ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 1/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1998
  • ಅನುರೂಪ ಮಾಹಿತಿ
  • “ಸುಮ್ಮನೆ ಕುಳಿತು ಗಮನ ಕೊಡಿ!”
    ಎಚ್ಚರ!—1997
  • ಪಂಥಾಹ್ವಾನವನ್ನು ಎದುರಿಸುವುದು
    ಎಚ್ಚರ!—1997
  • ನಮ್ಮ ವಾಚಕರಿಂದ
    ಎಚ್ಚರ!—1997
  • ಕಲಿಕೆಯ ವಿಕಲತೆಯುಳ್ಳ ಮಕ್ಕಳಿಗೆ ಸಹಾಯ
    ಎಚ್ಚರ!—2009
ಇನ್ನಷ್ಟು
ಎಚ್ಚರ!—1998
g98 1/8 ಪು. 30

ನಮ್ಮ ವಾಚಕರಿಂದ

ಹಾವುಕಡಿತಗಳು ಒಬ್ಬ ವೃತ್ತಿಪರ ಸರೀಸೃಪ ತಜ್ಞನೋಪಾದಿ, ನಾನು ಹಾವುಗಳ ಆರೈಕೆ ಮತ್ತು ನಿರ್ವಹಣೆ ಹಾಗೂ ಅವುಗಳ ವಿಷದ ತೆಗೆಯುವಿಕೆಗೆ ಜವಾಬ್ದಾರನಾಗಿದ್ದೇನೆ. “ಒಂದು ನಾಗರಹಾವನ್ನು ಸಂಧಿಸಲು ನೀವು ಇಷ್ಟಪಡುವಿರೊ?” (ಏಪ್ರಿಲ್‌ 8, 1996), “ಹಾಬು—ಗೌರವಿಸಲ್ಪಡಬೇಕಾದ ಒಂದು ಹಾವು” (ಜುಲೈ 8, 1996, ಇಂಗ್ಲಿಷ್‌), ಮತ್ತು “ಅಪಾಯ! ನಾನು ವಿಷಕಾರಿಯಾಗಿದ್ದೇನೆ” (ಆಗಸ್ಟ್‌ 22, 1996, ಇಂಗ್ಲಿಷ್‌) ಎಂಬ ಲೇಖನಗಳೆಲ್ಲವೂ, ಯೆಹೋವನ ಸೃಷ್ಟಿಯ ಕಡೆಗೆ ಒಂದು ಸಕಾರಾತ್ಮಕ ಮನೋಭಾವವನ್ನು ತೋರಿಸಿದವು. ಆದಾಗಲೂ, ಹಾವುಕಡಿತಗಳಿಗಾಗಿ ತಿರಿಚೊತ್ತು ಪಟ್ಟಿ (ಟೊರ್‌ನಿಕೆಟ್‌)ಗಳನ್ನು ಶಿಫಾರಸ್ಸು ಮಾಡಲಾಗುವುದಿಲ್ಲವೆಂಬುದನ್ನು ನಿಮ್ಮ ಗಮನಕ್ಕೆ ತರಲು ಇಷ್ಟಪಡುವೆ. ಹೆಚ್ಚಿನ ಜನರು ಅದನ್ನು ಸರಿಯಾಗಿ ಹಾಕಲು ಶಕ್ತರಾಗಿರುವುದಿಲ್ಲ, ಮತ್ತು ಫಲಸ್ವರೂಪವಾಗಿ ಕೆಲವರು ತಮ್ಮ ಅಂಗಗಳ ಉಪಯೋಗವನ್ನು ಕಳೆದುಕೊಂಡಿದ್ದಾರೆ. ಇಡೀ ಅಂಗವನ್ನು ಬಿಗಿಯಲು ಒಂದು ಪ್ರೆಷರ್‌ ಬ್ಯಾಂಡೇಜಿನ ಉಪಯೋಗವನ್ನು ನಾನು ಬಲವಾಗಿ ಸಮರ್ಥಿಸುತ್ತೇನೆ. ಅದನ್ನು, ಉಳುಕಿದ ಕಣಕಾಲಿಗೆ ಅಥವಾ ಮಣಿಕಟ್ಟಿಗೆ ಸುತ್ತಲು ಪ್ರಯೋಗಿಸಲ್ಪಡುವ ಒತ್ತಡದೊಂದಿಗೆ ಉಪಯೋಗಿಸಬೇಕು. ಕಚ್ಚಲ್ಪಟ್ಟಿರುವ ಅಂಗದ ಕ್ಷೇತ್ರದಲ್ಲೇ ವಿಷವು ಇರಿಸಲ್ಪಟ್ಟಾಗ, ರಕ್ತದ ಸರಬರಾಯಿಯು ಕಾಪಾಡಲ್ಪಡುತ್ತದೆ, ಮತ್ತು ಕಾಲು “ಜೀವಂತ”ವಾಗಿಡಲ್ಪಡುತ್ತದೆ.

ಪಿ. ಆರ್‌., ಇಂಗ್ಲೆಂಡ್‌

ಇತ್ತೀಚಿನ ಅನೇಕ ವೈದ್ಯಕೀಯ ಪಠ್ಯಪುಸ್ತಕಗಳು ಈ ವಿಷಯದೊಂದಿಗೆ ಸಮ್ಮತಿಸುತ್ತವೆ ಮತ್ತು ಈ ಸ್ಪಷ್ಟೀಕರಣಕ್ಕಾಗಿ ನಾವು ನಮ್ಮ ಓದುಗರಿಗೆ ಉಪಕಾರ ಹೇಳುತ್ತೇವೆ.—ಸಂಪಾ.

ಡೊಂಬಕಾಗೆ “ಡೊಂಬಕಾಗೆ—ಅದನ್ನು ಭಿನ್ನಗೊಳಿಸುವ ಸಂಗತಿ ಯಾವುದು?” (ಜನವರಿ 8, 1997, ಇಂಗ್ಲಿಷ್‌) ಎಂಬ ಲೇಖನವು ಬಂದ ಸಮಯದಲ್ಲಿ ನಾನು ಅಸ್ವಸ್ಥನಾಗಿದ್ದೆ. ನನ್ನ ಮುಖದ ಮೇಲೆ ಯಾವುದೇ ವಿಷಯವು ನಸುನಗೆಯನ್ನು ತರಸಾಧ್ಯವಿರಲಿಲ್ಲ. ಆದರೆ ಡೊಂಬಕಾಗೆಯ ಉಪಾಯಕೌಶಲವು ನನ್ನನ್ನು ನಗುವಂತೆ ಮಾಡಿತು. ತದನಂತರ, ಎಚ್ಚರ! ಲೇಖನಗಳಿಂದ ಮಾಹಿತಿಯನ್ನು ಉಪಯೋಗಿಸುತ್ತಾ, ನಾನು ಹಕ್ಕಿಗಳ ಕುರಿತ ಒಂದು ಶಾಲಾ ವರದಿಯನ್ನು ತಯಾರಿಸಿದೆ. ಅದಕ್ಕಾಗಿ ನನಗೆ ಉಚ್ಚ ಅಂಕಗಳು ಸಿಕ್ಕಿದವು!

ಜೆ. ಬಿ., ಸ್ಲೊವಾಕಿಯ

ಕಲಿಯುವ ಅಸಾಮರ್ಥ್ಯಗಳು “ಕಲಿಯುವ ಅಸಾಮರ್ಥ್ಯಗಳಿರುವ ಮಕ್ಕಳಿಗೆ ಸಹಾಯ” (ಮಾರ್ಚ್‌ 8, 1997) ಎಂಬ ಲೇಖನಮಾಲೆಗಾಗಿ ನಿಮಗೆ ಉಪಕಾರ. ನಾನೊಂದು ಖಾಸಗಿ ಶಾಲೆಯನ್ನು ನಡಿಸುತ್ತೇನೆ ಮತ್ತು ನನ್ನ ಶಿಕ್ಷಕರಿಗಾಗಿ ಫೋಟೋಕಾಪಿಗಳನ್ನು ಮಾಡಿಸಿದ್ದೇನೆ. ನಿಮ್ಮ ಪತ್ರಿಕೆಯಲ್ಲಿರುವ ಮಾಹಿತಿಯನ್ನು ಆಧಾರಮಾಡಿ ನಾನು ಸುದ್ದಿಪತ್ರಗಳನ್ನು ಸಹ ಬರೆದಿದ್ದೇನೆ. ಈ ವಿಷಯಗಳನ್ನು ನೀವು ಪ್ರಸ್ತಾವಿಸುವ ಸಮತೂಕದ ವಿಧಕ್ಕಾಗಿ ನಿಮಗೆ ಉಪಕಾರ.

ಇ. ಜಿ., ಹೊಂಡ್ಯುರಾಸ್‌

ನಾನು, ಏಡಿಡಿಯಿರುವ ಮಕ್ಕಳು ಮತ್ತು ವಯಸ್ಕರ ಪರವಾಗಿ ಸಕ್ರಿಯವಾಗಿ ಕೆಲಸಮಾಡುತ್ತಿರುವ ಅತಿ ದೊಡ್ಡದಾದ ಲಾಭವಿಲ್ಲದ ರಾಷ್ಟ್ರೀಯ ಸಂಸ್ಥೆಯ ನಿರ್ವಾಹಕ ಅಧ್ಯಕ್ಷೆಯಾಗಿದ್ದೇನೆ. ನ್ಯೂನ ಗಮನ ಅತಿಕ್ರಿಯಾಶೀಲತೆ ಅಸ್ವಸ್ಥತೆ (ಏಡಿಏಚ್‌ಡಿ) ಮತ್ತು ನ್ಯೂನ ಗಮನ ಅಸ್ವಸ್ಥತೆ (ಏಡಿಡಿ)ಯ ವಿಷಯದ ಕುರಿತಾದ ನಿಮ್ಮ ವಿಚಾರಭರಿತ ಸಂಚಿಕೆಗಾಗಿ ನೀವು ಶ್ಲಾಘಿಸಲ್ಪಡಬೇಕು. ಇವು ದುರ್ಬಲಗೊಳಿಸುವಂತಹ ಮತ್ತು ಅನೇಕವೇಳೆ ತಪ್ಪಾಗಿ ತಿಳಿಯಲಾಗುವ ಅಸ್ವಸ್ಥತೆಗಳಾಗಿವೆ. ಸರಿಯಾದ ರೋಗನಿರ್ಣಯ ಮತ್ತು ಯೋಗ್ಯವಾದ ಚಿಕಿತ್ಸೆಗಳು ಸಹಾಯವನ್ನು ಹುಡುಕುತ್ತಿರುವ ಅನೇಕ ವ್ಯಕ್ತಿಗಳಿಗೆ ಈಗ ಪ್ರಯೋಜನವನ್ನು ತರುತ್ತಿವೆಯೆಂಬ ನಿಮ್ಮ ಅಂಗೀಕಾರವನ್ನು ನಾವು ಗಣ್ಯಮಾಡುತ್ತೇವೆ. ಹೆತ್ತವರ ಪ್ರೇಮ ಮತ್ತು ತಿಳಿವಳಿಕೆಯ ಮೇಲಿನ ನಿಮ್ಮ ಒತ್ತು ಕೂಡ ಒಂದು ಪ್ರಾಮುಖ್ಯ ಸಂದೇಶವನ್ನು ದಾಟಿಸುತ್ತದೆ.

ಎಲ್‌. ಆರ್‌., ಅಮೆರಿಕ

ನನಗೆ ಏಡಿಏಚ್‌ಡಿ ಇರುವ ಒಬ್ಬ ಮಗನಿದ್ದಾನೆ, ಮತ್ತು ಅವನು ಕೇವಲ ತೊಂದರೆಯನ್ನುಂಟುಮಾಡುವ ಒಬ್ಬ ಮಗುವಾಗಿಲ್ಲವೆಂಬುದನ್ನು ನನಗೆ ಗ್ರಹಿಸಲು ತುಂಬ ಕಷ್ಟಕರವಾಗಿದೆ. “ಅವರು ಅವನನ್ನು ಏಕೆ ಶಿಸ್ತುಗೊಳಿಸುವುದಿಲ್ಲ?” ಎಂಬಂತಹ ಅನೇಕ ಕಠೋರ ಹೇಳಿಕೆಗಳು ನುಡಿಯಲ್ಪಟ್ಟಿವೆ. ಅವನನ್ನು ಶಿಸ್ತುಗೊಳಿಸಲು ಪ್ರಯತ್ನಿಸುತ್ತಾ ನಾನು ತುಂಬ ಸಮಯವನ್ನು ಕಳೆದಿದ್ದೇನೆ ಎಂಬ ವಾಸ್ತವಾಂಶದ ನೋಟದಲ್ಲಿ ಈ ಹೇಳಿಕೆಗಳು ತುಂಬ ನೋಯಿಸುತ್ತವೆ. ಈ ಅಸ್ವಸ್ಥತೆಯ ಕುರಿತಾದ ನಿಮ್ಮ ವಿವರಣೆಯು, ನಿಜವಾಗಿ ಒಂದು ಸಮಸ್ಯೆಯಿದೆ ಮತ್ತು ಇತರರು ಹೆಚ್ಚು ಉತ್ತೇಜನಕೊಡುವವರಾಗಿರಸಾಧ್ಯವಿದೆ ಎಂಬುದನ್ನು ಇತರರು ಗ್ರಹಿಸುವಂತೆ ಸಹಾಯಮಾಡುವುದೆಂದು ನಾನು ಆಶಿಸುತ್ತೇನೆ.

ಎಮ್‌. ಟಿ., ಅಮೆರಿಕ

ಕಲಿಯಲು ಅಸಮರ್ಥನಾಗಿರುವ ಒಬ್ಬ ಮಗುವಿನ ಹೆತ್ತವರೋಪಾದಿ, ನಾವು ಈ ಸಂಚಿಕೆಯಲ್ಲಿ ಎಷ್ಟು ಆನಂದಿಸಿದೆವೆಂಬುದನ್ನು ನೀವು ಕೇವಲ ಊಹಿಸಬಲ್ಲಿರಿ. ಇದು ಹೆತ್ತವರನ್ನು ಹೇಗೆ ಬಾಧಿಸುತ್ತದೆ ಮತ್ತು ಇತರರಿಂದ ಮನಸ್ಸನ್ನು ಚುಚ್ಚುವ ಹೇಳಿಕೆಗಳನ್ನು ಕೇಳುವುದನ್ನು ಬಿಟ್ಟು, ನಮಗೆ ಹೊತ್ತುಕೊಳ್ಳಲು ಆಗಲೇ ಸಾಕಷ್ಟು ದೊಡ್ಡ ಹೊರೆಯಿದೆ ಎಂಬ ವಿಷಯವನ್ನು ನೀವು ತಿಳಿಸಿರುವುದನ್ನು ನಾವು ವಿಶೇಷವಾಗಿ ಅಮೂಲ್ಯವೆಂದೆಣಿಸುತ್ತೇವೆ.

ಜೆ. ಸಿ. ಮತ್ತು ಬಿ. ಸಿ., ಕೆನಡ

ದೇವರ ಸ್ನೇಹಿತ “ಯುವ ಜನರು ಪ್ರಶ್ನಿಸುವುದು . . . ನಾನು ಹೇಗೆ ದೇವರ ಸ್ನೇಹಿತನಾಗಬಲ್ಲೆ?” (ಮಾರ್ಚ್‌ 8, 1997) ಎಂಬ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರ. ಅದು ನನಗೆ ತುಂಬ ಸಹಾಯಮಾಡಿತು. ಈಗ ನನಗೆ ತೃಪ್ತ ಅನಿಸಿಕೆಯಾಗುತ್ತದೆ, ಯಾಕಂದರೆ ಯೆಹೋವನು ನನ್ನ ಸ್ನೇಹಿತನಾಗಿದ್ದಾನೆಂಬುದು ಈಗ ನನಗೆ ತಿಳಿದಿದೆ! ಈ ಸ್ನೇಹವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬ ವಿಷಯದ ಕುರಿತಾದ ಲೇಖನಕ್ಕಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ.a

ಟಿ. ಈ., ಇಟಲಿ

ಹೂವುಗಳು ನಾನು ಹತ್ತು ವರ್ಷ ಪ್ರಾಯದವಳು, ಮತ್ತು “ಹೂವುಗಳು ಯಾವನೊ ಚಿಂತಿಸುತ್ತಾನೆಂಬುದನ್ನು ತೋರಿಸುತ್ತವೆ” (ಎಪ್ರಿಲ್‌ 8, 1997) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ಹೂವುಗಳು ಹೆಚ್ಚು ಸಮಯ ಉಳಿಯುವಂತೆ ಅವುಗಳನ್ನು ಪರಾಮರಿಸುವ ವಿಧವನ್ನು ಅದು ನನಗೆ ಕಲಿಸಿತು.

ಎಲ್‌. ಸಿ., ಇಟಲಿ

ಹೂವುಗಳನ್ನು ಸಂರಕ್ಷಿಸುವ ವಿಧವನ್ನು ನಾನು ಅನೇಕ ವರ್ಷಗಳಿಂದ ತಿಳಿದುಕೊಳ್ಳಲು ಬಯಸಿದ್ದೇನೆ. ಯಾಕಂದರೆ ನನಗೆ ಹೂವುಗಳೆಂದರೆ ತುಂಬ ಇಷ್ಟ. ಆದಾಗಲೂ, ಅವು ಯಾವಾಗಲೂ ತೀರ ಬೇಗನೆ ಬಾಡಿಹೋಗುತ್ತಿದ್ದವು. ಎಚ್ಚರ! ಪತ್ರಿಕೆಯಲ್ಲಿನ ಸಲಹೆಗಳು ನನಗೆ ನಿಜವಾಗಿ ಸಹಾಯಮಾಡಿವೆ. ನೀವು ಮಾಡುತ್ತಿರುವ ಕೆಲಸಕ್ಕಾಗಿ ನಾನು ತುಂಬ ಆಭಾರಿಯಾಗಿದ್ದೇನೆ.

ಜೆ. ಪಿ. ಮೆಕ್ಸಿಕೊ

[ಪಾದಟಿಪ್ಪಣಿ]

a ಜೂನ್‌ 8, 1997ರ ಎಚ್ಚರ! ಪತ್ರಿಕೆಯನ್ನು ನೋಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ