಹೆಚ್ಚು ಹಾನಿಕಾರಕವೆಂದು ಕಂಡುಹಿಡಿಯುತ್ತಿದ್ದಾರೆ. ಅಮೆರಿಕದ ಶಾಲಾವಯಸ್ಸಿನ ಮಕ್ಕಳ ಸಂಬಂಧದಲ್ಲಿ ಒಂದು ಸಮೀಕ್ಷೆಯು, “ದಬಾವಣೆಗೊಳಗಾದವರಲ್ಲಿ 90 ಪ್ರತಿಶತ, ತಾವು ಪಕ್ಕ ಪರಿಣಾಮ—ಗುಣಾಂಕಗಳಲ್ಲಿ ಇಳಿತ, ಕಳವಳದಲ್ಲಿ ವೃದ್ಧಿ, ಸ್ನೇಹಿತರ ಅಥವಾ ಸಾಮಾಜಿಕ ಜೀವನ ನಷ್ಟ—ಗಳಿಂದ ಪೀಡಿತರೆಂದು ಹೇಳಿದರು” ಎಂಬುದನ್ನು ಕಂಡುಕೊಂಡಿತು. ಜಪಾನಿನಲ್ಲಿ 13 ವಯಸ್ಸಿನವನೊಬ್ಬನು, “ಮೂರು ವರ್ಷಗಳ ವರೆಗೆ ನಡೆದ ತನ್ನ ದಬಾವಣೆಯ ಕುರಿತ ಒಂದು ದೀರ್ಘ ಪತ್ರವನ್ನು ಬರೆದಿಟ್ಟು ನೇಣುಹಾಕಿಕೊಂಡನು.”a

ಒಬ್ಬ ವ್ಯಕ್ತಿಯನ್ನು ದಬಾವಣೆಗಾರನಾಗಿ ಯಾವುದು ಮಾಡುತ್ತದೆ? ಮತ್ತು ನೀವೇ ಹಾಗೆ ವರ್ತಿಸುತ್ತಿರುವುದಾದರೆ, ನೀವು ಹೇಗೆ ಪರಿವರ್ತನೆ ಹೊಂದಬಲ್ಲಿರಿ?

ದಬಾವಣೆಗಾರ ಎಂದರೇನು?

ನೋಹನ ಕಾಲದ ಜಲಪ್ರಳಯಕ್ಕೆ ಮೊದಲು ಜೀವಿಸಿದ ದಬಾವಣೆಗಾರರ ಕುರಿತು ಬೈಬಲು ತಿಳಿಸುತ್ತದೆ. ಅವರನ್ನು ನೆಫೀಲಿಯರು—“ಇತರರನ್ನು ಬೀಳಿಸುವವರು” ಎಂಬ ಅರ್ಥಕೊಡುವ ಪದ—ಎಂದು ಕರೆಯಲಾಗುತ್ತಿತ್ತು. ಅವರ ಭೀಕರ ಆಳಿಕೆಯಲ್ಲಿ, “ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು.”—ಆದಿಕಾಂಡ 6:4, 11.

ಆದರೂ ದಬಾವಣೆಗಾರನಾಗಿರಲು ಜನರನ್ನು ತಳ್ಳಬೇಕು ಅಥವಾ ಹೊಡೆಯಬೇಕೆಂದಿಲ್ಲ. ಇತರ ಜನರನ್ನು—ವಿಶೇಷವಾಗಿ ಬಲಹೀನರನ್ನು ಅಥವಾ ಸುಲಭಭೇದ್ಯರನ್ನು—ಕ್ರೂರವಾದ ಅಥವಾ ಅನ್ಯಾಯವಾದ ರೀತಿಯಲ್ಲಿ ಉಪಚರಿಸುವವನು ದಬಾವಣೆಗಾರನಾಗಿದ್ದಾನೆ. (ಹೋಲಿಸಿ ಪ್ರಸಂಗಿ 4:1.) ದಬಾವಣೆಗಾರರು ಇತರರನ್ನು ಹೆದರಿಸಿ, ಬೆದರಿಕೆ ಹಾಕಿ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚಿನವರು ತಮ್ಮ ಮುಷ್ಟಿಗಳನ್ನಲ್ಲ, ಬಾಯಿಗಳನ್ನು ಉಪಯೋಗಿಸುತ್ತಾರೆ. ವಾಸ್ತವವೇನಂದರೆ, ಭಾವಾತ್ಮಕ ದಬಾವಣೆಯು ಈ ಅಪಪ್ರಯೋಗದ ಪದೇ ಪದೇ ಕಾಣಸಿಗುವ ರೂಪವಾಗಿದೆ. ಇದರಲ್ಲಿ ಹೀಗೆ, ಅವಮಾನ, ಕೆಣಕುನುಡಿ, ಅಪಹಾಸ್ಯ ಮತ್ತು ಬಯ್ಯುವುದು ಸೇರಿರಸಾಧ್ಯವಿದೆ.

ಆದರೆ ಕೆಲವು ಬಾರಿ, ದಬಾವಣೆಯು ಕುಶಾಗ್ರ ರೀತಿಯಲ್ಲಿ ಬರಬಹುದು. ದೃಷ್ಟಾಂತಕ್ಕೆ, ಲೀಸಳಿಗಾದುದನ್ನು ತೆಗೆದುಕೊಳ್ಳಿ.b ಅವಳು ಸ್ನೇಹಿತೆಯರ ಗುಂಪಿನೊಂದಿಗೆ ಬೆಳೆದಳು. ಆದರೆ ಆಕೆ 15 ವರ್ಷ ವಯಸ್ಸಿನವಳಾಗಿದ್ದಾಗ, ವಿಷಯಗಳು ಬದಲಾವಣೆಯಾಗತೊಡಗಿದವು. ಲೀಸ ಸುಂದರಿಯಾಗಿ ಬೆಳೆದ ಕಾರಣ ಜನರಿಗೆ ತುಂಬ ಆಕರ್ಷಕಳಾದಳು. ಅವಳು ವಿವರಿಸುವುದು: “ನನ್ನ ಸ್ನೇಹಿತೆಯರು ನನ್ನನ್ನು ತಮ್ಮ ಚಟುವಟಿಕೆಗಳಿಂದ ಬಿಟ್ಟುಬಿಡತೊಡಗಿದರು ಮತ್ತು ನನ್ನ ಹಿಂದಿನಿಂದ ಅಥವಾ ನನಗೆ ನೇರವಾಗಿಯೂ ಕೆಟ್ಟದ್ದಾಗಿ ಮಾತಾಡತೊಡಗಿದರು.” ಅವರು ಅವಳ ಹೆಸರನ್ನು ಕೆಡಿಸಪ್ರಯತ್ನಿಸಿ, ಅವಳ ವಿಷಯ ಸುಳ್ಳುಗಳನ್ನೂ ಹಬ್ಬಿಸಿದರು. ಹೌದು, ಅಸೂಯೆಯಿಂದ ಉದ್ರೇಕಿಸಲ್ಪಟ್ಟು, ಅವರು ಅವಳ ಮೇಲೆ ನಿರ್ದಯ ಮತ್ತು ಕ್ರೂರ ವಿಧದಲ್ಲಿ ದಬಾವಣೆ ಮಾಡಿದರು.

ದಬಾವಣೆಗಾರನ ಅವಶ್ಯ ಗುಣಗಳು

ಆಕ್ರಮಣ ಪ್ರವೃತ್ತಿಯು ಅನೇಕ ವೇಳೆ ಒಬ್ಬನ ಗೃಹ ಪರಿಸರಕ್ಕೆ ಸಂಬಂಧಿಸಿರುತ್ತದೆ. ಸ್ಕಾಟ್‌ ಎಂಬ ಯುವಕನು ಹೇಳುವುದು: “ನನ್ನ ತಂದೆ ಆಕ್ರಮಣ ಪ್ರವೃತ್ತಿಯವರಾಗಿದ್ದರು, ಆದಕಾರಣ ನಾನೂ ಆಗಿದ್ದೆ.” ಆ್ಯರನ್‌ ಎಂಬವನಿಗೂ ಕಷ್ಟಕರವಾದ ಗೃಹಜೀವನವಿತ್ತು. ಅವನು ಜ್ಞಾಪಿಸಿಕೊಳ್ಳುವುದು: “ನನ್ನ ಕುಟುಂಬ ಪರಿಸ್ಥಿತಿ ಭಿನ್ನವಾದದ್ದಾಗಿತ್ತೆಂಬುದು ಜನರಿಗೆ ತಿಳಿದಿತ್ತೆಂದು ನನಗೆ ಗೊತ್ತಿತ್ತು ಮತ್ತು ಜನರು ನನಗಾಗಿ ಮರುಗುವುದು ನನಗೆ ಇಷ್ಟವಿರಲಿಲ್ಲ.” ಆದುದರಿಂದ ಆ್ಯರನ್‌ ಆಟಗಳಲ್ಲಿ ಭಾಗವಹಿಸಿದಾಗ, ಅವನು ಗೆಲ್ಲಲೇ ಬೇಕಿತ್ತು. ಆದರೆ ಗೆಲ್ಲುವುದು ಸಾಲಲಿಲ್ಲ. ಅವನು ತನ್ನ ಎದುರಾಳಿಗಳನ್ನು, ಅವರ ಸೋಲಿನಲ್ಲಿ ಅರೆದು ತೀಡಿ, ಅವರ ಮರ್ಯಾದೆಗೆಡಿಸಲೇ ಬೇಕಿತ್ತು.

ಇದಕ್ಕೆ ವ್ಯತ್ಯಾಸದಲ್ಲಿ, ಬ್ರೆಂಟ್‌ ದೇವಭಯವುಳ್ಳ ಹೆತ್ತವರಿಂದ ಬೆಳೆಸಲ್ಪಟ್ಟಿದ್ದನು. ಆದರೆ ಅವನು ಒಪ್ಪಿಕೊಳ್ಳುವುದು: “ನಾನು ಜನರನ್ನು ನಗಾಡಿಸುತ್ತಿದ್ದೆ, ಆದರೆ ಕೆಲವೊಮ್ಮೆ ಯಾವಾಗ ನಿಲ್ಲಿಸಬೇಕೆಂದು ನನಗೆ ತಿಳಿಯದಿದ್ದ ಕಾರಣ ನಾನು ಕೆಲವರನ್ನು ನೋಯಿಸುತ್ತಿದ್ದೆ.” ತಮಾಷೆ ಮಾಡಲು ಮತ್ತು ತನ್ನ ಕಡೆಗೆ ಗಮನ ಸೆಳೆಯಲು ಬ್ರೆಂಟ್‌ಗಿದ್ದ ಆಶೆಯು, ಇತರರ ಅನಿಸಿಕೆಗಳನ್ನು ಅವನು ಅಸಡ್ಡೆಮಾಡುವಂತೆ ನಡೆಸಿತು.—ಜ್ಞಾನೋಕ್ತಿ 12:18.

ಇತರ ಯುವ ಜನರು ಟೆಲಿವಿಷನ್‌ನಿಂದ ಪ್ರಭಾವಿತರಾಗುತ್ತಾರೆಂದು ಕಾಣುತ್ತದೆ. ಪಾತಕ ಸಂಬಂಧವಾದ ಡ್ರಾಮಗಳು ‘ಗಡುಸು ಆಸಾಮಿ’ಗಳನ್ನು ಶ್ಲಾಘಿಸಿ, ದಯಾಮಯರಾಗಿರುವುದು ಅಪೌರುಷವೆಂದು ತೋರುವಂತೆ ಮಾಡುತ್ತವೆ. ಜನಪ್ರಿಯ ಕಾಮೆಡಿಗಳು ಕೆಣಕುನುಡಿಗಳಿಂದ ತುಂಬಿವೆ. ವಾರ್ತಾವರದಿಗಳು ಅನೇಕ ವೇಳೆ, ಆಟದ ಸಮಯ ನಡೆಯುವ ಜಗಳ ಮತ್ತು ಒರಟು ಮಾತುಗಳನ್ನು ಎತ್ತಿಹೇಳುತ್ತವೆ. ನಾವು ಇತರರನ್ನು ಉಪಚರಿಸುವ ವಿಧವನ್ನು ನಮ್ಮ ಮಿತ್ರರು ಸಹ ಪ್ರಭಾವಿಸಬಲ್ಲರು. ನಮ್ಮ ಸಮಾನಸ್ಥರು ದಬಾವಣೆಗಾರರಾಗಿರುವಾಗ ನಮಗೂ ಕಿರುಕುಳ ಬಾರದಂತೆ ಅವರೊಂದಿಗೆ ನಾವು ಸೇರಿಕೊಳ್ಳುವುದು ಸುಲಭ.

ನಿಮ್ಮ ಸನ್ನಿವೇಶ ಏನೇ ಆಗಿರಲಿ, ನೀವು ದಬಾವಣೆಯ ತಂತ್ರಗಳನ್ನು ಉಪಯೋಗಿಸುವಲ್ಲಿ, ಹಾನಿಗೊಳಗಾಗುವವರು ನಿಮ್ಮ ಬಲಿಗಳು ಮಾತ್ರ ಆಗಿರುವುದಿಲ್ಲ.

ಜೀವನಪರ್ಯಂತದ ಪರಿಣಾಮಗಳು

ಸೈಖಾಲಜಿ ಟುಡೇ ಪತ್ರಿಕೆ ವರದಿಮಾಡುವುದು: “ದಬಾವಣೆಯು ಶೈಶವದಲ್ಲಿ ಆರಂಭಗೊಳ್ಳಬಹುದಾದರೂ ಅದು ಪ್ರಾಪ್ತ ವಯಸ್ಸಿಗೂ ಮುಂದುವರಿಯುತ್ತದೆ.” ಡ್ಯಾಲಸ್‌ ಮಾರ್ನಿಂಗ್‌ ನ್ಯೂಸ್‌ನಲ್ಲಿ ವರದಿಯಾದ ಒಂದು ಸಂಶೋಧನಾ ಅಧ್ಯಯನವು, “ಎರಡನೆಯ ದರ್ಜೆಯಲ್ಲಿ ದಬಾವಣೆಗಾರರೆಂದು ಗುರುತಿಸಲಾಗಿದ್ದ ಹುಡುಗರಲ್ಲಿ 65 ಪ್ರತಿಶತ, 24ನೆಯ ವಯಸ್ಸಿನೊಳಗೆ ಘೋರ ಪಾತಕಿಗಳಾಗಿ ಅಪರಾಧ ನಿರ್ಣಯಿಸಲ್ಪಟ್ಟವರಾಗಿದ್ದರು,” ಎಂದು ಕಂಡುಕೊಂಡಿತು.

ಎಲ್ಲ ದಬಾವಣೆಗಾರರೂ ಪಾತಕಿಗಳಾಗುವುದಿಲ್ಲ ನಿಜ. ಆದರೆ ಇತರರ ಅನಿಸಿಕೆಗಳ ಮೇಲೆ ದಬಾವಣೆ ಹಾಕುವುದು, ತರುವಾಯದ ಜೀವನದಲ್ಲಿ ನಿಮಗೆ ನಿಜ ಸಮಸ್ಯೆಗಳನ್ನು ಉಂಟುಮಾಡಬಲ್ಲವು. ವಿವಾಹದೊಳಕ್ಕೆ ಅದು ಸಾಗಿಸಲ್ಪಡುವಾಗ, ಅದು ನಿಮ್ಮ ಜೊತೆ ಮತ್ತು ಮಕ್ಕಳಿಗೆ ಕಠಿನ ಸಂಕಟವನ್ನು ಉಂಟುಮಾಡಬಲ್ಲದು. ಇತರರೊಂದಿಗೆ ಒಳ್ಳೆಯದಾಗಿ ಹೊಂದಿಕೊಂಡು ಹೋಗುವವರನ್ನು ಧಣಿಗಳು ಇಷ್ಟಪಡುವುದರಿಂದ, ಅದು ನಿಮಗೆ ಉದ್ಯೋಗಾವಕಾಶಗಳನ್ನು ಅಲ್ಲಗಳೆದೀತು. ಕ್ರೈಸ್ತ ಸಭೆಯಲ್ಲಿ ದೊರೆಯುವ ಭಾವೀ ಸುಯೋಗಗಳೂ ನಿಮಗೆ ಕೊಡಲ್ಪಡಲಿಕ್ಕಿಲ್ಲ. ಬ್ರೆಂಟ್‌ ಹೇಳುವುದು: “ಒಂದು ದಿನ ಹಿರಿಯನಾಗಿ ಸೇವೆಮಾಡಲರ್ಹನಾಗುವ ಇಷ್ಟ ನನಗಿದೆ. ಆದರೆ ನಾನೇನಾದರೂ ಕೆಣಕಿ ಮಾತಾಡುವೆನೆಂದು ಜನರು ನೆನಸಿದರೆ ಅವರು ತಮ್ಮ ಸಮಸ್ಯೆಗಳೊಂದಿಗೆ ನನ್ನ ಬಳಿಗೆ ಬಾರರೆಂದು ಗ್ರಹಿಸುವಂತೆ ನನ್ನ ತಂದೆಯವರು ನನಗೆ ಸಹಾಯ ಮಾಡಿದರು.”—ತೀತ 1:7.

ಪರಿವರ್ತನೆ ಹೊಂದುವ ವಿಧ

ನಮ್ಮ ಸ್ವಂತ ತಪ್ಪುಗಳನ್ನು ನಾವು ಸದಾ ಸ್ಪಷ್ಟವಾಗಿ ಕಾಣುವುದಿಲ್ಲ. “ತನ್ನ ತಪ್ಪುಗಳನ್ನು ದ್ವೇಷಿಸಲಿಕ್ಕಾಗಿ ಅವನ್ನು ಕಂಡುಹಿಡಿಯುವ ವಿಷಯದಲ್ಲಿ ತನ್ನ ಸ್ವಂತ ದೃಷ್ಟಿಯಲ್ಲಿ ತನಗೆ ತಾನು ತೀರ ನಯವಾಗಿ” ಒಬ್ಬನು ವರ್ತಿಸಬಲ್ಲನೆಂದೂ ಶಾಸ್ತ್ರಗಳು ನಮ್ಮನ್ನು ಎಚ್ಚರಿಸುತ್ತದೆ. (ಕೀರ್ತನೆ 36:2, NW) ಆದಕಾರಣ, ಅಭಿಪ್ರಾಯಗಳಿಗಾಗಿ ನೀವು ಹೆತ್ತವರನ್ನು, ಭರವಸಯೋಗ್ಯನಾದ ಸ್ನೇಹಿತನನ್ನು ಅಥವಾ ಪಕ್ವತೆಯ ಕ್ರೈಸ್ತನೊಬ್ಬನನ್ನು ಕೇಳಿನೋಡಬಹುದು. ಸತ್ಯವು ನೋವನ್ನುಂಟುಮಾಡಬಹುದಾದರೂ, ಮಾಡಬೇಕಾದ ಬದಲಾವಣೆಗಳನ್ನು ನೀವು ನೋಡುವಂತೆ ಅದು ಒಂದುವೇಳೆ ಸಹಾಯ ಮಾಡಬಹುದು. (ಜ್ಞಾನೋಕ್ತಿ 20:30) ಆ್ಯರನ್‌ ಹೇಳುವುದು: “ನನಗೆ ಸಹಾಯಮಾಡಿದ ಅತಿ ದೊಡ್ಡ ವಿಷಯವು ಕಿವಿಗೊಟ್ಟದ್ದೇ ಎಂದು ನನ್ನ ಎಣಿಕೆ. ಪ್ರಾಮಾಣಿಕರಾಗಿದ್ದವರು ನಾನು ತಪ್ಪಿಬೀಳುತ್ತಿರುವುದೆಲ್ಲಿ ಎಂದು ನನಗೆ ಹೇಳಿದರು. ನಾನು ಕೇಳಬಯಸುತ್ತಿದ್ದುದು ಸದಾ ಅದಾಗಿರದಿದ್ದರೂ ನನಗೆ ನಿಜವಾಗಿಯೂ ಬೇಕಾಗಿದ್ದುದು ಅದೇ.”

ಅಂದರೆ ಕಾರ್ಯತಃ ನಿಮ್ಮ ಪೂರ್ತಿ ವ್ಯಕ್ತಿತ್ವದಲ್ಲಿ ಒಂದು ನಾಟಕೀಯ ಬದಲಾವಣೆಯನ್ನು ಮಾಡಬೇಕೆಂದು ಇದರ ಅರ್ಥವೊ? ಅಲ್ಲ, ಅದು ಪ್ರಾಯಶಃ, ನಿಮ್ಮ ಆಲೋಚನೆ ಮತ್ತು ನಿಮ್ಮ ಕೆಲವು ವರ್ತನೆಗಳನ್ನು ಕ್ರಮಪಡಿಸಿಕೊಳ್ಳುವ ವಿಷಯವಾಗಿದ್ದೀತು. (2 ಕೊರಿಂಥ 13:11) ಉದಾಹರಣೆಗೆ, ಇದುವರೆಗೆ ನಿಮ್ಮ ಗಾತ್ರ, ಬಲ ಅಥವಾ ಚತುರೋಕ್ತಿಯ ಕಾರಣ ನೀವು ನಿಮ್ಮನ್ನು ಶ್ರೇಷ್ಠರೆಂದೆಣಿಸಿರಬಹುದು. ಆದರೆ, “ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲು” ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಫಿಲಿಪ್ಪಿ 2:3) ಇತರರಲ್ಲಿ, ಅವರ ಗಾತ್ರ ಅಥವಾ ಬಲ ಎಷ್ಟೇ ಆಗಿರಲಿ, ನಿಮ್ಮಲ್ಲಿಲ್ಲದಂತಹ ಪ್ರಶಂಸಾರ್ಹ ಗುಣಗಳಿವೆಯೆಂಬುದನ್ನು ಗ್ರಹಿಸಿಕೊಳ್ಳಿರಿ.

ಆಕ್ರಮಣ ಪ್ರವೃತ್ತಿ ಅಥವಾ ಅಹಂಭಾವದ ವರ್ತನೆಯನ್ನೂ ನಿಮ್ಮಿಂದ ತೆಗೆದುಬಿಡುವ ಅಗತ್ಯ ನಿಮಗಿರಬಹುದು. “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ” ನೋಡುವ ವಿಷಯದಲ್ಲಿ ಶ್ರಮಪಡಿರಿ. (ಫಿಲಿಪ್ಪಿ 2:4) ನಿಮಗೆ ಬಿಚ್ಚಿ ಮಾತಾಡುವ ಅಗತ್ಯವಿರುವಲ್ಲಿ, ನಿಂದಿಸದೆ, ಕೆಣಕದೆ, ಅಥವಾ ಮುಖಭಂಗ ಮಾಡದೆ ಮಾತಾಡಿರಿ.—ಎಫೆಸ 4:31.

ದಬಾವಣೆ ಮಾಡುವಂತೆ ನೀವು ಪ್ರೇರಿಸಲ್ಪಡುವಲ್ಲಿ, ದಬಾವಣೆ ಮಾಡಿದ ನೆಫೀಲಿಯರನ್ನು ದೇವರು ನಾಶಮಾಡಿದನೆಂಬುದನ್ನು ನೆನಪಿನಲ್ಲಿಡಿ. (ಆದಿಕಾಂಡ 6:4-7; 7:11, 12, 22) ಶತಮಾನಗಳಾನಂತರ, ಯೆಹೆಜ್ಕೇಲ ಪ್ರವಾದಿಯ ದಿನಗಳಲ್ಲಿ, ದುರ್ಬಲರನ್ನು “ನೂಕುತ್ತಾ” “ಹಾಯುತ್ತಾ” ಇದ್ದವರ ಕಡೆಗೆ ದೇವರು ತನ್ನ ಅನಿಷ್ಟವನ್ನು ವ್ಯಕ್ತಪಡಿಸಿದನು. (ಯೆಹೆಜ್ಕೇಲ 34:21) ಯೆಹೋವನು ದಬಾವಣೆಯನ್ನು ದ್ವೇಷಿಸುತ್ತಾನೆಂಬ ತಿಳಿವಳಿಕೆಯು, ಒಬ್ಬನು ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ಬಲವಾದ ಪ್ರೇರಕಶಕ್ತಿಯಾಗಿರಬಲ್ಲದು!

ಬೈಬಲ್‌ ಮೂಲತತ್ವಗಳನ್ನು ಪ್ರಾರ್ಥನಾಪೂರ್ವಕವಾಗಿ ಮನನಮಾಡುವುದೂ ಸಹಾಯಕರ. ಸುವರ್ಣ ನಿಯಮವು ಹೇಳುವುದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಇತರರಿಗೆ ಬೆದರಿಕೆ ಹಾಕಲು ಪ್ರೇರಿಸಲ್ಪಡುವಾಗ, ‘ನನ್ನನ್ನು ನೂಕಿ, ಬೆದರಿಕೆ ಹಾಕಿ, ಮರ್ಯಾದೆಗೆಡಿಸುವಲ್ಲಿ ನಾನು ಇಷ್ಟಪಟ್ಟೇನೊ? ಇಷ್ಟಪಡದಿದ್ದರೆ, ನಾನೇಕೆ ಆ ವಿಧದಲ್ಲಿ ಇತರರೊಂದಿಗೆ ವರ್ತಿಸುತ್ತೇನೆ?’ ಎಂದು ಕೇಳಿಕೊಳ್ಳಿರಿ. “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ . . . ಇರ್ರಿ,” ಎಂದು ಬೈಬಲು ನಮಗೆ ಆಜ್ಞೆ ನೀಡುತ್ತದೆ. (ಎಫೆಸ 4:32) ಈ ಸಂಬಂಧದಲ್ಲಿ ಯೇಸು ಒಂದು ಪರಿಪೂರ್ಣ ಮಾದರಿಯನ್ನಿಟ್ಟನು. ಅವನು ಬೇರೆಲ್ಲ ಮಾನವರಿಗಿಂತ ಶ್ರೇಷ್ಠನಾಗಿದ್ದರೂ, ಸಕಲರನ್ನೂ ದಯೆ, ಅನುಭೂತಿ ಮತ್ತು ಗೌರವದಿಂದ ಕಂಡನು. (ಮತ್ತಾಯ 11:28-30) ನಿಮಗಿಂತ ದುರ್ಬಲನೊಬ್ಬನ ಮುಕಾಬಿಲೆ ನಿಮಗಾಗುವುದಾದರೆ, ಅಥವಾ ಅವನು ನಿಮ್ಮನ್ನು ರೇಗಿಸಿದರೂ ನೀವು ಮೇಲಿನಂತೆ ಮಾಡಪ್ರಯತ್ನಿಸಿರಿ.

ಮನೆಯಲ್ಲಿ ನೀವು ದುರುಪಚರಿಸಲ್ಪಡುವ ಕಾರಣ ನಿಮ್ಮ ಆಕ್ರಮಕ ವರ್ತನೆಯು ಎದ್ದು ಬರುವುದಾದರೆ ಆಗ ಏನು? ಕೆಲ ಸಂದರ್ಭಗಳಲ್ಲಿ, ನಿಮ್ಮ ಕೋಪಕ್ಕೆ ನ್ಯಾಯವಾದ ಕಾರಣವಿರಬಹುದು. (ಹೋಲಿಸಿ ಪ್ರಸಂಗಿ 7:7.) ಹಾಗಿದ್ದರೂ, ನೀತಿವಂತ ಮನುಷ್ಯನಾದ ಯೋಬನಿಗೆ ಹೀಗೆ ಎಚ್ಚರಿಕೆ ಕೊಡಲಾಯಿತೆಂದು ಬೈಬಲ್‌ ನಮಗನ್ನುತ್ತದೆ: “ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕೀತು, ನೋಡಿಕೋ! . . . ಅಧರ್ಮದ ಕಡೆಗೆ ಕಾಲಿಕ್ಕಬೇಡ.” (ಯೋಬ 36:18, 21) ನೀವು ದುರುಪಚರಿಸಲ್ಪಡುತ್ತಿರುವುದಾದರೂ, ಇತರರನ್ನು ದುರುಪಚರಿಸುವ ಹಕ್ಕು ನಿಮಗಿರುವುದಿಲ್ಲ. ನಿಮ್ಮ ಹೆತ್ತವರೊಂದಿಗೆ ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವುದು ಹೆಚ್ಚು ಉತ್ತಮವಾದ ದಾರಿಯಾಗಿದ್ದೀತು. ನೀವು ಕಠಿನ ದುರುಪಚಾರಕ್ಕೆ ಬಲಿಯಾಗಿರುವಲ್ಲಿ, ಇನ್ನೂ ಹೆಚ್ಚಿನ ಹಾನಿಯಾಗುವುದರಿಂದ ಕಾಪಾಡಲು ನಿಮಗೆ ಹೊರಗಣ ಸಹಾಯವು ಬೇಕಾದೀತು.

ಬದಲಾವಣೆ ಹೊಂದುವುದು ಸುಲಭವಾಗಿರಲಿಕ್ಕಿಲ್ಲವಾದರೂ, ಅದು ಸಾಧ್ಯ. ಬ್ರೆಂಟ್‌ ಹೇಳುವುದು: “ನಾನು ಇದರ ಕುರಿತು ಹೆಚ್ಚುಕಡಮೆ ಪ್ರತಿ ದಿನ ಪ್ರಾರ್ಥಿಸುತ್ತೇನೆ, ಮತ್ತು ನಾನು ನಡತೆಯನ್ನು ಉತ್ತಮವಾಗಿ ನವೀಕರಿಸುವಂತೆ ಯೆಹೋವನು ನನಗೆ ಸಹಾಯ ಮಾಡಿದ್ದಾನೆ.” ನೀವು ಜನರನ್ನು ಉಪಚರಿಸುವ ವಿಧದಲ್ಲಿ ಹಾಗೆಯೇ ನವೀಕರಣವನ್ನು ಮಾಡುವಾಗ, ಜನರು ನಿಮ್ಮನ್ನು ಹೆಚ್ಚು ಇಷ್ಟಪಡುವರೆಂಬುದು ನಿಸ್ಸಂದೇಹ. ನೆನಪಿನಲ್ಲಿಡಿರಿ, ಜನರು ದಬಾವಣೆಗಾರರಿಗೆ ಹೆದರಾರು, ಆದರೆ ಯಾರೊಬ್ಬನೂ ನಿಜವಾಗಿ ಅವರನ್ನು ಇಷ್ಟಪಡುವುದಿಲ್ಲ.

[ಅಧ್ಯಯನ ಪ್ರಶ್ನೆಗಳು]

a ದಬಾವಣೆಯ ಆಹುತಿಗಳು ಕಿರುಕುಳವನ್ನು ಹೇಗೆ ತಪ್ಪಿಸಿಕೊಳ್ಳಸಾಧ್ಯವಿದೆ ಎಂಬ ವಿಷಯದ ಚರ್ಚೆಗೆ, ನಮ್ಮ ಆಗಸ್ಟ್‌ 8, 1989ರ ಅವೇಕ್‌! ಸಂಚಿಕೆಯಲ್ಲಿ, “ಯುವ ಜನರು ಪ್ರಶ್ನಿಸುವುದು . . . ಶಾಲಾ ದಬಾವಣೆಗಾರರ ಬಗ್ಗೆ ನಾನೇನು ಮಾಡಬಲ್ಲೆ?” ಎಂಬ ಲೇಖನವನ್ನು ನೋಡಿ.

b ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 32 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ದಬಾವಣೆಯು ಶೈಶವದಲ್ಲಿ ಆರಂಭಗೊಳ್ಳಬಹುದಾದರೂ ಅದು ಪ್ರಾಪ್ತ ವಯಸ್ಸಿಗೂ ಮುಂದುವರಿಯುತ್ತದೆ”

[ಪುಟ 31 ರಲ್ಲಿರುವ ಚಿತ್ರ]

ದೂಷಣೆಯು ದಬಾವಣೆಯ ಒಂದು ವಿಧವಾಗಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ