ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 11/8 ಪು. 28-29
  • ಸಂನ್ಯಾಸವು ವಿವೇಕಕ್ಕೆ ಕೀಲಿ ಕೈಯೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂನ್ಯಾಸವು ವಿವೇಕಕ್ಕೆ ಕೀಲಿ ಕೈಯೊ?
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸುಳ್ಳು ಕಲ್ಪನೆಗಳ ಮೇಲೆ ಆಧಾರಿತ
  • ಸಂನ್ಯಾಸ ಅವಶ್ಯವಿಲ್ಲ
  • ನಾವು ಕಷ್ಟಾನುಭವಿಸುವುದನ್ನು ನೋಡಲು ದೇವರು ಇಷ್ಟಪಡುತ್ತಾನೊ?
    ಎಚ್ಚರ!—1995
  • ಭೂಮಿಯು ಪರದೈಸಾಗುವುದೆಂದು ನೀವು ನಂಬಸಾಧ್ಯವಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಯಾವ ರೀತಿಯ ಪ್ರೀತಿ ನಿಜ ಸಂತೋಷವನ್ನು ತರುತ್ತದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಪ್ರಾಣಕ್ಕಾಗಿ ಒಂದು ಉತ್ತಮ ನಿರೀಕ್ಷೆ
    ಕಾವಲಿನಬುರುಜು—1996
ಇನ್ನಷ್ಟು
ಎಚ್ಚರ!—1997
g97 11/8 ಪು. 28-29

ಬೈಬಲಿನ ದೃಷ್ಟಿಕೋನ

ಸಂನ್ಯಾಸವು ವಿವೇಕಕ್ಕೆ ಕೀಲಿ ಕೈಯೊ?

“ವಿರಕ್ತರು ಕಬ್ಬಿಣದ ಬೇಡಿಗಳನ್ನು, ಸರಪಣಿಗಳನ್ನು, ಬಾಗುಮುಳ್ಳಿನ ನಡುಪಟ್ಟಿಗಳನ್ನು ಮತ್ತು ಹೆಮ್ಮೊಳೆಯ ಕಂಠಪಟ್ಟಿಗಳನ್ನು ಧರಿಸಿದರು . . . ಇತರರು ಮುಳ್ಳು ಮತ್ತು ತುರುಚಿಗಿಡಗಳಲ್ಲಿ ಹೊರಳಾಡಿ, ಬೇಕುಬೇಕೆಂದೇ ಕೀಟ ಕಡಿತಗಳನ್ನು ಆಕರ್ಷಿಸಿಕೊಂಡು, ಬೆಂಕಿಯಿಂದ ತಮ್ಮನ್ನು ಸುಟ್ಟುಕೊಂಡು, ತಮ್ಮ ಗಾಯಗಳಲ್ಲಿ ದೀರ್ಘಕಾಲ ಕೀವು ತುಂಬಿಸಿಕೊಂಡರು. ಉಪವಾಸ ಪಥ್ಯ ಮಾಮೂಲಿಯಾಗಿದ್ದುದರಿಂದ, ಕೆಲವರು ಕೇವಲ ಕೊಳೆತ ಇಲ್ಲವೆ ಅಸಹ್ಯವಾದ ಆಹಾರವನ್ನು ತಿಂದು, ಅದನ್ನು ಇನ್ನೂ ಕಠಿನವಾಗಿಸಿಕೊಂಡರು.”—ಸಂತರು, (ಇಂಗ್ಲಿಷ್‌) ಈಡಿತ್‌ ಸೈಮನ್‌ ಅವರಿಂದ.

ಇವರು ಸಂನ್ಯಾಸಿಗಳಾಗಿದ್ದರು. ಅವರು ತಮ್ಮನ್ನು ಇಷ್ಟು ಘೋರವಾಗಿ ಉಪಚರಿಸಿಕೊಂಡದ್ದೇಕೆ? ಲೋಕಕ್ಕಾಗಿ—ಬೌದ್ಧ ಮತ್ತು ಕ್ರೈಸ್ತ ಸಂನ್ಯಾಸದ ಮನೋಭಾವ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಲೇಖಕರು, “ಕಡಮೆಪಕ್ಷ ಸಾಕ್ರೆಟೀಸ್‌ (ಸಾ.ಶ.ಪೂ. ಐದನೆಯ ಶತಮಾನ)ನ ಸಮಯದಿಂದೀಚೆಗೆ, ಆವಶ್ಯಕತೆಗಳು ಮಾತ್ರ ಇರುವ, ಭೋಗಾಸಕ್ತಿ ಮತ್ತು ಪ್ರಾಪಂಚಿಕ ಸುಖಲೋಲುಪತೆಯ ಹೊರೆಗಳಿಲ್ಲದ ಜೀವನವು ನೈಜ ವಿವೇಕಕ್ಕಿರುವ ಮುನ್‌ಷರತ್ತಾಗಿದೆಯೆಂದು ವ್ಯಾಪಕವಾಗಿ ಗ್ರಹಿಸಲಾಗಿತ್ತು” ಎಂದು ವಿವರಿಸುತ್ತಾರೆ. ದೇಹದ ವಿರಕ್ತಿಯು ತಮ್ಮ ಆತ್ಮಿಕ ಇಂದ್ರಿಯಗ್ರಹಣ ಶಕ್ತಿಯನ್ನು ವರ್ಧಿಸಿ ನಿಜ ಜ್ಞಾನೋದಯಕ್ಕೆ ನಡೆಸುವುದೆಂದು ಸಂನ್ಯಾಸಿಗಳು ನೆನಸಿದರು.

ಸಂನ್ಯಾಸವನ್ನು ನಿಷ್ಕೃಷ್ಟವಾಗಿ ನಿರೂಪಿಸುವುದು ಕಷ್ಟಕರ. ಕೆಲವರಿಗೆ, ಇದು ಕೇವಲ ಆತ್ಮಸಂಯಮ ಅಥವಾ ಸ್ವತ್ಯಾಗವಾಗಿರುತ್ತದೆ. ಆದಿ ಕ್ರೈಸ್ತರು ಇಂತಹ ಸದ್ಗುಣಗಳನ್ನು ಅಮೂಲ್ಯವೆಂದೆಣಿಸಿದರು. (ಗಲಾತ್ಯ 5:22, 23; ಕೊಲೊಸ್ಸೆ 3:5) ಪ್ರಾಪಂಚಿಕ ಜೀವನ ಶೈಲಿಯು ತರಸಾಧ್ಯವಿರುವ ಚಿಂತೆಗಳು ಅಡ್ಡಿಮಾಡದಿರುವ ಒಂದು ಸರಳ ಜೀವನವನ್ನು ಯೇಸು ಕ್ರಿಸ್ತನು ತಾನೇ ಶಿಫಾರಸ್ಸುಮಾಡಿದನು. (ಮತ್ತಾಯ 6:19-33) ಆದರೆ ಹೆಚ್ಚು ಬಾರಿ, ಸಂನ್ಯಾಸವು ಹೆಚ್ಚು ಕಠಿನವಾದ ಮತ್ತು ಮೇಲೆ ವರ್ಣಿಸಿರುವಂತೆ, ಅನೇಕ ವೇಳೆ ವಿಪರೀತ ಕ್ರಮಗಳಿರುವ ವಿಷಯಗಳೊಂದಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ದೇಹದಂಡನೆಯ ಆಚಾರಗಳು, ವಿಶೇಷವಾಗಿ ಅವುಗಳ ವಿಪರೀತ ರೂಪಗಳಲ್ಲಿ, ನಿಜವಾಗಿಯೂ ವಿವೇಕಕ್ಕೆ ಕೀಲಿ ಕೈಯಾಗಿವೆಯೆ?

ಸುಳ್ಳು ಕಲ್ಪನೆಗಳ ಮೇಲೆ ಆಧಾರಿತ

ಸನ್ಯಾಸಕ್ಕೆ ಎಡೆಕೊಟ್ಟಿರುವ ತತ್ತ್ವಜ್ಞಾನಗಳಲ್ಲಿ, ಪ್ರಾಪಂಚಿಕ ವಸ್ತುಗಳು ಮತ್ತು ಶಾರೀರಿಕ ಸುಖಗಳು ಅಂತರ್ಗತವಾಗಿ ಕೆಟ್ಟವುಗಳಾಗಿರುವುದರಿಂದ ಅವು ಆತ್ಮಿಕ ಪ್ರಗತಿಗೆ ತಡೆಯಾಗಿವೆ ಎಂಬ ವಿಚಾರವು ಒಂದು. ಸಂನ್ಯಾಸಕ್ಕೆ ದಾರಿಮಾಡಿಕೊಡುವ ಇನ್ನೊಂದು ಕಲ್ಪನೆಯು ವ್ಯಾಪಕವಾಗಿ ಅಂಗೀಕೃತವಾಗಿರುವ ನಂಬಿಕೆಯಾದ, ಮಾನವನು ಶರೀರ ಮತ್ತು ಪ್ರಾಣಗಳುಳ್ಳವನು ಎಂಬುದು. ಭೌತಿಕ ಶರೀರವು ಪ್ರಾಣದ ಸೆರೆಮನೆಯೆಂದೂ ಇಂದ್ರಿಯಾಸಕ್ತಿಯು ಅದರ ವೈರಿಯೆಂದೂ ಸಂನ್ಯಾಸಿಗಳು ನಂಬುತ್ತಾರೆ.

ಬೈಬಲು ಏನನ್ನುತ್ತದೆ? ದೇವರು ತನ್ನ ಭೂಸೃಷ್ಟಿಯನ್ನು ಮಾಡಿ ಮುಗಿಸಿದಾಗ, ತಾನು ಮಾಡಿದ್ದ ಸಕಲವೂ—ಆತನ ಭೌತಿಕ ಮತ್ತು ಪ್ರಾಪಂಚಿಕ ಸೃಷ್ಟಿ—“ಬಹಳ ಒಳ್ಳೇದು” ಆಗಿತ್ತೆಂದು ಹೇಳಿದನೆಂದು ಶಾಸ್ತ್ರಗಳು ತೋರಿಸುತ್ತವೆ. (ಆದಿಕಾಂಡ 1:31) ಪುರುಷನೂ ಸ್ತ್ರೀಯೂ ಏದೆನ್‌ ತೋಟದಲ್ಲಿ ಪ್ರಾಪಂಚಿಕ ವಿಷಯಗಳನ್ನು ಅನುಭವಿಸುವಂತೆ ದೇವರು ಉದ್ದೇಶಿಸಿದನು. ಏದೆನ್‌ ಎಂಬ ಹೆಸರೇ “ಸುಖಾನುಭವ” ಅಥವಾ “ಆಹ್ಲಾದ”ವನ್ನು ಅರ್ಥೈಸುತ್ತದೆ. (ಆದಿಕಾಂಡ 2:8, 9) ಆದಾಮ ಮತ್ತು ಹವ್ವರು ಪರಿಪೂರ್ಣರಾಗಿದ್ದು, ಪಾಪ ಮಾಡುವ ತನಕ ಅವರು ತಮ್ಮ ಸೃಷ್ಟಿಕರ್ತನೊಂದಿಗೆ ಸುಸಂಬಂಧವನ್ನು ಅನುಭವಿಸಿದರು. ಆದರೆ ಅಂದಿನಿಂದ, ಅಪರಿಪೂರ್ಣತೆಯು ದೇವರ ಮತ್ತು ಮಾನವನ ಮಧ್ಯೆ ತಡೆಗಟ್ಟಾಗಿ ಪರಿಣಮಿಸಿತು. ಆದರೂ, ನ್ಯಾಯಸಮ್ಮತವಾದ ಮಾನವ ಬಯಕೆಗಳನ್ನು ತೃಪ್ತಿಪಡಿಸುವುದು ಅಥವಾ ದೇವದತ್ತ ಶಾರೀರಿಕ ಸುಖಗಳನ್ನು ಅನುಭವಿಸುವುದು—ದೇವರ ನೈತಿಕ ನಿಯಮಗಳಿಗೆ ಹೊಂದಿಕೊಂಡು ಮಾಡಲ್ಪಟ್ಟಾಗ—ದೇವರ ಮತ್ತು ಆತನ ಆರಾಧಕರ ಮಧ್ಯೆ ಎಂದಿಗೂ ಒಂದು ಸಂವಹನ ತಡೆಗಟ್ಟನ್ನು ನಿರ್ಮಿಸಸಾಧ್ಯವಿರಲಿಲ್ಲ!—ಕೀರ್ತನೆ 145:16.

ಇದಕ್ಕೆ ಕೂಡಿಸಿ, ಮಣ್ಣಿನಿಂದ ಸೃಷ್ಟಿಸಲ್ಪಟ್ಟು ಮಾಂಸದಿಂದ ಮಾಡಲ್ಪಟ್ಟ ಮನುಷ್ಯನು ಪ್ರಾಣ ಆಗಿದ್ದಾನೆ ಎಂದು ಬೈಬಲು ಸ್ಪಷ್ಟವಾಗಿ ಬೋಧಿಸುತ್ತದೆ. ಪ್ರಾಣವು ಭೌತಿಕ ಶರೀರದೊಳಗೆ ಬಂಧಿಸಲ್ಪಟ್ಟಿರುವ ಒಂದು ರೀತಿಯ ಅಶರೀರ ಮತ್ತು ಅಮರ್ತ್ಯ ಅಸ್ತಿತ್ವವೆಂಬ ಭಾವನೆಯನ್ನಾಗಲಿ, ಶರೀರವು ಹೇಗೊ ಒಬ್ಬನನ್ನು ದೇವರೊಂದಿಗೆ ಆಪ್ತ ಸಂಬಂಧವನ್ನಿಟ್ಟುಕೊಳ್ಳುವುದರಿಂದ ತಡೆಗಟ್ಟುತ್ತದೆ ಎಂಬ ವಿಚಾರವನ್ನಾಗಲಿ ಬೈಬಲು ಬೆಂಬಲಿಸುವುದಿಲ್ಲ.—ಆದಿಕಾಂಡ 2:7.

ಸಂನ್ಯಾಸ ಕಲ್ಪನೆಯು ದೇವರೊಂದಿಗಿನ ಮಾನವನ ಸಂಬಂಧದ ವಿಕೃತ ಚಿತ್ರವನ್ನು ಚಿತ್ರಿಸುತ್ತದೆಂಬುದು ಸ್ಪಷ್ಟ. ಕ್ರೈಸ್ತರೆನಿಸಿಕೊಳ್ಳುವ ಕೆಲವರು ಮೂಲ ಬೈಬಲ್‌ ಸತ್ಯಗಳ ಬದಲಾಗಿ ಮೋಸಗೊಳಿಸುವ ಮಾನವ ತತ್ತ್ವಜ್ಞಾನಗಳನ್ನು ಇಷ್ಟಪಡುವರೆಂದು ಅಪೊಸ್ತಲ ಪೌಲನು ಎಚ್ಚರಿಸಿದನು. (1 ತಿಮೊಥೆಯ 4:1-5) ಈ ಅಭಿಪ್ರಾಯವಿದ್ದ ಕೆಲವರ ಕುರಿತಾಗಿ, ಒಬ್ಬ ಧರ್ಮ ಇತಿಹಾಸಕಾರನು ಹೇಳುವುದು: “ಭೌತವಸ್ತು ಕೆಟ್ಟದೆಂದು . . . ಮತ್ತು ಭೌತವಸ್ತುವಿನೊಂದಿಗಿನ ತೊಡರಿನಿಂದ ಮನುಷ್ಯರ ಪ್ರಾಣವು ಬಿಡಿಸಲ್ಪಡಬೇಕೆಂಬ ನಂಬಿಕೆಯು, ಮಾಂಸ ತಿನ್ನುವುದು, ಲೈಂಗಿಕ ಸಂಭೋಗ, ಇತ್ಯಾದಿಯನ್ನು ನಿಷೇಧಿಸುವ ಮೂಲಕ ವಿಪರೀತ ಸಂನ್ಯಾಸವನ್ನು ಉಂಟುಮಾಡಿತು. ವಿಶೇಷವಾಗಿ ದೀಕ್ಷೆಪಡೆದ ಗಣ್ಯರಾದ ‘ಪರಿಪೂರ್ಣರು’ ಅಥವಾ ಪರ್‌ಫೆಕ್ಟೀ ಮಾತ್ರ ಇದನ್ನು ಅನುಸರಿಸಬಲ್ಲರು.” ಈ ವಿಧದ ಯೋಚನೆಗೆ ಬೈಬಲಿನಲ್ಲಿ ಬೆಂಬಲವೂ ಇಲ್ಲ, ಅದು ಆದಿಕ್ರೈಸ್ತರ ನಂಬಿಕೆಯೂ ಆಗಿರಲಿಲ್ಲ.—ಜ್ಞಾನೋಕ್ತಿ 5:15-19; 1 ಕೊರಿಂಥ 7:4, 5; ಇಬ್ರಿಯ 13:4.

ಸಂನ್ಯಾಸ ಅವಶ್ಯವಿಲ್ಲ

ಯೇಸುವೂ ಅವನ ಶಿಷ್ಯರೂ ಸಂನ್ಯಾಸಿಗಳಾಗಿರಲಿಲ್ಲ. ಅವರು ವಿವಿಧ ಪರೀಕ್ಷೆಗಳನ್ನೂ ಸಂಕಟಗಳನ್ನೂ ತಾಳಿಕೊಂಡರು, ಆದರೆ ಈ ಸಂಕಷ್ಟಗಳು ಸ್ವಯಂಕೃತವಾಗಿರಲಿಲ್ಲ. ಮೋಸಗೊಳಿಸುವ ಮಾನವ ತತ್ತ್ವಜ್ಞಾನಗಳು ದೇವರ ವಾಕ್ಯದ ಸತ್ಯದಿಂದ ಕ್ರೈಸ್ತರನ್ನು ಪಾಪಕ್ಕೆಳೆದು, ಅವಿವೇಕದ, ವಿಪರೀತ ಆಚಾರಗಳಿಗೆ ನಡೆಸಬಹುದಾಗಿರುವುದರಿಂದ, ಅವರು ಜಾಗರೂಕತೆಯಿಂದಿರಬೇಕೆಂದು ಅಪೊಸ್ತಲ ಪೌಲನು ಎಚ್ಚರಿಸಿದನು. ಪೌಲನು ವಿಶೇಷವಾಗಿ “ದೇಹದಂಡನೆ”ಯ ಕುರಿತು ಹೇಳಿದನು. ಅವನಂದದ್ದು: “ಅಂಥ ಉಪದೇಶಗಳು ಸ್ವಕಲ್ಪಿತಾಚಾರವನ್ನೂ ಅತಿವಿನಯವನ್ನೂ ದೇಹದಂಡನೆಯನ್ನೂ ಬೋಧಿಸುತ್ತಾ ಹೆಸರಿಗೆ ಮಾತ್ರ ಜ್ಞಾನವೆನಿಸಿಕೊಳ್ಳುತ್ತವೆಯಲ್ಲದೆ ಶಾರೀರಿಕ ಇಚ್ಛೆಗಳನ್ನು ನಿಗ್ರಹಿಸುವದರಲ್ಲಿ ಯಾವ ಪ್ರಯೋಜನಕ್ಕೂ ಬರುವದಿಲ್ಲ.” (ಕೊಲೊಸ್ಸೆ 2:8, 23) ಸಂನ್ಯಾಸವು ವಿಶೇಷ ರೀತಿಯ ಪಾವಿತ್ರ್ಯಕ್ಕಾಗಲಿ ನಿಜ ಜ್ಞಾನೋದಯಕ್ಕಾಗಲಿ ನಡೆಸುವುದಿಲ್ಲ.

ನಿಜ, ಕ್ರೈಸ್ತ ವಿಧೇಯತೆಯ ಮಾರ್ಗವು ಹುರುಪಿನ ಪರಿಶ್ರಮ ಮತ್ತು ಆತ್ಮಸಂಯಮವನ್ನು ಸೂಚಿಸುತ್ತದೆ. (ಲೂಕ 13:24; 1 ಕೊರಿಂಥ 9:27) ದೇವರ ಜ್ಞಾನವನ್ನು ಸಂಪಾದಿಸುವರೆ ಒಬ್ಬನು ಕಷ್ಟಪಟ್ಟು ಕೆಲಸಮಾಡತಕ್ಕದ್ದು. (ಜ್ಞಾನೋಕ್ತಿ 2:1-6) ಅಲ್ಲದೆ, “ದುರಾಶೆಗಳಿಗೆ ಮತ್ತು ಭೋಗಗಳಿಗೆ” ದಾಸರಾಗಿರುವ ಮತ್ತು “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ” ಆಗಿರುವುದರ ವಿರುದ್ಧ ಬೈಬಲಿನಲ್ಲಿ ಬಲವಾದ ಬುದ್ಧಿವಾದವಿದೆ. (ತೀತ 3:3; 2 ತಿಮೊಥೆಯ 3:4, 5) ಆದರೂ, ಶಾಸ್ತ್ರದ ಈ ಭಾಗಗಳು ಸಂನ್ಯಾಸಾಚಾರವನ್ನು ಅನುಮೋದಿಸುವುದಿಲ್ಲ. ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಕ್ರಿಸ್ತನು, ಆಹಾರ, ಪಾನೀಯ, ಸಂಗೀತ ಮತ್ತು ನೃತ್ಯಗಳಿದ್ದ ಸುಖಸಂದರ್ಭಗಳಲ್ಲಿ ಆನಂದಿಸಿದನು.—ಲೂಕ 5:29; ಯೋಹಾನ 2:1-10.

ನಿಜ ವಿವೇಕ ನ್ಯಾಯಸಮ್ಮತ, ವೈಪರೀತ್ಯವಲ್ಲ. (ಯಾಕೋಬ 3:17) ಯೆಹೋವ ದೇವರು ನಮ್ಮ ಭೌತಿಕ ಶರೀರಗಳನ್ನು, ಅವು ಜೀವನದಲ್ಲಿ ಅನೇಕ ಸುಖಗಳನ್ನು ಅನುಭವಿಸುವ ಸಾಮರ್ಥ್ಯವುಳ್ಳದ್ದಾಗಿ ಸೃಷ್ಟಿಸಿದನು. ನಾವು ಸಂತುಷ್ಟರಾಗಿರುವುದನ್ನು ಆತನು ಬಯಸುತ್ತಾನೆ. ಆತನ ವಾಕ್ಯ ನಮಗೆ ಹೇಳುವುದು: “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.”—ಪ್ರಸಂಗಿ 3:12, 13.

[ಪುಟ 39 ರಲ್ಲಿರುವ ಚಿತ್ರ ಕೃಪೆ]

ನೆಲಗವಿಯಲ್ಲಿ ಸಂತ ಜೆರೋಮ್‌/The Complete Woodcuts of Albrecht Dürer/Dover Publications, Inc.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ