ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/07 ಪು. 3
  • ಒಳ್ಳೇ ಸಲಹೆ ಪಡೆಯಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಳ್ಳೇ ಸಲಹೆ ಪಡೆಯಿರಿ
  • ಎಚ್ಚರ!—2007
  • ಅನುರೂಪ ಮಾಹಿತಿ
  • “ಪರಿಣತರ” ಏಳುಬೀಳುಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಮಕ್ಕಳನ್ನು ಬೆಳೆಸಲು ಭರವಸಾರ್ಹ ಸಲಹೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಒಳ್ಳೆ ಸಲಹೆ ಪಡ್ಕೊಳ್ಳೋಕೆ ಏನು ಮಾಡಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಒಳ್ಳೆ ಸಲಹೆ ಕೊಡೋಕೆ ಏನು ಮಾಡಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಎಚ್ಚರ!—2007
g 10/07 ಪು. 3

ಹೆಜ್ಜೆ 1

ಒಳ್ಳೇ ಸಲಹೆ ಪಡೆಯಿರಿ

ಏಕೆ ಅಗತ್ಯ? ಒಬ್ಬ ತಂದೆತಾಯಿ ತಮ್ಮ ನವಜಾತ ಕಂದನನ್ನು ಪ್ರಥಮಬಾರಿ ತೋಳುಗಳಲ್ಲಿ ಎತ್ತಿಕೊಳ್ಳುವಾಗ ಅವರಲ್ಲಿ ಮಿಶ್ರ ಭಾವನೆಗಳು ಉಕ್ಕೇರುತ್ತವೆ. “ನನಗೆ ತುಂಬ ಆನಂದವೂ ಆಶ್ಚರ್ಯವೂ ಆಯಿತು. ಅದೇ ಸಮಯದಲ್ಲಿ ನನ್ನ ಮೇಲೆ ಒಂದು ದೊಡ್ಡ ಜವಾಬ್ದಾರಿ ಬಂದಂತೆ ಹಾಗೂ ಅದಕ್ಕೆ ನಾನು ಸಿದ್ಧನಿಲ್ಲವೆಂದೂ ನನಗನಿಸಿತು” ಎಂದು ಬ್ರಿಟನ್‌ನ ನಿವಾಸಿ ಬ್ರೆಟ್‌ ಎಂಬ ತಂದೆಯೊಬ್ಬನು ಹೇಳಿದನು. ಆರ್ಜೆಂಟೀನದ ನಿವಾಸಿಯಾದ ಮೋನಿಕಾ ಎಂಬ ತಾಯಿಯೋರ್ವಳು ಹೇಳುವುದು: “ನನ್ನ ಕಂದಮ್ಮಳ ಅಗತ್ಯಗಳನ್ನು ಪೂರೈಸಲು ಶಕ್ತಳಾಗುವೆನೋ ಎಂಬ ಚಿಂತೆ ನನ್ನಲ್ಲಿ ಹುಟ್ಟಿಕೊಂಡಿತು. ‘ಅವಳು ಬೆಳೆದು ಒಬ್ಬ ಜವಾಬ್ದಾರಿಯುತ ಹುಡುಗಿಯಾಗುವಂತೆ ಬೇಕಾದ ತರಬೇತಿ ಕೊಡಲು ಶಕ್ತಳಾಗಿರುವೆನೋ?’ ಎಂದು ಚಿಂತಿಸಿದೆ.”

ಈ ಹೆತ್ತವರ ಆನಂದ ಹಾಗೂ ಭಯವನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರೋ? ಒಬ್ಬ ಮಾನವನು ಮಾಡಪ್ರಯತ್ನಿಸುವ ಕೆಲಸಗಳಲ್ಲಿ, ಮಕ್ಕಳನ್ನು ಬೆಳೆಸುವುದು ಅತ್ಯಂತ ಕಷ್ಟಕರವಾದರೂ ತುಂಬ ತೃಪ್ತಿಕರವಾದ ಕೆಲಸವಾಗಿದೆ. ಹತಾಶೆಗೊಳಿಸುವಂಥದ್ದು ಹೌದು, ಆದರೆ ಪ್ರತಿಫಲದಾಯಕವೂ ಆಗಿದೆ. ಒಬ್ಬ ತಂದೆ ಹೇಳಿದಂತೆ, “ನಿಮ್ಮ ಮಗುವನ್ನು ಬೆಳೆಸುವ ಅವಕಾಶ ನಿಮಗೆ ಸಿಗುವುದು ಕೇವಲ ಒಮ್ಮೆ ಮಾತ್ರ.” ಮಕ್ಕಳ ಆರೋಗ್ಯ ಹಾಗೂ ಸಂತೋಷ ಬಹಳಷ್ಟು ಮಟ್ಟಿಗೆ ಹೆತ್ತವರ ಮೇಲೆ ಅವಲಂಬಿಸಿರುವುದರಿಂದ, ಒಳ್ಳೇ ಹೆತ್ತವರಾಗುವುದು ಹೇಗೆಂಬುದರ ಬಗ್ಗೆ ಭರವಸಾರ್ಹ ಸಲಹೆ ತುಂಬ ಅಗತ್ಯವೆಂದು ನಿಮಗನಿಸಬಹುದು.

ಸಮಸ್ಯೆ: ಮಕ್ಕಳನ್ನು ಬೆಳೆಸುವುದರ ಬಗ್ಗೆ ಸಿಗುವ ಸಲಹೆಗೆ ಅಭಾವವೇ ಇಲ್ಲ ಎಂಬಂತೆ ತೋರುತ್ತದೆ. ಹಿಂದಿನ ಕಾಲದಲ್ಲಿ ಹೆತ್ತವರು ಮಾರ್ಗದರ್ಶನಕ್ಕಾಗಿ ತಮ್ಮ ತಂದೆತಾಯಿಗಳ ಮಾದರಿ ಇಲ್ಲವೆ ತಮ್ಮ ಧಾರ್ಮಿಕ ಅಭಿಪ್ರಾಯಗಳ ಮೇಲೆ ಅವಲಂಬಿಸುತ್ತಿದ್ದರು. ಆದರೆ ಇಂದು ಅನೇಕಾನೇಕ ದೇಶಗಳಲ್ಲಿ ಕುಟುಂಬವೆಂಬ ಘಟಕವು ಕುಸಿಯುತ್ತಿದೆ. ಧರ್ಮವೂ ಅದರ ಪ್ರಭಾವವನ್ನು ಕಳೆದುಕೊಂಡಿದೆ. ಇದರಿಂದಾಗಿ ಅನೇಕ ಹೆತ್ತವರು ಸಲಹೆಗಾಗಿ ವೃತ್ತಿಪರ ಪರಿಣತರ ಮೊರೆಹೋಗುತ್ತಿದ್ದಾರೆ. ಈ ಪರಿಣತರಲ್ಲಿ ಕೆಲವರು ಕೊಡುವ ಸಲಹೆಸೂಚನೆಗಳು ದೃಢವಾದ ಮೂಲತತ್ತ್ವಗಳ ಮೇಲಾಧರಿತವಾಗಿರುತ್ತವೆ. ಇನ್ನಿತರರ ಸಲಹೆಗಳು ಪರಸ್ಪರ ವಿರುದ್ಧವಾಗಿರಬಹುದು ಮತ್ತು ಸ್ವಲ್ಪ ಸಮಯದೊಳಗೇ ಹಳತಾಗಿ ಹೋಗಬಹುದು.

ಪರಿಹಾರ: ಮಕ್ಕಳನ್ನು ಬೆಳೆಸುವುದರ ಬಗ್ಗೆ ಸಮಗ್ರ ಜ್ಞಾನವಿರುವಾತನ ಸಲಹೆಯನ್ನು ಬೇಡಿಕೊಳ್ಳಿ. ಆತನು ಮನುಷ್ಯನ ಸೃಷ್ಟಿಕರ್ತನಾದ ಯೆಹೋವ ದೇವರೇ. (ಅ. ಕೃತ್ಯಗಳು 17:​26-28) ಆತನ ವಾಕ್ಯವಾದ ಬೈಬಲಿನಲ್ಲಿ ನೇರವಾದ ಸಲಹೆ ಹಾಗೂ ವ್ಯಾವಹಾರಿಕ ಉದಾಹರಣೆಗಳಿವೆ. ಇವು ನಿಮಗೆ ಒಳ್ಳೇ ಹೆತ್ತವರಾಗುವಂತೆ ಸಹಾಯಮಾಡಬಲ್ಲವು. “ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು” ಎಂದು ಯೆಹೋವನು ಮಾತುಕೊಡುತ್ತಾನೆ.​—⁠ಕೀರ್ತನೆ 32:⁠8.

ಮಕ್ಕಳು ಸಂತೋಷದಿಂದ ಬೆಳೆಯುವಂತೆ ಸಹಾಯಮಾಡುವ ಯಾವ ಸಲಹೆಯನ್ನು ದೇವರು ಹೆತ್ತವರಿಗೆ ಕೊಡುತ್ತಾನೆ? (g 8/07)

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.”​—⁠ಜ್ಞಾನೋಕ್ತಿ 3:⁠5

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ