ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g20 ನಂ. 3 ಪು. 6-7
  • ಅನುಕಂಪ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅನುಕಂಪ ತೋರಿಸಿ
  • ಎಚ್ಚರ!—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾಕೆ ಪ್ರಾಮುಖ್ಯ?
  • ಪವಿತ್ರ ಗ್ರಂಥದಲ್ಲಿರೋ ಸಲಹೆ
  • ಅನುಕಂಪ ತೋರಿಸಿದ್ರೆ ಸಿಗೋ ಪ್ರಯೋಜ್ನ
  • ನೀವೇನು ಮಾಡಬಹುದು?
  • ಪರಾನುಭೂತಿ ದಯೆ ಹಾಗೂ ಕರುಣೆಗೆ ಕೀಲಿ ಕೈ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಅನುಕಂಪ ತೋರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ದೇವರಿಗೆ ಪರಾನುಭೂತಿ ಇದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
  • ಕುಟುಂಬ ಮತ್ತು ಬಂಧುಮಿತ್ರರು
    ಎಚ್ಚರ!—2019
ಇನ್ನಷ್ಟು
ಎಚ್ಚರ!—2020
g20 ನಂ. 3 ಪು. 6-7
ಒಬ್ಬ ಕಕೇಶಿಯನ್‌ ವ್ಯಕ್ತಿ ಮತ್ತು ಸಿಖ್‌ ವ್ಯಕ್ತಿ ವಿಮಾನದಲ್ಲಿ ಅಕ್ಕಪಕ್ಕ ಕೂತುಕೊಂಡಿದ್ದಾರೆ. ಅವರಿಬ್ಬರು ಪರಸ್ಪರ ಸಂತೋಷದಿಂದ ಮಾತಾಡುತ್ತಿದ್ದಾರೆ.

ಅನುಕಂಪ ತೋರಿಸಿ

ಯಾಕೆ ಪ್ರಾಮುಖ್ಯ?

ಬೇರೆಯವರಿಗೆ ಅನುಕಂಪ ತೋರಿಸಿಲ್ಲ ಅಂದ್ರೆ ಅವರಲ್ಲಿರೋ ಕುಂದು ಕೊರತೆಗಳೇ ಜಾಸ್ತಿ ಕಾಣುತ್ತೆ. ಅವರಿಗೂ-ನಮಗೂ ಇರೋ ವ್ಯತ್ಯಾಸದ ಮೇಲೆನೇ ನಮ್ಮ ಗಮನ ಹೋಗುತ್ತೆ. ಅದೂ ಅಲ್ಲದೇ ಅವರಿಗಿಂತ ನಾವೇ ಶ್ರೇಷ್ಠ ಅನ್ನೋ ಭಾವನೆ ನಮ್ಮ ಮನಸ್ಸಿಗೆ ಬಂದುಬಿಡುತ್ತೆ. ಈ ತರ ಯೋಚಿಸಿದ್ರೆ ನಮ್ಮ ಮನಸ್ಸಲ್ಲಿ ಅವರ ಮೇಲೆ ದ್ವೇಷ ಬೆಳೆಯುತ್ತೆ.

ಪವಿತ್ರ ಗ್ರಂಥದಲ್ಲಿರೋ ಸಲಹೆ

“ಆನಂದಿಸುವವರೊಂದಿಗೆ ಆನಂದಿಸಿರಿ; ಅಳುವವರೊಂದಿಗೆ ಅಳಿರಿ.”—ರೋಮನ್ನರಿಗೆ 12:15.

ಈ ಸಲಹೆಯಿಂದ ನಾವೇನು ಕಲಿಬಹುದು? ಬೇರೆಯವರಿಗೆ ಅನುಕಂಪ ತೋರಿಸಬೇಕು. ಅನುಕಂಪ ತೋರಿಸೋದು ಅಂದ್ರೆ ಇನ್ನೊಬ್ಬರ ಜಾಗದಲ್ಲಿ ನಿಂತು ಅವರ ಭಾವನೆಗಳನ್ನ ಅರ್ಥಮಾಡಿಕೊಳ್ಳೋದು.

ಅನುಕಂಪ ತೋರಿಸಿದ್ರೆ ಸಿಗೋ ಪ್ರಯೋಜ್ನ

ಅನುಕಂಪ ತೋರಿಸಿದ್ರೆ ಬೇರೆಯವರಿಗೂ ನಮಗೂ ಅಷ್ಟೇನು ವ್ಯತ್ಯಾಸ ಇಲ್ಲ, ಅವರೂ ನಮ್ಮ ಹಾಗೇನೇ ಅಂತ ಅರ್ಥ ಆಗುತ್ತೆ. ನಮ್ಮಲ್ಲಿರೋ ಭಾವನೆಗಳೇ ಅವರಲ್ಲೂ ಇದೆ ಅಂತ ಗೊತ್ತಾಗುತ್ತೆ. ಅವರು ಯಾವುದೇ ದೇಶ, ಭಾಷೆ ಅಥವಾ ಬಣ್ಣದವರಾಗಿರಲಿ ನಾವೆಲ್ಲರೂ ಒಂದೇ ಕುಟುಂಬದವರು ಅನ್ನೋದನ್ನ ಒಪ್ಪಿಕೊಳ್ತೀವಿ. ಇದನ್ನ ಅರ್ಥ ಮಾಡಿಕೊಂಡ್ರೆ ಬೇರೆಯವರ ಬಗ್ಗೆ ಒಳ್ಳೇದನ್ನೇ ಯೋಚಿಸ್ತೀವಿ.

ಅನುಕಂಪ ತೋರಿಸಿದ್ರೆ ಬೇರೆಯವರನ್ನ ಕೀಳಾಗಿ ನೋಡಲ್ಲ. ಸೆನೆಗಲ್‌ನಲ್ಲಿ ಇರೋ ಆನ್‌-ಮೇರಿ ಒಂದು ಸಮಯದಲ್ಲಿ ತನಗಿಂತ ಕೆಳಗಿನ ಜಾತಿಯವ್ರನ್ನ ಕೀಳಾಗಿ ನೋಡ್ತಿದ್ದಳು. ಆದ್ರೆ ಅವಳು ಅನುಕಂಪ ತೋರಿಸೋಕೆ ಕಲಿತಿದ್ರಿಂದ ಈ ಭಾವನೆಗಳನ್ನ ಬದಲಾಯಿಸಿಕೊಳ್ಳೋಕೆ ಸಾಧ್ಯ ಆಯ್ತು. “ಆ ಜನ ಎಷ್ಟು ಕಷ್ಟ ಪಡ್ತಿದ್ದಾರೆ ಅಂತ ನಾನು ನೋಡ್ದೆ. ನಾನೇನಾದ್ರು ಅವರ ಕುಟುಂಬದಲ್ಲಿ ಹುಟ್ಟಿದ್ದಿದ್ರೆ ನನ್ನ ಪರಿಸ್ಥಿತಿ ಹೇಗಿರ್ತಿತ್ತು, ಭಾವನೆಗಳು ಹೇಗಿರ್ತಿತ್ತು ಅಂತ ಯೋಚಿಸ್ದೆ. ಆಗ ನಂಗೆ ನಾನು ಯಾವುದೇ ರೀತಿಲೂ ಅವರಿಗಿಂತ ಶ್ರೇಷ್ಠಳಲ್ಲ ಅಂತ ಅರ್ಥ ಆಯ್ತು. ನಾನು ಅವರಿಗಿಂತ ದೊಡ್ಡವಳು ಅನಿಸಿಕೊಳ್ಳೋಷ್ಟು ದೊಡ್‌ ಕೆಲಸ ಏನೂ ಮಾಡಿಲ್ಲ” ಅಂತ ಅವಳು ಹೇಳುತ್ತಾಳೆ. ನಾವು ಬೇರೆಯವರ ಜಾಗದಲ್ಲಿ ನಿಂತು ಅವರ ಪರಿಸ್ಥಿತಿನ ಅರ್ಥಮಾಡಿಕೊಂಡ್ರೆ ಅವರ ಬಗ್ಗೆ ತಪ್ಪಭಿಪ್ರಾಯ ಬೆಳೆಸಿಕೊಳ್ಳೋ ಬದಲು ಅನುಕಂಪ ತೋರಿಸ್ತೀವಿ.

ನೀವೇನು ಮಾಡಬಹುದು?

ನಿಮ್ಮ ಮತ್ತು ಆ ಗುಂಪಿನ ನಡುವೆ ಇರೋ ಸಮಾನತೆ ಬಗ್ಗೆ ಯೋಚಿಸಿ. ಉದಾಹರಣೆಗೆ ಈ ಕೆಳಗಿನ ವಿಷಯಗಳನ್ನ ಮಾಡ್ವಾಗ ಬೇರೆಯವರಿಗೆ ಹೇಗನ್ಸುತ್ತೆ ಅಂತ ಯೋಚಿಸಿ

ಬೇರೆಯವರಿಗೆ ಅನುಕಂಪ ತೋರಿಸಿದ್ರೆ ಅವರೂ ನಮ್ಮ ಹಾಗೇನೇ ಅಂತ ಅರ್ಥಮಾಡಿಕೊಳ್ತೀವಿ

  • ಕುಟುಂಬದವರ ಜೊತೆ ಕೂತು ಊಟ ಮಾಡ್ವಾಗ

  • ದಿನ ಎಲ್ಲಾ ಕೆಲಸ ಮಾಡಿ ಮನೆಗೆ ಬಂದಾಗ

  • ಫ್ರೆಂಡ್ಸ್‌ ಜೊತೆ ಸ್ವಲ್ಪ ಹೊತ್ತು ಕಾಲ ಕಳೀವಾಗ

  • ಇಷ್ಟ ಆಗಿರೋ ಹಾಡುಗಳನ್ನ ಕೇಳುವಾಗ

ಆಮೇಲೆ ಅವರ ಜಾಗದಲ್ಲಿ ನೀವಿದ್ದಿದ್ರೆ ನಿಮಗೆ ಹೇಗನಿಸುತ್ತಿತ್ತು ಅಂತ ಯೋಚಿಸಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

  • ‘ಯಾರಾದ್ರು ನಂಗೆ ಅವಮಾನ ಮಾಡಿದ್ರೆ ಏನು ಮಾಡ್ತೀನಿ?’

  • ‘ನನ್ನ ಬಗ್ಗೆ ಏನೂ ಗೊತ್ತಿಲ್ಲದೇ ಯಾರಾದ್ರು ನನ್ನ ಬಗ್ಗೆ ತಪ್ಪಭಿಪ್ರಾಯ ಬೆಳೆಸಿಕೊಂಡ್ರೆ ಹೇಗನ್ಸುತ್ತೆ?’

  • ‘ನಾನೇನಾದ್ರು ಆ ಗುಂಪಲ್ಲಿ ಇದ್ದಿದ್ರೆ ಬೇರೆಯವರು ನನ್ನ ಜೊತೆ ಹೇಗೆ ನಡ್ಕೋಬೇಕು ಅಂತ ಇಷ್ಟಪಡ್ತಿದ್ದೆ?’

ಅದೇ ಕಕೇಶಿಯನ್‌ ವ್ಯಕ್ತಿ ಮತ್ತು ಸಿಖ್‌ ವ್ಯಕ್ತಿ ತಮ್ಮಲ್ಲಿ ಸಾಮಾನ್ಯವಾಗಿರೋ ವಿಷಯಗಳ ಫೋಟೋಗಳನ್ನ ಅಂದ್ರೆ ಕುಟುಂಬ, ಇಷ್ಟಪಡುವ ಕ್ರೀಡೆ, ಕೆಲಸ ಮುಂತಾದ ಫೋಟೋಗಳನ್ನ ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ.

ಬದಲಾದ ಯೋಚ್ನೆ, ಒಳ್ಳೇ ಜೀವನ: ರಾಬರ್ಟ್‌ (ಸಿಂಗಾಪುರ್‌)

“ಕೇಳಿಸಿಕೊಳ್ಳೋ ಸಾಮರ್ಥ್ಯ ಇಲ್ಲದವರಿಗೆ ಅಷ್ಟಾಗಿ ತಿಳುವಳಿಕೆ ಇಲ್ಲ, ಏನಾದ್ರು ಹೇಳಿದ್ರೆ ಬೇಗ ಬೇಜಾರು ಮಾಡ್ಕೊಳ್ತಾರೆ, ಅವ್ರು ಒಂಥರಾ ಜನ ಅಂತ ಮೊದಮೊದಲು ನಂಗೆ ಅನಿಸುತ್ತಿತ್ತು. ಅದಕ್ಕೆ ನಾನು ಅವ್ರಿಂದ ದೂರ ಇರುತ್ತಿದ್ದೆ. ನಾನು ಅವ್ರಿಗೆ ಭೇದಭಾವ ಮಾಡ್ತಿದ್ದೀನಿ ಅಂತ ಒಂದ್ಸಲನೂ ಅನಿಸಲಿಲ್ಲ. ಯಾಕಂದ್ರೆ ನಾನು ಈ ತರ ನನ್ನ ಮನಸ್ಸಲ್ಲಿ ಯೋಚಿಸ್ತಿದ್ದೆ, ಅವರಿಗೆ ಯಾವತ್ತೂ ಹಾನಿ ಮಾಡಿರಲಿಲ್ಲ.

“ಈಗ ನಾನು ಅನುಕಂಪ ಬೆಳೆಸಿಕೊಂಡಿರೋದ್ರಿಂದ ಅವ್ರಿಗೆ ಯಾವುದೇ ಭೇದಭಾವ ಮಾಡಲ್ಲ. ಮೊದಮೊದಲು ನಂಗೆ ಕೇಳಿಸಿಕೊಳ್ಳೋ ಸಾಮರ್ಥ್ಯ ಇಲ್ಲದವರಿಗೆ ಅಷ್ಟು ತಿಳುವಳಿಕೆ ಇಲ್ಲ ಅಂತ ಅನಿಸುತ್ತಿತ್ತು ಯಾಕಂದ್ರೆ ನಾನೇನಾದ್ರು ಮಾತಾಡಿದಾಗ ಅವರ ಮುಖದಲ್ಲಿ ಯಾವ ಭಾವನೆನೂ ಇರುತ್ತಿರಲಿಲ್ಲ. ಸುಮ್ಮನೆ ನಿಂತು ನೋಡ್ತಿದ್ರು ಅಷ್ಟೇ. ಆಗ ನಾನು, ಒಂದು ವೇಳೆ ಬೇರೆಯವರು ನನ್ನ ಹತ್ರ ಮಾತಾಡಿದಾಗ ನಂಗೇನೂ ಕೇಳಿಸಿಲ್ಲ ಅಂದ್ರೆ ಹೇಗನಿಸುತ್ತಿತ್ತು ಅಂತ ಯೋಚಿಸಿದೆ. ನಾನೂ ಅವರ ತರನೇ ಸುಮ್ಮನೆ ನಿಂತು ನೋಡುತ್ತಿದ್ದೆ ಅನಿಸ್ತು. ನನ್ನ ಕಿವೀಲಿ ಕೇಳಿಸಿಕೊಳ್ಳೋ ಮಿಷಿನ್‌ ಇದ್ದಿದ್ರೂ ಬೇರೆಯವರ ಮಾತುಗಳನ್ನ ಅರ್ಥಮಾಡ್ಕೊಳ್ಳೋಕೆ ಕಷ್ಟ ಆಗಿರುತ್ತಿತ್ತು ಅನಿಸುತ್ತೆ.

“ಕೇಳಿಸಿಕೊಳ್ಳೋ ಸಾಮರ್ಥ್ಯ ಇಲ್ಲದೇ ಇರೋರ ಜಾಗದಲ್ಲಿ ನಾನು ನಿಂತು ಯೋಚಿಸಿದಾಗ ನನ್ನ ಮನಸ್ಸಲ್ಲಿ ಇದ್ದಿದ್ದ ಭೇದಭಾವ ಮಾಯಾ ಆಗೋಯ್ತು.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ