ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/14 ಪು. 16
  • ಹಾವಿನ ಚರ್ಮ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಾವಿನ ಚರ್ಮ
  • ಎಚ್ಚರ!—2014
  • ಅನುರೂಪ ಮಾಹಿತಿ
  • ಹಾವುಗಳ ಕುರಿತು ಸಾಮಾನ್ಯ ತಪ್ಪಭಿಪ್ರಾಯಗಳು
    ಎಚ್ಚರ!—1998
  • ಒಂದು ನಾಗರಹಾವನ್ನು ಸಂಧಿಸಲು ನೀವು ಇಷ್ಟಪಡುವಿರೊ?
    ಎಚ್ಚರ!—1996
  • ತಾಮ್ರದ ಸರ್ಪ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಎಚ್ಚರ!—2014
g 4/14 ಪು. 16
ಹಾವು ಮರವನ್ನು ಹತ್ತುತ್ತಿರುವುದು

ವಿಕಾಸವೇ? ವಿನ್ಯಾಸವೇ?

ಹಾವಿನ ಚರ್ಮ

ಚಲಿಸಲು ಸಹಾಯಮಾಡುವ ಯಾವುದೇ ಅಂಗ ಹಾವುಗಳಿಗಿಲ್ಲ. ಆದರೆ ಗಡುಸಾದ ಚರ್ಮವಿರುತ್ತದೆ. ಈ ರೀತಿಯ ಚರ್ಮವಿರುವುದರಿಂದಲೇ ಅವು ಹರಿದಾಡುವಾಗ ಆಗುವಂಥ ತಿಕ್ಕಾಟವನ್ನು ಸಹಿಸಲು ಸಾಧ್ಯ. ಕೆಲವೊಂದು ಜಾತಿಯ ಹಾವುಗಳು ಮರದ ಒರಟೊರಟಾಗಿರುವ ಕಾಂಡಗಳನ್ನು ಹತ್ತಬಲ್ಲವು. ಇನ್ನು ಕೆಲವು, ಚರ್ಮವನ್ನು ತರಚಿಹಾಕುವಂಥ ಮರಳಿನಲ್ಲಿ ಬಿಲಗಳನ್ನು ತೋಡಬಲ್ಲವು. ಹಾಗಿದ್ದರೂ, ಹಾವುಗಳ ಚರ್ಮ ಸವೆಯದೇ ಇರುವುದಕ್ಕೆ ಏನು ಕಾರಣ?

ಪರಿಗಣಿಸಿ: ಹಾವಿನ ಚರ್ಮದ ದಪ್ಪ ಮತ್ತು ರಚನೆ ಒಂದು ಜಾತಿಯಿಂದ ಇನ್ನೊಂದು ಜಾತಿಗೆ ಭಿನ್ನವಾಗಿರುತ್ತದೆ. ಆದರೂ, ಎಲ್ಲಾ ಹಾವುಗಳ ಚರ್ಮದಲ್ಲಿ ಒಂದು ವಿಷಯ ಸಾಮಾನ್ಯವಾಗಿರುತ್ತದೆ. ಚರ್ಮದ ಹೊರಪದರ ಗಡುಸಾಗಿದ್ದು, ಅದರ ಒಳಪದರಗಳು ಮೃದುವಾಗುತ್ತಾ ಹೋಗುತ್ತವೆ. ಇಂಥ ರಚನೆಯಿಂದ ಪ್ರಯೋಜನವೇನು? “ಕೆಲವು ವಸ್ತುಗಳಲ್ಲಿ ಹೊರಭಾಗ ಗಡುಸಾಗಿದ್ದು, ಬಗ್ಗಿಸುವಷ್ಟು ಮೃದುವಾಗುತ್ತಾ ಹೋಗುವ ಒಳಭಾಗವಿರುತ್ತದೆ. ವಸ್ತುವಿನ ಇಂಥ ರಚನೆಯು ಬರುವಂಥ ಒತ್ತಡವನ್ನು ಸಾಕಷ್ಟು ವ್ಯಾಪ್ತಿಯವರೆಗೆ ಹಂಚುವಂತೆ ಮಾಡುತ್ತದೆ” ಎಂದು ಸಂಶೋಧಕರಾದ ಮಾರೀ-ಕ್ರಿಸ್ಟಿನ್‌ ಕ್ಲೈನ್‌ ಹೇಳುತ್ತಾರೆ. ಹಾವಿನ ಚರ್ಮದ ಇಂಥ ಅಸಾಧಾರಣ ರಚನೆಯು ಅದು ಸುಲಭವಾಗಿ ನೆಲದ ಮೇಲೆ ಹರಿದಾಡುವಂತೆ ಅವಕಾಶ ಮಾಡಿಕೊಡುತ್ತದೆ. ಮತ್ತು ಚೂಪಾಗಿರುವ ಕಲ್ಲಿನ ಮೇಲೆ ಹರಿದಾಡುವಾಗ ಅದಕ್ಕಾಗುವ ಒತ್ತಡವನ್ನು ತನ್ನ ಇಡೀ ದೇಹಕ್ಕೆ ಸಮನಾಗಿ ಹಂಚುವುದರಿಂದ, ಅದರ ಚರ್ಮಕ್ಕೆ ಅಷ್ಟೇನು ಹಾನಿಯಾಗುವುದಿಲ್ಲ. ಹಾವು ಎರಡರಿಂದ ಮೂರು ತಿಂಗಳಿಗೊಮ್ಮೆ ಮಾತ್ರ ತನ್ನ ಪೊರೆಯನ್ನು ಕಳಚುವುದರಿಂದ ಅದರ ಚರ್ಮ ಬಾಳಿಕೆ ಬರಬೇಕು.

ಹಾವಿನ ಚರ್ಮದ ಗುಣಲಕ್ಷಣಗಳನ್ನು ಹೊಂದಿರುವಂಥ ವಸ್ತುಗಳು ವೈದ್ಯಕೀಯ ಕ್ಷೇತ್ರದಲ್ಲಿ ಉಪಯುಕ್ತವಾಗಬಹುದು. ಉದಾಹರಣೆಗೆ, ದೇಹದೊಳಗೆ ಅಳವಡಿಸುವ ಕೃತಕ ವಸ್ತುಗಳ ತಯಾರಿಕೆಯಲ್ಲಿ ಈ ಗುಣಲಕ್ಷಣಗಳು ಹೆಚ್ಚು ಉಪಯುಕ್ತ. ಏಕೆಂದರೆ, ಅಂಥ ವಸ್ತುಗಳು ಜಾರದಂತಿರಬೇಕು ಮತ್ತು ಹೆಚ್ಚು ಬಾಳಿಕೆ ಬರುವಂತಿರಬೇಕು. ಭಾರವಾದ ವಸ್ತುಗಳನ್ನು ಸಾಗಿಸಲು ಬಳಸುವಂಥ ಯಂತ್ರಗಳಲ್ಲಿ ಹಾವಿನ ಚರ್ಮದ ರಚನೆಯನ್ನು ಅನುಕರಿಸುವುದಾದರೆ, ಯಂತ್ರಗಳು ಸರಾಗವಾಗಿ ಚಲಿಸಲು ಹಾಕುವ ಕೀಲೆಣ್ಣೆಯ ಬಳಕೆ ಕಡಿಮೆಯಾಗುತ್ತದೆ.

ನೀವೇನು ನೆನೆಸುತ್ತೀರಿ?ಹಾವಿನ ಚರ್ಮವು ವಿಕಾಸವಾಗಿ ಬಂತೇ? ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನೇ? (g14-E 03)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ