ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 2 ಪು. 10-11
  • ಜವಾಬ್ದಾರಿಯುತ ವ್ಯಕ್ತಿಯಾಗುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜವಾಬ್ದಾರಿಯುತ ವ್ಯಕ್ತಿಯಾಗುವುದು
  • ಎಚ್ಚರ!—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜವಾಬ್ದಾರಿಯುತ ವ್ಯಕ್ತಿಯಾಗುವುದರಲ್ಲಿ ಏನೆಲ್ಲಾ ಒಳಗೂಡಿದೆ?
  • ಜವಾಬ್ದಾರಿಯುತ ವ್ಯಕ್ತಿಯಾಗುವುದು ಯಾಕೆ ಮುಖ್ಯ?
  • ಮಕ್ಕಳಿಗೆ ಕೆಲಸ ಕೊಡಬೇಕಾ?
    ಎಚ್ಚರ!—2017
  • ಹೋಗಲು ಬಿಡುವುದನ್ನು ಕಲಿಯುವುದು
    ಎಚ್ಚರ!—1998
  • 8 ಮಾದರಿ
    ಎಚ್ಚರ!—2018
  • ನಿಮ್ಮ ಮಕ್ಕಳನ್ನು ತರಬೇತುಗೊಳಿಸಲು ಬೈಬಲ್‌ ನಿಮಗೆ ಸಹಾಯಮಾಡಬಲ್ಲದೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಎಚ್ಚರ!—2019
g19 ನಂ. 2 ಪು. 10-11
ಗಿಡಗಳಿಗೆ ನೀರು ಹಾಕುವುದನ್ನು ತಂದೆ ತನ್ನ ಮಗನಿಗೆ ಹೇಳಿಕೊಡುತ್ತಿದ್ದಾನೆ

ಪಾಠ 4

ಜವಾಬ್ದಾರಿಯುತ ವ್ಯಕ್ತಿಯಾಗುವುದು

ಜವಾಬ್ದಾರಿಯುತ ವ್ಯಕ್ತಿಯಾಗುವುದರಲ್ಲಿ ಏನೆಲ್ಲಾ ಒಳಗೂಡಿದೆ?

ಜವಾಬ್ದಾರಿಯುತ ಜನರು ಭರವಸಾರ್ಹರಾಗಿರುತ್ತಾರೆ. ತಮಗೆ ಕೊಟ್ಟ ಕೆಲಸವನ್ನು ಚೆನ್ನಾಗಿ, ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುತ್ತಾರೆ.

ಚಿಕ್ಕಮಕ್ಕಳಿಗೆ ದೊಡ್ಡವರಷ್ಟು ಸಾಮರ್ಥ್ಯ ಇರುವುದಿಲ್ಲವಾದರೂ ಜವಾಬ್ದಾರಿಯುತ ವ್ಯಕ್ತಿಗಳಾಗಲು ಕಲಿಯಬಹುದು. “ಮಗು ತನ್ನ ಹದಿನೈದನೆಯ ತಿಂಗಳಿನಿಂದ ಹೆತ್ತವರಿಗೆ ವಿಧೇಯರಾಗಲು ಕಲಿಯುತ್ತದೆ ಮತ್ತು ಹದಿನೆಂಟನೆಯ ತಿಂಗಳಲ್ಲಿ ಹೆತ್ತವರನ್ನು ಅನುಕರಿಸಲು ಕಲಿಯುತ್ತದೆ. ಅನೇಕ ಸಂಸ್ಕೃತಿಗಳಲ್ಲಿ ಐದರಿಂದ ಏಳು ವಯಸ್ಸಿನೊಳಗಿನ ಮಕ್ಕಳಿಗೆ ಮನೆಯಲ್ಲಿ ಇತರರಿಗೆ ಸಹಾಯಮಾಡುವುದನ್ನು ಹೆತ್ತವರು ಕಲಿಸುತ್ತಾರೆ. ಅವರು ಚಿಕ್ಕ ಮಕ್ಕಳಾದರೂ ಅನೇಕ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ” ಎಂದು ಪೇರೆಂಟಿಂಗ್‌ ವಿದೌಟ್‌ ಬಾರ್ಡರ್ಸ್‌ ಎಂಬ ಪುಸ್ತಕವು ಹೇಳುತ್ತದೆ.

ಜವಾಬ್ದಾರಿಯುತ ವ್ಯಕ್ತಿಯಾಗುವುದು ಯಾಕೆ ಮುಖ್ಯ?

ಕೆಲವು ದೇಶಗಳಲ್ಲಿ ಮಕ್ಕಳು ದೊಡ್ಡವರಾದ ಮೇಲೆ ಬೇರೆ ಮನೆ ಮಾಡಿ ಸ್ವಂತ ಜೀವನ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಆಗದೆ ಮತ್ತೆ ಮನೆಗೆ ಹಿಂದಿರುಗುತ್ತಾರೆ. ಹಣವನ್ನು ಸರಿಯಾಗಿ ಉಪಯೋಗಿಸುವುದು, ಮನೆ ನಡಿಸುವುದು ಮತ್ತು ಬೇರೆ ಜವಾಬ್ದಾರಿಗಳನ್ನು ನಿರ್ವಹಿಸುವುದು ಹೇಗೆ ಅಂತ ಹೆತ್ತವರು ಅವರಿಗೆ ಕಲಿಸದೆ ಇರುವುದೇ ಇದಕ್ಕೆ ಕಾರಣ.

ಆದುದರಿಂದ ಮಕ್ಕಳಿಗೆ ಜವಾಬ್ದಾರಿಯುತ ವ್ಯಕ್ತಿಯಾಗುವುದು ಹೇಗೆ ಅಂತ ಈಗಲೇ ಹೇಳಿಕೊಡುವುದು ಪ್ರಾಮುಖ್ಯ. ಇದರಿಂದ ಅವರಿಗೆ ದೊಡ್ಡವರಾದ ಮೇಲೆ ಏನು ಮಾಡಬೇಕೆಂದು ತಿಳಿದಿರುತ್ತದೆ. ದೊಡ್ಡವರಾಗುವ ತನಕ ಮಕ್ಕಳಿಗೆ ಏನೂ ಕಲಿಸದೆ, “ಅವರನ್ನು ನಿಮ್ಮ ಆಸರೆಯಲ್ಲೇ ಇಟ್ಟುಕೊಂಡು ಆಮೇಲೆ ಲೋಕಕ್ಕೆ ದೊಬ್ಬಿ ಬಿಡಲು ನೀವಿಷ್ಟಪಡಲ್ಲ ಅಲ್ವಾ?” ಎನ್ನುತ್ತದೆ ಹೌ ಟು ರೈಸ್‌ ಯೋರ್‌ ಚಿಲ್ಡ್ರನ್‌ ಎಂಬ ಪುಸ್ತಕ.

ಜವಾಬ್ದಾರಿಯನ್ನು ಹೇಗೆ ಕಲಿಸುವುದು?

ಮನೆಯಲ್ಲಿ ಕೆಲಸಗಳನ್ನು ಕೊಡಿ.

ಬೈಬಲ್‌ ತತ್ವ: “ಶ್ರಮೆಯಿಂದ ಸಮೃದ್ಧಿ.”—ಜ್ಞಾನೋಕ್ತಿ 14:23.

ಮಕ್ಕಳು ಹೆತ್ತವರೊಟ್ಟಿಗೆ ಕೆಲಸ ಮಾಡಲು ಇಷ್ಟಪಡುತ್ತಾರೆ. ಆದ್ದರಿಂದ ಅವರಿಗೆ ಕೆಲವು ಮನೆಕೆಲಸಗಳನ್ನು ಕೊಡಿ.

ಶಾಲೆಗೆ ಹೋಗುವ ಮಕ್ಕಳಿಗೆ ತುಂಬ ಹೋಮ್‌ವರ್ಕ್‌ ಇರುತ್ತದೆ. ಆದುದರಿಂದ ಅವರ ಮೇಲೆ ತುಂಬ ಭಾರ ಹಾಕಬಾರದು ಎಂದು ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಕೆಲಸಾನೇ ಕೊಡಲ್ಲ.

ಆದರೆ, ಮನೆಯಲ್ಲಿ ಕೆಲಸ ಮಾಡುವ ಮಕ್ಕಳು ಸಾಮಾನ್ಯವಾಗಿ ಓದಿನಲ್ಲೂ ಮುಂದಿರುತ್ತಾರೆ. ಯಾಕೆಂದರೆ ಅವರು ಯಾವುದೇ ಕೆಲಸವನ್ನಾದರೂ ಮಾಡಿ ಮುಗಿಸುವುದು ಹೇಗೆಂದು ಕಲಿತಿರುತ್ತಾರೆ. ಅಷ್ಟೇ ಅಲ್ಲ “ಚಿಕ್ಕಂದಿನಲ್ಲಿ ಮಕ್ಕಳಿಗೆ ಕೆಲಸ ಮಾಡಬೇಕೆಂಬ ಹುಮ್ಮಸ್ಸು ಇರುವಾಗ ಅದನ್ನು ಕಡೆಗಣಿಸಿದರೆ ಕೆಲಸ ಮಾಡುವುದು ಅಷ್ಟೇನು ಪ್ರಾಮುಖ್ಯವಲ್ಲ ಎಂಬ ಭಾವನೆ ಅವರ ಮನಸ್ಸಿನಲ್ಲಿ ಬೇರೂರುತ್ತದೆ . . . ಬೇರೆಯವರು ತಮ್ಮ ಕೆಲಸ ಮಾಡಿಕೊಡಬೇಕೆಂದು ನಿರೀಕ್ಷಿಸುತ್ತಾರೆ” ಎನ್ನುತ್ತದೆ ಪೇರೆಂಟಿಂಗ್‌ ವಿದೌಟ್‌ ಬಾರ್ಡರ್ಸ್‌ ಎಂಬ ಪುಸ್ತಕ.

ಮನೆ ಕೆಲಸಗಳನ್ನು ಮಾಡುವ ಮಕ್ಕಳು ಬೇರೆಯವರಿಗೆ ಸಹಾಯ ಮಾಡಲು ಕಲಿಯುತ್ತಾರೆ, ಸ್ವಾರ್ಥಿಗಳಾಗಲ್ಲ. ಕುಟುಂಬದಲ್ಲಿ ತಮಗೂ ಒಂದು ಅಮೂಲ್ಯವಾದ ಸ್ಥಾನವಿದೆ ಎಂದವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಪಾತ್ರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ.

ತಮ್ಮ ತಪ್ಪುಗಳ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳಬೇಕೆಂದು ಕಲಿಸಿ.

ಬೈಬಲ್‌ ತತ್ವ: “ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.”—ಜ್ಞಾನೋಕ್ತಿ 19:20.

ನಿಮ್ಮ ಮಗು ಒಂದು ತಪ್ಪುಮಾಡಿದರೆ ಉದಾಹರಣೆಗೆ ಬೇರೆಯವರ ವಸ್ತುಗಳನ್ನು ಹಾಳುಮಾಡಿದರೆ, ಆ ತಪ್ಪನ್ನು ಮುಚ್ಚಿಡಬೇಡಿ. ಪರಿಣಾಮಗಳನ್ನು ಅವರೇ ಎದುರಿಸುವಂತೆ ಅಂದರೆ ಕ್ಷಮೆ ಕೇಳುವಂತೆ ಮತ್ತು ಸಾಧ್ಯವಾದರೆ ಪರಿಹಾರವನ್ನು ಸಹ ಕೊಡುವಂತೆ ಕಲಿಸಿ.

ತಮ್ಮ ತಪ್ಪುಗಳಿಗೆ ತಾವೇ ಜವಾಬ್ದಾರಿ ತೆಗೆದುಕೊಳ್ಳಲು ಕಲಿತ ಮಕ್ಕಳು. . .

  • ಪ್ರಾಮಾಣಿಕರಾಗಿರುತ್ತಾರೆ, ತಮ್ಮ ತಪ್ಪುಗಳನ್ನು ಮುಚ್ಚಿಡುವುದಿಲ್ಲ

  • ತಮ್ಮ ತಪ್ಪುಗಳಿಗೆ ಬೇರೆಯವರನ್ನು ದೂರುವುದಿಲ್ಲ

  • ನೆಪ ಹೇಳುವುದಿಲ್ಲ

  • ಸೂಕ್ತವಾದಾಗೆಲ್ಲಾ ಕ್ಷಮೆ ಕೇಳುತ್ತಾರೆ

ಗಿಡಗಳಿಗೆ ನೀರು ಹಾಕುವುದನ್ನು ತಂದೆ ತನ್ನ ಮಗನಿಗೆ ಹೇಳಿಕೊಡುತ್ತಿದ್ದಾನೆ

ಈಗಲಿಂದಲೇ ತರಬೇತಿ ಕೊಡಿ

ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಲು ಕಲಿತ ಮಕ್ಕಳು ದೊಡ್ಡವರಾದಾಗ ತಮ್ಮ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ

ಮಾದರಿಯ ಮೂಲಕ ಕಲಿಸಿ

  • ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನಾ? ಎಲ್ಲವನ್ನು ವ್ಯವಸ್ಥಿತವಾಗಿ ಮಾಡುತ್ತೇನಾ? ನಾನು ಮಾಡಬೇಕಾದ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತೇನಾ?

  • ನಾನು ಮಕ್ಕಳಿಗೆ ಎಂಥ ಮಾದರಿ ಇಟ್ಟಿದ್ದೇನೆ? ನಾನು ಮನೆಯಲ್ಲಿ ಕೆಲಸ ಮಾಡುತ್ತೇನಾ?

  • ನಾನು ನನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತೇನಾ? ಅಗತ್ಯವಿರುವಾಗ ಕ್ಷಮೆ ಕೇಳುತ್ತೇನಾ?

ನಾವು ಹೀಗೆ ಮಾಡಿದೆವು

“ಮಕ್ಕಳು ಚಿಕ್ಕ ವಯಸ್ಸಿನಿಂದಲೇ ನನಗೆ ಅಡಿಗೆಯಲ್ಲಿ ಸಹಾಯ ಮಾಡುತ್ತಿದ್ದರು. ನಾನು ಬಟ್ಟೆಗಳನ್ನು ಮಡಚುವಾಗ, ಕಸ ಗುಡಿಸುವಾಗ ಅವರು ಸಹ ಅದನ್ನೇ ಮಾಡುತ್ತಿದ್ದರು. ಅವರಿಗೆ ಕೆಲಸ ಮಾಡುವುದೇ ಒಂತರ ಆಟ ಆಗಿಬಿಟ್ಟಿತ್ತು. ನಾನೇನು ಮಾಡುತ್ತಿದ್ದೆನೋ ಅದನ್ನೇ ಅವರೂ ಮಾಡುತ್ತಾ ನನ್ನ ಜೊತೆ ಇರುವುದೇ ಅವರಿಗೆ ತುಂಬ ಸಂತೋಷ ಕೊಡುತ್ತಿತ್ತು. ಹೀಗೆ ಅವರು ಜವಾಬ್ದಾರಿಯುತ ವ್ಯಕ್ತಿಗಳಾಗಲು ಕಲಿತರು.”—ಲೋರಾ.

“ಒಮ್ಮೆ ನನ್ನ ಮಗ, ನಮ್ಮ ಸ್ನೇಹಿತೆಯೊಟ್ಟಿಗೆ ಒರಟಾಗಿ ನಡೆದುಕೊಂಡಿದ್ದ. ಅವನು ಅವಳಿಗೆ ಫೋನ್‌ ಮಾಡಿ ಕ್ಷಮೆ ಕೇಳುವಂತೆ ಮಾಡಿದ್ವಿ. ಹೀಗೆ ಇಷ್ಟು ವರ್ಷಗಳಲ್ಲಿ ಅವನು ತುಂಬ ಸಲ ಕ್ಷಮೆ ಕೇಳಬೇಕಾಯಿತು. ಯಾಕೆಂದರೆ ಅವನು ಇದ್ದ ವಿಷಯವನ್ನೇ ಹೇಳಿದರೂ, ಅದನ್ನು ನೋವಾಗುವ ರೀತಿಯಲ್ಲಿ ಹೇಳುತ್ತಿದ್ದ. ಈಗ ಅವನು ಸುಲಭವಾಗಿ ಕ್ಷಮೆ ಕೇಳಲು ಕಲಿತಿದ್ದಾನೆ.”—ಡೆಬ್ರ.

ತಪ್ಪಿನ ಪರಿಣಾಮಗಳ ಬಗ್ಗೆ ಕಲಿಸುವುದರಿಂದ ಸಿಗುವ ಪ್ರಯೋಜನಗಳು

“ಮಕ್ಕಳು ತಪ್ಪು ಮಾಡೋದು ಸಹಜ. ಆದರೆ ಅವರು ತಮ್ಮ ತಪ್ಪುಗಳಿಂದಲೂ ಅನೇಕ ಪಾಠಗಳನ್ನು ಕಲಿಯುತ್ತಾರೆಂದು ಹೆತ್ತವರು ನೆನಪಿನಲ್ಲಿಡುವುದು ತುಂಬ ಮುಖ್ಯ” ಎಂದು ಶಿಕ್ಷಕಿಯಾದ ಜೆಸಿಕ ಲಾಹೇರವರು, ಅಟ್ಲಾಂಟಿಕ್‌ ಪತ್ರಿಕೆಯಲ್ಲಿ ಬರೆದಿದ್ದಾರೆ. ಅವರು ಮುಂದುವರಿಸಿ ಹೇಳುವುದು, “ಪ್ರತಿ ವರ್ಷ ಕೆಲವು ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳು ತಪ್ಪು ಮಾಡಿದಾಗ, ಅದರ ಕೆಟ್ಟ ಪರಿಣಾಮಗಳಿಂದ ಅವರನ್ನು ರಕ್ಷಿಸುತ್ತಿರಲಿಲ್ಲ, ಬದಲಾಗಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಮಕ್ಕಳಿಗೆ ಸಹಾಯಮಾಡುತ್ತಿದ್ದರು. ಈ ವಿದ್ಯಾರ್ಥಿಗಳು ಬೇರೆಲ್ಲರಿಗಿಂತ ಹೆಚ್ಚು ಸಂತೋಷ ಮತ್ತು ಯಶಸ್ಸನ್ನು ಪಡೆದುಕೊಂಡಿದ್ದಾರೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ