ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g20 ನಂ. 1 ಪು. 4
  • ಒತ್ತಡಕ್ಕೆ ಕಾರಣಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒತ್ತಡಕ್ಕೆ ಕಾರಣಗಳು
  • ಎಚ್ಚರ!—2020
  • ಅನುರೂಪ ಮಾಹಿತಿ
  • ಹಿತಕರ ಒತ್ತಡ, ಅಹಿತಕರ ಒತ್ತಡ
    ಎಚ್ಚರ!—1998
  • ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?
    ಎಚ್ಚರ!—2010
  • ಒತ್ತಡ ಅಂದರೇನು?
    ಎಚ್ಚರ!—2020
  • ಶಾಲೆಯ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ?
    ಎಚ್ಚರ!—2008
ಇನ್ನಷ್ಟು
ಎಚ್ಚರ!—2020
g20 ನಂ. 1 ಪು. 4

ಒತ್ತಡದಿಂದ ಹೊರಗೆ ಬನ್ನಿ

ಒತ್ತಡಕ್ಕೆ ಕಾರಣಗಳು

“ವಯಸ್ಕರಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಯಾಕಂದ್ರೆ ಈಗಿನ ಜನರ ಜೀವನ ಬದಲಾಗ್ತಾನೇ ಇದೆ. ಯಾವಾಗ ಏನಾಗುತ್ತೋ ಹೇಳಕ್ಕಾಗಲ್ಲ” ಅಂತ ಮೇಯೊ ಕ್ಲಿನಿಕ್‌ ವರದಿ ನೀಡಿದೆ. ಒತ್ತಡ ಹೆಚ್ಚಾಗಲು ಕೆಲವು ಕಾರಣಗಳು:

  • ಡೈವೋರ್ಸ್‌

  • ಆಪ್ತರ ಮರಣ

  • ಗಂಭೀರ ಕಾಯಿಲೆ

  • ಅಪಘಾತ

  • ಅಪರಾಧ

  • ಬಿಡುವಿಲ್ಲದ ಜೀವನ ರೀತಿ

  • ಪ್ರಕೃತಿಯಿಂದ ಅಥವಾ ಮಾನವರಿಂದ ಆಗೋ ದುರಂತ

  • ಸ್ಕೂಲ್‌ನಲ್ಲಿ ಮತ್ತು ಕೆಲಸದಲ್ಲಿ ಒತ್ತಡ

  • ಕೆಲಸ ಮತ್ತು ದುಡ್ಡಿನ ಬಗ್ಗೆ ಚಿಂತೆ

ಕೆಲಸ ಕಳೆದುಕೊಂಡಾಗ

ಅಮೆರಿಕನ್‌ ಸೈಕೊಲಾಜಿಕಲ್‌ ಅಸೋಸಿಯೇಷನ್‌ ಹೇಳೋದು: “ಒಬ್ಬ ಕೆಲಸ ಕಳಕೊಂಡ್ರೆ ಅವನ ಜೀವನಾನೇ ಅಲ್ಲೋಲ ಕಲ್ಲೋಲ ಆಗುತ್ತೆ. ಅವನ ಆರೋಗ್ಯ ಹಾಳಾಗುತ್ತೆ, ಕುಟುಂಬ ಒಡೆಯುತ್ತೆ, ಖಿನ್ನತೆ ಬರುತ್ತೆ, ಆತ್ಮಹತ್ಯೆನೂ ಮಾಡ್ಕೋಬಹುದು.”

ಚಿಕ್ಕ ವಯಸ್ಸಲ್ಲೇ ಒತ್ತಡ

ಚಿಕ್ಕ ಮಕ್ಕಳಿಗೆ ಒತ್ತಡ ಬರಲ್ಲ ಅಂತೇನಿಲ್ಲ. ಸ್ಕೂಲಲ್ಲಿ ಅವರ ಫ್ರೆಂಡ್ಸ್‌ ಹಿಂಸಿಸಬಹುದು ಅಥವಾ ಮನೆಯಲ್ಲಿ ದೊಡ್ಡವರು ಅವರನ್ನು ಸರಿಯಾಗಿ ನೋಡಿಕೊಳ್ಳದೇ ಇರಬಹುದು. ಕೆಲವರು ಮಕ್ಕಳನ್ನು ತುಂಬ ಹೊಡಿತಾರೇ, ಕೆಟ್ಟದಾಗಿ ಬೈತಾರೆ, ಲೈಂಗಿಕ ಕಿರುಕುಳ ಕೊಡುತ್ತಾರೆ. ಇನ್ನು ಕೆಲವು ಮಕ್ಕಳು ಚೆನ್ನಾಗಿ ಓದಬೇಕು ಒಳ್ಳೇ ಮಾರ್ಕ್ಸ್‌ ತಗೀಬೇಕು ಅಂತ ಟೆನ್ಷನ್‌ ತಗೊಳ್ಳುತ್ತಾರೆ. ಇಷ್ಟೇ ಅಲ್ಲ, ಅಪ್ಪ ಅಮ್ಮಂಗೆ ಡೈವೋರ್ಸ್‌ ಆಗಿದ್ರಂತೂ ಮಕ್ಕಳಿಗೆ ತುಂಬಾನೇ ನೋವಾಗುತ್ತೆ. ಈ ತರ ಒತ್ತಡದಲ್ಲಿ ಇರೋ ಮಕ್ಕಳು ಸರಿಯಾಗಿ ನಿದ್ದೆ ಮಾಡಲ್ಲ, ಓದೋಕೆ ಬರೆಯೋಕೆ ಕಷ್ಟಪಡುತ್ತಾರೆ, ಖಿನ್ನತೆಗೆ ಒಳಗಾಗುತ್ತಾರೆ, ಯಾರ ಜೊತೆನೂ ಬೆರೆಯೋಕೆ ಇಷ್ಟಪಡಲ್ಲ. ಕೆಲವು ಮಕ್ಕಳಿಗಂತೂ ತಮ್ಮ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಆಗಲ್ಲ. ಈ ತರ ಕಷ್ಟ ಪಡುತ್ತಿರೋ ಮಕ್ಕಳಿಗೆ ಸಹಾಯ ಬೇಕೇ ಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ