ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 10/8 ಪು. 24
  • ತೊದಲುವಿಕೆ ನಿಂತುಹೋಯಿತು!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತೊದಲುವಿಕೆ ನಿಂತುಹೋಯಿತು!
  • ಎಚ್ಚರ!—1998
  • ಅನುರೂಪ ಮಾಹಿತಿ
  • ‘ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವುದನ್ನೇ’ ಮಾತಾಡಿರಿ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ನಮ್ಮ ವಾಚಕರಿಂದ
    ಎಚ್ಚರ!—1998
  • ನೀವು ‘ಮಾತಲ್ಲಿ ಮಾದರಿಯಾಗಿದ್ದೀರಾ?’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ‘ತೊದಲುಮಾತಿನವರ ನಾಲಿಗೆಯೂ ನುಡಿಯುವದು’
    ಎಚ್ಚರ!—1996
ಇನ್ನಷ್ಟು
ಎಚ್ಚರ!—1998
g98 10/8 ಪು. 24

ತೊದಲುವಿಕೆ ನಿಂತುಹೋಯಿತು!

ಹೆಚ್ಚುಕಡಿಮೆ ಎಂಟು ದಶಕಗಳ ವರೆಗೆ, ಎಚ್ಚರ! ಪತ್ರಿಕೆಯು, ತನ್ನ ಓದುಗರಿಗೆ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಮಾಡಿದೆ. ಕೆಲವೊಮ್ಮೆ, ಇದು ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚೆಗೆ ಆಗಿರುವ ಹೊಸ ವಿಕಸನಗಳಿಗೆ ಮತ್ತು ಮನೋಭಾವಗಳಿಗೆ ಅವರನ್ನು ಜಾಗೃತಗೊಳಿಸುತ್ತದೆ. ಮುಂದಿನ ಕಥೆಯು ತಿಳಿಸುವಂತೆ, ಇದು ಅವರ ಜೀವಿತಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದು.

ಮ್ಯಾಥ್ಯು 1989ರಲ್ಲಿ, ಉತ್ತರ ಇಂಗ್ಲೆಂಡಿನಲ್ಲಿ ಜನಿಸಿದನು. ಎರಡು ವರ್ಷ ಪ್ರಾಯದ ವರೆಗೂ ಅವನು ಒಬ್ಬ ಆರೋಗ್ಯವಂತ ಪುಟ್ಟ ಹುಡುಗನಾಗಿದ್ದನು. ಅನಂತರ ಅವನು ರಜೆಯಲ್ಲಿದ್ದಾಗ, ತೀರ ಅನಿರೀಕ್ಷಿತವಾಗಿ ತುಂಬ ತೊದಲುವುದಕ್ಕೆ ಶುರುಮಾಡಿದ.

ಅವನ ತಾಯಿ ಮಾರ್ಗರೆಟ್‌ ವಿವರಿಸುವುದು, “ನನ್ನ ಪತಿ ಮತ್ತು ನಾನು ಸ್ಥಳಿಕ ವಾಕ್‌ ಚಿಕಿತ್ಸಾಲಯವನ್ನು ಸಂಪರ್ಕಿಸಿದೆವು. ಅವನು ಏಳು ವರ್ಷ ವಯಸ್ಸಿನವನಾಗುವ ತನಕವೂ ಏನೂ ಮಾಡಸಾಧ್ಯವಿಲ್ಲ, ಏಕೆಂದರೆ ಆ ವಯಸ್ಸಿನ ವರೆಗೂ ಮಕ್ಕಳು ತಮ್ಮ ಧ್ವನಿ ತಂತುಗಳನ್ನು ನಿಯಂತ್ರಿಸಲು ಅಶಕ್ತರು ಎಂದು ಅಲ್ಲಿ ನಮಗೆ ಹೇಳಲಾಯಿತು. ಆದರೆ ಮ್ಯಾಥ್ಯು ಶಾಲೆಗೆ ಹೋದಾಗ, ಇತರ ಮಕ್ಕಳು ಅವನನ್ನು ತುಂಬ ಕೀಟಲೆಮಾಡಲು ಆರಂಭಿಸಿದರು. ಅವರೊಂದಿಗೆ ಹೊಂದಿಕೊಂಡು ಹೋಗುವುದು ಅವನಿಗೆ ಕಷ್ಟಕರವಾಗಿತ್ತು. ಇದರಿಂದ ಅವನ ತೊದಲುವಿಕೆಯು ಇನ್ನೂ ಹೆಚ್ಚಾಯಿತು. ಅವನಿಗೆ ಜನರ ಮಧ್ಯೆಯಿರಲು ಇಷ್ಟವಿರಲಿಲ್ಲ. ಹೀಗೆ ಅವನು ಚಿಪ್ಪಿನೊಳಗೆ ಸೇರಿಕೊಂಡ. ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವುದು ಸಹ ಒಂದು ಸವಾಲಾಗಿ ಪರಿಣಮಿಸಿತು.

“ಆಗ ನಾವು, ಎಚ್ಚರ! ಪತ್ರಿಕೆಯ 1995, ಏಪ್ರಿಲ್‌ 8ರ ಸಂಚಿಕೆಯಲ್ಲಿ (ಇಂಗ್ಲಿಷ್‌) ‘ಜಗತ್ತನ್ನು ಗಮನಿಸುವುದು’ ಎಂಬ ಲೇಖನದಲ್ಲಿನ ‘ತೊದಲುವವರಿಗೆ ನಿರೀಕ್ಷೆ’ ಎಂಬ ವಿಷಯವನ್ನು ನೋಡಿದೆವು. ಚಿಕ್ಕ ಮಕ್ಕಳಲ್ಲಿರುವ ತೊದಲುವಿಕೆಯನ್ನು ಯಶಸ್ವಿಕರವಾಗಿ ವಾಸಿಮಾಡಿದ, ಆಸ್ಟ್ರೇಲಿಯದ ಸಿಡ್ನಿಯಲ್ಲಿರುವ ವಾಕ್‌ ವೈದ್ಯರ ಒಂದು ತಂಡದ ಕೆಲಸವನ್ನು ಅದು ಸಂಕ್ಷಿಪ್ತವಾಗಿ ವಿವರಿಸಿತು.

“ನಾವು ಸಿಡ್ನಿಯ ವಿಶ್ವವಿದ್ಯಾನಿಲಯಕ್ಕೆ ಪತ್ರವನ್ನು ಬರೆದೆವು. ಡಾ. ಮಾರ್ಕ್‌ ಆನ್ಸ್‌ಲೋ, ತಮ್ಮನ್ನು ಟೆಲಿಫೋನ್‌ ಮೂಲಕ ಸಂಪರ್ಕಿಸಬೇಕೆಂದು ಕೇಳಿಕೊಳ್ಳುತ್ತಾ ದಯಾಪರವಾಗಿ ಉತ್ತರಿಸಿದರು. ನಾವು ಲೋಕದ ಇನ್ನೊಂದು ಮೂಲೆಯಲ್ಲಿ ವಾಸಿಸುತ್ತಿದ್ದರಿಂದ, ಅವರ ವಾಕ್‌ ವೈದ್ಯರ ತಂಡವು ‘ದೂರ ಚಿಕಿತ್ಸೆ’ಯನ್ನು ಪ್ರಯತ್ನಿಸಲು ನಿರ್ಧರಿಸಿತು. ತಂಡದ ಕಾರ್ಯವೈಖರಿಯ ಬಗ್ಗೆ ಟೆಲಿಫೋನ್‌, ಫ್ಯಾಕ್ಸ್‌, ಮತ್ತು ಆಡಿಯೋಟೇಪಿನ ಮೂಲಕ ನಮಗೆ ನಿರ್ದೇಶಿಸಲಾಯಿತು. ಆ ಚಿಕಿತ್ಸೆಯನ್ನು, ಮ್ಯಾಥ್ಯುವಿನ ವೈಯಕ್ತಿಕ ಅಗತ್ಯಗಳಿಗೆ ಅನುಸಾರವಾಗಿ ಹೊಂದಿಸಲಾಯಿತು. ನಾನು ಅವನೊಟ್ಟಿಗೆ ಕುಳಿತುಕೊಂಡು, ಆರಾಮವಾಗಿ, ಅವನಿಗೆ ಸರಿಯಾಗಿ ಉಚ್ಚರಿಸಲಾಗದ ಪದಗಳನ್ನು ಸರಿಪಡಿಸಲು ವೈಯಕ್ತಿಕವಾಗಿ ಸಹಾಯಮಾಡುತ್ತಿದ್ದೆ. ‘ತಡವರಿಸದ’ ಮಾತಿಗೆ ನಾನು ಅವನನ್ನು ಧಾರಾಳವಾಗಿ ಶ್ಲಾಘಿಸುತ್ತಿದ್ದೆ ಮತ್ತು ಚಿಕ್ಕಪುಟ್ಟ ಬಹುಮಾನಗಳನ್ನು ಕೊಡುತ್ತಿದ್ದೆ.

“ಆರು ತಿಂಗಳುಗಳ ಬಳಿಕ, ಮ್ಯಾಥ್ಯು ಇನ್ನು ಮುಂದೆ, ತನ್ನದೇ ಆದ ಒಂದು ಸ್ವಂತ ಪುಟ್ಟ ಲೋಕದಲ್ಲಿ ವಾಸಿಸುತ್ತಿದ್ದ ಒಬ್ಬ ಅಂತರ್ಮುಖಿಯಾಗಿರಲಿಲ್ಲ, ಬದಲಿಗೆ ಅವನು ಒಬ್ಬ ಸಹಜ, ಹರ್ಷಭರಿತ, ಸ್ನೇಹಶೀಲ ಹುಡುಗನಾಗಿ ಪರಿಣಮಿಸಿದ. ಈಗ ಅವನು ಸಭಾಕೂಟಗಳಲ್ಲಿ ಉತ್ತರಗಳನ್ನು ಕೊಡುತ್ತಾನೆ ಮತ್ತು ರಾಜ್ಯ ಸಭಾಗೃಹದಲ್ಲಿ ಬೈಬಲ್‌ ಓದುವಿಕೆಯನ್ನು ನೀಡುವುದರಲ್ಲಿ ಅವನು ತುಂಬ ಆನಂದಿಸುತ್ತಾನೆ. ಮನೆಮನೆಯ ಶುಶ್ರೂಷೆಯಲ್ಲಿ ಸಹ ಅವನು ಒಂದು ಅರ್ಥಭರಿತ ಪಾಲನ್ನು ತೆಗೆದುಕೊಳ್ಳುತ್ತಾನೆ. ಅವನ ಮಾತು ಈಗ ಸಹಜ ರೀತಿಯಲ್ಲಿದೆ!

“ನಮ್ಮ ಮಗನ ಜೀವಿತವನ್ನೇ ಬದಲಾಯಿಸಿರುವ, ಎಚ್ಚರ! ಪತ್ರಿಕೆಯಲ್ಲಿ ನೀಡಲ್ಪಟ್ಟ ಆ ಸುದ್ದಿಗಳ ತುಣುಕುಗಳಿಗಾಗಿ ನಾವು ತುಂಬ ಆಭಾರಿಯಾಗಿದ್ದೇವೆ!”—ದತ್ತಲೇಖನ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ