ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g16 ನಂ. 2 ಪು. 14-15
  • ನಿಮಗೆ ವಯಸ್ಸಿಗೆ ಬರುವ ಮಕ್ಕಳಿದ್ದಾರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ವಯಸ್ಸಿಗೆ ಬರುವ ಮಕ್ಕಳಿದ್ದಾರಾ?
  • ಎಚ್ಚರ!—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಮಸ್ಯೆ
  • ನಿಮಗಿದು ತಿಳಿದಿರಲಿ
  • ನೀವೇನು ಮಾಡಬಹುದು?
  • ನನ್ನ ದೇಹದಲ್ಲಿ ಏನಾಗುತ್ತಾ ಇದೆ?
    ಎಚ್ಚರ!—1991
  • ಹದಿವಯಸ್ಕರೊಂದಿಗೆ ಸಂವಾದ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ತಾರುಣ್ಯ ಪ್ರಾಪ್ತವಯಸ್ಸಿಗೆ ತಯಾರಿ
    ಎಚ್ಚರ!—2011
  • ಪರಿವಿಡಿ
    ಎಚ್ಚರ!—2016
ಇನ್ನಷ್ಟು
ಎಚ್ಚರ!—2016
g16 ನಂ. 2 ಪು. 14-15
ತಂದೆ ಮಗನ ಜೊತೆ ಮಾತಾಡುತ್ತಿದ್ದಾನೆ

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ನಿಮಗೆ ವಯಸ್ಸಿಗೆ ಬರುವ ಮಕ್ಕಳಿದ್ದಾರಾ?

ಚಿಕ್ಕ ಹುಡುಗನಿಂದ ಒಬ್ಬ ವಯಸ್ಕನಾಗುವ ಸಮಯದ ಮಧ್ಯ ಭಾಗದಲ್ಲಿ ಬರುವ ಹಂತವನ್ನು ತಂದೆ ತನ್ನ ಮಗನಿಗೆ ದಿಕ್ಕು ಫಲಕದ ಮೇಲೆ ತೋರಿಸುತ್ತಿದ್ದಾರೆ

ಸಮಸ್ಯೆ

ನಿಮ್ಮ ಮಗನನ್ನೊ ಮಗಳನ್ನೊ ನಿನ್ನೆ ತಾನೇ ಕೈಯಲ್ಲಿ ಎತ್ತಿ ಆಡಿಸಿದ ನೆನಪು ನಿಮಗಿನ್ನೂ ಇರುತ್ತೆ. ಈಗ ನೋಡಿದರೆ ನಿಮ್ಮ ಬುಜದೆತ್ತರಕ್ಕೆ ಬೆಳೆದು ನಿಂತಿದ್ದಾರೆ. ಹೆತ್ತವರಿಗೆ ಮಕ್ಕಳು ಯಾವಾಗಲೂ ಮಕ್ಕಳೇ. ಆದರೆ ನಿಮ್ಮ ಮಕ್ಕಳು ವಯಸ್ಸಿಗೆ ಬರುವ ಹಂತದಲ್ಲಿದ್ದರೆ ಆಗೇನು?

ಇದು ಗಲಿಬಿಲಿಯನ್ನು ಕೆಲವೊಮ್ಮೆ ಗಾಬರಿಯನ್ನು ಉಂಟುಮಾಡುವ ಹಂತವಾಗಿದೆ. ಏಕೆಂದರೆ ಈ ಸಮಯದಲ್ಲಿ ದೇಹದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ. ಇದನ್ನೆಲ್ಲ ನಿಭಾಯಿಸಲು ನಿಮ್ಮ ಮಗ/ಮಗಳಿಗೆ ಹೇಗೆ ಸಹಾಯ ಮಾಡುತ್ತೀರಾ?

ನಿಮಗಿದು ತಿಳಿದಿರಲಿ

ಇಂತಿಷ್ಟೇ ಪ್ರಾಯದಲ್ಲಿ ವಯಸ್ಸಿಗೆ ಬರಬೇಕೆಂದಿಲ್ಲ. ಕೆಲವರು 8 ವರ್ಷಕ್ಕೆ ಇನ್ನು ಕೆಲವರು 15 ಅಥವಾ ಸ್ವಲ್ಪ ನಂತರ ವಯಸ್ಸಿಗೆ ಬರಬಹುದು. ಆದ್ದರಿಂದ ಗಾಬರಿಗೊಳ್ಳುವ ಅಗತ್ಯವಿಲ್ಲ, ಇದು ಸಹಜ ಎಂದು ಲೆಟಿಂಗ್‌ ಗೊ ವಿತ್‌ ಲವ್‌ ಆ್ಯಂಡ್‌ ಕಾನ್ಫಿಡೆನ್ಸ್‌ ಎಂಬ ಪುಸ್ತಕ ಹೇಳುತ್ತದೆ.

ವಯಸ್ಸಿಗೆ ಬಂದಾಗ ಕೀಳರಿಮೆ ಕಾಡಬಹುದು. ಬೇರೆಯವರು ತಮ್ಮ ಬಗ್ಗೆ ಏನಂದುಕೊಳ್ತಾರೊ ಅಂತ ಹದಿವಯಸ್ಸಿನವರು ತುಂಬ ಯೋಚಿಸುತ್ತಾರೆ. “ನೋಡಕ್ಕೆ ನಾನು ಹೇಗಿದ್ದೇನೆ, ಹೇಗೆ ವರ್ತಿಸ್ತೇನೆ ಅನ್ನೊದರ ಬಗ್ಗೆ ತುಂಬ ಯೋಚಿಸ್ತಿದ್ದೆ. ನಾನು ವಿಚಿತ್ರವಾಗಿ ಆಡ್ತೇನೆ ಅಂತ ಜನ ನೆನಸ್ತಾರೇನೊ ಅಂತ ಅನಿಸುತ್ತಿತ್ತು” ಎಂದು ಹೇಳ್ತಾನೆ ಜರಾಡ್‌a ಎಂಬ ಯುವಕ. ಮೊಡವೆಗಳು ಬಂದರಂತೂ ಆತ್ಮವಿಶ್ವಾಸ ಕಣ್ಮರೆಯಾಗುತ್ತದೆ. “ನನ್ನ ಮುಖ ಮೊಡವೆಗಳಿಂದ ತುಂಬಿಕೊಂಡಿತ್ತು! ಅಳುತ್ತಾ, ‘ಛೀ ನೀನು ನೋಡಕ್ಕೆ ಅಸಹ್ಯವಾಗಿದ್ದೀಯ’ ಅಂತ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ” ಅನ್ನುತ್ತಾಳೆ ಕೆಲಿ (17).

ಬೇಗನೆ ವಯಸ್ಸಿಗೆ ಬಂದರೆ ಎದುರಾಗುವ ಸವಾಲುಗಳು. ಇದರಿಂದ ಹೆಣ್ಮಕ್ಕಳಿಗೆ ಸವಾಲುಗಳು ಹೆಚ್ಚು. ಸ್ತನಗಳು ಬೆಳೆಯುವಾಗ ಕೆಲವರು ಗೇಲಿಮಾಡಬಹುದು. “ಲೈಂಗಿಕವಾಗಿ ಪ್ರೌಢರಾಗಿರುವ ಹುಡುಗರು ಇವರನ್ನು ಚುಡಾಯಿಸುವ ಅಪಾಯ ಸಹ ಇದೆ” ಎಂದು ಹದಿವಯಸ್ಸಿನ ಮಕ್ಕಳಿರುವ ಹೆತ್ತವರಿಗೆ ನಿರ್ದೇಶನ ನೀಡುವ ಕೈಪಿಡಿ ಹೇಳುತ್ತದೆ.

ವಯಸ್ಸಿಗೆ ಬಂದಿದ್ದಾರೆ ಎಂದ ಮಾತ್ರಕ್ಕೆ ಪ್ರೌಢರಲ್ಲ. “ಮೂರ್ಖತನವು ಹುಡುಗನ [ಅಥವಾ ಹುಡುಗಿಯ] ಮನಸ್ಸಿಗೆ ಸಹಜ” ಎಂದು ಜ್ಞಾನೋಕ್ತಿ 22:15 ಹೇಳುತ್ತದೆ. ನಿಮ್ಮ ಮಗ/ಮಗಳು ವಯಸ್ಸಿಗೆ ಬಂದಿರಬಹುದು. ಹಾಗಂತ “ಅವರಿಗೆ ಒಳ್ಳೆ ನಿರ್ಣಯಗಳನ್ನು ಮಾಡುವ ಸಾಮರ್ಥ್ಯ ಬಂದಿದೆ, ಜವಾಬ್ದಾರಿ ಬಂದಿದೆ, ಸ್ವನಿಯಂತ್ರಣ ಕಲಿತಿದ್ದಾರೆ, ಪ್ರೌಢರಾಗಿ ನಡಕೊಳ್ಳುತ್ತಾರೆ ಎಂದು ಇದರ ಅರ್ಥವಲ್ಲ” ಎನ್ನುತ್ತದೆ ನೀವು ಮತ್ತು ನಿಮ್ಮ ಯುವಪ್ರಾಯದ ಮಕ್ಕಳು (ಇಂಗ್ಲಿಷ್‌) ಎಂಬ ಪುಸ್ತಕ.

ನೀವೇನು ಮಾಡಬಹುದು?

ವಯಸ್ಸಿಗೆ ಬರುವುದರ ಬಗ್ಗೆ ಮುಂಚಿತವಾಗಿ ಮಾತಾಡಿ. ದೇಹದಲ್ಲಿ ತುಂಬ ಬದಲಾವಣೆಗಳಾಗುವ ಸಮಯವದು. ಹಾಗಾಗಿ ಅದರ ಬಗ್ಗೆ ಮುಂಚಿತವಾಗಿ ಮಾತಾಡಿ. ಋತುಚಕ್ರದ ಬಗ್ಗೆ (ಹೆಣ್ಣು ಮಕ್ಕಳಿಗೆ) ಮತ್ತು ವೀರ್ಯಸ್ಖಲನದ ಬಗ್ಗೆ (ಗಂಡು ಮಕ್ಕಳಿಗೆ) ತಿಳಿಸಿಕೊಡಿ. ಈ ವಿಷಯಗಳು ದಿಢೀರೆಂದು ಆಗುತ್ತವೆ. ಇದು ಗೊಂದಲ, ಗಾಬರಿ ಉಂಟುಮಾಡಬಹುದು. ವಯಸ್ಸಿಗೆ ಬರುವಾಗ ಆಗುವ ಬದಲಾವಣೆಗಳು ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಇನ್ನೊಂದು ಜೀವಕ್ಕೆ ಜೀವ ಕೊಡುವ ಶಕ್ತಿ ಅವರಿಗೆ ಬರುತ್ತಿದೆ ಎಂದು ತೋರಿಸಿಕೊಡುತ್ತದೆ. ಹಾಗಾಗಿ ನಿಮ್ಮ ಮಕ್ಕಳಲ್ಲಿ ಧೈರ್ಯ ತುಂಬಿ.—ಬೈಬಲ್‌ ತತ್ವ: ಕೀರ್ತನೆ 139:14.

ಮುಚ್ಚುಮರೆ ಇಲ್ಲದೆ ಮಾತಾಡಿ. “ವಯಸ್ಸಿಗೆ ಬರುವುದರ ಬಗ್ಗೆ ನನ್ನ ಹೆತ್ತವರು ಮುಚ್ಚುಮರೆಯಿಲ್ಲದೆ ಮಾತಾಡಿದ್ದರೆ ಒಳ್ಳೇದಿರುತ್ತಿತ್ತು” ಎನ್ನುತ್ತಾನೆ ಯುವ ಜಾನ್‌. ಆಲಿಯಾ (17) ಅನ್ನುವುದು: “ದೇಹದಲ್ಲಿ ಆಗುವ ಬದಲಾವಣೆಗಳನ್ನು ತಿಳಿಯಲು ಅಮ್ಮ ಸಹಾಯ ಮಾಡಿದ್ರು. ಭಾವನೆಗಳಲ್ಲಾಗುವ ಏರುಪೇರನ್ನೂ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದ್ರೆ ಚೆನ್ನಾಗಿರುತ್ತಿತ್ತು.” ಇದರಿಂದೇನು ಪಾಠ? ವಯಸ್ಸಿಗೆ ಬರುವುದರ ಬಗ್ಗೆ ಮಾತಾಡುವುದು ಮುಜುಗರದ ವಿಷಯ ಅನಿಸಬಹುದು. ಆದರೆ ಅದರ ಬಗ್ಗೆ ಹಿಂಜರಿಯದೆ ಮಾತಾಡಿ.—ಬೈಬಲ್‌ ತತ್ವ: ಅ. ಕಾರ್ಯಗಳು 20:20.

ಮಾತಿಗೆಳೆಯುವಂಥ ಪ್ರಶ್ನೆಗಳನ್ನು ಕೇಳಿ. ವಯಸ್ಸಿಗೆ ಬರುವುದರ ಬಗ್ಗೆ ಬೇರೆಯವರು ಏನಂತಾರೆಂದು ಕೇಳಿ. ನಿಮ್ಮ ಮಗಳಿಗೆ ಹೀಗೆ ಕೇಳಬಹುದು: “ಪಿರಿಯಡ್ಸ್‌ ಬಗ್ಗೆ ಫ್ರೆಂಡ್ಸ್‌ ಯಾರಾದ್ರು ಶಾಲೆಯಲ್ಲಿ ಮಾತಾಡ್ತಾರಾ?” “ಚಿಕ್ಕ ವಯಸ್ಸಲ್ಲೇ ದೊಡ್ಡವಳಂತೆ ಕಾಣೋ ಫ್ರೆಂಡ್ಸ್‌ ಅನ್ನು ಯಾರಾದ್ರೂ ಗೇಲಿ ಮಾಡ್ತಾರಾ?” ನಿಮ್ಮ ಮಗನಿಗೆ ಹೀಗೆ ಕೇಳಬಹುದು: “‘ಇವನಿಗೆ ಇನ್ನೂ ಮೀಸೆನೇ ಬಂದಿಲ್ಲ’ ಅಂತ ಹುಡುಗ್ರು ಯಾರನ್ನಾದ್ರೂ ರೇಗಿಸ್ತಾರಾ?” ವಯಸ್ಸಿಗೆ ಬಂದವರ ಜೊತೆ ಏನೆಲ್ಲ ನಡಿತಿದೆ ಅಂತ ಮಕ್ಕಳು ಮಾತಾಡುವಾಗ ತಮಗೆ ಏನಾಗುತ್ತಿದೆ, ಹೇಗನಿಸುತ್ತಿದೆ ಎಂದು ಮುಕ್ತವಾಗಿ ಮಾತಾಡುತ್ತಾರೆ. ಆಗ ಬೈಬಲಿನ ಈ ಮಾತನ್ನು ಪಾಲಿಸಿ: ‘ಕಿವಿಗೊಡುವುದರಲ್ಲಿ ಶೀಘ್ರರೂ ಮಾತಾಡುವುದರಲ್ಲಿ ನಿಧಾನಿಯೂ ಆಗಿರಿ.’—ಯಾಕೋಬ 1:19.

“ಸುಜ್ಞಾನವನ್ನೂ ಬುದ್ಧಿಯನ್ನೂ” ಬೆಳೆಸಿಕೊಳ್ಳಲು ಸಹಾಯ ಮಾಡಿ. (ಜ್ಞಾನೋಕ್ತಿ 3:21) ಮಕ್ಕಳು ವಯಸ್ಸಿಗೆ ಬರೋದು ಅಂದರೆ ಬರೀ ದೇಹದಲ್ಲಿ, ಭಾವನೆಗಳಲ್ಲಿ ಬದಲಾವಣೆಯಾಗುತ್ತೆ ಎಂದಲ್ಲ. ಸರಿ-ತಪ್ಪು ಯಾವುದೆಂದು ಅರ್ಥಮಾಡಿಕೊಳ್ಳಲು ಆರಂಭಿಸುತ್ತಾರೆ. ಅವರು ಬೆಳೆಯುತ್ತಾ ಹೋದಂತೆ ಒಳ್ಳೇ ನಿರ್ಣಯಗಳನ್ನು ಮಾಡಲು ಇದು ನೆರವಾಗುತ್ತೆ. ಈ ಹಂತವನ್ನು ಚೆನ್ನಾಗಿ ಬಳಸಿಕೊಂಡು ಮಕ್ಕಳಿಗೆ ಜೀವನದ ಒಳ್ಳೇ ಮೌಲ್ಯಗಳನ್ನು ಕಲಿಸಿ.—ಬೈಬಲ್‌ ತತ್ವ: ಇಬ್ರಿಯ 5:14.

ಕೈಚೆಲ್ಲಿ ಕೂರಬೇಡಿ. ವಯಸ್ಸಿಗೆ ಬರುವುದರ ಬಗ್ಗೆ ತುಂಬ ಮಕ್ಕಳು ಹೆತ್ತವರ ಬಳಿ ಮಾತಾಡಲು ಮುಜುಗರ ಪಡುತ್ತಾರೆ. ಹಾಗಂತ ಸುಮ್ಮನಾಗಬೇಡಿ. “ಆ ವಿಷಯದ ಬಗ್ಗೆ ಮಾತಾಡುವಾಗ ಮಕ್ಕಳು ಆಸಕ್ತಿ ಇಲ್ಲದವರಂತೆ, ಆಲಸಿಗಳಂತೆ, ಅಸಹ್ಯ ಅನಿಸುವ ತರ, ತಮಗೇನು ಕೇಳ್ತಾ ಇಲ್ಲ ಅನ್ನುವ ತರ ತೋರಿಸಿಕೊಳ್ಳಬಹುದು. ಆದರೆ ಇಂಥವರು ನೀವು ಹೇಳೊ ಒಂದೊಂದು ಪದಕ್ಕೂ ಗಮನಕೊಡುತ್ತಾ ಇರುತ್ತಾರೆ” ಎಂದು ನೀವು ಮತ್ತು ನಿಮ್ಮ ಯುವಪ್ರಾಯದ ಮಕ್ಕಳು (ಇಂಗ್ಲಿಷ್‌) ಪುಸ್ತಕ ಹೇಳುತ್ತದೆ. ◼ (g16-E No. 2)

a ಹೆಸರುಗಳನ್ನು ಬದಲಾಯಿಸಲಾಗಿದೆ.

ಬೈಬಲಿನ ನುಡಿಮುತ್ತುಗಳು

  • ‘ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದಿ.’—ಕೀರ್ತನೆ 139:14.

  • “ನಾನು ನಿಮಗೆ ಪ್ರಯೋಜನಕರವಾದ ಯಾವುದೇ ವಿಷಯಗಳನ್ನು ಹೇಳಲು . . . ಹಿಂಜರಿಯಲಿಲ್ಲ.”—ಅಪೊಸ್ತಲರ ಕಾರ್ಯಗಳು 20:20.

  • ‘ಪ್ರೌಢರು ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತಿಗೊಳಿಸಿಕೊಳ್ಳುತ್ತಾರೆ.’—ಇಬ್ರಿಯ 5:14.

“ನಾನು ವಯಸ್ಸಿಗೆ ಬರೋ ಸಮಯದಲ್ಲಿ ನನ್ನ ಅಪ್ಪಅಮ್ಮ ತುಂಬ ಸಹಾಯ ಮಾಡಿದ್ರು. ಅಮ್ಮ ಸಮಯ ಮಾಡಿಕೊಂಡು ಎಲ್ಲವನ್ನು ವಿವರಿಸಿ ಹೇಳಿದರು. ಮುಂದೆ ಏನಾಗಬಹುದು, ನಾನೇನು ಮಾಡ್ಬೇಕು ಅಂತ ನನಗೆ ಚೆನ್ನಾಗಿ ಗೊತ್ತಾಯಿತು. ಹಾಗಾಗಿ ದೊಡ್ಡವಳಾದಾಗ ನನಗೆ ಗಾಬರಿಯೇನಾಗಲಿಲ್ಲ. ಅಷ್ಟೇ ಅಲ್ಲ, ನಾನು ಮನಸ್ಸುಬಿಚ್ಚಿ ಇದರ ಬಗ್ಗೆ ಮಾತಾಡುವಂತೆ ಅಮ್ಮ ಯಾವಾಗ್ಲು ಸಹಾಯ ಮಾಡಿದ್ರು. ಮುಜುಗರ ಅನಿಸುವಾಗಲೂ ಮುಚ್ಚುಮರೆಯಿಲ್ಲದೆ ಮಾತಾಡಕ್ಕೆ ಅಪ್ಪಅಮ್ಮನ ಸಹಾಯ ಸಿಕ್ತು.”—ಮರಿಯಾ (16).

“ನನ್ನ ತಂದೆತಾಯಿಯ ಸಹಕಾರ ನನಗಿತ್ತು. ವಯಸ್ಸಿಗೆ ಬರುವ ಆ ಸಮಯದಲ್ಲಾಗುವ ಅನುಭವದಿಂದ ನನಗೆ ನಾಚಿಕೆಯಾಗಬಹುದು ಎಂದು ಅವರು ಅರ್ಥಮಾಡಿಕೊಂಡರು. ಹಾಗಾಗಿ ನನ್ನ ಪಾಡಿಗೆ ನನ್ನನ್ನು ಬಿಡುತ್ತಿದ್ದರು. ಎಲ್ರಿಗೂ ಹೇಳ್ಕೊಂಡು ಬರಲಿಲ್ಲ. ಅದೊಂದು ಒಳ್ಳೇ ವಿಷ್ಯ ಆಗಿತ್ತು. ನಾನು ವಯಸ್ಸಿಗೆ ಬರುವ ಮುಂಚೆನೇ ಅದರ ಬಗ್ಗೆ ನನ್ನತ್ರ ಮಾತಾಡಿದ್ರು.” —ಜ್ಯಾನೆಟ್‌ (18).

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ