ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 10/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1997
  • ಅನುರೂಪ ಮಾಹಿತಿ
  • ‘ಅದು ಕೇವಲ ತಾತ್ಕಾಲಿಕ!’ ಮೂತ್ರಜನಕಾಂಗದ ರೋಗದೊಂದಿಗೆ ನನ್ನ ಜೀವಿತ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1997
  • ನಮ್ಮ ವಾಚಕರಿಂದ
    ಎಚ್ಚರ!—1997
  • ನಮ್ಮ ವಾಚಕರಿಂದ
    ಎಚ್ಚರ!—1996
ಇನ್ನಷ್ಟು
ಎಚ್ಚರ!—1997
g97 10/8 ಪು. 30

ನಮ್ಮ ವಾಚಕರಿಂದ

ಪ್ರಾಣಿ ಕಥೆಗಳು ಪ್ರಾಣಿಗಳ ಕುರಿತು ನೀವು ಪ್ರಕಟಿಸುವ ಲೇಖನಗಳನ್ನು ಓದಲು ನಾನು ಇಷ್ಟಪಡುತ್ತೇನೆ. ಪ್ಲ್ಯಾಟಿಪಸ್‌ನ ಕುರಿತು ನಾನೆಂದಿಗೂ ಕೇಳಿರದಿದ್ದ ಕಾರಣ, “ರಹಸ್ಯಗರ್ಭಿತ ಪ್ಲ್ಯಾಟಿಪಸ್‌” ಎಂಬ ಲೇಖನವು (ಜನವರಿ 8, 1997) ನನ್ನನ್ನು ಆಶ್ಚರ್ಯಗೊಳಿಸಿತು! ಅದೇ ಸಂಚಿಕೆಯಲ್ಲಿ, “ಈ ಕೂಡೂ ಜಿಂಕೆ ಜ್ಞಾಪಿಸಿಕೊಳ್ಳಲ್ಪಡುತ್ತದೆ” ಎಂಬ, ಒಂದು ಪ್ರಾಣಿ ಹಾಗೂ ಮನುಷ್ಯರ ನಡುವಿನ ಮನೋಹರವಾದ ಗೆಳೆತನದ ಕುರಿತಾದ ಲೇಖನವು ಸಹ ನನ್ನ ಹೃದಯವನ್ನು ಸ್ಪರ್ಶಿಸಿತು. ಮನುಷ್ಯರು ಪ್ರಾಣಿಗಳಿಗೆ ಪ್ರೀತಿ ಹಾಗೂ ಗೌರವವನ್ನು ತೋರಿಸುವಾಗ ಅದೆಷ್ಟು ಚೆನ್ನಾಗಿರುತ್ತದೆ!

ಎಫ್‌. ಎ., ಬ್ರೆಸಿಲ್‌

ಹೃದಯಾಘಾತ ಆತ್ಮಿಕವಾಗಿ ನಮಗೆ ಮಾರ್ಗದರ್ಶನ ನೀಡುವುದರೊಂದಿಗೆ ನಮ್ಮ ಶಾರೀರಿಕ ಕ್ಷೇಮದ ಕುರಿತು ಕಾಳಜಿ ವಹಿಸುವ ಒಂದು ಸಂಸ್ಥೆಗೆ ಸೇರಿರುವುದಕ್ಕಾಗಿ ನಾನು ಆಭಾರಿಯಾಗಿದ್ದೇನೆ. “ಹೃದಯಾಘಾತ—ಏನು ಮಾಡಸಾಧ್ಯವಿದೆ?” (ಜನವರಿ 8, 1997) ಎಂಬ ಲೇಖನಮಾಲೆಯು, ಹೃದಯಾಘಾತದ ರೋಗಲಕ್ಷಣಗಳನ್ನು ಗುರುತಿಸುವುದು ಹೇಗೆಂದು ನಮಗೆ ತೋರಿಸಿತು. ನನ್ನ ಮಾವನವರು ಈ ರೋಗಲಕ್ಷಣಗಳನ್ನು ತೋರ್ಪಡಿಸಿದಾಗ, ಅವರ ಸ್ಥಿತಿಯು ಗಂಭೀರವಾಗಿರಬಹುದೆಂದು ಗ್ರಹಿಸಿ, ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. ಅವರು ಹೃದಯಾಘಾತವನ್ನು ಅನುಭವಿಸುತ್ತಿದ್ದರು; ಆದರೆ ಆಸ್ಪತ್ರೆಯಲ್ಲಿ 24 ದಿನಗಳ ವರೆಗೆ ಇದ್ದ ಬಳಿಕ, ಅವರು ಅಪಾಯದಿಂದ ದೂರವಿದ್ದಾರೆ.

ಈ. ಎಸ್‌., ಬ್ರೆಸಿಲ್‌

ನನ್ನ ತಂದೆಯವರು ಮಹಾಪಧಮನಿಯ ಊತದಿಂದ 1995ರಲ್ಲಿ ಮರಣಪಟ್ಟರು. ಆದುದರಿಂದ ಈ ಸಂಚಿಕೆಯನ್ನು ನಾನು ಪ್ರಥಮವಾಗಿ ನೋಡಿದಾಗ, ಅದನ್ನು ಓದುವ ಧೈರ್ಯ ನನಗಿರಲಿಲ್ಲ. ಆದರೂ, ಒಂದು ತಿಂಗಳಿನ ತರುವಾಯ ನಾನು ಅದನ್ನು ಓದಿದೆ. ಹೃದ್ರೋಗವು ಒಂದು ಕುಟುಂಬಕ್ಕೆ ತರಬಲ್ಲ ದುಃಖವನ್ನು ಇತರರು ಅನುಭವಿಸಿದ್ದಾರೆಂದು ತಿಳಿದುಕೊಂಡದ್ದರಿಂದ, ಆ ಲೇಖನಗಳು ನನಗೆ ಸಾಂತ್ವನವನ್ನು ಒದಗಿಸಿದವು.

ಎಸ್‌. ಜೆ., ಕೆನಡ

ಕಳೆದ ಜುಲೈ ತಿಂಗಳಿನಲ್ಲಿ, ಮನೆ ಮನೆಯ ಸಾರುವ ಕೆಲಸದಲ್ಲಿದ್ದಾಗ ನನ್ನ ಪತಿಯು ಕುಸಿದು ಬಿದ್ದು, ಅವರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಸಂತೋಷಕರವಾಗಿ, ಅವರು ಚೇತರಿಸಿಕೊಂಡರು. ನಿಮ್ಮ ಲೇಖನಗಳು ನಮಗೆ ಸರಿಯಾದ ಸಮಯಕ್ಕೆ ಬಂದವು. “ಕುಟುಂಬಗಳಿಗೆ ಬೆಂಬಲ ಅಗತ್ಯ” ಎಂಬ ಭಾಗವನ್ನು ನೋಡಿ ನಾವು ಕಣ್ಣೀರು ಸುರಿಸಿದೆವು. ಏಕೆಂದರೆ ನಾವು ಭಾವಿಸಿಕೊಳ್ಳುತ್ತಿದ್ದದ್ದು ನಿಖರವಾಗಿ ಅದೇ ರೀತಿಯಾಗಿತ್ತು.

ಎಮ್‌. ಎ., ಜಪಾನ್‌

ಕಳೆದ ರವಿವಾರ, ನನ್ನ ಎಡಗೈಯಲ್ಲಿ ಸತತವಾದ ನೋವು ಮತ್ತು ನನ್ನ ಬೆರಳುತುದಿಗಳಲ್ಲಿ ಜಡವಾದ ಅನಿಸಿಕೆ ಆಗುತ್ತಿತ್ತು. ಅದು ಸಾಮಾನ್ಯವಾದ ನೋವು ಎಂದು ನಾನು ಭಾವಿಸಿದೆ. ಹೃದಯಾಘಾತದ ಕುರಿತಾದ ನಿಮ್ಮ ಲೇಖನಗಳನ್ನು ನಾನು ಓದಿದಾಗ, ನಾನು ಆ ರೋಗಲಕ್ಷಣಗಳಿಂದ ಬಳಲುತ್ತಿದ್ದೇನೆಂದು ನನಗೆ ಸ್ಪಷ್ಟವಾಗಿ ತಿಳಿದುಬಂತು! ನಾನು ಆಸ್ಪತ್ರೆಯ ಇಮರ್ಜನ್ಸಿ ಕೋಣೆಗೆ ಹೋದೆ, ಮತ್ತು ನನ್ನ ಹೃದಯದಲ್ಲಿರುವ ಮುಖ್ಯ ಅಪಧಮನಿಗಳಲ್ಲೊಂದಕ್ಕೆ ತಡೆಯುಂಟಾಗಿತ್ತೆಂದು ವೈದ್ಯರು ಕಂಡುಕೊಂಡರು. ಮರುದಿನ ಅವರು ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ನಿಮ್ಮ ಲೇಖನಗಳು ಬರೆಯಲ್ಪಟ್ಟಿರದಿದ್ದಲ್ಲಿ, ಈ ಉಪಕಾರ ಟಿಪ್ಪಣಿಯನ್ನು ಬರೆಯಲು ನಾನಿಲ್ಲಿ ಇರುತ್ತಿರಲಿಲ್ಲವೆಂಬುದು ತುಂಬ ಸಂಭವನೀಯ!

ಎನ್‌. ಎಸ್‌., ಅಮೆರಿಕ

“ಹೃದಯಾಘಾತದ ರೋಗಲಕ್ಷಣಗಳು” ಎಂಬ ರೇಖಾಚೌಕವನ್ನು ನಾನು ವಿಶೇಷವಾಗಿ ಗಣ್ಯಮಾಡಿದೆ. ನೀವು ನಮ್ಮ ಸಮಸ್ಯೆಗಳಲ್ಲಿ ಆಳವಾದ ಆಸಕ್ತಿಯನ್ನು ವಹಿಸುತ್ತೀರಿ ಮತ್ತು ಅವುಗಳನ್ನು ನಿಭಾಯಿಸಲು ಅಗತ್ಯವಿರುವುದನ್ನು ನಮಗೆ ಕೊಡುತ್ತೀರಿ ಎಂಬುದನ್ನು ನಾನು ಗ್ರಹಿಸುವಂತೆ ಇದು ಮಾಡಿತು.

ಎಮ್‌. ಬಿ., ಸೆನಿಗಲ್‌

ನನ್ನ ತಂದೆಗೆ ಹೃದಯಾಘಾತವಾದ ಸಮಯದಿಂದ, ನಮ್ಮ ಮನೆಯಲ್ಲಿ ಜೀವನವು ಗಮನಾರ್ಹವಾಗಿ ಬದಲಾಗಿದೆ. ಈ ಕಷ್ಟಕರವಾದ ಗಳಿಗೆಗಳಲ್ಲಿ, ಲೇಖನಗಳು ನಮಗೆ ಬಹಳಷ್ಟು ಸಾಂತ್ವನವನ್ನು ನೀಡಿದವು.

ಪಿ. ಜಿ., ಇಟಲಿ

ಲೂಯಿ ಪ್ಯಾಸ್ಚರ್‌ ನಾನು 12 ವರ್ಷ ಪ್ರಾಯದವಳು ಮತ್ತು “ಲೂಯಿ ಪ್ಯಾಸ್ಚರ್‌—ಅವರ ಕೆಲಸವು ತಿಳಿಯಪಡಿಸಿದ ಸಂಗತಿ” (ಜನವರಿ 8, 1997) ಎಂಬ ಲೇಖನವನ್ನು ನಾನು ಗಣ್ಯಮಾಡಿದೆ ಎಂಬುದನ್ನು ನಿಮಗೆ ತಿಳಿಯಪಡಿಸಲು ಬಯಸಿದೆ. ನನ್ನ ವಿಜ್ಞಾನ ತರಗತಿಯಲ್ಲಿ ನಾವು ಅವರ ಕುರಿತು ಅಭ್ಯಾಸಮಾಡುತ್ತಿದ್ದೇವೆ. ಒಂದು ವರದಿಯನ್ನು ತಯಾರಿಸುವಾಗ ನಾನು ಈ ಲೇಖನವನ್ನು ಉಪಯೋಗಿಸಿದೆ, ಮತ್ತು ನನ್ನ ತೇರ್ಗಡೆಯ ದರ್ಜೆಗೆ ಇನ್ನೂ ಹತ್ತು ಹೆಚ್ಚಿನ ಅಂಕಗಳನ್ನು ಪಡೆದುಕೊಂಡೆ!

ಎ. ಪಿ., ಅಮೆರಿಕ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ