ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 1/08 ಪು. 24
  • ಜೇಡ-ರೇಷ್ಮೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೇಡ-ರೇಷ್ಮೆ
  • ಎಚ್ಚರ!—2008
  • ಅನುರೂಪ ಮಾಹಿತಿ
  • ರೇಷ್ಮೆ “ನೂಲುಗಳ ರಾಣಿ”
    ಎಚ್ಚರ!—2006
  • ಪ್ರಕೃತಿಯಲ್ಲಿರುವ ವಿನ್ಯಾಸಗಳಿಂದ ಕಲಿತುಕೊಳ್ಳುವುದು
    ಎಚ್ಚರ!—2000
  • ವಿಕಾಸವಾದ ತರ್ಕಬದ್ಧವಾಗಿದೆಯೇ?
    ಎಚ್ಚರ!—2000
ಎಚ್ಚರ!—2008
g 1/08 ಪು. 24

ರಚಿಸಲ್ಪಟ್ಟಿತ್ತೋ?

ಜೇಡ-ರೇಷ್ಮೆ

◼ ಜೇಡ-ರೇಷ್ಮೆಯು ಹತ್ತಿಗಿಂತಲೂ ಹಗುರ, ಆದರೆ ತೂಕಕ್ಕನುಸಾರ ಉಕ್ಕಿಗಿಂತಲೂ ಗಡುಸು. ವೃತ್ತಾಕಾರದ ಬಲೆಗಳನ್ನು ನೇಯುವ ಜೇಡಗಳು ತಯಾರಿಸುವ ರೇಷ್ಮೆಯ ಬಗ್ಗೆ ವಿಜ್ಞಾನಿಗಳು ಹಲವಾರು ದಶಕಗಳಿಂದ ಅಧ್ಯಯನ ಮಾಡಿದ್ದಾರೆ. ಈ ರೀತಿ ಅದು ಹೆಣೆಯಬಲ್ಲ ಏಳು ಬಗೆಯ ರೇಷ್ಮೆಗಳಲ್ಲಿ “ಡ್ರ್ಯಾಗ್‌ಲೈನ್‌ ಸಿಲ್ಕ್‌” (ಕರ್ಷಣಸೂತ್ರ ರೇಷ್ಮೆ) ಅತಿ ಹೆಚ್ಚು ಗಡುಸಾಗಿದ್ದು ಹೆಚ್ಚಿನವರ ಗಮನ ಸೆಳೆದಿದೆ. ಇದು ಸಾಮಾನ್ಯವಾಗಿ ಬಟ್ಟೆತಯಾರಿಸಲು ಬಳಸುವ ರೇಷ್ಮೆಹುಳು ದಾರಗಳಿಗಿಂತಲೂ ಅಧಿಕ ಗಟ್ಟಿಮುಟ್ಟು ಹಾಗೂ ಹೆಚ್ಚು ಜಲ​ನಿರೋಧಕವಾಗಿದೆ.

ಆಲೋಚಿಸಿರಿ: ‘ಕೆವ್ಲಾರ್‌’ ನಂತಹ ಕೈಗಾರಿಕಾ ನಾರುಗಳ ಉತ್ಪಾದನೆಗಾಗಿ ಗರಿಷ್ಠ ಉಷ್ಣತೆ ಮತ್ತು ಜೈವಿಕ ದ್ರಾವಕಗಳು ಅವಶ್ಯವಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ಜೇಡಗಳು ಸಾಮಾನ್ಯ ಉಷ್ಣತೆಯಲ್ಲೇ ನೀರನ್ನು ದ್ರಾವಕವಾಗಿ ಬಳಸುತ್ತಾ ರೇಷ್ಮೆ ತಯಾರಿಸುತ್ತವೆ. ಮಾತ್ರವಲ್ಲದೆ, ಡ್ರ್ಯಾಗ್‌ಲೈನ್‌ ಸಿಲ್ಕ್‌ ಕೆವ್ಲಾರ್‌ಗಿಂತಲೂ ಹೆಚ್ಚು ಗಡುಸಾಗಿದೆ. ಒಂದುವೇಳೆ ಈ ರೇಷ್ಮೆಯ ಬಲೆಯನ್ನು ಒಂದು ಫುಟ್‌ಬಾಲ್‌ ಮೈದಾನದಷ್ಟು ದೊಡ್ಡದಾಗಿ ಮಾಡುವಲ್ಲಿ ಅದು ಹಾರುತ್ತಿರುವ “ಜಂಬೊ ಜೆಟ್‌” ನಂಥ ದೊಡ್ಡ ವಿಮಾನವನ್ನೂ ತಡೆದು ನಿಲ್ಲಿಸಬಲ್ಲದು.

ಡ್ರ್ಯಾಗ್‌ಲೈನ್‌ ಸಿಲ್ಕ್‌ನಲ್ಲಿರುವ ಗಡುಸುತನದ ಕಾರಣ ಸಂಶೋಧಕರು ಅದರಲ್ಲಿ ಬಹಳಷ್ಟು ಆಸಕ್ತರಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಸಯನ್ಸ್‌ ನ್ಯೂಸ್‌ ಎಂಬ ಪತ್ರಿಕೆಯಲ್ಲಿ ಇಮೇ ಕನಿಂಗ್‌ಹ್ಯಾಮ್‌ ಎಂಬವರು ಹೀಗೆ ಬರೆಯುತ್ತಾರೆ: “ಗುಂಡುನಿರೋಧಕ ಎದೆಗವಚಗಳಿಂದ ಹಿಡಿದು ತೂಗುಸೇತುವೆಗಳಿಗಾಗಿ ಬಳಸುವ ತಂತಿಗಳಂಥ ವಸ್ತುಗಳಲ್ಲಿ ಡ್ರ್ಯಾಗ್‌ಲೈನ್‌ ಸಿಲ್ಕ್‌ನಲ್ಲಿರುವ ಬಿಗುಪು ಮತ್ತು ಗಡುಸುತನವನ್ನು ವಿಕಸಿಸುವುದು ವಿಜ್ಞಾನಿಗಳ ತೀವ್ರಾಪೇಕ್ಷೆ.”

ಆದರೆ ಡ್ರ್ಯಾಗ್‌ಲೈನ್‌ ಸಿಲ್ಕ್‌ನ ನಕಲು ತಯಾರಿಸುವುದು ಸುಲಭವಲ್ಲ ಏಕೆಂದರೆ ಅದು ಜೇಡಗಳ ದೇಹದೊಳಗೆ ತಯಾರಾಗುತ್ತದೆ ಹಾಗೂ ಆ ಪ್ರಕ್ರಿಯೆಯು ಇನ್ನೂ ಯಾರಿಗೂ ಸಂಪೂರ್ಣವಾಗಿ ತಿಳಿದಿಲ್ಲ. ಕೆಮಿಕಲ್‌ ಆ್ಯಂಡ್‌ ಇಂಜಿನಿಯರಿಂಗ್‌ ನ್ಯೂಸ್‌ ಪತ್ರಿಕೆಯು ಜೀವವಿಜ್ಞಾನಿ ಶೆರಿಲ್‌ ವೈ ಹಯಶಿಯ ಈ ಮಾತುಗಳನ್ನು ಉಲ್ಲೇಖಿಸಿತು: “ನಮ್ಮ ಮನೆಗಳಲ್ಲಿ ಬೀಡುಬಿಟ್ಟಿರುವ ಜೇಡಗಳು ಸಹಜವಾಗಿಯೇ ಏನು ಮಾಡಬಲ್ಲವೋ ಅದನ್ನು ನಕಲು ಮಾಡಲು ಅತಿ ಬುದ್ಧಿವಂತ ಜನರು ಇನ್ನೂ ಪ್ರಯತ್ನಿಸುತ್ತಿರುವುದು ನಾವೆಷ್ಟು ಅಲ್ಪರೆಂಬದನ್ನು ತೋರಿಸುತ್ತದೆ.”

ನೀವೇನು ನೆನಸುತ್ತೀರಿ? ಜೇಡ ಮತ್ತು ಉಕ್ಕಿನಷ್ಟು ಶಕ್ತಿಯುಳ್ಳ ಅದರ ರೇಷ್ಮೆಯು ತನ್ನಷ್ಟಕ್ಕೆ ತಾನೇ ಅಸ್ತಿತ್ವಕ್ಕೆ ಬಂತೊ? ಅಥವಾ ಅದು ಒಬ್ಬ ಕುಶಲ ಸೃಷ್ಟಿಕರ್ತನ ರಚನೆಯೋ? (g 1/08)

[ಪುಟ 24ರಲ್ಲಿರುವ ಚಿತ್ರ]

ಜೇಡ-ರೇಷ್ಮೆ ಸ್ರವಿಸಲ್ಪಡುತ್ತಿರುವುದರ ಸೂಕ್ಷ್ಮದರ್ಶಕ ನೋಟ

[ಕೃಪೆ]

Copyright Dennis Kunkel Microscopy, Inc.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ