ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/12 ಪು. 4
  • 1. ಒಳ್ಳೇ ಆಹಾರ ಖರೀದಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1. ಒಳ್ಳೇ ಆಹಾರ ಖರೀದಿಸಿ
  • ಎಚ್ಚರ!—2012
  • ಅನುರೂಪ ಮಾಹಿತಿ
  • ಆಹಾರದ ಸುರಕ್ಷತೆಗೆ ಪಾಲಿಸಬೇಕಾದ 7 ಹೆಜ್ಜೆಗಳು
    ಇತರ ವಿಷಯಗಳು
  • ಶೀಘ್ರದಲ್ಲೇ ಸರ್ವರಿಗೂ ಆರೋಗ್ಯಕರ ಆಹಾರ
    ಎಚ್ಚರ!—2012
  • 3. ಆಹಾರ ತಯಾರಿ ಹಾಗೂ ಶೇಖರಣೆ
    ಎಚ್ಚರ!—2012
  • ನೀವು ಆತ್ಮಿಕವಾಗಿ ಚೆನ್ನಾಗಿ ತಿನ್ನುತ್ತೀರೊ?
    ಕಾವಲಿನಬುರುಜು—1997
ಇನ್ನಷ್ಟು
ಎಚ್ಚರ!—2012
g 10/12 ಪು. 4

1. ಒಳ್ಳೇ ಆಹಾರ ಖರೀದಿಸಿ

ತರಕಾರಿ ಬೆಳೆಸುವವರನ್ನು ಬಿಟ್ರೆ ಬೇರೆಲ್ಲರು ಆಹಾರವನ್ನು ಮಾರ್ಕೆಟಿನಿಂದಲೇ ಖರೀದಿಸಬೇಕು. ಹಾಗೆ ಖರೀದಿಸುವಾಗ ಒಳ್ಳೇ ಆಹಾರ ಆರಿಸಿಕೊಳ್ಳುವ ಟಿಪ್ಸ್‌ ಇಲ್ಲಿದೆ.

● ಯೋಜನೆ ಮಾಡಿ.

ಅನೇಕ ವಸ್ತುಗಳನ್ನು ಖರೀದಿಸಲಿಕ್ಕಿರುವಾಗ ಉತ್ತಮ ಯೋಜನೆ ಮಾಡಿ. “ಕೆಡದಂಥ ಅಂದರೆ ಫ್ರಿಜ್‌ನಲ್ಲಿ ಇಡುವ ಅಗತ್ಯವಿಲ್ಲದ ಆಹಾರವನ್ನು ಮೊದಲು ಖರೀದಿಸಿ. ಬೇರೆಲ್ಲ ಖರೀದಿ ಮುಗಿಸಿದ ನಂತರ ಇನ್ನೇನು ಮನೆಗೆ ಬರುವ ಮುನ್ನ ಮೀನು, ಮಾಂಸ ಮುಂತಾದ ಆಹಾರವನ್ನು ಖರೀದಿಸಿ. ಅಂಗಡಿಯ ಫ್ರಿಜ್‌/ಫ್ರೀಜರ್‌ನಲ್ಲಿ ಇಟ್ಟಿರುವ ಆಹಾರವನ್ನು ಕೊನೆಗೆ ಖರೀದಿಸಿ” ಎಂದು ಆಸ್ಟ್ರೇಲಿಯದ ಆಹಾರ ಸಂರಕ್ಷಣಾ ಮಾಹಿತಿ ಕೇಂದ್ರ ಸಲಹೆ ನೀಡುತ್ತದೆ. ಬಿಸಿ ಆಹಾರ ಖರೀದಿಸುವುದಾದರೆ ಅದನ್ನು ಸಹ ಕೊನೆಗೆ ಖರೀದಿಸಿ.

● ತಾಜಾ ಆಹಾರ ಖರೀದಿಸಿ.

ಸಾಧ್ಯವಿರುವಾಗಲೆಲ್ಲಾ ತಾಜಾ ಆಹಾರ ಖರೀದಿಸಿ.a ನೈಜೀರಿಯದಲ್ಲಿರುವ ಇಬ್ಬರು ಮಕ್ಕಳ ತಾಯಿಯೊಬ್ಬಳು ಹೇಳುವುದು: “ನಾನು ಮಾರ್ಕೆಟಿಗೆ ಬೆಳಿಗ್ಗೆ ಬೇಗ ಹೋಗ್ತೇನೆ. ಆಗ ಎಲ್ಲವೂ ತಾಜಾ ಇರುತ್ತೆ.” ಮೆಕ್ಸಿಕೊ ದೇಶದ ಎಲಿಜಬೇತ್‌ ತರಕಾರಿ ಹಣ್ಣುಹಂಪಲನ್ನು ಸಂತೆಯಿಂದ ಖರೀದಿಸುತ್ತಾಳೆ. ಅವಳನ್ನುವುದು: “ಅಲ್ಲಿ ನನ್ಗೆ ಬೇಕಾದದ್ದನ್ನು ಆರಿಸಿ ತೆಗೀಬಹುದು. ಅದೇ ದಿನ ಕಡಿದ ಮಾಂಸವನ್ನು ಖರೀದಿಸ್ತೇನೆ. ಮನೆಗೆ ಬಂದ ನಂತರ ಆ ದಿನಕ್ಕೆ ಬೇಕಾದಷ್ಟನ್ನು ತೆಗೆದು ಉಳಿದದ್ದನ್ನು ಫ್ರಿಜ್‌ನಲ್ಲಿ ಇಡ್ತೇನೆ.”

● ನೋಡಿ ಖರೀದಿಸಿ.

ಸ್ವತಃ ಹೀಗೆ ಕೇಳಿಕೊಳ್ಳಿ: ‘ತರಕಾರಿ, ಹಣ್ಣುಹಂಪಲಿನ ಸಿಪ್ಪೆ ಚೆನ್ನಾಗಿದೆಯಾ? ಮಾಂಸದ ವಾಸನೆ ಬದಲಾಗಿದೆಯಾ?’ ಆಹಾರವು ಮುಂಚಿತವಾಗಿಯೇ ಪ್ಯಾಕ್‌ ಮಾಡಿ ಇಟ್ಟಿರುವಲ್ಲಿ ಅದರ ಪ್ಯಾಕನ್ನು ಪರೀಕ್ಷಿಸಿ ನೋಡಿ. ಪ್ಯಾಕ್‌ ಒಡೆದು ಇಲ್ಲವೆ ತೆರೆದು ಹೋಗಿದ್ದರೆ ತೆಗೆದುಕೊಳ್ಳಬೇಡಿ. ಯಾಕೆಂದರೆ ಆಹಾರಕ್ಕೆ ಬ್ಯಾಕ್ಟೀರಿಯ ಸೇರಿರುವ ಸಾಧ್ಯತೆ ಇದೆ.

ಸೂಪರ್‌ ಮಾರ್ಕೆಟ್‌ನಲ್ಲಿ ಆಹಾರ ಖರೀದಿಸುವ ಹಾಂಗ್‌ ಕಾಂಗ್‌ನ ಚೆನ್‌ ಫೈ ಹೀಗೆ ಹೇಳುತ್ತಾರೆ, “ಪ್ಯಾಕ್‌ ಮಾಡಿರುವ ಆಹಾರದ ಎಕ್ಸ್‌ಪಾಯರಿ ಡೇಟ್‌ ನೋಡುವುದು ಬಹು ಮುಖ್ಯ.” ಏಕೆ? ಎಕ್ಸ್‌ಪಾಯರಿ ಡೇಟ್‌ ದಾಟಿದ ಆಹಾರದ ಬಣ್ಣ, ರುಚಿ, ವಾಸನೆ ಚೆನ್ನಾಗಿದ್ದರೂ ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿ.

● ಸರಿಯಾಗಿ ಪ್ಯಾಕ್‌ ಮಾಡಿ ತನ್ನಿ.

ಆಹಾರ ಖರೀದಿಸಲು ತೆಗೆದುಕೊಂಡು ಹೋಗುವ ಶಾಪಿಂಗ್‌ ಬ್ಯಾಗ್‌ ಇಲ್ಲವೆ ಕವರ್‌ ಅನ್ನು ಚೆನ್ನಾಗಿ ಸೋಪು ಹಾಕಿ ಬಿಸಿ ನೀರಿನಲ್ಲಿ ತೊಳೆಯಿರಿ. ಮಾಂಸ, ಮೀನನ್ನು ಪ್ರತ್ಯೇಕವಾಗಿ ಬೇರೆಯೇ ಬ್ಯಾಗಲ್ಲಿ ಇಟ್ಟು ತನ್ನಿ. ಇಲ್ಲವಾದರೆ ಅದು ಬೇರೆ ಆಹಾರಕ್ಕೆ ತಾಗಿ ಅದನ್ನು ಕೆಡಿಸಬಹುದು.

ಇಟಲಿಯಲ್ಲಿರುವ ಎನ್ರಿಕೊ ಮತ್ತು ಲೊರೆಡಾನಾ ದಂಪತಿ ತಮ್ಮ ಮನೆಯ ಹತ್ತಿರವೇ ಆಹಾರವನ್ನು ಖರೀದಿಸುತ್ತಾರೆ. “ಹಾಗಾಗಿ ದೂರದಿಂದ ತೆಗೆದುಕೊಂಡು ಬಂದು ಆಹಾರ ಕೆಟ್ಟು ಹೋಗುವ ಸಂದರ್ಭ ಬರುವುದಿಲ್ಲ” ಎನ್ನುತ್ತಾರೆ ಅವರು. ಐಸಿನಲ್ಲಿಟ್ಟಿರುವ ಮೀನು, ಮಾಂಸ ಮುಂತಾದ ಆಹಾರವನ್ನು ಮೂವತ್ತು ನಿಮಿಷಕ್ಕಿಂತ ಹೆಚ್ಚು ದೂರದಿಂದ ತೆಗೆದುಕೊಂಡು ಬರಬೇಕಾದಲ್ಲಿ ಅದನ್ನು ಐಸ್‌ ಬಾಕ್ಸ್‌ನಲ್ಲಿ ಇಟ್ಟು ತನ್ನಿ.

ಆಹಾರ ಮನೆಗೆ ತಂದ ನಂತರ ಸರಕ್ಷಿತವಾಗಿಡುವುದು ಹೇಗೆಂದು ಮುಂದಿನ ಲೇಖನದಲ್ಲಿ ನೋಡೋಣ. (g12-E 06)

[ಪಾದಟಿಪ್ಪಣಿ]

a ಜುಲೈ-ಸೆಪ್ಟೆಂಬರ್‌ 2011ರ ಎಚ್ಚರ! ಪತ್ರಿಕೆಯ “ಸಲಹೆ 1—ಒಳ್ಳೇ ಆಹಾರ ಸೇವಿಸಿ” ಎಂಬ ಲೇಖನ ಓದಿ.

[ಪುಟ 4ರಲ್ಲಿರುವ ಚೌಕ]

ಮಕ್ಕಳಿಗೆ ತರಬೇತು ನೀಡಿ: “ತಿಂಡಿ ತಿನಿಸುಗಳ ಪ್ಯಾಕೆಟನ್ನು ಖರೀದಿಸುವ ಮುಂಚೆ ಎಕ್ಸ್‌ಪಾಯರಿ ಡೇಟ್‌ ನೋಡುವಂತೆ ನನ್ನ ಮಕ್ಕಳಿಗೆ ಹೇಳಿ ಕೊಟ್ಟಿದ್ದೇನೆ.”—ರೂತ್‌, ನೈಜೀರಿಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ