ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 1/06 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—2006
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಐ. ಕೆ., ರಷ್ಯಾ
  • ನಿರ್ದೇಶನಗಳು ಎಲ್ಲಿಂದ ಬರುತ್ತೆ?
    ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ
  • ಪುಟಾಣಿ ಡಿಎನ್‌ಎ ಅಪಾರ ಶೇಖರಣೆ
    ಎಚ್ಚರ!—2014
  • ಪರಿವಿಡಿ
    ಎಚ್ಚರ!—2005
  • “ನೋಡಿದರೂ ಅರ್ಥ ಆಗಲಿಲ್ಲ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಎಚ್ಚರ!—2006
g 1/06 ಪು. 30

ನಮ್ಮ ವಾಚಕರಿಂದ

ತಾಯಂದಿರು “ಶಿಕ್ಷಕರೋಪಾದಿ ತಾಯಂದಿರ ಪಾತ್ರ” ಎಂಬ ಸುಂದರವಾಗಿ ಬರೆಯಲ್ಪಟ್ಟ ಲೇಖನಮಾಲೆಗಾಗಿ ನಿಮಗೆ ಧನ್ಯವಾದಗಳು. (ಏಪ್ರಿಲ್‌-ಜೂನ್‌, 2005) ಅದು ನಿಜವಾಗಿಯೂ ನನ್ನ ಹೃದಯವನ್ನು ಸ್ಪರ್ಶಿಸಿತು ಮತ್ತು ಅದನ್ನು ಓದಿ ಮುಗಿಸಿದ ಕೂಡಲೆ ನನ್ನ ಅಮ್ಮನಿಗೆ ಫೋನ್‌ಮಾಡುವಂತೆ ನನ್ನನ್ನು ಪ್ರಚೋದಿಸಿತು. ಒಂಟಿಯಾಗಿಯೇ ನನ್ನ ತಾಯಿಯವರು ಅಣ್ಣನನ್ನು ಮತ್ತು ನನ್ನನ್ನು ಬೆಳೆಸಿದರು. ನಮ್ಮನ್ನು ಪೋಷಿಸಲು ಸಾಧ್ಯವಾಗುವಂತೆ ಅವರು ಇನ್ನೂ ಹೆಚ್ಚಿನ ಶಿಕ್ಷಣವನ್ನು ಪಡೆದುಕೊಳ್ಳಲಿಕ್ಕಾಗಿ ಹಣವನ್ನು ತೆತ್ತರು. ನಾವು ಕ್ರೈಸ್ತ ಕೂಟಗಳಲ್ಲಿ ಮತ್ತು ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುತ್ತೇವೆ ಎಂಬುದನ್ನು ಅವರು ಖಚಿತಪಡಿಸಿಕೊಂಡರು. ಅವರ ಪ್ರಯತ್ನವು ಒಳ್ಳೇ ಫಲಿತಾಂಶಗಳನ್ನು ನೀಡಿತು. ಅವರ ಅತ್ಯುತ್ತಮ ಮಾದರಿಯನ್ನು ನನಗೆ ಜ್ಞಾಪಿಸಿದ್ದಕ್ಕಾಗಿ ನಿಮಗೆ ಉಪಕಾರಗಳು.

ಎಂ. ಎಸ್‌., ಯುನೈಟೆಡ್‌ ಸ್ಟೇಟ್ಸ್‌

ನನಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣವನ್ನು ನೀಡಲಿಕ್ಕಾಗಿ ನನ್ನ ತಾಯಿಯು ಮಾಡಿದ ಸ್ವತ್ಯಾಗದ ಪ್ರಯತ್ನಗಳು ನನ್ನ ನೆನಪಿಗೆ ಬಂದವು. ಅವರಿಗೆ ನನ್ನ ತಂದೆಯ ಭಾವನಾತ್ಮಕ ಹಾಗೂ ಹಣಕಾಸಿನ ಬೆಂಬಲವು ಇರಲಿಲ್ಲವಾದರೂ ಅವರು ನನಗೆ ಯೆಹೋವನನ್ನು ಪ್ರೀತಿಸಲು ಕಲಿಸಿದರು. ಅವರು ನನಗೆ ಪೂರ್ಣ ಸಮಯದ ಸೌವಾರ್ತಿಕಳಾಗಲು ಸಹ ಉತ್ತೇಜಿಸಿದರು. ನನ್ನ ತಾಯಿಯ ಪ್ರಯತ್ನಗಳನ್ನು ನಾನು ಹೆಚ್ಚು ಮಾನ್ಯಮಾಡಲಿಲ್ಲ ಎಂಬ ಅನಿಸಿಕೆ ನನಗಿದೆ, ಆದರೆ ಈ ಲೇಖನಮಾಲೆಯು ಸೂಚಿಸಿದಂತೆ ಅವರು ಪ್ರಶಂಸೆಗೆ ಅರ್ಹರಾಗಿದ್ದಾರೆ. ಅವರಿಗೆ ಥ್ಯಾಂಕ್ಸ್‌ ಹೇಳಲಿಕ್ಕಾಗಿ ನಾನು, ದೂರದ ದೇಶದಲ್ಲಿರುವ ಅವರಿಗೆ ಫೋನ್‌ಮಾಡಿದೆ!

ಚ. ಏಚ್‌. ಕೆ., ರಿಪಬ್ಲಿಕ್‌ ಆಫ್‌ ಕೊರಿಯ

ನನ್ನ ತಂದೆಯವರು ಒಬ್ಬ ಯೆಹೋವನ ಸಾಕ್ಷಿಯಲ್ಲ. “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ನನ್ನನ್ನು ಸಾಕಿಸಲಹಿದವರು ನನ್ನ ತಾಯಿ. (ಎಫೆಸ 6:​4, NW) ಕೆಲವೊಮ್ಮೆ ನಾನು ತೋರಿಸುತ್ತಿದ್ದ ಮನೋಭಾವವನ್ನು ಪರಿಗಣಿಸುವಾಗ, ಈ ರೀತಿಯಲ್ಲಿ ನನ್ನನ್ನು ಬೆಳೆಸುವುದು ಅವರಿಗೆ ಸುಲಭವಾಗಿರಲಿಲ್ಲ. ಈಗ ನನ್ನ ವಯಸ್ಸು 24 ವರ್ಷ ಮತ್ತು ಅವರು ಪ್ರಯತ್ನವನ್ನು ಕೈಬಿಡದೆ ಪಟ್ಟುಹಿಡಿದು ನನ್ನ ಹೃದಯದಲ್ಲಿ ಬೈಬಲ್‌ ಸತ್ಯವನ್ನು ತುಂಬಿಸಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ.

ಡಿ. ಎಮ್‌., ಇಟಲಿ (g05 12/8)

ಟೊಮಾಟೊಗಳು ನಾನು 12 ವರ್ಷದವಳು, ಮತ್ತು “ಟೊಮಾಟೊ​—⁠ಬಹೂಪಯೋಗಿ ‘ತರಕಾರಿ’” ಎಂಬ ಲೇಖನ ನನಗೆ ತುಂಬ ಇಷ್ಟವಾಯಿತು. (ಏಪ್ರಿಲ್‌-ಜೂನ್‌, 2005) ವಿವಿಧ ರೀತಿಯ ಸ್ವಾದಿಷ್ಟಕರ ತರಕಾರಿಗಳನ್ನು ಸೃಷ್ಟಿಸಿರುವುದಕ್ಕಾಗಿ ನಾನು ಯೆಹೋವನಿಗೆ ತುಂಬ ಆಭಾರಿಯಾಗಿದ್ದೇನೆ. ಪಟ್ಟೆಗಳಿರುವ ಟೊಮಾಟೊಗಳು ಸಹ ಇವೆ ಎಂಬುದನ್ನು ಓದಿ ನನಗೆ ಆಶ್ಚರ್ಯವಾಯಿತು! ಇಂಥ ರೋಮಾಂಚಕ ಲೇಖನಗಳಿಗಾಗಿ ನಿಮಗೆ ಧನ್ಯವಾದಗಳು.

ಎಮ್‌. ಎಫ್‌., ಲ್ಯಾಟ್‌ವಿಯ

ಮೊಸಳೆಗಳು “ಮೊಸಳೆಯನ್ನು ನೋಡಿ ನಸುನಗೆ ಬೀರಬಲ್ಲಿರೋ?” ಎಂಬ ಲೇಖನದಿಂದ ನಾನು ಬಹಳಷ್ಟು ಪ್ರಭಾವಿತಳಾದೆ. (ಏಪ್ರಿಲ್‌-ಜೂನ್‌, 2005) ನಾನು ಯಾವಾಗಲೂ ಮೊಸಳೆಯನ್ನು ಅದ್ಭುತಕರವಾದ ಸೃಷ್ಟಿಜೀವಿಯಾಗಿ ಪರಿಗಣಿಸಿದ್ದೇನೆ. ನಾನು ಮೊಸಳೆಗಳನ್ನು ಇಷ್ಟಪಡುವಷ್ಟೇ ಇತರರು ಸಹ ಅದನ್ನು ಇಷ್ಟಪಡುವಂತೆ ಅವರನ್ನು ಪ್ರಚೋದಿಸಸಾಧ್ಯವಿರುವ ಅನೇಕ ಆಸಕ್ತಿಕರ ವಾಸ್ತವಾಂಶಗಳನ್ನು ಓದಿ ನಾನು ಸಂತೋಷಗೊಂಡೆ. ನಾವು ಮೊಸಳೆಗಳ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳಸಾಧ್ಯವಿರುವ ಯೆಹೋವನ ಹೊಸ ಲೋಕಕ್ಕಾಗಿ ನಾನು ಎದುರುನೋಡುತ್ತಿದ್ದೇನೆ!

ಎಲ್‌. ಐ., ಯುನೈಟೆಡ್‌ ಸ್ಟೇಟ್ಸ್‌

ನಮ್ಮ ವಾಚಕರಿಂದ ಹುಟ್ಟಿದಂದಿನಿಂದಲೂ ನನಗೆ ಎಲುಬಿನ ರೋಗವಿದೆ. “ಮೈಲೀನ್‌ಗೆ ಒಂದು ಹೊಸ ಮುಖ” (ಜುಲೈ-ಸೆಪ್ಟೆಂಬರ್‌, 2004) ಎಂಬ ಲೇಖನದ ಕುರಿತು “ನಮ್ಮ ವಾಚಕರಿಂದ” (ಏಪ್ರಿಲ್‌-ಜೂನ್‌, 2005) ಲೇಖನದಲ್ಲಿ ಕಂಡುಬಂದ ಹೃದಯಸ್ಪರ್ಶಿ, ಉತ್ತೇಜಕ ಪತ್ರಗಳು ನನಗೆ ಕಣ್ಣೀರನ್ನು ಬರಿಸಿದವು. ಪ್ರತಿಯೊಂದು ಪತ್ರದಲ್ಲಿ ನನಗೆ ವಿಶೇಷವಾಗಿ ಅರ್ಥಭರಿತವಾಗಿದ್ದ ಮತ್ತು ನಾನು ವೈಯಕ್ತಿಕವಾಗಿ ಪ್ರಯೋಜನ ಪಡೆದುಕೊಳ್ಳಸಾಧ್ಯವಿದ್ದ ಒಂದು ನಿರ್ದಿಷ್ಟ ಅಂಶವಿತ್ತು.

ಎಮ್‌. ಜೆ., ಬ್ರಿಟನ್‌ (g05 12/22)

ಮಕ್ಕಳು ಇತ್ತೀಚೆಗೆ ನಾನು “ಮಗುವಿನ ಆರಂಭದ ವರುಷಗಳು​—⁠ಹೆತ್ತವರು ಏನು ಮಾಡಬೇಕು?” ಎಂಬ ಲೇಖನಮಾಲೆಯನ್ನು ಓದಿದೆ. (ಜನವರಿ-ಮಾರ್ಚ್‌, 2005) ಈ ಲೇಖನಗಳು ನನ್ನ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದವೆಂದರೆ, ನಾನು ಈ ಪತ್ರವನ್ನು ಬರೆಯಲು ನಿರ್ಧರಿಸಿದೆ. ಇನ್ನೇನು ಐದು ವರ್ಷ ತುಂಬಲಿಕ್ಕಿರುವ ಒಬ್ಬ ಮಗಳು ನನಗಿದ್ದಾಳೆ. ಅವಳ ಸಮಯದ ಪ್ರತಿಯೊಂದು ಕ್ಷಣವನ್ನು ನಾನು ನಿಖರವಾಗಿ ಯೋಜಿಸಬೇಕು ಎಂಬುದು ನನ್ನ ಆಲೋಚನೆಯಾಗಿತ್ತು. ಆದರೆ, ಮಕ್ಕಳು ಇತರರ ಸಲಹೆಸೂಚನೆಗಳಿಲ್ಲದೆ ಆಟವಾಡಲು ಸಮಯವನ್ನು ಬದಿಗಿರಿಸುವುದು ವಾಸ್ತವದಲ್ಲಿ ಅಗತ್ಯವಾದದ್ದಾಗಿದೆ, ಏಕೆಂದರೆ ಇದು ಅವರಲ್ಲಿ ಸೃಜನಶೀಲತೆಯನ್ನು ಪ್ರಚೋದಿಸುತ್ತದೆ ಮತ್ತು ಒಂದು ಮಗುವಿನ ಸಾಮಾಜಿಕ, ಮಾನಸಿಕ ಹಾಗೂ ಭಾವನಾತ್ಮಕ ಕೌಶಲಗಳನ್ನು ವಿಕಸಿಸುತ್ತದೆ ಎಂಬುದು ಕೆಲವು ಶಿಕ್ಷಕರ ಅನಿಸಿಕೆಯಾಗಿದೆ ಎಂದು ನಿಮ್ಮ ಪತ್ರಿಕೆಯು ತಿಳಿಸಿತು. ನಿಮಗೆ ತುಂಬ ಧನ್ಯವಾದಗಳು! ದಯವಿಟ್ಟು ಇಂಥ ವಿಷಯಗಳ ಕುರಿತಾದ ಲೇಖನಗಳನ್ನು ಪ್ರಕಟಿಸುತ್ತಾ ಇರಿ!

ಐ. ಕೆ., ರಷ್ಯಾ

ನಾನು ಈ ಲೇಖನಮಾಲೆಯನ್ನು ಓದಿದಾಗ, ನನಗೆ ಕಣ್ಣೀರನ್ನು ತಡೆಹಿಡಿಯಲಾಗಲಿಲ್ಲ. 29 ವರ್ಷಗಳ ಹಿಂದೆ ನನಗೆ ಒಂದು ಮಗು ಹುಟ್ಟಿದ್ದು, ಆಗ ನಾನು ಯೆಹೋವನನ್ನು ಸೇವಿಸದಿದ್ದ ಒಬ್ಬ ತಾಯಿಯಾಗಿದ್ದದ್ದು ನನ್ನ ನೆನಪಿಗೆ ಬಂತು. ನಾನು ಅನೇಕ ತಪ್ಪುಗಳನ್ನು ಮಾಡಿದ್ದೆ. ಆದರೆ ನನ್ನ ವಿಷಾದದ ಕಣ್ಣೀರು ಆನಂದದ ಕಣ್ಣೀರಾಗಿ ಬದಲಾಯಿತು. ಒಂದು ವಾರಕ್ಕೆ ಮುಂಚೆ ನನ್ನ ಮಗಳಿಗೆ ಅವಳ ಮೊದಲ ಮಗು ಹುಟ್ಟಿತು. ನನ್ನ ಮೊಮ್ಮಗುವಿಗೆ ಯೆಹೋವನನ್ನು ಪ್ರೀತಿಸುವ ಮತ್ತು ಇಂಥ ಲೇಖನಗಳಿಂದ ಪ್ರಯೋಜನ ಪಡೆಯುವ ಹೆತ್ತವರು ಇರುವುದಕ್ಕಾಗಿ ನಾನು ಯೆಹೋವನಿಗೆ ಆಭಾರಿಯಾಗಿದ್ದೇನೆ.

ಇ. ಏಚ್‌., ಯುನೈಟೆಡ್‌ ಸ್ಟೇಟ್ಸ್‌ (g05 8/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ