ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/12 ಪು. 6
  • 3. ಆಹಾರ ತಯಾರಿ ಹಾಗೂ ಶೇಖರಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 3. ಆಹಾರ ತಯಾರಿ ಹಾಗೂ ಶೇಖರಣೆ
  • ಎಚ್ಚರ!—2012
  • ಅನುರೂಪ ಮಾಹಿತಿ
  • ಆಹಾರದ ಸುರಕ್ಷತೆಗೆ ಪಾಲಿಸಬೇಕಾದ 7 ಹೆಜ್ಜೆಗಳು
    ಇತರ ವಿಷಯಗಳು
  • ನಿಮ್ಮ ತಿನ್ನುವಿಕೆಯನ್ನು ನಿರಪಾಯಕರವಾಗಿ ಮಾಡಿರಿ
    ಎಚ್ಚರ!—1990
  • 1. ಒಳ್ಳೇ ಆಹಾರ ಖರೀದಿಸಿ
    ಎಚ್ಚರ!—2012
  • ಶೀಘ್ರದಲ್ಲೇ ಸರ್ವರಿಗೂ ಆರೋಗ್ಯಕರ ಆಹಾರ
    ಎಚ್ಚರ!—2012
ಇನ್ನಷ್ಟು
ಎಚ್ಚರ!—2012
g 10/12 ಪು. 6

3. ಆಹಾರ ತಯಾರಿ ಹಾಗೂ ಶೇಖರಣೆ

ಪು ರಾತನ ಇಸ್ರಾಯೇಲ್‌ ದೇಶದಲ್ಲಿ ಒಬ್ಬ ಬೇಜವಾಬ್ದಾರಿ ಸೇವಕ ಕಾಡಿಗೆ ಹೋಗಿ ಕಾಡುಬಳ್ಳಿಯ ಕಾಯಿಗಳನ್ನು ‘ಅದು ಎಂಥ ಕಾಯಿಯೆಂದು ಗೊತ್ತಿರದಿದ್ದರೂ’ ಕಿತ್ತುಕೊಂಡು ಬಂದು ಅಡಿಗೆ ಮಾಡಿದ. ತನಗೆ ತಿಳಿಯದ ಏನೇನೋ ಮಸಾಲೆಯನ್ನು ಅದಕ್ಕೆ ಹಾಕಿ ತಯಾರಿಸಿದ. ಜನರು ಅದನ್ನು ಬಾಯೊಳಗೆ ಹಾಕಿದ ಕೂಡಲೆ “ಪಾತ್ರೆಯಲ್ಲಿ ವಿಷ” ಎಂದು ಕೂಗಿದರು.—2 ಅರಸುಗಳು 4:38-41.

ಆಹಾರ ತಯಾರಿಸುವಾಗ ಜಾಗ್ರತೆ ವಹಿಸದಿದ್ದರೆ ಎಷ್ಟು ಹಾನಿಕರ, ಮಾರಕ ಎಂಬದನ್ನು ಮೇಲಿನ ಉದಾಹರಣೆ ತೋರಿಸುತ್ತದೆ. ಆಹಾರವನ್ನು ಚೆನ್ನಾಗಿ ತಯಾರಿಸಿ ಉಳಿದದ್ದನ್ನು ಜಾಗ್ರತೆಯಿಂದ ಶೇಖರಿಸಿಟ್ಟರೆ ಆಹಾರ ಸಂಬಂಧಿತ ರೋಗಗಳನ್ನು ತಡೆಗಟ್ಟಬಹುದು. ಇದನ್ನು ಮಾಡುವ ನಾಲ್ಕು ವಿಧಗಳು ಇಲ್ಲಿವೆ:

● ಮೈಕ್ರೊವೇವ್‌ ಇಲ್ಲವೆ ತಣ್ಣೀರಿನಲ್ಲಿ ಇಟ್ಟು ಮಾಂಸ ಕರಗಿಸಿ.

“ಐಸಿನಂತೆ ಗಟ್ಟಿಯಾದ ಮಾಂಸ ಕರಗಲಿ ಎಂದು ಕೋಣೆಯಲ್ಲಿ ಇಟ್ಟರೆ ಅದರ ಮಧ್ಯ ಭಾಗ ಕರಗಲು ಹೊತ್ತು ತಗಲುತ್ತದೆ. ಅದಿನ್ನೂ 4 ಡಿಗ್ರಿಗಿಂತ ಕಡಿಮೆ ಇರುತ್ತದೆ. ಆದರೆ ಅಷ್ಟರಲ್ಲಿ ಹೊರಭಾಗ 4 ಡಿಗ್ರಿಯಿಂದ 60 ಡಿಗ್ರಿ ಸೆಂಟಿಗ್ರೇಡ್‌ ಮಧ್ಯವಿರುತ್ತದೆ. ಆ ಸ್ಥಿತಿಯನ್ನು “ಅಪಾಯ ವಲಯ” ಎನ್ನಲಾಗುತ್ತೆ. ಏಕೆಂದರೆ ಆ ತಾಪಮಾನದಲ್ಲಿ ಬ್ಯಾಕ್ಟೀರಿಯಗಳು ಶೀಘ್ರವಾಗಿ ಬೆಳೆದು, ವೃದ್ಧಿಗೊಳ್ಳುತ್ತವೆ” ಎನ್ನುತ್ತದೆ ಅಮೆರಿಕದ ವ್ಯವಸಾಯ ಇಲಾಖೆ. ಹಾಗಾಗಿ ಮೈಕ್ರೊವೇವಿನಲ್ಲಿ ಇಲ್ಲವೆ ತಣ್ಣೀರಿನಲ್ಲಿ ಇಟ್ಟು ಕರಗಿಸಿ.

● ಪೂರ್ಣವಾಗಿ ಬೇಯಿಸಿ.

“ಚೆನ್ನಾಗಿ ಬೇಯಿಸಿದರೆ ಎಲ್ಲಾ ಅಪಾಯಕಾರಿ ಬ್ಯಾಕ್ಟೀರಿಯಗಳು ಸತ್ತುಹೋಗುತ್ತವೆ” ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಆಹಾರವನ್ನು ಚೆನ್ನಾಗಿ ಬೇಯಿಸಿ. ಕಡಿಮೆಪಕ್ಷ 70 ಡಿಗ್ರಿ ಸೆಂ. ತಾಪಮಾನ ತಲುಪಬೇಕುa. ಇದನ್ನು ತಿಳಿಯಲು ಕೆಲವರು ‘ಮೀಟ್‌ ಥರ್ಮೋಮೀಟರ್‌’ ಬಳಸುತ್ತಾರೆ. ನಮ್ಮ ಬಳಿ ಅದಿಲ್ಲದಿರುವಲ್ಲಿ ಚಮಚ/ಚಾಕುವಿನಿಂದಲೋ ಚುಚ್ಚಿ ಚೆನ್ನಾಗಿ ಬೆಂದಿದೆಯಾ ಎಂದು ನೋಡಿ.

● ಕೂಡಲೆ ಉಣಬಡಿಸಿ.

ಬೇಯಿಸಿ ತಯಾರಿಸಿದ ಆಹಾರವನ್ನು ತೀರಾ ತಣ್ಣಗಾಗಲು ಬಿಡಬೇಡಿ. ಬಿಸಿ ಬಿಸಿಯಾಗಿರುವಾಗಲೇ ಸೇವಿಸಿ. ಐಸ್‌ಕ್ರಿಮ್‌ ಮುಂತಾದ ತಣ್ಣಗಿನ ಆಹಾರ ಕೋಣೆಯ ತಾಪಮಾನಕ್ಕೆ ಬರುವಂತೆ ಬಿಡಬೇಡಿ.

● ಉಳಿದ ಆಹಾರವನ್ನು ಜಾಗ್ರತೆಯಿಂದ ತೆಗೆದಿಡಿ.

ಪೋಲೆಂಡ್‌ನ ಅನಿಟಾ ಎಂಬಾಕೆ ಅಡಿಗೆ ಮಾಡಿದ ಕೂಡಲೆ ತನ್ನ ಮನೆ ಮಂದಿಗೆ ಬಿಸಿ ಬಿಸಿ ಆಹಾರ ಬಡಿಸುತ್ತಾಳೆ. ಆಹಾರ ಉಳಿದರೆ? “ನಾನು ಕೂಡಲೆ ಅದನ್ನು ಫ್ರಿಜ್‌ನಲ್ಲಿ ಇಡುತ್ತೇನೆ. ಎಲ್ಲವನ್ನು ಒಂದೇ ಪಾತ್ರೆಯಲ್ಲಿ ಹಾಕಿ ಇಡದೆ, ಚಿಕ್ಕ ಚಿಕ್ಕ ಡಬ್ಬದಲ್ಲಿ ಬೇರೆ ಬೇರೆ ಇಡುತ್ತೇನೆ. ಆಗ ಎಷ್ಟು ಬೇಕು ಅಷ್ಟನ್ನೇ ತೆಗೆದು ಬಿಸಿ ಮಾಡಲು ಸುಲಭ.” ಉಳಿದ ಆಹಾರವನ್ನು ಫ್ರಿಜ್‌ನಲ್ಲಿ ಇಡುತ್ತೀರಾದರೆ ಮೂರು ನಾಲ್ಕು ದಿನಗಳಲ್ಲಿ ಅದನ್ನು ತಿಂದು ಮುಗಿಸಿ.

ಹೋಟೆಲ್‌ಗಳಲ್ಲಿ ಹೇಗೆ ಆಹಾರ ತಯಾರಿಸುತ್ತಾರೆ ನಮಗೆ ತಿಳಿಯದು. ಹಾಗಾಗಿ ನೀವೂ ನಿಮ್ಮ ಕುಟುಂಬ ಹೊರಗೆ ಆಹಾರ ಸೇವಿಸುವ ವಿಷಯದಲ್ಲಿ ಯಾವ ಜಾಗ್ರತೆ ವಹಿಸಬೇಕು? ಮುಂದಿನ ಲೇಖನ ನೋಡಿ. (g12-E 06)

[ಪಾದಟಿಪ್ಪಣಿ]

a ಮೀನು, ಮಾಂಸದಂಥ ಕೆಲವು ಆಹಾರಕ್ಕೆ ಬೇಯಲು ಹೆಚ್ಚಿನ ತಾಪಮಾನ ಅಗತ್ಯ.

[ಪುಟ 6ರಲ್ಲಿರುವ ಚೌಕ]

ಮಕ್ಕಳಿಗೆ ತರಬೇತು ನೀಡಿ: “ನನ್ನ ಮಕ್ಕಳು ಅಡಿಗೆ ಮಾಡುವಾಗ ಆಹಾರ ಪ್ಯಾಕೆಟಿನಲ್ಲಿರುವ ಸಲಹೆಗಳನ್ನು ಮೊದಲು ಓದುವಂತೆ ಉತ್ತೇಜಿಸುತ್ತೇನೆ.”—ಯುಕ್‌ ಲಿನ್‌, ಹಾಂಗ್‌ ಕಾಂಗ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ