ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 3 ಪು. 10-11
  • ಹಣಕಾಸಿನ ಸಮಸ್ಯೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಣಕಾಸಿನ ಸಮಸ್ಯೆ
  • ಎಚ್ಚರ!—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಚೆನ್ನಾಗಿ ಪ್ಲಾನ್‌ ಮಾಡಿ
  • ಶ್ರಮಜೀವಿಗಳಾಗಿರಿ
  • ಬೈಬಲಿನ ಇನ್ನಿತರ ಸಲಹೆಗಳು
  • ದುಡ್ಡಿನ ಸಮಸ್ಯೆ ಮತ್ತು ಸಾಲಬಾಧೆಗೆ ಪರಿಹಾರ
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಹಣ ನಿರ್ವಹಣೆಗೆ ಹೆಜ್ಜೆಗಳು
    ಸುಖೀ ಸಂಸಾರ ಸಾಧ್ಯ!
  • ಆದಾಯಕ್ಕೆ ತಕ್ಕಂತೆ ಜೀವನ ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • 2 | ಜೀವನರೀತಿಯನ್ನು ಕಾಪಾಡಿಕೊಳ್ಳಿ
    ಎಚ್ಚರ!—2022
ಇನ್ನಷ್ಟು
ಎಚ್ಚರ!—2019
g19 ನಂ. 3 ಪು. 10-11
ಕಾರ್ಪೆಂಟರ್‌ ಅಂಗಡಿಯಲ್ಲಿ ಕೆಲವರು ಕೆಲಸ ಮಾಡುತ್ತಿದ್ದಾರೆ

ಹಣಕಾಸಿನ ಸಮಸ್ಯೆ

ಎಷ್ಟೋ ಜನರು ಬೈಬಲ್‌ ಸಲಹೆಗಳನ್ನು ಅನ್ವಯಿಸಿ ತಮಗಿರೋ ಹಣಕಾಸಿನ ಸಮಸ್ಯೆಯಿಂದ ಹೊರಬಂದಿದ್ದಾರೆ. ನಾವೂ ಹೀಗೆ ಮಾಡಿ ಪ್ರಯೋಜನ ಪಡೆಯಬಹುದು. ಹೇಗೆ?

ಚೆನ್ನಾಗಿ ಪ್ಲಾನ್‌ ಮಾಡಿ

ಬೈಬಲ್‌ ಸಲಹೆ: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ.”—ಜ್ಞಾನೋಕ್ತಿ 21:5.

ಇದರ ಅರ್ಥ: ನೀವು ಇಷ್ಟಪಡುವ ಎಲ್ಲಾ ವಸ್ತುಗಳನ್ನು ತಗೊಳೋಕ್ಕಾಗಲ್ಲ! ಹಾಗಾಗಿ, ಹಣಕಾಸನ್ನು ಬೇಕಾಬಿಟ್ಟಿ ಖರ್ಚು ಮಾಡದಿರಲು ನಾವು ಒಳ್ಳೇ ಪ್ಲಾನ್‌ ಮಾಡಬೇಕು. ಆದರೆ ಬರೀ ಪ್ಲಾನ್‌ ಮಾಡಿದರೆ ಸಾಕಾಗಲ್ಲ, ಪ್ಲಾನ್‌ ಪ್ರಕಾರ ಹಣವನ್ನು ಹುಷಾರಾಗಿ ಬಳ್ಸೋದನ್ನು ಕಲಿಯಬೇಕು.

ನೀವೇನು ಮಾಡಬಹುದು:

  • ಒಳ್ಳೇ ಬಜೆಟ್‌ ಮಾಡಿ. ತಿಂಗಳು ಇಡೀ ಯಾವ ಯಾವ ವಸ್ತುಗಳಿಗೆ ಎಷ್ಟೆಷ್ಟು ಖರ್ಚಾಗುತ್ತೆ ಅಂತ ಲೆಕ್ಕಮಾಡಿ. ಒಂದು ಕಡೆ ಜಾಸ್ತಿ ಖರ್ಚಾದರೆ ಇನ್ನೊಂದು ಕಡೆ ಕಡಿಮೆ ಖರ್ಚು ಮಾಡಲು ಪ್ರಯತ್ನಿಸಿ. ಉದಾಹರಣೆಗೆ ಒಂದು ತಿಂಗಳಲ್ಲಿ, ಪೆಟ್ರೋಲಿಗೆ ಜಾಸ್ತಿ ಹಣ ಖರ್ಚು ಮಾಡಬೇಕಾಗಿ ಬಂದರೆ, ಷಾಪಿಂಗ್‌ಗೆ ಜಾಸ್ತಿ ಹಣ ಖರ್ಚು ಮಾಡಬೇಡಿ. ಹೀಗೆ ಮಾಡಿದರೆ ಇಡೀ ತಿಂಗಳು ನಿಮ್ಮ ಹತ್ರ ದುಡ್ಡಿರುತ್ತೆ.

  • ಅನಾವಶ್ಯಕವಾಗಿ ಸಾಲ ಮಾಡಬೇಡಿ. ಸಾಲ ಮಾಡೋದಕ್ಕಿಂತ ಹಣ ಕೂಡಿಟ್ಟು ನಂತರ ಬೇಕಾದ ವಸ್ತುಗಳನ್ನು ತಗೊಳ್ಳೋದು ಒಳ್ಳೇದು. ಆಗ ಸಾಲದ ಹೊರೆ ನಿಮ್ಮ ಮೇಲೆ ಇರೋದಿಲ್ಲ. ನಿಮ್ಮ ಹತ್ತಿರ ಕ್ರೆಡಿಟ್‌ ಕಾರ್ಡ್‌ ಇದ್ರೆ ಅದನ್ನು ಹುಷಾರಾಗಿ ಬಳಸಿ. ಪ್ರತಿ ತಿಂಗಳು ನಿಮ್ಮ ಕ್ರೆಡಿಟ್‌ ಕಾರ್ಡ್‌ ಬಿಲ್ಲನ್ನು ತಪ್ಪದೇ ಕಟ್ಟಿ. ಹೀಗೆ ಮಾಡಿದಾಗ ಬಡ್ಡಿ ಕಟ್ಟುವ ಅವಶ್ಯಕತೆ ಇರಲ್ಲ. ಈಗಾಗಲೇ ಸಾಲ ಮಾಡಿದ್ದರೆ ಅದನ್ನು ಬೇಗ ತೀರಿಸಲು ಒಳ್ಳೇ ಪ್ಲ್ಯಾನ್‌ ಮಾಡಿ.

    ಒಂದು ಸಂಶೋಧನೆ ತಿಳಿಸೋ ಪ್ರಕಾರ ತುಂಬಾ ಜನರು, “ಹೇಗಿದ್ರು ಕ್ರೆಡಿಟ್‌ ಕಾರ್ಡ್‌ ಇದೆ ಅಲ್ವಾ, ಆಮೇಲೆ ದುಡ್ಡು ಕಟ್ಟಿದ್ರೆ ಆಯ್ತು” ಅಂತ ಬೇಕಾಬಿಟ್ಟಿ ಖರ್ಚು ಮಾಡಿಬಿಡುತ್ತಾರೆ. ಹೀಗೆ ಆಗದಂತೆ ಎಚ್ಚರವಹಿಸಿ.

ಶ್ರಮಜೀವಿಗಳಾಗಿರಿ

ಬೈಬಲ್‌ ಸಲಹೆ: “ಮೈಗಳ್ಳನು ಮಳೆಗಾಲದಲ್ಲಿ ಹೊಲಗೇಯನು; ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?”​—ಜ್ಞಾನೋಕ್ತಿ 20:4.

ಇದರ ಅರ್ಥ: ಸೋಮಾರಿತನ ನಮ್ಮನ್ನು ಬಡವರನ್ನಾಗಿ ಮಾಡುತ್ತೆ. “ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆ ಮಾತೇ ಇದೆ. ಯಾವತ್ತು ಹಣಕ್ಕಾಗಿ ಅಲೆದಾಡೋ ಪರಿಸ್ಥಿತಿ ಬರಬಾರದು ಅಂದ್ರೆ ಶ್ರಮಿಸಿ ಕೆಲಸಮಾಡಬೇಕು.

ಇದನ್ನು ಹೇಗೆ ಮಾಡೋದು:

  • ಕಷ್ಟಪಟ್ಟು ಕೆಲಸ ಮಾಡಿ. ಶ್ರಮಿಸಿ ದುಡಿಯುವವರಿಗೆ ಯಾವಾಗಲು ಕೆಲಸ ಸಿಗುತ್ತೆ. ಹಾಗಾಗಿ ಅವರ ಆದಾಯ ಸ್ಥಿರವಾಗಿರುತ್ತೆ. ಯಾಕೆಂದರೆ ಮಾಲಿಕರಿಗೂ ಇಂಥ ಕೆಲಸಗಾರರೇ ಬೇಕು.

  • ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಕೆಲವರು ಕೆಲಸ ಮಾಡೋ ಜಾಗದಲ್ಲಿ ಕದಿಯುತ್ತಾರೆ. ಆದರೆ ನಾವು ಪ್ರಾಮಾಣಿಕರಾಗಿದ್ದರೆ ಒಳ್ಳೇ ಹೆಸರನ್ನು ಸಂಪಾದಿಸುತ್ತೇವೆ. ನಮಗೆ ಕೆಲಸ ಕೊಟ್ಟ ಯಜಮಾನ ನಮ್ಮನ್ನು ನಂಬುತ್ತಾನೆ. ಭವಿಷ್ಯದಲ್ಲಿ ನಾವು ಕೆಲಸ ಹುಡುಕಿಕೊಂಡು ಎಲ್ಲೇ ಹೋದರೂ, ನಮಗಿರುವ ಒಳ್ಳೇ ಹೆಸರಿಂದ ಕೆಲಸ ಸಿಗುತ್ತೆ.

  • ಅತಿಯಾಸೆ ಪಡಬೇಡಿ. ಹಣಕ್ಕಿಂತ ನಮ್ಮ ಆರೋಗ್ಯ, ಜೀವನ, ಮತ್ತು ಸಂಬಂಧಗಳು ಮುಖ್ಯ. “ಅತಿಯಾಸೆ ಗತಿ ಕೇಡು” ಎಂಬ ಗಾದೆಯಂತೆ, ನಾವು ಯಾವಾಗಲೂ ಹಣ ಹಣ ಅಂತ ಅದರ ಹಿಂದೆ ಬಿದ್ರೆ ಒಂದಿನ ಎಲ್ಲಾ ಕಳಕೊಳ್ಳಬೇಕಾಗುತ್ತೆ.

ಬೈಬಲಿನ ಇನ್ನಿತರ ಸಲಹೆಗಳು

ಒಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಬೈಬಲ್‌ ಓದುತ್ತಿದ್ದಾರೆ

ಬೈಬಲನ್ನು ಆನ್‌ಲೈನ್‌ನಲ್ಲಿ ಓದಿ. ಇದು jw.org ವೆಬ್‌ಸೈಟ್‌ನಲ್ಲಿ ನೂರಾರು ಭಾಷೆಗಳಲ್ಲಿ ಲಭ್ಯ

ನಿಮ್ಮ ಸಮಯ ಮತ್ತು ಹಣವನ್ನು ಕೆಟ್ಟ ಅಭ್ಯಾಸಗಳ ಮೇಲೆ ಸುರಿಯಬೇಡಿ.

“ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು; ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವದು.”​—ಜ್ಞಾನೋಕ್ತಿ 23:21.

ಅನಾವಶ್ಯಕ ಚಿಂತೆಗಳಿಂದ ದೂರವಿರಿ.

“ನೀವು ಏನು ಊಟಮಾಡುವಿರಿ, ಏನು ಕುಡಿಯುವಿರಿ ಅಥವಾ ನಿಮ್ಮ ದೇಹಗಳಿಗೆ ಏನು ಧರಿಸಿಕೊಳ್ಳುವಿರಿ ಎಂದು ಚಿಂತೆಮಾಡುವುದನ್ನು ನಿಲ್ಲಿಸಿರಿ.”​—ಮತ್ತಾಯ 6:25.

ದುರಾಸೆಯಿಂದ ದೂರ ಇರಿ.

“ಲೋಭಿಯು ಆಸ್ತಿಯನ್ನು ಗಳಿಸಲು ಆತುರಪಡುವನು; ತನಗೆ ಕೊರತೆಯಾಗುವದೆಂದು ಅರಿಯನು.”—ಜ್ಞಾನೋಕ್ತಿ 28:22.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ