ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g22 ನಂ. 1 ಪು. 7-9
  • 2 | ಜೀವನರೀತಿಯನ್ನು ಕಾಪಾಡಿಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 2 | ಜೀವನರೀತಿಯನ್ನು ಕಾಪಾಡಿಕೊಳ್ಳಿ
  • ಎಚ್ಚರ!—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇದು ಯಾಕೆ ಮುಖ್ಯ
  • ಈ ಮುಂದಿನ ವಿಷಯವನ್ನ ನೆನಪಿಡಿ
  • ಈಗ ನೀವೇನು ಮಾಡಬಹುದು
  • ಕಮ್ಮಿ ಕಾಸಲ್ಲಿ ಬಂಪರ್‌ ಬದುಕು
    ಇತರ ವಿಷಯಗಳು
  • ಹಣ ನಿರ್ವಹಣೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಹಣ ನಿರ್ವಹಣೆಗೆ ಹೆಜ್ಜೆಗಳು
    ಸುಖೀ ಸಂಸಾರ ಸಾಧ್ಯ!
  • ಹಣಕಾಸಿನ ಸಮಸ್ಯೆ
    ಎಚ್ಚರ!—2019
ಇನ್ನಷ್ಟು
ಎಚ್ಚರ!—2022
g22 ನಂ. 1 ಪು. 7-9
ಒಂದು ಹಲಗೆಯ ಮೇಲೆ ಬಡಗಿಯೊಬ್ಬ ಮೊಳೆಯನ್ನು ಹೊಡೆಯುತ್ತಿದ್ದಾನೆ.

ಲೋಕದಲ್ಲಿದೆ ಕಷ್ಟ-ನೋವು

2 | ಜೀವನರೀತಿಯನ್ನು ಕಾಪಾಡಿಕೊಳ್ಳಿ

ಇದು ಯಾಕೆ ಮುಖ್ಯ

ಅನೇಕ ಜನ್ರಿಗೆ ಪ್ರತಿದಿನ ಜೀವನ ನಡೆಸೋದು ತುಂಬ ಕಷ್ಟ ಆಗಿದೆ. ಲೋಕದ ಸಮಸ್ಯೆಗಳು ದಿನದಿಂದ ದಿನ ಜಾಸ್ತಿ ಆಗ್ತಾ ಇರೋದರಿಂದ ಈ ಕಷ್ಟ ಇನ್ನೂ ಹೆಚ್ಚಾಗುತ್ತಾ ಇದೆ. ಯಾಕೆ?

  • ವಿಪತ್ತುಗಳು ಬಂದಾಗ ಎಲ್ಲಾ ವಸ್ತುಗಳ ಬೆಲೆ ಆಕಾಶಕ್ಕೇರುತ್ತೆ. ಇದರಲ್ಲಿ ಊಟ, ಮನೆ ಬಾಡಿಗೆನೂ ಸೇರಿದೆ.

  • ತುಂಬ ಜನ ಕೆಲಸ ಕಳಕೊಳ್ತಾರೆ ಮತ್ತು ಇನ್ನು ಕೆಲವರು ಕಡಿಮೆ ಸಂಬಳಕ್ಕೆ ದುಡಿತಾರೆ.

  • ಪ್ರವಾಹ ಮತ್ತು ಭೂಕಂಪಗಳಿಂದ ಜನರ ಕೆಲಸ, ಮನೆ, ಆಸ್ತಿ-ಪಾಸ್ತಿಗಳೆಲ್ಲಾ ನಾಶ ಆಗುತ್ತೆ. ಹೀಗೆ ಜನರು ಬೀದಿಗೆ ಬರೋ ಪರಿಸ್ಥಿತಿ ಬರುತ್ತೆ.

ಈ ಮುಂದಿನ ವಿಷಯವನ್ನ ನೆನಪಿಡಿ

  • ನೀವು ಯೋಚನೆ ಮಾಡಿ ಖರ್ಚು ಮಾಡಿದ್ರೆ, ಹಣ ಉಳಿತಾಯ ಮಾಡಿದ್ರೆ, ಮುಂದೆ ಕಷ್ಟ ಬಂದಾಗ ಸ್ವಲ್ಪವಾದರೂ ಹಣ ಇರುತ್ತೆ.

  • ಇವತ್ತು ನಿಮ್ಮ ಹತ್ರ ಹಣ, ವಸ್ತುಗಳು ಇರಬಹುದು. ಆದರೆ ನಾಳೆ ಇಲ್ಲದೆನೂ ಹೋಗಬಹುದು.

  • ಕುಟುಂಬದಲ್ಲಿನ ಪ್ರೀತಿ-ಸಂತೋಷ, ಐಕ್ಯತೆಯನ್ನು ಹಣದಿಂದ ಖರೀದಿಸೋಕೆ ಆಗಲ್ಲ.

ಈಗ ನೀವೇನು ಮಾಡಬಹುದು

ಬೈಬಲಲ್ಲಿ ಹೀಗಿದೆ: “ಹಾಗಾಗಿ ನಮಗೆ ಊಟ ಬಟ್ಟೆ ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.”—1 ತಿಮೊತಿ 6:8.

ಇರೋದರಲ್ಲೇ ತೃಪ್ತಿಯಿಂದಿರಿ. ಅಗತ್ಯ ಇಲ್ಲದ ವಸ್ತುಗಳ ಮೇಲೆ ಆಸೆ ಪಡಬೇಡಿ. ಅದರಲ್ಲೂ ನಮ್ಮ ಹತ್ರ ಕಡಿಮೆ ಹಣ ಇದ್ದಾಗ ಇದನ್ನ ಮನಸ್ಸಲ್ಲಿ ಇಡೋದು ತುಂಬ ಮುಖ್ಯ.

ಅಗತ್ಯ ಇಲ್ಲದ ವಸ್ತುಗಳನ್ನು ಖರೀದಿಸಬೇಡಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ.

ಹೇಗೆ ಪಡೆಯೋದು ನೆಮ್ಮದಿ—ನಾವು ಹೀಗೆ ಮಾಡಿ ನೋಡಿ

ಕಷ್ಟ-ನೋವಿನ ಸಮಯದಲ್ಲಿ ಜೀವನ ರೀತಿ ಕಾಪಾಡಿಕೊಳ್ಳಲು ಈ ಹೆಜ್ಜೆಗಳನ್ನು ತೆಗೆದುಕೊಳ್ಳಿ, ನೆಮ್ಮದಿಯಾಗಿರಿ

ಖರ್ಚನ್ನು ಕಮ್ಮಿ ಮಾಡಿ

  • ವಯಸ್ಸಾದ ಮಹಿಳೆಯೊಬ್ಬರು ತೋಟದಿಂದ ಕ್ಯಾರೆಟ್‌ ವ್ಯವಸಾಯ ಮಾಡುತ್ತಿದ್ದಾರೆ.

    ಬಜೆಟ್‌ ಮಾಡಿ

    ನಿಮಗೆ ಅಗತ್ಯ ಇದ್ರೆ ಮಾತ್ರ ಹೊಸ ಫೋನ್‌, ಬಟ್ಟೆ ಮತ್ತು ಬೇರೆ ವಸ್ತುಗಳನ್ನು ಖರೀದಿಸಿ. ಉದಾಹರಣೆಗೆ, ಒಂದು ಗಾಡಿ ಖರೀದಿಸೋ ಮುಂಚೆ, ‘ಅದು ಇಲ್ಲದೇ ನನ್ನ ಕೆಲಸ ನಡೆಯುತ್ತಾ’ ಅಂತ ಯೋಚಿಸಿ. ತರಕಾರಿಗಳ ಖರ್ಚನ್ನು ಕಮ್ಮಿ ಮಾಡಕ್ಕೆ ನೀವು ಮನೆಯಲ್ಲೇ ತರಕಾರಿ ಗಿಡಗಳನ್ನು ಬೆಳೆಸಕ್ಕಾಗುತ್ತಾ ನೋಡಿ.

  • ಯಾವುದೇ ವಸ್ತುವನ್ನು ಖರೀದಿಸೋ ಮುಂಚೆ ‘ಇದರ ಅಗತ್ಯ ನಂಗೆ ನಿಜವಾಗ್ಲೂ ಇದೆಯಾ?’ ‘ಇದಕ್ಕಾಗಿ ಖರ್ಚು ಮಾಡುವಷ್ಟು ದುಡ್ಡು ನನ್ನ ಹತ್ತಿರ ಇದೆಯಾ’ ಅಂತ ಯೋಚಿಸಿ.

  • ಸರ್ಕಾರ ಅಥವಾ ಖಾಸಗಿ ಸಂಘಟನೆಗಳಿಂದ ಏನಾದ್ರೂ ಸಹಾಯ ಸಿಕ್ಕಿದ್ರೆ ಅದನ್ನ ಪಡೆಯೋಕೆ ಮುಜುಗರ ಪಡಬೇಡಿ.

ಗೀತ ಹೀಗಂತಾರೆ: “ನಮ್ಮ ಖರ್ಚುಗಳನ್ನು ಹೇಗೆ ಕಮ್ಮಿ ಮಾಡಬಹುದು ಅಂತ ನಾವು ಕುಟುಂಬವಾಗಿ ಕೂತು ಮಾತಾಡಿದ್ವಿ. ಹೊರಗೆ ಹೋಗಿ ಸುತ್ತಾಡೋದನ್ನು, ಶಾಪಿಂಗ್‌ ಮಾಡೋದನ್ನು ಕಮ್ಮಿ ಮಾಡಿದ್ವಿ. ಬೆಲೆ ಜಾಸ್ತಿ ಇರೋ ಆಹಾರ ಖರೀದಿಸೋದನ್ನು ನಿಲ್ಲಿಸಿದ್ವಿ.”

ಬಜೆಟ್‌ ಮಾಡಿ

ಮಹಿಳೆಯೊಬ್ಬರು ಕ್ಯಾಲುಕಲೇಟರ್‌ ಮತ್ತು ಬಿಲ್‌ ಇಟ್ಟುಕೊಂಡು ಲೆಕ್ಕ ಮಾಡುತ್ತಿದ್ದಾರೆ.

ಖರ್ಚನ್ನು ಕಮ್ಮಿ ಮಾಡಿ

ಬೈಬಲಲ್ಲಿ ಹೀಗಿದೆ: “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ, ಆದ್ರೆ ಆತುರಪಡುವವರು ಬಡತನಕ್ಕೆ ಬೀಳ್ತಾರೆ.” (ಜ್ಞಾನೋಕ್ತಿ 21:5) ಬಜೆಟ್‌ ಮಾಡಿದ್ರೆ ನಿಮಗೆ ಬರೋ ಸಂಬಳಕ್ಕಿಂತ ಜಾಸ್ತಿ ಖರ್ಚು ಮಾಡೋದನ್ನ ತಡಿಬಹುದು. ನೀವು ಹೇಗೆ ಬಜೆಟ್‌ ಮಾಡಬಹುದು?

  • ಮೊದಲು, ನಿಮಗೆ ಎಷ್ಟು ಸಂಬಳ ಸಿಗುತ್ತೆ ಅಂತ ಬರೆದಿಡಿ.

  • ಆಮೇಲೆ ಬಾಡಿಗೆಗೆ, ಕರೆಂಟ್‌ ಬಿಲ್‌ಗೆ, ರೇಶನ್‌ಗೆ ಎಷ್ಟು ಖರ್ಚಾಗುತ್ತೆ ಅಂತ ಬರೆದಿಡಿ. ಇದರ ಜೊತೆಗೆ ಬೇರೇನಾದ್ರೂ ಖರ್ಚಿದ್ರೆ ಅದನ್ನೂ ಬರೆದಿಡಿ.

  • ನಿಮ್ಮ ಸಂಬಳಕ್ಕಿಂತ ಖರ್ಚು ಜಾಸ್ತಿ ಆಗುತ್ತಿದ್ದರೆ ಬೇಡದ ವಸ್ತುಗಳನ್ನು ಖರೀದಿಸಬೇಡಿ.

ಕಿರಣ್‌ ಹೀಗಂತಾರೆ: “ಪ್ರತಿ ತಿಂಗಳು ನಮಗೆ ಎಷ್ಟು ಸಂಬಳ ಬರುತ್ತೆ, ಎಷ್ಟು ಖರ್ಚಿರುತ್ತೆ ಅಂತ ಲಿಸ್ಟ್‌ ಮಾಡ್ತೀವಿ. ಮುಂದೆ ಏನಾದ್ರೂ ತುರ್ತು ಪರಿಸ್ಥಿತಿ ಬಂದಾಗ ಬಳಸೋಕ್ಕೆ ಅಂತ ಸ್ವಲ್ಪ ಹಣವನ್ನು ನಾವು ತೆಗೆದಿಡುತ್ತೇವೆ. ಬಜೆಟ್‌ ಮಾಡೋದ್ರಿಂದ ನಮ್ಮ ದುಡ್ಡು ಎಲ್ಲಿ, ಹೇಗೆ ಖರ್ಚು ಆಗ್ತಾ ಇದೆ ಅಂತ ಗೊತ್ತಾಗುತ್ತೆ. ಇದರಿಂದ ನಾವು ಜಾಸ್ತಿ ತಲೆ ಕೆಡಿಸಿಕೊಳ್ಳಲ್ಲ.”

ಹಣ ಉಳಿಸಿ, ಸಾಲ ಮಾಡಬೇಡಿ

  • ತಾಯಿಯೊಬ್ಬರು ಮಗಳಿಗೆ ಹಣವನ್ನು ಹುಂಡಿಯಲ್ಲಿ ಹಾಕಲು ಸಹಾಯ ಮಾಡುತ್ತಿದ್ದಾರೆ.

    ಹಣ ಉಳಿಸಿ, ಸಾಲ ಮಾಡಬೇಡಿ

    ನೀವು ಸಾಲ ಮಾಡಿದ್ರೆ ಅದನ್ನು ಬೇಗ ತೀರಿಸಿ. ಸಾಧ್ಯವಾದಷ್ಟು ಸಾಲ ಮಾಡದೇ ಇರೋಕೆ ನೋಡಿ. ನೀವೇನಾದ್ರೂ ತಗೋಬೇಕು ಅಂತ ಇದ್ರೆ ಮೊದಲು ಹಣ ಸೇರಿಸಿಡಿ.

  • ಮುಂದೆ ಅಗತ್ಯ ಬಂದಾಗ ಖರ್ಚು ಮಾಡೋಕೆ ಪ್ರತೀ ತಿಂಗಳು ಹಣ ಕೂಡಿಸಿಡಿ.

ಶ್ರಮಪಟ್ಟು ಕೆಲಸ ಮಾಡಿ

ಬೈಬಲಲ್ಲಿ ಹೀಗಿದೆ: “ಕಷ್ಟಪಟ್ಟು ಮಾಡೋ ಪ್ರತಿಯೊಂದು ಕೆಲಸದಲ್ಲಿ ಪ್ರಯೋಜನ ಇರುತ್ತೆ.”—ಜ್ಞಾನೋಕ್ತಿ 14:23.

  • ಒಂದು ಹಲಗೆಯ ಮೇಲೆ ಬಡಗಿಯೊಬ್ಬ ಮೊಳೆಯನ್ನು ಹೊಡೆಯುತ್ತಿದ್ದಾನೆ.

    ಶ್ರಮಪಟ್ಟು ಕೆಲಸ ಮಾಡಿ

    ನೀವು ಮಾಡೋ ಕೆಲಸ ನಿಮಗೆ ಇಷ್ಟ ಇಲ್ಲ ಅಂದ್ರೂ ಅದರ ಕಡೆ ಒಳ್ಳೇ ಮನೋಭಾವ ಇರಲಿ. ಯಾಕೆಂದ್ರೆ ನಿಮಗಿರೋ ಕೆಲಸದಿಂದ ನಿಮ್ಮ ಮನೆ ನಡೆಸೋಕೆ ಆಗ್ತಿದೆ.

  • ಶ್ರಮಪಟ್ಟು ಮತ್ತು ನಿಯತ್ತಿನಿಂದ ಕೆಲಸ ಮಾಡಿದಾಗ ನಿಮ್ಮ ಕೆಲಸವನ್ನು ಉಳಿಸಿಕೊಳ್ಳೋಕೆ ಆಗುತ್ತೆ. ಒಂದುವೇಳೆ ಕೆಲಸ ಕಳಕೊಂಡ್ರು ಬೇರೆ ಕಡೆ ಸುಲಭವಾಗಿ ಕೆಲಸ ಸಿಗುತ್ತೆ.

ದಿಲಿಪ್‌ ಹೀಗಂತಾರೆ: “ನಾನು ಇಷ್ಟಪಡೋ ಕೆಲಸ ಮತ್ತು ನಾನು ನೆನಸಿದಷ್ಟು ಸಂಬಳ ಸಿಕ್ಕಿಲ್ಲ ಅಂದ್ರೂ ನಾನು ಆ ಕೆಲಸ ಮಾಡ್ತಿನಿ. ನಾನು ಯಾವುದೇ ಕೆಲಸ ಮಾಡಿದ್ರೂ ಶ್ರಮಪಟ್ಟು ಪ್ರಾಮಾಣಿಕವಾಗಿ ಮಾಡ್ತಿನಿ.”

ನೀವು ಕೆಲಸ ಹುಡುಕ್ತಾ ಇರೋದಾದ್ರೆ ಏನು ಮಾಡಬಹುದು?

  • ನೀವೇ ಮೊದಲ ಹೆಜ್ಜೆ ತಗೊಳ್ಳಿ. ನಿಮಗೆ ಎಲ್ಲಿ ಕೆಲಸ ಸಿಗುತ್ತೆ ಅಂತ ಅನಿಸುತ್ತೋ ಅಂತ ಕಂಪನಿಗಳಿಗೆ ಫೋನ್‌ ಮಾಡಿ. ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನೀವು ಕೆಲಸ ಹುಡುಕ್ತಾ ಇದ್ದೀರಾ ಅಂತ ತಿಳಿಸಿಡಿ.

  • ನಮಗಿಷ್ಟ ಇರೋ ಕೆಲಸನೇ ಸಿಗೋದು ತುಂಬ ಕಷ್ಟ. ಇರೋ ಕೆಲಸದಲ್ಲಿ ತೃಪ್ತರಾಗಿರಿ.

ಮಕ್ಕಳು ಆಟ ಆಡುವಾಗ ಹೆತ್ತವರು ಹಣದ ಬಗ್ಗೆ ಮಾತಾಡ್ತಿದ್ದಾರೆ.

ಹೆಚ್ಚನ್ನು ತಿಳಿಯಿರಿ. “ಕಮ್ಮಿ ಕಾಸಲ್ಲಿ ಬಂಪರ್‌ ಬದುಕು” ಅನ್ನೋ ಲೇಖನವನ್ನ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ