ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/15 ಪು. 16
  • ಮೊಸಳೆಯ ದವಡೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೊಸಳೆಯ ದವಡೆ
  • ಎಚ್ಚರ!—2015
  • ಅನುರೂಪ ಮಾಹಿತಿ
  • ‘ನದಿಯ ನೇತ್ರಗಳ’ ಕುರಿತು ಎಚ್ಚರಿಕೆಯಿಂದಿರ್ರಿ!
    ಎಚ್ಚರ!—1996
  • ಮೊಸಳೆಯ ಕಡೆಗೆ ಹೆಚ್ಚು ನಿಕಟವಾದ ಒಂದು ನೋಟ
    ಎಚ್ಚರ!—1995
  • ಮೊಸಳೆಯನ್ನು ನೋಡಿ ನಸುನಗೆ ಬೀರಬಲ್ಲಿರೋ?
    ಎಚ್ಚರ!—2005
  • ಜಗತ್ತನ್ನು ಗಮನಿಸುವುದು
    ಎಚ್ಚರ!—1996
ಇನ್ನಷ್ಟು
ಎಚ್ಚರ!—2015
g 10/15 ಪು. 16
ತಾಯಿ ಮೊಸಳೆ, ತನ್ನ ಬಾಯಲ್ಲಿ ಮರಿಯನ್ನು ಜೋಪಾನವಾಗಿ ಇಟ್ಟುಕೊಂಡಿರುವುದು

ವಿಕಾಸವೇ? ವಿನ್ಯಾಸವೇ?

ಮೊಸಳೆಯ ದವಡೆ

ಈಗಿರುವ ಬೇರೆಲ್ಲ ಪ್ರಾಣಿಗಳಿಗಿಂತ ಮೊಸಳೆ ತುಂಬ ಗಟ್ಟಿಯಾಗಿ ಕಚ್ಚುತ್ತದೆ. ಉದಾಹರಣೆಗೆ, ಆಸ್ಟ್ರೇಲಿಯಾದ ಉಪ್ಪು ನೀರಿನಲ್ಲಿ ಕಂಡುಬರುವ ಮೊಸಳೆಯು, ಹುಲಿ ಅಥವಾ ಸಿಂಹಕ್ಕಿಂತ ಮೂರು ಪಟ್ಟು ಹೆಚ್ಚು ಗಟ್ಟಿಯಾಗಿ ಕಚ್ಚುತ್ತದೆ. ಇಷ್ಟು ಬಲಶಾಲಿಯಾಗಿದ್ದರೂ ಮೊಸಳೆಯ ದವಡೆ ಸ್ಪರ್ಶವನ್ನು ಗ್ರಹಿಸುವ ಸಾಮರ್ಥ್ಯವನ್ನೂ ಹೊಂದಿದೆ. ಈ ಸಾಮರ್ಥ್ಯ ಮಾನವನ ಬೆರಳ ತುದಿಗಿಂತಲೂ ಮೊಸಳೆಯಲ್ಲಿ ಹೆಚ್ಚಿದೆ. ಲೋಹಕ್ಕಿಂತ ಗಟ್ಟಿಮುಟ್ಟಾದ ಚರ್ಮವನ್ನು ಹೊಂದಿರುವ ಮೊಸಳೆಗೆ ಇಷ್ಟು ಸೂಕ್ಷ್ಮತೆಯೂ ಇರಲು ಹೇಗೆ ಸಾಧ್ಯ?

ಮೊಸಳೆಯ ದವಡೆಯಲ್ಲಿ ಸಾವಿರಾರು ನರಗಳಿವೆ. ಈ ನರಗಳ ಬಗ್ಗೆ ಸಂಶೋಧನೆ ಮಾಡಿದ ಸಂಶೋಧಕ ಡಂಕನ್‌ ಲೀಚ್‌ ಹೀಗೆ ಹೇಳುತ್ತಾರೆ: “ಪ್ರತಿಯೊಂದು ನರಗಳು ಮೊಸಳೆಯ ತಲೆಬುರುಡೆಯ ರಂಧ್ರಗಳ ಮೂಲಕ ಮೆದುಳಿನ ಸಂಪರ್ಕದಲ್ಲಿರುತ್ತವೆ.” ಈ ರೀತಿಯ ರಚನೆಯಿಂದಾಗಿ ದವಡೆಗಳಲ್ಲಿರುವ ನರಗಳಿಗೆ ಸ್ಪರ್ಶವನ್ನು ಗ್ರಹಿಸುವ ಸಾಮರ್ಥ್ಯವಿರುತ್ತದೆ. ದವಡೆಯ ಕೆಲವು ಭಾಗಗಳಲ್ಲಿ ಎಷ್ಟು ಸೂಕ್ಷ್ಮತೆ ಇರುತ್ತದೆಂದರೆ ಯಾವುದೇ ಸಾಧನಗಳಿಂದಲೂ ಅದನ್ನು ಅಳೆಯಲು ಸಾಧ್ಯವಿಲ್ಲ. ಇದರಿಂದಾಗಿ, ಮೊಸಳೆಗೆ ತನ್ನ ಬಾಯಲ್ಲಿರುವುದು ಆಹಾರನಾ ಅಥವಾ ಕಸನಾ ಎಂದು ಕಂಡುಹಿಡಿಯಲು ಸಾಧ್ಯವಾಗುತ್ತದೆ. ತಾಯಿ ಮೊಸಳೆ ತನ್ನ ಮರಿಗಳನ್ನು ಬಾಯಲ್ಲಿ ಇಟ್ಟುಕೊಂಡಿರುವಾಗ ಅಪ್ಪಿತಪ್ಪಿಯೂ ಕಚ್ಚುವುದಿಲ್ಲ. ಮೊಸಳೆ ಶಕ್ತಿಗೂ ಸೈ, ಸೂಕ್ಷ್ಮತೆಗೂ ಸೈ!

ನೀವೇನು ನೆನಸುತ್ತೀರಿ? ಮೊಸಳೆಯ ದವಡೆ ವಿಕಾಸವಾಗಿ ಬಂತೇ? ಅಥವಾ ಸೃಷ್ಟಿಕರ್ತನು ವಿನ್ಯಾಸಿಸಿದನೇ? ◼ (g15-E 07)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ