ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w06 11/1 ಪು. 3
  • “ಪರಿಣತರ” ಏಳುಬೀಳುಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಪರಿಣತರ” ಏಳುಬೀಳುಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪುಸ್ತಕಗಳ ಮೂಲಕ ಪಾಲಕತ್ವ
  • ಒಳ್ಳೇ ಸಲಹೆ ಪಡೆಯಿರಿ
    ಎಚ್ಚರ!—2007
  • ಮಕ್ಕಳನ್ನು ಬೆಳೆಸಲು ಭರವಸಾರ್ಹ ಸಲಹೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಒತ್ತಡಕ್ಕೊಳಗಾಗಿರುವ ಹೆತ್ತವರು
    ಎಚ್ಚರ!—1997
  • ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ
    ಕುಟುಂಬ ಸಂತೋಷದ ರಹಸ್ಯ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
w06 11/1 ಪು. 3

“ಪರಿಣತರ” ಏಳುಬೀಳುಗಳು

ಕಂಪ್ಯೂಟರ್‌ ಬಳಕೆದಾರರು ಇಂಟರ್‌ನೆಟ್‌ನಲ್ಲಿ, ಹೆತ್ತವರಿಗಾಗಿರುವ ಸಲಹೆಯ ಬಗ್ಗೆ ಎರಡು ಲಕ್ಷ ಅರವತ್ತು ಸಾವಿರಕ್ಕಿಂತಲೂ ಹೆಚ್ಚಿನ ಉಲ್ಲೇಖಗಳನ್ನು ತತ್‌ಕ್ಷಣವೇ ಕಂಡುಕೊಳ್ಳಬಲ್ಲರು. ಇವುಗಳಲ್ಲಿ ಪ್ರತಿಯೊಂದನ್ನು ಓದಲು ನೀವು ಕೇವಲ ಒಂದು ನಿಮಿಷವನ್ನು ತೆಗೆದುಕೊಳ್ಳುವುದಾದರೂ, ಅವುಗಳನ್ನೆಲ್ಲಾ ಓದಿಮುಗಿಸುವುದರೊಳಗೆ ನಿಮ್ಮ ಮಗ ಅಥವಾ ಮಗಳು ಬೆಳೆದು ದೊಡ್ಡದಾಗಿರುವರು.

ಮಕ್ಕಳತಜ್ಞರು, ಮಕ್ಕಳ ಮನಶ್ಶಾಸ್ತ್ರಜ್ಞರು ಹಾಗೂ ಕಂಪ್ಯೂಟರ್‌ಗಳ ನಮ್ಮ ಈ ಯುಗದ ಮುಂಚೆ ಹೆತ್ತವರು ಯಾರಿಂದ ಸಲಹೆ ಪಡೆಯುತ್ತಿದ್ದರು? ಸಾಮಾನ್ಯವಾಗಿ ತಮ್ಮ ಕುಟುಂಬಸ್ಥರಿಂದ. ತಂದೆ-ತಾಯಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವಂದಿರು ಮಾರ್ಗದರ್ಶನ ಮತ್ತು ಆರ್ಥಿಕ ನೆರವನ್ನು ಕೊಡಲು ಹಾಗೂ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಶಕ್ತರೂ ಸಿದ್ಧರೂ ಆಗಿದ್ದರು. ಆದರೆ ಇಂದು ಅನೇಕ ದೇಶಗಳಲ್ಲಿ ಜನರು ದೊಡ್ಡ ಸಂಖ್ಯೆಗಳಲ್ಲಿ ಹಳ್ಳಿಗಳಿಂದ ನಗರಗಳಿಗೆ ತೆರಳಿರುವುದರಿಂದ ಇಂಥ ನಿಕಟ ಕೌಟುಂಬಿಕ ನಂಟುಗಳು ಕಡಿಯಲ್ಪಟ್ಟಿವೆ. ಇದರಿಂದಾಗಿ ಇಂದು ಹೆಚ್ಚಾಗಿ ಪಾಲಕತ್ವದ ಕಷ್ಟಕರವಾದ ಜವಾಬ್ದಾರಿಯನ್ನು ಕೇವಲ ಹೆತ್ತವರೇ ನಿರ್ವಹಿಸಬೇಕಾಗುತ್ತಿದೆ.

ಆಧುನಿಕ ಕಾಲದ ಶಿಶು-ಪಾಲನಾ ಉದ್ಯಮವು ಇಷ್ಟೊಂದು ತ್ವರಿತಗತಿಯಲ್ಲಿ ಅಭಿವೃದ್ಧಿಹೊಂದಲು ಇದು ಒಂದು ಕಾರಣವಾಗಿರುವುದಾದರೆ, ವಿಜ್ಞಾನದಲ್ಲಿ ವ್ಯಾಪಕವಾದ ಭರವಸೆಯು ಮತ್ತೊಂದು ಕಾರಣವಾಗಿದೆ. ವಿಜ್ಞಾನವು ಮಾನವ ಜೀವನದ ಪ್ರತಿಯೊಂದು ಅಂಶವನ್ನು ಉತ್ತಮಗೊಳಿಸುವುದೆಂದು 19ನೇ ಶತಮಾನದ ಕೊನೆಯ ಭಾಗದಷ್ಟಕ್ಕೆ ಅಮೆರಿಕನರು ಮನಗಾಣಲಾರಂಭಿಸಿದ್ದರು. ಆದುದರಿಂದ ವಿಜ್ಞಾನವು, ಮಕ್ಕಳನ್ನು ಬೆಳೆಸುವ ವಿಧಾನವನ್ನೂ ಉತ್ತಮಗೊಳಿಸೀತೆಂದು ಅವರಿಗನಿಸಿತು. ಈ ಸಲುವಾಗಿ 1899ರಲ್ಲಿ ಸ್ಥಾಪಿಸಲ್ಪಟ್ಟ ‘ಅಮೆರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಆಫ್‌ ಮದರ್ಸ್‌’ (ತಾಯಂದಿರ ರಾಷ್ಟ್ರೀಯ ಕಾಂಗ್ರೆಸ್‌) ಸಂಘವು, “ಹೆತ್ತವರ ಅನರ್ಹತೆಯ” ಕುರಿತಾಗಿ ಬಹಿರಂಗವಾಗಿ ಪ್ರಲಾಪಿಸಿದಾಗ, “ವೈಜ್ಞಾನಿಕ” ಪರಿಣತರ ಒಂದು ದೊಡ್ಡ ತಂಡವೇ ಮುಂದೆ ಬಂತು. ಮಕ್ಕಳನ್ನು ಬೆಳೆಸಲು ಹೆಣಗಾಡುತ್ತಿದ್ದ ತಂದೆತಾಯಂದಿರಿಗೆ ತಾವು ಸಹಾಯನೀಡುವೆವೆಂದು ಅವರು ಆಶ್ವಾಸನೆಯಿತ್ತರು.

ಪುಸ್ತಕಗಳ ಮೂಲಕ ಪಾಲಕತ್ವ

ಆದರೆ, ಈ ಪರಿಣತರು ಏನನ್ನು ಸಾಧಿಸಿದ್ದಾರೆ? ಇಂದಿನ ಹೆತ್ತವರು ಗತಕಾಲದ ಪಾಲಕರಿಗಿಂತ ಕಡಿಮೆ ಚಿಂತೆಯುಳ್ಳವರು ಮತ್ತು ತಮ್ಮ ಮಕ್ಕಳನ್ನು ಹೆಚ್ಚು ಉತ್ತಮವಾಗಿ ಬೆಳೆಸಲು ಸನ್ನದ್ಧರಾಗಿದ್ದಾರೊ? ಬ್ರಿಟನ್‌ನಲ್ಲಿ ನಡೆಸಲ್ಪಟ್ಟ ಇತ್ತೀಚಿಗಿನ ಒಂದು ಸಮೀಕ್ಷೆಗನುಸಾರ ಉತ್ತರವು ಇಲ್ಲವೆಂದಾಗಿದೆ. ಈ ಸಮೀಕ್ಷೆಯ ಪ್ರಕಾರ ಎಳೆಯ ಮಕ್ಕಳಿರುವ 35 ಪ್ರತಿಶತದಷ್ಟು ಹೆತ್ತವರು ಭರವಸಾರ್ಹ ಸಲಹೆಗಾಗಿ ಈಗಲೂ ಹುಡುಕಾಡುತ್ತಿದ್ದಾರೆ. ಇನ್ನೂ ಕೆಲವರು, ತಮಗೆ ಸಹಜವಾಗಿ ಹೇಗನಿಸುತ್ತದೊ ಹಾಗೆಯೇ ಮಕ್ಕಳನ್ನು ಬೆಳೆಸುವುದು ಉತ್ತಮವೆಂದು ನೆನಸುತ್ತಾರೆ.

ಆ್ಯನ್‌ ಹಲ್‌ಬರ್ಟ್‌ರವರು, ಅಮೆರಿಕಾದಲ್ಲಿ ಮಕ್ಕಳನ್ನು ಬೆಳೆಸುವುದು: ಪರಿಣತರು, ಹೆತ್ತವರು ಮತ್ತು ಮಕ್ಕಳ ಕುರಿತಾದ ಒಂದು ಶತಮಾನದ ಸಲಹೆ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ, ಮಕ್ಕಳ ಲಾಲನೆ-ಪಾಲನೆಯ ಕುರಿತು ಲಭ್ಯವಿರುವ ವೃತ್ತಿಪರ ಸಾಹಿತ್ಯದ ದಾಖಲೆಯನ್ನು ಅಧ್ಯಯನ ಮಾಡುತ್ತಾರೆ. ಪರಿಣತರು ಕಂಡುಹಿಡಿದಿರುವ ವಿಷಯಗಳು, ರುಜುವಾಗಿರುವ ವಿಜ್ಞಾನದ ಮೇಲಾಧರಿತವಾಗಿರುವುದು ತೀರ ಕಡಿಮೆ ಎಂದು ಸ್ವತಃ ಇಬ್ಬರು ಮಕ್ಕಳ ತಾಯಿಯಾಗಿರುವ ಆ್ಯನ್‌ ಹೇಳುತ್ತಾರೆ. ನಿಜಾಂಶವೇನೆಂದರೆ, ಈ ಪರಿಣತರು ಕೊಟ್ಟ ಸಲಹೆಗಳು ವೈಜ್ಞಾನಿಕ ಮಾಹಿತಿಯ ಮೇಲಾಧರಿಸಲ್ಪಡುವ ಬದಲು ತಮ್ಮ ಸ್ವಂತ ಬದುಕಿನ ಅನುಭವಗಳಿಂದ ಹೆಚ್ಚು ಪ್ರಭಾವಿಸಲ್ಪಟ್ಟಿರುವಂತೆ ತೋರುತ್ತದೆ. ಅವರಿಂದ ಬರೆಯಲ್ಪಟ್ಟಿರುವ ಮಾಹಿತಿಯನ್ನು ಅವಲೋಕಿಸುವಾಗ ಅದರಲ್ಲಿದ್ದ ಹೆಚ್ಚಿನ ಸಂಗತಿಗಳು ವಿಚಿತ್ರವೂ, ಒಂದಕ್ಕೊಂದು ವಿರುದ್ಧವಾದವುಗಳು ಮತ್ತು ಕೆಲವೊಮ್ಮೆ ತೀರ ಅಸಂಬದ್ಧವಾಗಿದ್ದವೆಂದು ತೋರುತ್ತವೆ.

ಹಾಗಿರುವಲ್ಲಿ, ಹೆತ್ತವರು ಇಂದು ಯಾವ ಸನ್ನಿವೇಶದಲ್ಲಿದ್ದಾರೆ? ನಿಜ ಹೇಳಬೇಕಾದರೆ, ಇಂದು ಅಧಿಕ ಪ್ರಮಾಣದಲ್ಲಿರುವ ಸಲಹೆ, ಅಭಿಪ್ರಾಯಗಳು ಮತ್ತು ವಿವಾದಗಳಿಂದಾಗಿ ಅನೇಕರು ಹಿಂದೆಂದಿಗಿಂತಲೂ ಹೆಚ್ಚು ಗಲಿಬಿಲಿಗೊಂಡಿದ್ದಾರೆ. ಹಾಗಿದ್ದರೂ ತಾವು ಅಂಬಿಗನಿಲ್ಲದ ದೋಣಿಯಲ್ಲಿದ್ದೇವೆಂದು ಎಲ್ಲಾ ಹೆತ್ತವರಿಗೆ ಅನಿಸುವುದಿಲ್ಲ. ಲೋಕಾದ್ಯಂತವಿರುವ ಹೆತ್ತವರು ವಿವೇಕದ ಒಂದು ಪ್ರಾಚೀನ ಮೂಲದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಅದು ಈಗಲೂ ಭರವಸಾರ್ಹ ಸಲಹೆಯ ಬುಗ್ಗೆಯಾಗಿದೆ. ಇದು ಹೇಗೆಂಬುದನ್ನು ಮುಂದಿನ ಲೇಖನವು ತೋರಿಸುವುದು. (w06 11/01)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ