ನಮ್ಮ ವಾಚಕರಿಂದ
ಸಮತೆ “ದೇವರ ಸಮತೆಯ ಕೊಡುಗೆ” (ಎಪ್ರಿಲ್ 8, 1996) ಎಂಬ ಲೇಖನವನ್ನು ಓದಿದ ಬಳಿಕ, ನಿಮಗೆ ಉಪಕಾರ ಸಲ್ಲಿಸುವಂತೆ ನಾನು ಪ್ರಚೋದಿತಳಾದೆ. ಪ್ರಸ್ತುತದಲ್ಲಿ ನಾನು ಶ್ರವಣಶಾಸ್ತ್ರದ ಅಧ್ಯಯನ ಮಾಡುತ್ತಿದ್ದೇನೆ. ಮತ್ತು ನನ್ನ ಪಠ್ಯಪುಸ್ತಕಗಳಲ್ಲಿ ಒಂದರಲ್ಲಿಯೂ, ಎಚ್ಚರ! ಪತ್ರಿಕೆಯ ಲೇಖನದಷ್ಟು ಸಂಪೂರ್ಣವಾದ ಹಾಗೂ ಅರ್ಥಮಾಡಿಕೊಳ್ಳಲು ಸುಲಭವಾದ ಮಾಹಿತಿ ಇಲ್ಲ. ಕಿವಿಯ ಚಿತ್ರವು ಸಹ ಅತ್ಯುತ್ತಮವಾಗಿತ್ತು.
ಜೆ. ಪಿ. ಎ., ಬ್ರೆಸಿಲ್
ಲೈಂಗಿಕ ಕಿರುಕುಳ “ಲೈಂಗಿಕ ಕಿರುಕುಳವು ಇನ್ನಿಲ್ಲದಿರುವಾಗ!” (ಜೂನ್ 8, 1996) ಎಂಬ ಸರಣಿಗಾಗಿ ಉಪಕಾರ. ಈ ಪತ್ರಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ, ಕಿರುಕುಳವನ್ನು ಹೇಗೆ ತಪ್ಪಿಸಿಕೊಳ್ಳಸಾಧ್ಯವಿದೆ ಮತ್ತು ಕಿರುಕುಳ ನೀಡಲ್ಪಡುವಾಗ ಏನು ಮಾಡಬೇಕು ಎಂಬುದರ ಕುರಿತಾದ ಸಲಹೆಗಳಿಗಾಗಿ, ಅನೇಕ ಸ್ತ್ರೀಯರು ಕೃತಜ್ಞರಾಗಿದ್ದರು ಎಂಬುದನ್ನು ನಾನು ಕಂಡುಕೊಂಡೆ. ಕೆಲವು ವಾರಗಳ ಬಳಿಕ, ವೈಯಕ್ತಿಕವಾಗಿ ನಾನೇ ಕೆಲಸದ ಸ್ಥಳದಲ್ಲಿ ಪೀಡನೆಯನ್ನು ಅನುಭವಿಸಿದೆ ಮತ್ತು ಪೊಲೀಸರಿಗೆ ವರದಿಮಾಡಿದೆ. ನಾನು ಆ ಸನ್ನಿವೇಶವನ್ನು ನಿರ್ವಹಿಸಿದ ರೀತಿಗಾಗಿ ನನ್ನನ್ನು ಪ್ರಶಂಸಿಸಲಾಯಿತು.
ಹೆಸರನ್ನು ತಡೆಹಿಡಿಯಲಾಗಿದೆ, ಜರ್ಮನಿ
ಈ ಲೇಖನಗಳಿಗಾಗಿ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಈಗ ನಾನು ಸೆಕೆಂಡರಿ ಶಾಲೆಯಲ್ಲಿ 11ನೆಯ ದರ್ಜೆಯಲ್ಲಿದ್ದೇನೆ, ಮತ್ತು ನಾನು ಕಿರುಕುಳವನ್ನು ಅನುಭವಿಸಿದ್ದೇನಾದರೂ, ಅದರ ಕುರಿತಾಗಿ ನಾನು ಎಂದೂ ಯಾರೊಬ್ಬರಿಗೂ ಹೇಳಿಲ್ಲ. ನನ್ನ ಹೆತ್ತವರಲ್ಲಿ ಹಾಗೂ ನನ್ನ ಶಿಕ್ಷಕರಲ್ಲಿ ಹೇಳಿಕೊಳ್ಳುವಂತೆ ಈ ಲೇಖನಗಳು ನನ್ನನ್ನು ಉತ್ತೇಜಿಸಿದವು. ಈಗ ನಾನು ಕಿರುಕುಳಕೊಡುವವರ ವಿರುದ್ಧ ಧೈರ್ಯವಾಗಿ ನಿಲುವನ್ನು ತೆಗೆದುಕೊಳ್ಳಲು
ಶಕ್ತಳಾಗಿದ್ದೇನೆ.
ಕೆ. ವೈ., ಜಪಾನ್
ನಾನು 21 ವರ್ಷ ಪ್ರಾಯದ ಸೆಕ್ರಿಟರಿ. ಇತ್ತೀಚಿಗೆ ನನ್ನ ಧಣಿಯು ನನಗೆ ಲೈಂಗಿಕವಾಗಿ ಕಿರುಕುಳ ನೀಡಿದನು. ನಾನು ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವನನ್ನು ಹೇಗೆ ಎದುರುಗೊಳ್ಳುವುದು ಎಂಬುದನ್ನು ಊಹಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ನಾನು ಎಚ್ಚರ! ಪತ್ರಿಕೆಯ ಈ ಸಂಚಿಕೆಯನ್ನು ಪಡೆದುಕೊಂಡೆ. ನಾನು ನನ್ನ ಯಜಮಾನನಿಗೆ ಒಂದು ಪ್ರತಿಯನ್ನು ಕೊಟ್ಟೆ, ಅವನೂ ಅದನ್ನು ಓದಿದನು. ಅವನು ತಪ್ಪೊಪ್ಪಿಕೊಂಡು, ನನಗೆ ಏನು ಮಾಡಿದ್ದನೋ ಅದನ್ನು ತಾನು ಪುನಃ ಎಂದಿಗೂ ಮಾಡುವುದಿಲ್ಲ ಎಂದು ಮಾತುಕೊಟ್ಟನು.
ಡಿ. ಎನ್. ಐ., ನೈಜೀರಿಯ
ಈ ಪ್ರಮುಖ ವಿಚಾರವನ್ನು ನೀವು ಬೆಳಕಿಗೆ ತಂದುದನ್ನು ನಾನು ಗಣ್ಯಮಾಡುತ್ತೇನಾದರೂ, ನಿಮ್ಮ ಛಾಯಾಚಿತ್ರಗಳಿಗನುಸಾರ, ಕೇವಲ ಪುರುಷರು ಮಾತ್ರವೇ ಕಿರುಕುಳ ನೀಡುತ್ತಿದ್ದಾರೆ. ನೀವು ಪೂರ್ವಾಗ್ರಹಪೀಡಿತ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತಿದ್ದೀರೆಂಬುದು ಸ್ಪಷ್ಟ.
ಏಚ್. ಟಿ., ಅಮೆರಿಕ
ಲೈಂಗಿಕ ಕಿರುಕುಳದ ಬಲಿಪಶುಗಳೋಪಾದಿ ಸ್ತ್ರೀಯರು ಪುರುಷರಿಗಿಂತಲೂ ಹೆಚ್ಚಿನ ಸಂಖ್ಯೆಯವರಾಗಿರುತ್ತಾರೆಂದು ಬಹುತೇಕ ಸಂಶೋಧಕರು ಹೇಳುತ್ತಾರೆ. ಹಾಗಿದ್ದರೂ, ಆ ಲೇಖನಗಳು, ನಿರ್ದಿಷ್ಟ ಉದಾಹರಣೆಗಳನ್ನು ಉಲ್ಲೇಖಿಸುವ ಮೂಲಕ, ಪುರುಷರು ಸಹ ಕಿರುಕುಳಕ್ಕೊಳಗಾಗಸಾಧ್ಯವಿದೆ ಎಂಬುದನ್ನು ಅಂಗೀಕರಿಸಿದವು.—ಸಂಪಾ.
ಈ ವಿಷಯದ ಕುರಿತಾದ ಬಹುತೇಕ ಲೇಖನಗಳು, ಸ್ತ್ರೀಯರು ತಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ಏನು ಮಾಡಬೇಕೆಂಬುದನ್ನು ಮಾತ್ರವೇ ಒತ್ತಿಹೇಳುತ್ತವೆ. ಆದರೆ ಅವು ಸ್ತ್ರೀಯರನ್ನು ಗೌರವಿಸಬೇಕು ಎಂದು ಪುರುಷರಿಗೆ ಕಲಿಸುವುದನ್ನು ಉಪೇಕ್ಷಿಸುತ್ತವೆ. ಎಷ್ಟೆಂದರೂ, ಕಿರುಕುಳ ನೀಡುವವರಿಲ್ಲದಿದ್ದಲ್ಲಿ, ಕಿರುಕುಳವೇ ಇರುವುದಿಲ್ಲ. ನಿಮ್ಮ ಲೇಖನವು, “ಪುರುಷರಿಗೆ ಯೋಗ್ಯವಾದ ನಡತೆ”ಯನ್ನು ಕುರಿತು ಚರ್ಚಿಸಿತು. ಇದಕ್ಕಾಗಿ, ಇದು ಪ್ರಶಂಸಾರ್ಹವಾದದ್ದಾಗಿದೆ.
ಓ. ಸಿ., ಟೈವಾನ್
ಸ್ನೇಹ “ಯುವ ಜನರು ಪ್ರಶ್ನಿಸುವುದು . . . ನಾನು ಮಿತ್ರರೊಂದಿಗೆ ಏಕೆ ಸ್ನೇಹದಿಂದಿರಲಾರೆ?” (ಜೂನ್ 8, 1996) ಎಂಬ ಲೇಖನಕ್ಕಾಗಿ ನಾನು ನಿಮಗೆ ನನ್ನ ಪ್ರಾಮಾಣಿಕ ಉಪಕಾರವನ್ನು ಕಳುಹಿಸುತ್ತೇನೆ. ಈ ಲೇಖನವು ನನಗೆ ಎಷ್ಟರ ಮಟ್ಟಿಗೆ ಸಹಾಯಮಾಡಿದೆ ಎಂಬುದನ್ನು ನೀವು ಊಹಿಸಲಾರಿರಿ. ವಿಘ್ನಗಳ ಹೊರತಾಗಿಯೂ, ದೀರ್ಘಕಾಲ ಬಾಳುವ ಸ್ನೇಹವನ್ನು ಹೊಂದಿರಲು ಸಾಧ್ಯವಿದೆ ಎಂಬುದನ್ನು ಅದು ನನಗೆ ತೋರಿಸಿಕೊಟ್ಟಿತು. ಕೆಲವೊಮ್ಮೆ, ತಪ್ಪಭಿಪ್ರಾಯಗಳನ್ನು ಬಗೆಹರಿಸುವುದನ್ನು ಮುಂದೂಡುವುದರಿಂದಾಗಿಯೂ ನಾವು ಸ್ನೇಹಿತರನ್ನು ಕಳೆದುಕೊಳ್ಳುತ್ತೇವೆ. ಈ ವಿಷಯದಲ್ಲಿ ನನಗಿರುವ ಬಲಹೀನತೆಗಳನ್ನು ಜಯಿಸಲು ಶ್ರಮಿಸುವಂತೆ ಈ ಲೇಖನವು ನನಗೆ ಸಹಾಯಮಾಡಿತು.
ಎ. ಎಮ್. ಪಿ., ಬ್ರೆಸಿಲ್
ಆ ಲೇಖನಗಳು ಸೂಕ್ತ ಸಮಯದಲ್ಲಿ ಆಗಮಿಸಿದವು. ಮೂರು ತಿಂಗಳುಗಳ ಹಿಂದೆ, ಮತ್ತೊಬ್ಬ ಹುಡುಗಿಯೊಂದಿಗೆ ಬಹಳ ಸಮಯದಿಂದ ಕಾಪಾಡಿಕೊಂಡಿದ್ದ ನನ್ನ ಸ್ನೇಹವು, ಕ್ಷೀಣಿಸಲು ಆರಂಭವಾಯಿತು; ಇನ್ನೆಂದಿಗೂ ನಾವಿಬ್ಬರು ಪರಸ್ಪರ ಮಾತಾಡದಂತಹ ಹಂತಕ್ಕೆ ಬಂದುಮುಟ್ಟಿದೆವು. ಈ ಲೇಖನವು ಬಂದಾಗ, ನನ್ನ ಗೆಳತಿಯೂ ನಾನೂ—ಇಬ್ಬರೂ ಅದನ್ನು ಓದಿ, ನಾವು ಮೂರ್ಖತನದಿಂದ ವರ್ತಿಸುತ್ತಿದ್ದೆವು ಎಂಬುದನ್ನು ಗ್ರಹಿಸಿದೆವು. ನಾವು ವಿಷಯಗಳನ್ನು ಸಮಗ್ರವಾಗಿ ಚರ್ಚಿಸಿ, ತಪ್ಪಭಿಪ್ರಾಯಗಳ ಸರಮಾಲೆಯನ್ನೇ ವಿಶದಗೊಳಿಸಿದೆವು. ಈಗ ನಮ್ಮ ಸ್ನೇಹಕ್ಕೆ ನವನೀತ ಚೈತನ್ಯವಿದೆ.
ಎನ್. ಟಿ., ಇಟಲಿ