ಯುವ ಜನರು ಪ್ರಶ್ನಿಸುವುದು...
ನನ್ನ ದೇಹದಲ್ಲಿ ಏನಾಗುತ್ತಾ ಇದೆ?
ನಿಮ್ಮ ದೇಹದಲ್ಲಿ ಆಶ್ಚರ್ಯಕರವಾದ ಬದಲಾವಣೆಗಳು ಸಂಭವಿಸಲು ಆರಂಭವಾಗಿದೆ.
ಈಗಾಗಲೇ, ಅವುಗಳು ಆಶ್ಚರ್ಯಕರವಾಗಿಯೇ ಹೊರತು ಬೇರೇನೂ ಅಲ್ಲವೆಂದು ಭಾಸವಾಗಬಹುದು. ನಿಮಗೆ ಗಲಿಬಿಲಿಯಾಗಬಹುದು, ಪೇಚಾಟವಾಗಬಹುದು, ಇಲ್ಲವೇ ನಿಮಗೆ ಏನು ಸಂಭವಿಸುತ್ತದೋ ಅದರಿಂದ ಭಯವಾಗಲೂ ಬಹುದು. “ನಾನು ಕೇವಲ ತಯಾರಾಗಿಲ್ಲ,” ಎಂದಳು ಒಬ್ಬಾಕೆ ಹುಡುಗಿ. “ನಾನು ಎಣಿಸಿದೆನು, ಓ ಇಲ್ಲ, ಈಗಲೇ ಇದು ನನಗೆ ಆಗುವದು ನನಗೆ ಇಷ್ಟವಿರಲಿಲ್ಲ.” ಒಬ್ಬ ಹುಡುಗನು ಅಂದದ್ದು: “ನಾನು ಒಬ್ಬ ವಿಚಿತ್ರನೋ ಯಾ ಸಾಮಾನ್ಯನೋ ಎಂದು ನನಗೆ ಗೊತ್ತಿಲ್ಲ. ನಾನು 13 ವರ್ಷದವನು ಮತ್ತು ನನ್ನ ದೇಹದಲ್ಲಿ ಬದಲಾವಣೆಗಳು ಆಗುತ್ತಾ ಇವೆ. . . . ನಾನು ನಿಜವಾಗಿಯೂ ಭಿನ್ನನು ಮತ್ತು ಏಕಾಂಗಿಯು ಎಂಬ ಭಾವನೆ ನನ್ನಲ್ಲಿ ಕೆಲವೊಮ್ಮೆ ಉಂಟಾಗುತ್ತದೆ ಮತ್ತು ನನ್ನನ್ನು ಯಾರಾದರೊಬ್ಬರು ಹಾಸ್ಯಮಾಡುವರು ಎಂಬ ವಿಷಯದಲ್ಲಿ ನಾನು ಖಂಡಿತವಾಗಿಯೂ ಹೆದರುತ್ತೇನೆ.”
ತದ್ರೀತಿಯಲ್ಲಿ ನೀವೂ ಕೂಡ ಭಾವಿಸಿರಬಹುದು ಎಂಬದು ಅರ್ಥಮಾಡಿಕೊಳ್ಳಬಹುದಾದ ಸಂಗತಿ. ಒಬ್ಬ ಹದಿವಯಸ್ಕ ಹುಡುಗಿಯು, ಅವಳ “ಶರೀರವು ಹುಚ್ಚುಹಿಡಿದಂತೆ ವರ್ತಿಸಲು ಆರಂಭಿಸಿದ” ಸಮಯ ಎಂದು ಹೇಳಿದ ಆ ಸ್ಥಿತಿಯನ್ನು ನೀವು ದಾಟುತ್ತಾ ಇದ್ದೀರಿ. ಆದರೆ ಆ ಸಮಯದಲ್ಲಿ “ಹುಚ್ಚು ಹಿಡಿದಂತೆ” ಎಂದು ಯಾವುದು ಭಾಸವಾಗುತ್ತದೋ, ಅದು ನಿಮ್ಮನ್ನು ಬಾಲ್ಯತನದಿಂದ ಹದಿಹರೆಯಕ್ಕೆ ಬದಲಾಯಿಸುವ ಒಂದು ಕ್ರಮಬದ್ಧ ಕಾರ್ಯಗತಿಯಾಗಿರುತ್ತದೆ. ಅದನ್ನು ಮೈನೆರೆಯುವದು ಎಂದು ಕರೆಯಲಾಗುತ್ತದೆ. ಮತ್ತು ಅದರ ದಿಗಿಲುಗೊಳಿಸುವ ಧ್ವನಿಯ ಹೆಸರಿನ ಹೊರತಾಗಿಯೂ, ಮೈನೆರೆಯುವಿಕೆಯು ಯಾವುದಾದರೊಂದು ರೋಗವಲ್ಲ, ಇಲ್ಲವೇ ಇದರ ಮೂಲಕ ದಾಟುವದರಲ್ಲಿ ನೀವೇನೂ ಮೊದಲಿಗರಲ್ಲ. ನಿಮ್ಮ ತಾಯಿ, ತಂದೆ ಕೂಡ ಅದನ್ನು ಅನುಭವಿಸಿರುತ್ತಾರೆ. ನಿಮ್ಮ ಶಾಲಾಸಂಗಾತಿಗಳು ಮತ್ತು ನಿಮ್ಮ ಸಮ ವಯಸ್ಸಿನ ಮಿತ್ರರು ಪ್ರಾಯಶಃ ಇದನ್ನು ದಾಟುತ್ತಿರಬಹುದು. ಮತ್ತು ನೀವು ಅದನ್ನು ಪಾರಾಗುತ್ತೀರಿ ಎಂಬ ಆಶ್ವಾಸನೆಯಿಂದಿರ್ರಿ.
ಆದರೆ ನಿಮ್ಮ ದೇಹದಲ್ಲೆಲ್ಲಾ ಆಗುವ ಈ ಸೋಜಿಗದ ಬೆಳವಣಿಗೆಯಾದರೂ ಏನು?
ಮೈನೆರೆಯುವಿಕೆಯ ರಸಾಯನ ವಿಜ್ಞಾನ
ಅವನಿಗೆ ಸುಮಾರು 12 ವರ್ಷಗಳಾದ ನಂತರ “ಯೇಸುವು . . .. ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು” ಎಂದು ಬೈಬಲು ಹೇಳುತ್ತದೆ. (ಲೂಕ 2:52) ಹೌದು, ಯೇಸುವು ಕೂಡ ಮೈನೆರೆಯುವಿಕೆಯನ್ನು ದಾಟಿದ್ದನು. ಮೈನೆರೆಯುವಿಕೆಯ ಸಮಯದಲ್ಲಿ, ಶಾರೀರಿಕ ವೃದ್ಧಿ ಮತ್ತು ಬೆಳವಣಿಗೆಯನ್ನು ನೀವು ಅನುಭವಿಸುವಿರಿ. ಆದರೆ ಈ ಬೆಳವಣಿಗೆಗೆ ಕಾರಣವಾಗುವದು ಯಾವುದು ಎಂಬುದು ಮಾತ್ರ ನಿಜವಾದ ರಹಸ್ಯ, ಒಂದು ಅದ್ಭುತವಾಗಿದೆ! ಒಂದು ಬೀಜವನ್ನು ಹಾಕಿದ ಒಬ್ಬ ಮನುಷ್ಯನ ಕುರಿತಾಗಿ ಯೇಸುವು ಹೇಳಿದ ಸಾಮ್ಯವು ನಮ್ಮ ಜ್ಞಾಪಕಕ್ಕೆ ಬರುವಂತೆ ಇದು ಮಾಡುತ್ತದೆ. ಯೇಸು ಅಂದದ್ದು: “ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು.” (ಮಾರ್ಕ 4:27) ತದ್ರೀತಿಯಲ್ಲಿ, ಯೌವನದಾರಂಭದಲ್ಲಿ ಏನು ಸಂಭವಿಸುತ್ತದೆ ಎನ್ನುವದರ ಒಂದು ಸ್ಥೂಲರೂಪದ ಹೊರಮೇರೆಯನ್ನು ಮಾತ್ರ ವೈದ್ಯರು ನಮಗೆ ಕೊಡಶಕ್ತರಾಗಿದ್ದಾರೆ.
ಒಂಭತ್ತು ಮತ್ತು ಹದಿನಾರು ವರ್ಷಗಳ ನಡುವಿನಲ್ಲಿ, ನೀವು ಮೈನೆರೆಯುವದಕ್ಕೆ ಆರಂಭಿಸುತ್ತೀರಿ. (ವ್ಯಕ್ತಿಯಿಂದ ವ್ಯಕ್ತಿಗೆ ಪ್ರಾಯವು ಹೆಚ್ಚು ಕಡಿಮೆ ಇರುತ್ತದೆ, ಮತ್ತು ಹುಡುಗಿಯರಲ್ಲಿ ಸಾಮಾನ್ಯವಾಗಿ ಒಂದೆರಡು ವರ್ಷ ಮೊದಲೇ ಆರಂಭಗೊಳ್ಳುತ್ತದೆ.) ನಿಮ್ಮ ಮಿದುಳು ಕಫ ಸ್ರಾವಕ (ಪಿಟ್ಯೂಇಟರಿ) ಎಂದು ಕರೆಯಲ್ಪಡುವ, ನಿಮ್ಮ ಬಾಯಿಯ ಮೇಲ್ಭಾಗದಲ್ಲಿರುವ ಒಂದು ಚಿಕ್ಕ ನಿರ್ನಾಳ ಗ್ರಂಥಿಯನ್ನು ಚಾಲುಗೊಳಿಸುವ ಮೂಲಕ ಒಂದು ಬೆರಗುಗೊಳಿಸುವ ಪ್ರತಿಕ್ರಿಯೆಯ ಸರಣಿಯೊಂದನ್ನು ಆರಂಭಿಸುತ್ತದೆ. ಈ ಕಫ ಸ್ರಾವಕವು ಚೋದಕ ಸ್ರಾವವೆಂದು (ಹಾರ್ಮೋನ್ಸ್) ಕರೆಯುಲ್ಪಡುವ ಕೆಲವು ರಸಾಯನಿಕ ಸಂದೇಶವಾಹಕರನ್ನು ಉತ್ಪಾದಿಸುವದರ ಮೂಲಕ ಪ್ರತಿಕ್ರಿಯಿಸುತ್ತದೆ. ಇವುಗಳು ನಿಮ್ಮ ರಕ್ತಪ್ರವಾಹದಲ್ಲಿ ಈಜಾಡುತ್ತಾ, ನಿಮ್ಮ ಸಂತಾನೋತ್ಪಾದಕ ಅಂಗಗಳು ಇನ್ನಿತರ ಕೆಲವು ಚೋದಕ ಸ್ರಾವಗಳನ್ನು ಉತ್ಪಾದಿಸುವಂತೆ ಆರಂಭಿಸಲು ಸಂಕೇತವನ್ನೀಯುತ್ತವೆ. ಹುಡುಗನೊಬ್ಬನ ವೃಷಣಗಳು ಪ್ರಾಮುಖ್ಯವಾಗಿ ಟೆಸ್ಟೊಸ್ಟಿರೋನ್ ಎಂಬಂಥ ಪುರುಷ ಚೋದಕ ಸ್ರಾವಗಳನ್ನು ಉತ್ಪಾದಿಸುತ್ತವೆ; ಹುಡುಗಿಯರ ಅಂಡಾಶಯಗಳು ಎಸ್ಟ್ರೋಜನ್‌ನಂಥಹ ಸ್ತ್ರೀ ಚೋದಕ ಸ್ರಾವಗಳನ್ನು ಉತ್ಪಾದಿಸುತ್ತವೆ.
ಈ ಚೋದಕ ಸ್ರಾವಗಳು, ಇದಕ್ಕುತ್ತರವಾಗಿ, ನೀವು ತೋರುವ ವಿಧದಲ್ಲಿ ಬದಲಾವಣೆಗಳನ್ನು ಮಾಡಲು ಆರಂಭಿಸುವಂತೆ, ಇತರ ಗ್ರಂಥಿಗಳಿಗೆ ಮತ್ತು ಅಂಗಾಂಗಗಳಿಗೆ ಈಗ ಸಂಕೇತಗಳನ್ನು ನೀಡುತ್ತವೆ.
ಹುಡುಗಿಯರು ಅನುಭವಿಸುವ ಬದಲಾವಣೆಗಳು
ನೀವು ಒಬ್ಬ ಹುಡುಗಿಯಾಗಿದ್ದರೆ, ನಿಮ್ಮ ಸ್ತನಗಳು ಕ್ರಮೇಣ ದೊಡ್ಡದಾಗುವದನ್ನು ನೀವು ಗಮನಿಸಬಹುದು. ನಿಮ್ಮ ಸ್ತನ ಸಂಬಂಧೀ ಗ್ರಂಥಿಗಳು ಬೆಳೆಯಲು ಆರಂಭಿಸುವಂತೆ ನಿಮ್ಮ ಚೋದಕ ಸ್ರಾವಗಳನ್ನು ಪ್ರಚೋದಿಸಲಾಗಿದೆ. (ಈ ಹಾಲು ಉತ್ಪಾದಿಸುವ ಗ್ರಂಥಿಗಳು ಅವರ ಕೂಸುಗಳಿಗೆ ಹಾಲೂಣಿಸುವಂಥಹ ಸಾಮರ್ಥ್ಯವನ್ನು ತಾಯಿಗಳಿಗೆ ಕೊಡುತ್ತವೆ.) ನಿಮ್ಮ ಚೋದಕ ಸ್ರಾವಗಳು ಕೊಬ್ಬನ್ನು ಉತ್ಪಾದಿಸುವಂತೆ ಪ್ರಚೋದಿಸುತ್ತವೆ, ಇದು ನಿಮ್ಮ ಸ್ಥನಗಳಿಗೆ ಆಕಾರವನ್ನು ಕೊಡುತ್ತದೆ. ನಿಮ್ಮ ಸೊಂಟಗಳಲ್ಲಿ, ತೊಡೆಗಳಲ್ಲಿ ಮತ್ತು ನಿತಂಬಗಳಲ್ಲಿ ಕೊಬ್ಬು ಶೇಖರಿಸಲ್ಪಡುವಂತೆ ಮಾಡುತ್ತದೆ. ನೀವು ತೂಕವನ್ನು ಗಳಿಸುತ್ತೀರಿ ವತ್ತು ತೀವ್ರ ಗತಿಯ ಥಟ್ಟನೆ ಬೆಳವಣಿಗೆಯನ್ನು ಅನುಭವಿಸುವಿರಿ.
ಈ ದೈಹಿಕ ಪರಿವರ್ತನೆಯನ್ನು ಹೆಚ್ಚಿನ ಹುಡುಗಿಯರು ಸುಸ್ವಾಗತಿಸುವದಾದರೂ, ಎಲ್ಲಾ ಹುಡುಗಿಯರು ಅದರ ಎಲ್ಲಾವನ್ನು ಸ್ವಾಗತಿಸುವದಿಲ್ಲ. ಉದಾಹರಣೆಗೆ, ನಿಮ್ಮ ತೋಳುಗಳ, ಕಾಲುಗಳ ಮೇಲೆ, ಮತ್ತು ತೋಳುಗಳ ಕೆಳಗೆ ಕೂದಲುಗಳು ದಪ್ಪವೂ, ಹೆಚ್ಚು ಕಪ್ಪೂ ಆಗಬಹುದು. ಈಗ, ಕೆಲವು ದೇಶಗಳಲ್ಲಿ ದೇಹದ ಅಂಥಹ ಕೂದಲುಗಳು ಸ್ತ್ರೀಯತ್ವವಲ್ಲದ್ದೂ, ಯಾ ಸ್ಟೈಲ್ ಅಲ್ಲದ್ದೂ ಎಂದು ಪರಿಗಣಿಸಲ್ಪಡಬಹುದು. ಫ್ಯಾಶನ್‌ನನ್ನು ಗಮನಿಸದಿರುವದಾದರೆ, ನೀವು ಒಬ್ಬ ಹೆಂಗಸಾಗಿ ಬೆಳೆಯುತ್ತಾ ಇದ್ದೀರಿ ಎಂಬುದಕ್ಕೆ ಅದೊಂದು ಆರೋಗ್ಯಕರ ಸೂಚನೆಯಾಗಿರುತ್ತದೆ.
ಇನ್ನೊಂದು ಸುಸ್ವಾಗತಿಸದ ಬದಲಾವಣೆಯೆಂದರೆ ನಿಮ್ಮ ಬೆವರಿನ ಗ್ರಂಥಿಗಳ ಏರಿದ ಕ್ರಿಯಾಚಟುವಟಿಕೆಯೇ—ನೀವು ಹೆಚ್ಚು ಬೆವರುತ್ತೀರಿ. ಇದರಿಂದ ಬರುವ ವಾಸನೆಯು ನಿಮ್ಮನ್ನು ಪೇಚಾಟಕ್ಕೀಡುಮಾಡಬಹುದು. ಆದರೆ, ನೀವು ಹಲವಾರು ಬಾರಿ ಸ್ನಾನ ಮಾಡುವದಾದರೆ ಮತ್ತು ಶುಭ್ರ ಬಟ್ಟೆಗೆಳನ್ನು ಧರಿಸುವದಾದರೆ, ಈ ದುರ್ವಾಸನೆಯ ಸಮಸ್ಯೆಗಳು ಬಹಳ ವಿರಳ. ಕೆಲವು ಯುವತಿಯರು ಈ ವಾಸನೆಯಿಂದ ರಕ್ಷಿಸಿಕೊಳ್ಳಲು ನಿರ್ಗಂಧಗಳನ್ನು (ಡೀಓಡೊರೆಂಟ್ಸ್) ಬಳಸಲು ಆಯ್ಕೆ ಮಾಡುತ್ತಾರೆ.
ಇನ್ನೊಂದು ಅತಿ ವ್ಯಕ್ತಿಗತ ಬೆಳವಣಿಗೆಯೆಂದರೆ ನಿಮ್ಮ ಜನನಾಂಗದ ಸ್ಥಳದ ಸುತ್ತಲೂ ಕೂದಲುಗಳು ಬೆಳೆಯುವದೇ ಆಗಿದೆ. ಇವುಗಳು ಗುಂಜೆಲುಬಿನ ಕೂದಲುಗಳು ಎಂದು ಕರೆಯಲ್ಪಡುತ್ತವೆ. ಇದರ ಕುರಿತು ಮೊದಲೇ ನಿಮಗೆ ತಿಳಿಸಲ್ಪಡದೆ ಇರುವದಾದರೆ, ಇದು ನಿಮ್ಮನ್ನು ಭಯಪಡುವಂತೆ ಮಾಡಬಹುದು. ಆದರೆ ಇದು ಪರಿಪೂರ್ಣವಾಗಿಯೂ ಸಾಮಾನ್ಯ ಮತ್ತು ಇದರ ಕುರಿತು ಸಂಕೋಚಪಡಲು ಏನೂ ಇರುವದಿಲ್ಲ.
ಮೈನೆರೆಯುವಿಕೆಯು ಕೂಡ ದ ನ್ಯೂ ಟೀನ್‌ಏಜ್ ಬಾಡಿ ಬುಕ್‌ನಲ್ಲಿ ಕರೆಯಲ್ಪಟ್ಟಿರುವಂತೆ, “[ಕಾಣಿಸಿ ಕೊಳ್ಳುವಿಕೆಯಲ್ಲಿ] ಹದಿವಯಸ್ಕರ ನಡುವಿನ ಮೊದಲ ಸಂಖ್ಯೆಯ ಚಿಂತೆ”—ಚರ್ಮದ ಸಮಸ್ಯೆಗಳು. ನಿಮ್ಮ ಶರೀರದ ರಸಾಯನ ವಿಜ್ಞಾನದ ಬದಲಾವಣೆಯು ಕೆಲವೊಮ್ಮೆ ಎಣ್ಣೆಯಾಂಶದ ಚರ್ಮ ಹೊಂದುವಂತೆ ಕಾರಣವಾಗಬಹುದು. ಮೊಡವೆಗಳು ಮತ್ತು ಕಪ್ಪುಚುಕ್ಕೆಯ ಗುಳ್ಳೆಗಳು ಎದ್ದೇಳಬಹುದು. (ಒಂದು ಸಮೀಕ್ಷೆಗನುಸಾರ, ಮೊಡವೆಗಳ ಸಮಸ್ಯೆಗಳು ಸಮೀಕ್ಷೆ ನಡಿಸಿದ ಹದಿವಯಸ್ಕರಲ್ಲಿ ಸುಮಾರು ಪ್ರತಿಶತ 90 ಮಂದಿಗೆ ಬಾಧಿಸಿವೆ!) ಸೌಭಾಗ್ಯವಶಾತ್, ಚರ್ಮದ ಒಳ್ಳೆಯ ಜೋಕೆ ವಹಿಸುವದರ ಮೂಲಕ ಸಾಮಾನ್ಯವಾಗಿ, ಸಮಸ್ಯೆಯನ್ನು ಹತೋಟಿಯಲ್ಲಿಡಬಹುದು.—ಫೆಬ್ರವರಿ 22, 1987ರ ಇಂಗ್ಲಿಷ್ ಏವೇಕ್!ನಲ್ಲಿ ಬಂದಿರುವ “ಕಾಂಟ್ ಐ ಡು ಸಮ್‌ಥಿಂಗ್ ಎಬೌಟ್ ಮೈ ಆ್ಯಕ್ನಿ?” ಲೇಖನವನ್ನು ನೋಡಿರಿ.
ಹುಡುಗರು ಅನುಭವಿಸುವ ಬದಲಾವಣೆಗಳು
ನೀವು ಒಬ್ಬ ಹುಡುಗನಾಗಿದ್ದರೆ, ಹುಡುಗಿಯರಲ್ಲಿರುವಂತೆ, ಮೈನೆರೆಯುವಿಕೆಯ ಆರಂಭಿಕ ಪರಿಣಾಮಗಳು ತೋರಲಿಕ್ಕಿಲ್ಲ. ನಿಮ್ಮ ಸಂತಾನೋತ್ಪಾನ್ನ ವ್ಯವಸ್ಥೆಯ ಕಾರ್ಯನಿರ್ವಹಿಸಲು ತೊಡಗುವಂತೆ ನಿಮ್ಮ ಜನನಾಂಗಗಳು ಕ್ರಮೇಣ ದೊಡ್ಡದಾಗುತ್ತವೆ. ನಿಮ್ಮ ಜನನಾಂಗದ ಸುತ್ತಲೂ ಕೂದಲುಗಳು ಬೆಳೆಯಲು ಆರಂಭಿಸುತ್ತದೆ. ಪುನಃ, ಇದು ಪರಿಪೂರ್ಣವಾಗಿ ಸಾಮಾನ್ಯವಾಗಿದೆ.
ಅದೇ ಸಮಯದಲ್ಲಿ, ನಿಮ್ಮ ಬೆಳವಣಿಗೆಯು ಥಟ್ಟನೇ ಆಗುವ ಅನುಭವ ನಿಮಗಾಗಬಹುದು. ಕೊಬ್ಬು ಮತ್ತು ಸ್ನಾಯುಗಳ ಅಂಗಾಂಶಗಳು ನಿಮ್ಮ ಶರೀರಕ್ಕೆ ಕೂಡಿಸಲ್ಪಡುತ್ತದೆ. ನೀವು ದೊಡ್ಡವರೂ, ಬಲಿಷ್ಠರೂ ಆಗುತ್ತೀರಿ, ನಿಮ್ಮ ತೋಳುಗಳು ವಿಸ್ತರಿಸುತ್ತವೆ. ನಿಮ್ಮ ಮೈಕಟ್ಟು ಮಗುವಿನಂತೆ ಕಡಿಮೆಯಾಗಿದ್ದು, ಗೋಚರಿಸುವಿಕೆಯಲ್ಲಿ ಹೆಚ್ಚು ಗಂಡಸಿನಂತೆ ಇರುವದು.
ಇನ್ನೊಂದು ಆಸಕ್ತಕರ ಬೆಳವಣಿಗೆಯಲ್ಲಿ ಕಾಲುಗಳ, ಎದೆಯ, ಮುಖದ ಮೇಲೆ, ಮತ್ತು ಭುಜಗಳ ಕೆಳಗೆ ಕೂದಲುಗಳ ಬೆಳವಣಿಗೆಯು ಕೂಡಿರುತ್ತದೆ. ಇದು ಕೂಡ ಟೆಸ್ಟೊಸ್ಟಿರೋನ್ ಚೋದಕ ಸ್ರಾವಗಳಿಂದ ಪ್ರಚೋದಿಸಲ್ಪಟ್ಟದ್ದಾಗಿರುತ್ತದೆ. ರೂಧ್ ಬೆಲ್‌ರ ಚೆಂಜಿಂಗ್ ಬಾಡಿಸ್, ಚೆಂಜಿಂಗ್ ಲೈವ್ಸ್ ಪುಸ್ತಕದಲ್ಲಿ ಒಬ್ಬ ಯುವಕನ ಹೇಳಿಕೆಯು ಉಲ್ಲೇಖಿಸಲ್ಪಟ್ಟಿದೆ: “ನಾನು ಹದಿನಾಲ್ಕು ವರುಷದವನಾಗಿದ್ದಾಗ, ನನ್ನ ಮೇಲಿನ ತುಟಿಯಲ್ಲಿ ಈ ಕೊಳಕಾದ ಕಲೆಯೊಂದಿಗೆ ಸುಮಾರು ಎರಡು ವಾರಗಳನ್ನು ಕಳೆದೆನು. ನಾನದನ್ನು ತೊಳೆಯಲು ಪ್ರಯತ್ನಿಸಿದೆನು, ಆದರೆ ತೊಳೆಯಲ್ಪಡುತ್ತಿರಲಿಲ್ಲ. ಆನಂತರ ನಾನದನ್ನು ನಿಜವಾಗಿ ನೋಡಿದೆನು ಮತ್ತು ಅದು ಮೀಸೆಯೆಂದು ನಾನಾಗ ಕಂಡೆನು.”
ಎಷ್ಟೊಂದು ಕೂದಲುಗಳು ನಿಮಗೆ ಕೊನೆಗೂ ಇರುತ್ತವೆ ಎನ್ನುವದರ ಮೇಲೆ ನೀವು ಎಷ್ಟೊಂದು ಗಂಡಸಾಗಿರುತ್ತೀರಿ ಎಂಬುದೇನೂ ಹೊಂದಿಕೊಂಡಿಲ್ಲ; ಇದು ಕೇವಲ ವಂಶಾನುಗತವಾಗಿ ಬಂದದ್ದಾಗಿರುತ್ತದೆ. ನಿಮ್ಮ ತಂದೆಗೆ ಕೂದಲುಗಳುಳ್ಳ ಎದೆ ಇದ್ದಿರುವದಾದರೆ, ನಿಮಗೂ ಹಾಗೆಯೇ ಇರುವಂಥಹದ್ದೇನೂ ಹೊಸತಲ್ಲ. ಮುಖದ ಕೂದಲಿನ ಕುರಿತು ಕೂಡ ಅದೇ ಸಂಗತಿ. ಸಾಧಾರಣ ಹದಿವಯಸ್ಸಿನ ಕೊನೆಯ ಹಂತದಲ್ಲಿ ಯಾ 20ರ ದಶಕದ ಆರಂಭದಲ್ಲಿ, ಪ್ರಾಯಶಃ ನೀವು ಕ್ರಮವಾಗಿ ಗಡ್ಡ ಬೋಳಿಸಬೇಕಾಗುತ್ತದೆ.
ಖಂಡಿತವಾಗಿಯೂ, ನಿಮಗೂ ಕೆಲವು ಪೇಚಾಟದ ಕ್ಷಣಗಳು ಇರುತ್ತವೆ. ಹುಡುಗರ ಬೆವರುವ ಗ್ರಂಥಿಗಳು ತಮ್ಮ ಕಾರ್ಯಚಟುವಟಿಕೆಯನ್ನು ತೀವ್ರಗೊಳಿಸುವದನ್ನು ಹುಡುಗರು ಕಂಡುಕೊಳ್ಳುತ್ತಾರೆ. ದುರ್ಗಂಧದ ಸಮಸ್ಯೆಗಳನ್ನು ಹೋಗಲಾಡಿಸಲು ವೈಯಕಿಕ್ತ ನೈರ್ಮಲ್ಯತೆಯ ಕುರಿತು ನೀವು ವಿಶೇಷವಾಗಿ ಗಮನಹರಿಸಬೇಕಾದೀತು. ಎಣ್ಣೆಯಾಂಶದ ಚರ್ಮದ ಕಾರಣ ಮೊಡವೆಗಳು ಗೋಚರಗೊಳ್ಳುವ ಅನುಭವ ನಿಮಗೂ ಆಗಬಹುದು.
ನಿಮ್ಮ ಹದಿವಯಸ್ಸಿನ ಮಧ್ಯಾವಧಿಯಲ್ಲಿ, ನಿಮ್ಮ ಧ್ವನಿತಂತುಗಳಿರುವ ಗಂಟಲ ಕುಹರವು ದೊಡ್ಡದಾಗುತ್ತದೆ; ನಿಮ್ಮ ಧ್ವನಿಯ ತಂತುಗಳು ದಪ್ಪಗೊಳ್ಳುತ್ತವೆ ಮತ್ತು ಉದ್ದವಾಗುತ್ತವೆ. ಇದರ ಪರಿಣಾಮವಾಗಿ, ನಿಮ್ಮ ಸರ್ವವು ಆಳಗೊಳ್ಳುತ್ತದೆ. ಕೆಲವು ಹುಡುಗರು ತಾರಸ್ವರದಿಂದ ಮಂದ್ರ ಸರ್ವಕ್ಕೆ ಬೆರಗುಗೊಳಿಸುವ ರೀತಿಯಲ್ಲಿ ತೀವ್ರವಾಗಿ ಬದಲಾವಣೆಗೊಳ್ಳುತ್ತದೆ. ಆದರೆ, ಇತರರಿಗೆ, ಈ ಸರ್ವ ಬದಲಾವಣೆಗೆ ಮೆಲ್ಲನೆ ಯಾತನೆಯ, ದೀರ್ಘಾವಧಿಯ ಕೆಲವು ವಾರಗಳು ಯಾ ತಿಂಗಳುಗಳು ತಗಲಬಹುದು. ವಿಫುಲವಾದ, ಆಳವಾದ ಸರ್ವಗಳು ಕೆಲವೊಮ್ಮೆ ನಡುವೆ ಬರುವ ಕಿರುಚುವ ಮತ್ತು ಕರ್ಕಶದ ಶಬ್ದದಿಂದ ಸಂಕೋಚಕ್ಕೊಳಪಡಿಸಬಹುದು. ಆದರೂ, ಬಿಗುಪು ಇಲ್ಲದವರಾಗಿರ್ರಿ. ಸಮಯಾನಂತರ, ನಿಮ್ಮ ಸರ್ವವು ನುಣುಪುಗೊಳ್ಳುತ್ತದೆ. ತನ್ಮಧ್ಯೆ, ನಿಮ್ಮ ವಿಷಯದಲ್ಲಿ ನೀವಾಗಿಯೇ ಹಾಸ್ಯಮಯವಾಗಿ ತಕ್ಕೊಳ್ಳಬಲ್ಲಿರಾದರೆ, ಇಂಧಹ ಪೇಚಾಟವನ್ನು ಕಡಿಮೆಗೊಳಿಸಲು ನಿಮಗೆ ಸಹಾಯ ನೀಡುವದು.
ಅತಿ ಮುಖ್ಯವಾದ ಬೆಳವಣಿಗೆ
ಬೆಳವಣಿಗೆಯು ಒಂದು ಬೆರಗುಗೊಳಿಸುವ ಮತ್ತು ಭಾವೋದ್ರೇಕಗೊಳಿಸುವಂಥಹದ್ದು! ಇದು ಪೇಚಾಟಕ್ಕೀಡುಮಾಡುವಂಥಹದ್ದೂ, ದಿಗಿಲುಗೊಳಿಸುವಂಥಹದ್ದೂ ಆಗಬಲ್ಲದು. ಒಂದು ಸಂಗತಿಯಂತೂ ಖಂಡಿತ: ಬೆಳವಣಿಗೆಯ ಕಾರ್ಯಗತಿಯನ್ನು ನೀವು ವೇಗಗೊಳಿಸಲೂ ಯಾ ನಿಧಾನಿಸಲೂ ಸಾಧ್ಯವಿಲ್ಲ. ಆದುದರಿಂದ, ಪ್ರತಿಕೂಲತೆಯಿಂದ ಮತ್ತು ಹೆದರಿಕೆಯಿಂದ ಮೈನೆರೆಯುವಿಕೆಯಿಂದಾಗುವ ಬದಲಾವಣೆಗಳನ್ನು ಸ್ವಾಗತಿಸುವ ಬದಲು, ಅದರಿಂದ ಅಚ್ಚರಿಪಡಿರಿ, ಗೌರವದಿಂದ —ಮತ್ತು ಒಂದು ವಿನೋದದ ಚಿತ್ತಪ್ರವೃತ್ತಿಯಿಂದ, ಅದನ್ನು ಸ್ವೀಕರಿಸಿರಿ. ಪ್ರಾಯಕ್ಕೆ ಬರುವದು ತಾನೇ ಒಂದು ಫಲಿತಾಂಶದ ಅಂತ್ಯಸ್ಥಿತಿಯಲ್ಲ, ಬದಲು ಕೇವಲ ಅದೊಂದು ಹಂತವಾಗಿರುತ್ತದೆ. ಮೈನೆರೆಯುವಿಕೆಯ ತುಫಾನು ದಾಟಿಯಾದ ನಂತರ, ನೀವು ಒಬ್ಬ ಪೂರ್ಣವಾಗಿ ಬೆಳೆದ ಗಂಡಸು ಯಾ ಹೆಂಗಸು ಆಗಿ ಹೊರಬರುತ್ತೀರಿ!
ಆದರೂ, ನಿಮ್ಮ ಅತಿ ಮುಖ್ಯ ಬೆಳವಣಿಗೆಯು, ನಿಮ್ಮ ಎತ್ತರ, ರೂಪ, ಯಾ ಮುಖದ ಲಕ್ಷಣಗಳ ಮೇಲೆ ಅಲ್ಲ, ಬದಲು ಒಬ್ಬ ವ್ಯಕ್ತಿಯೋಪಾದಿ—ಮಾನಸಿಕವಾಗಿ, ಭಾವನಾತ್ಮಕವಾಗಿ, ಮತ್ತು ಆತ್ಮಿಕವಾಗಿ, ನಿಮ್ಮ ಬೆಳವಣಿಗೆಯ ಮೇಲೆ ಆತುಕೊಂಡಿದೆ. ಅಪೊಸ್ತಲ ಪೌಲನು ಹೇಳಿದ್ದು: “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು. ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು. ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.” (1 ಕೊರಿಂಥ 13:11) ಒಬ್ಬ ಪ್ರಾಯಸ್ಥನೋಪಾದಿ ತೋರುವದು ಮಾತ್ರ ಸಾಕಾಗುವದಿಲ್ಲ. ನೀವು ಕ್ರಮೇಣ ಒಬ್ಬ ಪ್ರಾಯಸ್ಥನೋಪಾದಿ ವರ್ತಿಸಲು, ಮಾತಾಡಲು ಮತ್ತು ಯೋಚಿಸಲು ಕಲಿಯತಕ್ಕದ್ದು. ನಿಮ್ಮ “ಒಳಗಣ ಮನುಷ್ಯನ” ಜಾಗ್ರತೆಯನ್ನು ತೆಗೆದುಕೊಳ್ಳಲು ಮರೆಯುವಂಥಹ ರೀತಿಯಲ್ಲಿ ನಿಮ್ಮ ದೇಹಕ್ಕೆ ಏನು ಸಂಭವಿಸುತ್ತದೆ ಎಂಬ ವಿಷಯದಲ್ಲಿ ತುಂಬಾ ಚಿಂತಿಸಬೇಡಿರಿ.—2 ಕೊರಿಂಥ 4:16, ಜೆರೂಸಲೇಮ್ ಬೈಬಲ್.
ಇನ್ನೂ ಮೈನೆರೆಯುವಿಕೆಯ ಕೆಲವು ಇತರ ಸಂಗತಿಗಳು ವಿಶೇಷವಾಗಿ ಸಂಕಟಕರವಾಗಿರುತ್ತವೆ. ಅವುಗಳೊಂದಿಗೆ ಹೇಗೆ ವ್ಯವಹರಿಸುವದು ಎಂಬದು ನಮ್ಮ ಮುಂದಿನ ಲೇಖನಗಳ ಮುಖ್ಯ ವಿಷಯವಾಗಿರುವದು. (g90 1/22)
[ಪುಟ 23 ರಲ್ಲಿರುವಚಿತ್ರ]
ಥಟ್ಟನೆ ಬೆಳವಣಿಗೆಯು ಕೋಟಿನ ತೋಳುಗಳನ್ನು ಚಿಕ್ಕದ್ದಾಗಿ ಮಾಡುವದು