ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g20 ನಂ. 2 ಪು. 10-11
  • 3. ಒಳ್ಳೇ ಜನರಿಗೆ ಯಾಕೆ ಕಷ್ಟ ಬರುತ್ತೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 3. ಒಳ್ಳೇ ಜನರಿಗೆ ಯಾಕೆ ಕಷ್ಟ ಬರುತ್ತೆ?
  • ಎಚ್ಚರ!—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ
  • ನೀವೇ ಯೋಚಿಸಿ . . .
  • ಬೈಬಲ್‌ ಏನು ಹೇಳುತ್ತೆ
  • 4. ಕಷ್ಟಪಡಬೇಕು ಅಂತನೇ ದೇವರು ನಮ್ಮನ್ನ ಸೃಷ್ಟಿಸಿದ್ನಾ?
    ಎಚ್ಚರ!—2020
  • ಕಷ್ಟಗಳ ಬಗ್ಗೆ ಬೈಬಲ್‌ ಏನು ಹೇಳುತ್ತದೆ?
    ಎಚ್ಚರ!—2015
  • ಬೈಬಲ್‌ ಏನು ಹೇಳುತ್ತದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
  • ಪರಿವಿಡಿ
    ಎಚ್ಚರ!—2020
ಇನ್ನಷ್ಟು
ಎಚ್ಚರ!—2020
g20 ನಂ. 2 ಪು. 10-11
ಅರ್ಧ ಕೈಯನ್ನು ಡಾಕ್ಟರ್‌ಗಳು ಕತ್ತರಿಸಿದ ಮೇಲೆ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಪುಟ್ಟ ಮಗನನ್ನು ತಂದೆ ತಾಯಿ ನೋಡಿಕೊಳ್ಳುತ್ತಿದ್ದಾರೆ.

3. ಒಳ್ಳೇ ಜನರಿಗೆ ಯಾಕೆ ಕಷ್ಟ ಬರುತ್ತೆ?

ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ

ಯಾಕಂದ್ರೆ ಒಳ್ಳೇ ಜನರಿಗೆ ಕಷ್ಟ ಬಂದಾಗ ಇದು ಅನ್ಯಾಯ ಅಂತ ನಮ್ಮೆಲ್ರಿಗೂ ಅನ್ಸುತ್ತೆ. ಒಳ್ಳೆಯವರಿಗೂ ಕಷ್ಟ ಬರುತ್ತೆ ಅಂದಮೇಲೆ ಒಳ್ಳೆಯವರಾಗಿದ್ದು ಏನು ಪ್ರಯೋಜನ ಅಂತ ಜನ ನೆನೆಸುತ್ತಾರೆ.

ನೀವೇ ಯೋಚಿಸಿ . . .

ಕೆಲವರು ಪುನರ್ಜನ್ಮನಾ ನಂಬುತ್ತಾರೆ. ಹೋದ ಜನ್ಮದಲ್ಲಿ ಒಳ್ಳೇದು ಮಾಡಿದ್ರೆ ಈ ಜನ್ಮದಲ್ಲಿ ಸುಖ ಜೀವನ ಸಿಗುತ್ತೆ, ಅದೇ ಕೆಟ್ಟದ್ದು ಮಾಡಿದ್ರೆ ಜೀವನ ಬರೀ ಕಷ್ಟಗಳಿಂದಲೇ ತುಂಬಿರುತ್ತೆ ಅಂತ ನೆನೆಸುತ್ತಾರೆ. ಅವರ ನಂಬಿಕೆ ಪ್ರಕಾರ ಒಬ್ಬ ವ್ಯಕ್ತಿ ಈ ಜನ್ಮದಲ್ಲಿ ಒಳ್ಳೆಯವನೇ ಆಗಿದ್ರೂ ಹೋದ ಜನ್ಮದಲ್ಲಿ ಏನಾದ್ರು ಕೆಟ್ಟ ಕೆಲಸ ಮಾಡಿದ್ರೆ ಅವನು ಕಷ್ಟಗಳನ್ನ ಅನುಭವಿಸಲೇಬೇಕು. ಆದ್ರೆ . . .

  • ಒಬ್ಬ ವ್ಯಕ್ತಿಗೆ ಹೋದ ಜನ್ಮದ ಬಗ್ಗೆ ಏನು ನೆನಪೇ ಇಲ್ಲ ಅಂದ ಮೇಲೆ ಅವನು ಈ ಜೀವನದಲ್ಲಿ ಕಷ್ಟಪಟ್ಟರೆ ಏನು ಪ್ರಯೋಜನ?

  • ಹೋದ ಜನ್ಮದ ತಪ್ಪಿಗೆ ಕಷ್ಟ ಅನುಭವಿಸಲೇಬೇಕು ಅನ್ನೋದು ನಿಜವಾಗಿದ್ರೆ ಕಷ್ಟಗಳನ್ನ ತಪ್ಪಿಸೋಕೆ ಯಾಕಿಷ್ಟು ಪ್ರಯತ್ನ ಮಾಡ್ತೀವಿ?

    ಹೆಚ್ಚಿನ ಮಾಹಿತಿ ಪಡೆಯಿರಿ

    jw.orgಯಲ್ಲಿ ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ? ಅನ್ನೋ ವಿಡಿಯೋ ನೋಡಿ.

ಬೈಬಲ್‌ ಏನು ಹೇಳುತ್ತೆ

ಕಷ್ಟಗಳು ದೇವರು ಕೊಡೋ ಶಿಕ್ಷೆ ಅಲ್ಲ.

ಬದಲಿಗೆ ಕೆಲವೊಂದು ಕಷ್ಟಗಳು ನಾವು ತಪ್ಪಾದ ಸಮಯದಲ್ಲಿ ತಪ್ಪಾದ ಜಾಗದಲ್ಲಿ ಇರೋದ್ರಿಂದ ಬರುತ್ತೆ.

‘ಅನಿರೀಕ್ಷಿತ ಘಟನೆ ಯಾರಿಗೂ ತಪ್ಪಿದ್ದಲ್ಲ.’—ಪ್ರಸಂಗಿ 9:11.

ಇನ್ನು ಕೆಲವು ಕಷ್ಟಗಳು ನಮ್ಮಲ್ಲಿ ಪಾಪ ಮಾಡೋ ಸ್ವಭಾವ ಇರೋದ್ರಿಂದ ಬರುತ್ತೆ.

ಸಾಮಾನ್ಯವಾಗಿ “ಪಾಪ” ಅನ್ನೋ ಪದನಾ ಒಬ್ಬ ವ್ಯಕ್ತಿ ಮಾಡೋ ಕೆಟ್ಟ ಕೆಲಸನಾ ಸೂಚಿಸಲು ಉಪಯೋಗಿಸುತ್ತಾರೆ. ಆದರೆ, ಬೈಬಲ್‌ ಈ ಪದನಾ ಮೊದಲ ಮಾನವರಿಂದ ಎಲ್ಲಾ ಮಾನವರಿಗೆ ಪಾರಂಪರ್ಯವಾಗಿ ಬಂದ ಸ್ವಭಾವನಾ ಸೂಚಿಸಲು ಸಹ ಉಪಯೋಗಿಸುತ್ತೆ.

“ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.”—ಕೀರ್ತನೆ 51:5.

ಪಾರಂಪರ್ಯವಾಗಿ ಬಂದ ಈ ಪಾಪದಿಂದ ಮಾನವರ ಜೀವನ ಅಸ್ತವ್ಯಸ್ತ ಆಗಿದೆ.

ಈ ಪಾಪದಿಂದ ದೇವರೊಂದಿಗೆ ಇರೋ ನಮ್ಮ ಸ್ನೇಹ ಸಂಬಂಧ ಹಾಳಾಗಿದೆ. ಅಷ್ಟೇ ಅಲ್ಲ ಪಾಪದ ಕಾರಣ ನಮ್ಮಲ್ಲಿ ಸ್ವಾರ್ಥ, ಹೊಟ್ಟೆಕಿಚ್ಚಿನಂಥ ಸ್ವಭಾವಗಳು ಬಂದಿದೆ. ಇದ್ರಿಂದ ನಾವಷ್ಟೇ ಅಲ್ಲ ಎಲ್ಲರೂ ಕಷ್ಟಗಳನ್ನ ಅನುಭವಿಸುತ್ತಿದ್ದಾರೆ.

“ನಾನು ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ.”—ರೋಮನ್ನರಿಗೆ 7:21.

“ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ.”—ರೋಮನ್ನರಿಗೆ 8:22.

ಒಳ್ಳೇ ಜನರಿಗೆ ಯಾಕೆ ಕಷ್ಟ ಬರುತ್ತೆ?

ನಾವು ಒಳ್ಳೆಯವರೇ ಆಗಿರಲಿ ಕೆಟ್ಟವರೇ ಆಗಿರಲಿ ನಮ್ಮಲ್ಲಿ ಪಾಪ ಮಾಡೋ ಸ್ವಭಾವ ಇರೋದ್ರಿಂದ ಎಲ್ಲರಿಗೂ ಕಷ್ಟಗಳು ಬಂದೇ ಬರುತ್ತೆ. ಜೊತೆಗೆ ಕಾಯಿಲೆಗಳೂ ಬರುತ್ತೆ. ಅಷ್ಟೇ ಅಲ್ಲ ಬೇರೆಯವರಿಗೆ ಹಾನಿ ಮಾಡುವಂಥ ಕೆಟ್ಟ ಗುಣಗಳು ಜನರಲ್ಲಿ ಬೆಳೆಯಲು ಈ ಪಾಪ ಮಾಡೋ ಸ್ವಭಾವನೇ ಕಾರಣ.

ಹಾಗಾದ್ರೆ ಇದರ ಅರ್ಥ ನಾವು ಕಷ್ಟ ಪಡಬೇಕು ಅಂತನೇ ದೇವರು ನಮ್ಮನ್ನ ಸೃಷ್ಟಿಸಿದ್ನಾ?

ಮುಂದಿನ ಪುಟ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ