ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g18 ನಂ. 2 ಪು. 10
  • 7 ಒಳ್ಳೇ ಗುಣಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 7 ಒಳ್ಳೇ ಗುಣಗಳು
  • ಎಚ್ಚರ!—2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅರ್ಥವೇನು?
  • ಯಾಕೆ ಮುಖ್ಯ?
  • ನೀವೇನು ಮಾಡಬಹುದು?
  • ನೈತಿಕ ಮೌಲ್ಯಗಳು
    ಎಚ್ಚರ!—2019
  • ನಿಮ್ಮ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ನಾಟಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯಾವುದು ಸರಿ ಯಾವುದು ತಪ್ಪು? ಜನ್ರು ಹೇಗೆ ತೀರ್ಮಾನ ಮಾಡ್ತಾರೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2024
  • ಆಧ್ಯಾತ್ಮಿಕ ಮೌಲ್ಯಗಳನ್ನು ಬೆನ್ನಟ್ಟುವುದರಿಂದ ಸಿಗುವ ಪ್ರಯೋಜನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಎಚ್ಚರ!—2018
g18 ನಂ. 2 ಪು. 10
ತಂದೆ-ಮಗ ಮಾರ್ಗದರ್ಶನಕ್ಕಾಗಿ ದಿಕ್ಸೂಚಿಯನ್ನು ಉಪಯೋಗಿಸುತ್ತಿದ್ದಾರೆ

ಒಳ್ಳೇ ಗುಣಗಳು ಒಂದು ಭರವಸಾರ್ಹ ದಿಕ್ಸೂಚಿಯಂತೆ ಯಾವ ಹಾದಿ ಹಿಡಿಯಬೇಕೆಂದು ನಿರ್ಧರಿಸಲು ಮಕ್ಕಳಿಗೆ ಸಹಾಯಮಾಡುತ್ತವೆ

ಹೆತ್ತವರಿಗಾಗಿ

7 ಒಳ್ಳೇ ಗುಣಗಳು

ಅರ್ಥವೇನು?

ಹೆತ್ತವರಾಗಿ ನೀವು ಜೀವನದಲ್ಲಿ ಕೆಲವೊಂದು ಮಟ್ಟಗಳನ್ನು ಪಾಲಿಸುತ್ತೀರಿ. ಉದಾಹರಣೆಗೆ ನೀವು ಎಲ್ಲದರಲ್ಲೂ ಪ್ರಾಮಾಣಿಕರಾಗಿರಲು ಪ್ರಯತ್ನಿಸುತ್ತಿರಬಹುದು. ಇದೇ ನೈತಿಕ ಮೌಲ್ಯವನ್ನು ನಿಮ್ಮ ಮಕ್ಕಳಲ್ಲೂ ಬೇರೂರಿಸಲು ಇಷ್ಟಪಡುತ್ತೀರಿ.

ಶ್ರಮಜೀವಿ ಆಗಿರುವುದು, ಭೇದಭಾವ ಮಾಡದೇ ಇರುವುದು, ಇತರರ ಭಾವನೆ ಮತ್ತು ಅಗತ್ಯಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುವುದು ಮುಂತಾದ ಗುಣಗಳನ್ನು ಮಕ್ಕಳು ಚಿಕ್ಕಂದಿನಲ್ಲೇ ಬೆಳೆಸಿಕೊಳ್ಳುವುದು ಅತ್ಯುತ್ತಮ.

ಬೈಬಲ್‌ ತತ್ವ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”—ಜ್ಞಾನೋಕ್ತಿ 22:6.

ಯಾಕೆ ಮುಖ್ಯ?

ತಂತ್ರಜ್ಞಾನದ ಈ ಯುಗದಲ್ಲಿ ನೈತಿಕ ಮೌಲ್ಯಗಳು ಅತ್ಯಗತ್ಯ. ತಾಯಿಯಾಗಿರುವ ಕ್ಯಾರನ್‌ ಹೇಳಿದ್ದು: “ಕೆಟ್ಟ ಪ್ರಭಾವ ಬೀರುವಂಥ ವಿಷಯಗಳನ್ನು ಎಲೆಕ್ಟ್ರಾನಿಕ್‌ ಸಾಧನಗಳಿಂದ ಯಾವುದೇ ಸಮಯದಲ್ಲಿ ಪಡೆಯಲು ಸಾಧ್ಯ. ಹಾಗಾಗಿ ನಮ್ಮ ಮಕ್ಕಳು ನಮ್ಮ ಪಕ್ಕದಲ್ಲೇ ಕೂತು ಅಸಭ್ಯವಾದ ವಿಷಯಗಳನ್ನು ಸಹ ನೋಡಬಹುದು.”

ಬೈಬಲ್‌ ತತ್ವ: ‘ಪ್ರೌಢರು ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿರುತ್ತಾರೆ.’—ಇಬ್ರಿಯ 5:14.

ಬೇರೆಯವರ ಬಗ್ಗೆಯೂ ಯೋಚಿಸುವುದು ಮುಖ್ಯ. ಇದರಲ್ಲಿ ಸರಳವಾದ ಸೌಜನ್ಯದ ಮಾತುಗಳನ್ನಾಡುವುದು (ಉದಾ: “ದಯವಿಟ್ಟು” ಮತ್ತು “ಧನ್ಯವಾದ”) ಹಾಗೂ ಇತರರ ಬಗ್ಗೆ ಕಾಳಜಿ ತೋರಿಸುವುದು ಸೇರಿದೆ. ಇಂದು ಇದೆಲ್ಲ ತುಂಬ ಅಪರೂಪವಾಗಿ ಬಿಟ್ಟಿದೆ ಯಾಕೆಂದರೆ ಮನುಷ್ಯರಿಗಿಂತ ಎಲೆಕ್ಟ್ರಾನಿಕ್‌ ವಸ್ತುಗಳಿಗೇ ಜನರು ಹೆಚ್ಚು ಗಮನ ಕೊಡುತ್ತಾರೆ.

ಬೈಬಲ್‌ ತತ್ವ: “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ.”—ಲೂಕ 6:31.

ನೀವೇನು ಮಾಡಬಹುದು?

ನಿಮ್ಮ ನೈತಿಕ ಮೌಲ್ಯಗಳೇನೆಂದು ತಿಳಿಸಿ. ಮದುವೆ ಮುಂಚಿನ ಸೆಕ್ಸ್‌ ತಪ್ಪೆಂದು ಸ್ಪಷ್ಟವಾಗಿ ಕಲಿಸುವಲ್ಲಿ ಹದಿವಯಸ್ಸಿನವರು ಅದರಿಂದ ದೂರವಿರುವ ಸಾಧ್ಯತೆ ಹೆಚ್ಚೆಂದು ಸಂಶೋಧನೆ ತೋರಿಸುತ್ತದೆ.

ಕಿವಿಮಾತು: ಮೌಲ್ಯಗಳ ಬಗ್ಗೆ ಅವರ ಜೊತೆ ಚರ್ಚಿಸಲು ಇತ್ತೀಚಿನ ಒಂದು ಘಟನೆಯ ಬಗ್ಗೆ ಮಾತೆತ್ತಿ. ಉದಾಹರಣೆಗೆ ವಾರ್ತೆಗಳಲ್ಲಿ ಒಂದು ದ್ವೇಷಪೂರಿತ ಅಪರಾಧದ ಬಗ್ಗೆ ವರದಿ ಬಂದಿರುವಲ್ಲಿ ನೀವು ಹೀಗನ್ನಬಹುದು: “ಕೆಲವರು ಬೇರೆಯವರ ಮೇಲೆ ಎಷ್ಟು ಭಯಂಕರವಾಗಿ ಸಿಟ್ಟನ್ನು ತೋರಿಸುತ್ತಾರೆ. ಜನರು ಈ ರೀತಿ ಹೇಗೆ ಆಗುತ್ತಾರೆ ಅಂತ ನಿನಗನಿಸುತ್ತದೆ?”

“ಸರಿ ಯಾವುದು ತಪ್ಪು ಯಾವುದೆಂದು ಮಕ್ಕಳಿಗೆ ಗೊತ್ತಿಲ್ಲದಿದ್ದರೆ, ಯಾವುದನ್ನು ಆಯ್ಕೆಮಾಡುವುದು ಎಂದು ನಿರ್ಧರಿಸಲು ಅವರಿಗೆ ಹೆಚ್ಚು ಕಷ್ಟವಾಗುತ್ತದೆ.”—ಬ್ರಾಂಡನ್‌.

ಬೇರೆಯವರ ಬಗ್ಗೆ ಯೋಚಿಸಲು ಮಕ್ಕಳಿಗೆ ಕಲಿಸಿ. ತುಂಬ ಎಳೇ ಪ್ರಾಯದ ಮಕ್ಕಳು ಸಹ “ದಯವಿಟ್ಟು” ಮತ್ತು “ಧನ್ಯವಾದ” ಎಂದು ಹೇಳಲು ಮತ್ತು ಬೇರೆಯವರ ಭಾವನೆಗಳಿಗೆ, ಅಗತ್ಯಗಳಿಗೆ ಗಮನಕೊಡಲು ಕಲಿಯಬಲ್ಲರು. “ತಮಗಿಂತ ಪ್ರಾಮುಖ್ಯವಾಗಿರುವ ಕುಟುಂಬ, ಶಾಲೆ, ಸಮುದಾಯದ ಭಾಗವಾಗಿದ್ದೇವೆಂದು ಮಕ್ಕಳು ಚೆನ್ನಾಗಿ ಗ್ರಹಿಸಿದರೆ, ಬರೀ ತಮ್ಮ ಪ್ರಯೋಜನಕ್ಕಾಗಿ ಅಲ್ಲ, ಎಲ್ಲರ ಪ್ರಯೋಜನಕ್ಕಾಗಿ ಸಂತೋಷದಿಂದ ದಯಾಪರ ಕೆಲಸಗಳನ್ನು ಮಾಡುವರು” ಎನ್ನುತ್ತದೆ ಪೇರೆಂಟಿಂಗ್‌ ವಿತೌಟ್‌ ಬಾರ್ಡರ್ಸ್‌ ಎಂಬ ಪುಸ್ತಕ.

ಕಿವಿಮಾತು: ಬೇರೆಯವರ ಸೇವೆಮಾಡುವುದರ ಮೌಲ್ಯವನ್ನು ತಿಳಿದುಕೊಳ್ಳಲಿಕ್ಕಾಗಿ ಮಕ್ಕಳಿಗೆ ಮನೆಯಲ್ಲಿ ಕೆಲವು ಕೆಲಸಗಳನ್ನು ಕೊಡಿ.

“ಮಕ್ಕಳು ಮನೆಯಲ್ಲಿ ಕೆಲಸಮಾಡುವ ರೂಢಿ ಬೆಳೆಸಿಕೊಂಡರೆ ದೊಡ್ಡವರಾಗಿ ಒಬ್ಬರೇ ಜೀವಿಸುವಾಗ ಅವರಿಗೆ ಆಘಾತವಾಗುವುದಿಲ್ಲ. ಯಾಕೆಂದರೆ ಅಷ್ಟರಲ್ಲಿ ಅವರಿಗೆ ಜವಾಬ್ದಾರಿಗಳನ್ನು ನಿರ್ವಹಿಸುವುದು ಜೀವನದ ಭಾಗವಾಗಿಬಿಟ್ಟಿರುತ್ತದೆ.”—ಟಾರಾ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ