ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g01 4/8 ಪು. 14
  • ತರಕಾರಿಗಳನ್ನು ತಿನ್ನಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತರಕಾರಿಗಳನ್ನು ತಿನ್ನಿರಿ!
  • ಎಚ್ಚರ!—2001
  • ಅನುರೂಪ ಮಾಹಿತಿ
  • ಹಿತಕರವಾದ ಆಹಾರವು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಲ್ಲ ವಿಧ
    ಎಚ್ಚರ!—1995
  • ಸಲಹೆ 1 ಒಳ್ಳೇ ಆಹಾರ ಸೇವಿಸಿ
    ಎಚ್ಚರ!—2011
  • ಆಹಾರದ ಸುರಕ್ಷತೆಗೆ ಪಾಲಿಸಬೇಕಾದ 7 ಹೆಜ್ಜೆಗಳು
    ಇತರ ವಿಷಯಗಳು
  • ನಿಮ್ಮ ತಿನ್ನುವಿಕೆಯನ್ನು ನಿರಪಾಯಕರವಾಗಿ ಮಾಡಿರಿ
    ಎಚ್ಚರ!—1990
ಇನ್ನಷ್ಟು
ಎಚ್ಚರ!—2001
g01 4/8 ಪು. 14

ತರಕಾರಿಗಳನ್ನು ತಿನ್ನಿರಿ!

ಬ್ರಸಿಲ್‌ನ ಎಚ್ಚರ! ಲೇಖಕನಿಂದ

“ಅವು ತುಂಬ ಕಹಿಯಾಗಿವೆ.” “ಅವುಗಳ ರುಚಿ ನನಗೆ ಇಷ್ಟವಿಲ್ಲ.” “ಅವುಗಳನ್ನು ನಾನು ತಿಂದೇ ಇಲ್ಲ.”

ಅನೇಕರು ತರಕಾರಿಗಳನ್ನು ತಿನ್ನಲು ಏಕೆ ಇಷ್ಟಪಡುವುದಿಲ್ಲ ಎಂಬುದಕ್ಕೆ ಇವು ಕೆಲವೇ ಕಾರಣಗಳಾಗಿವೆ. ನಿಮ್ಮ ಕುರಿತಾಗಿ ಏನು? ನೀವು ದಿನಾಲು ತರಕಾರಿಗಳನ್ನು ತಿನ್ನುತ್ತೀರೋ? ಕೆಲವು ಜನರು ಏಕೆ ತರಕಾರಿಗಳನ್ನು ಇಷ್ಟಪಡುತ್ತಾರೆ ಮತ್ತು ಉಳಿದವರು ಇಷ್ಟಪಡುವುದಿಲ್ಲ ಎಂಬುದನ್ನು ಕಂಡುಹಿಡಿಯಲಿಕ್ಕಾಗಿ, ಎಚ್ಚರ! ಪತ್ರಿಕೆಯು ಇಂಟರ್‌ವ್ಯೂಗಳನ್ನು ನಡೆಸಿತು.

ತರಕಾರಿಗಳನ್ನು ತಿನ್ನುವವರು, ತರಕಾರಿ, ದ್ವಿದಳಧಾನ್ಯ ಹಾಗೂ ಹಣ್ಣನ್ನು ತಿನ್ನುವುದರ ಮಹತ್ವವನ್ನು ತಮ್ಮ ಹೆತ್ತವರು ಕಲಿಸಿಕೊಟ್ಟಿದ್ದರು ಎಂದು ಹೇಳುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ತರಕಾರಿಗಳನ್ನು ಇಷ್ಟಪಡದಂಥ ಅನೇಕರಿಗೆ ಚಿಕ್ಕಂದಿನಿಂದಲೂ ತರಕಾರಿಗಳನ್ನು ತಿನ್ನುವ ರೂಢಿಯಿರಲಿಲ್ಲ. ಬದಲಾಗಿ, ಪೌಷ್ಟಿಕವಲ್ಲದಿದ್ದರೂ ಬಾಯಿಗೆ ರುಚಿಕರವಾದ ಆಹಾರವನ್ನು ತಿನ್ನಲು ಅವರು ಇಷ್ಟಪಡುತ್ತಾರೆ. ಹಾಗಿದ್ದರೂ, ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ತರಕಾರಿಗಳು ಪ್ರಾಮುಖ್ಯವಾಗಿವೆ ಎಂಬುದನ್ನು ಇವರು ಒಪ್ಪಿಕೊಳ್ಳುತ್ತಾರೆ.

ಹೆತ್ತವರೇ, ನಿಮ್ಮ ಮಕ್ಕಳಿಗೆ ತರಕಾರಿಗಳನ್ನು ತಿನ್ನಲು ಕಲಿಸಿರಿ! ಹೇಗೆ? ವಿಶ್ವಸಂಸ್ಥೆಯ ಮಕ್ಕಳ ನಿಧಿ ಸಂಸ್ಥೆಯಿಂದ ಪ್ರಕಾಶಿಸಲ್ಪಟ್ಟ ಜೀವನಕ್ಕಾಗಿ ವಾಸ್ತವಾಂಶಗಳು (ಇಂಗ್ಲಿಷ್‌) ಎಂಬ ಪುಸ್ತಕವು ಈ ಸಲಹೆಯನ್ನು ನೀಡುತ್ತದೆ: ಆರು ತಿಂಗಳ ಮಗುವಿಗೆ ಪ್ರತಿದಿನ ಎದೆ ಹಾಲನ್ನು ಅಥವಾ ಬಾಟಲಿ ಹಾಲನ್ನು ಕುಡಿಸಿದ ನಂತರ, ಬೇಯಿಸಿ, ಸಿಪ್ಪೆ ತೆಗೆದು, ಚೆನ್ನಾಗಿ ಅರೆದ ತರಕಾರಿಗಳನ್ನು ಕೊಡಬಹುದು. ಮಗುವಿಗೆ ಬೇರೆ ಬೇರೆ ಬಗೆಯ ಆಹಾರವನ್ನು ಎಷ್ಟರ ಮಟ್ಟಿಗೆ ಕೊಡುತ್ತೀರೋ ಅಷ್ಟರ ಮಟ್ಟಿಗೆ ಅದರ ಆರೋಗ್ಯವು ಉತ್ತಮಗೊಳ್ಳುವುದು. ಬ್ರಸಿಲ್‌ನ ಮಕ್ಕಳ ತಜ್ಞರಾದ ಡಾ. ವಾಗ್‌ನರ್‌ ಲಾಪಾಟೆ ಹೇಳಿದ್ದೇನೆಂದರೆ, ಮೊದಲ ಎರಡು ವರ್ಷಗಳಲ್ಲಿ ಹಾಲು ಪ್ರಧಾನವಾದ ಆಹಾರವಾಗಿದ್ದರೂ ಬೇರೆ ಆಹಾರಗಳನ್ನು ಪರಿಚಯಿಸುವುದು “ಹೊಸ ರುಚಿಗಳನ್ನು ಕಂಡುಹಿಡಿಯಲು ಮಗುವಿಗೆ ಸಹಾಯಮಾಡುತ್ತದೆ.”

ಮೆಡಿಸಿನಾ​—⁠ಮೀಟಾಸ್‌ ಇ ವರ್ಡಾಡಿಸ್‌ (ಔಷಧ​—⁠ಕಟ್ಟುಕಥೆಗಳು ಹಾಗೂ ನಿಜಾಂಶಗಳು) ಎಂಬ ಪುಸ್ತಕದಲ್ಲಿ ಕಾರ್ಲ್‌ ಲಿಯಾನಲ್‌ ಹೀಗೆ ಸಲಹೆ ನೀಡುತ್ತಾರೆ: ಸ್ವಲ್ಪ ಪ್ರಮಾಣದಲ್ಲಿ ಕಿತ್ತಲೆ ಹಣ್ಣಿನ ಜೂಸನ್ನು, ಅರೆದು ತಯಾರಿಸಿದ ಹಣ್ಣುಗಳ (ಬಾಳೆಹಣ್ಣು, ಸೇಬು ಮತ್ತು ಪರಂಗಿಯಂತಹ ಹಣ್ಣುಗಳ) ಮಿಶ್ರಣ, ಧಾನ್ಯದಿಂದ ತಯಾರಿಸಿದ ತಿಂಡಿ (ಸೀರಿಯಲ್‌) ಮತ್ತು ತರಕಾರಿ ಸೂಪನ್ನು, ಮೇಲೆ ಸೂಚಿಸಿರುವ ಸಮಯಕ್ಕಿಂತ ಮುಂಚೆಯೇ ಮಗುವಿನ ಆಹಾರದಲ್ಲಿ ಉಪಯೋಗಿಸಲು ಆರಂಭಿಸಬಹುದು. ಇದರ ಕುರಿತಾದ ಅಭಿಪ್ರಾಯಗಳು ಭಿನ್ನವಾಗಿರುವುದರಿಂದ, ನೀವು ನಿಮ್ಮ ಶಿಶುವೈದ್ಯರನ್ನು ಸಂಪರ್ಕಿಸುವುದೇ ವಿವೇಕಯುತವಾದದ್ದಾಗಿದೆ.(g01 1/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ