ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 3
  • ಅನುಕಂಪ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅನುಕಂಪ ತೋರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಪರಾನುಭೂತಿ ದಯೆ ಹಾಗೂ ಕರುಣೆಗೆ ಕೀಲಿ ಕೈ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ದೇವರಿಗೆ ಪರಾನುಭೂತಿ ಇದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
  • ಅನುಕಂಪ ತೋರಿಸಿ
    ಎಚ್ಚರ!—2020
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 3

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ಇನ್ನೂ ಹೆಚ್ಚು ಖುಷಿ ಪಡಕೊಳ್ಳಿ

ಅನುಕಂಪ ತೋರಿಸಿ

ಇನ್ನೊಬ್ಬರ ಯೋಚನೆ, ಭಾವನೆ, ಇಷ್ಟ-ಕಷ್ಟ ಮತ್ತು ಅಗತ್ಯಗಳನ್ನ ಅರ್ಥ ಮಾಡಿಕೊಳ್ಳೋ ಶಕ್ತಿನೇ ಅನುಕಂಪ. ಈ ಗುಣ ಇರುವವರನ್ನ ಜನ ಬೇಗ ಗುರುತಿಸುತ್ತಾರೆ. ಬೇರೆಯವರಿಗೆ ಸಹಾಯ ಮಾಡಬೇಕು ಅನ್ನೋ ಮನಸ್ಸಿದ್ರೆ ಅನುಕಂಪ ತೋರಿಸೋಕೆ ಸುಲಭ. ಸೇವೇಲಿ ಜನರಿಗೆ ಅನುಕಂಪ ತೋರಿಸಿದಾಗ ಯೆಹೋವ ಪ್ರೀತಿ, ಕಾಳಜಿ ಇರೋ ದೇವರು ಅಂತ ತೋರಿಸಿಕೊಡ್ತೀವಿ. ಆಗ ಅವರಿಗೆ ದೇವರ ಬಗ್ಗೆ ತಿಳುಕೊಳ್ಳಬೇಕು ಅನ್ನೋ ಆಸೆ ಬರುತ್ತೆ.—ಫಿಲಿ 2:4.

ವಿದ್ಯಾರ್ಥಿಗೆ ಬೈಬಲ್‌ ಕಲಿಸುವಾಗ ಮಾತ್ರ ಅಲ್ಲ ಬೇರೆ ಸಮಯದಲ್ಲೂ ಅನುಕಂಪ ತೋರಿಸ್ತೀವಿ. ಅದನ್ನ ನಾವು ಮಾತಾಡೋ ರೀತಿಯಲ್ಲಿ, ಕೈಸನ್ನೆಯಲ್ಲಿ, ಮುಖದಲ್ಲಿ ತೋರಿಸ್ತೀವಿ. ಅವರು ಮಾತಾಡುವಾಗ ಗಮನಕೊಟ್ಟು ಪ್ರೀತಿಯಿಂದ ಕೇಳಿಸಿಕೊಳ್ತೀವಿ. ಅವರ ಬಗ್ಗೆ ಕಾಳಜಿ ವಹಿಸ್ತೀವಿ. ಅವರ ಬೇಕು-ಬೇಡಗಳಿಗೆ, ಅಭಿಪ್ರಾಯಗಳಿಗೆ ಬೆಲೆ ಕೊಡ್ತೀವಿ. ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ತೀವಿ. ಏನು ಮಾಡಬೇಕು ಅಂತ ಹೇಳಿಕೊಡ್ತೀವಿ, ಸಹಾಯನೂ ಮಾಡ್ತೀವಿ. ಆದರೆ ಬದಲಾವಣೆ ಮಾಡಿಕೊಳ್ಳಲೇಬೇಕು ಅಂತ ಒತ್ತಾಯ ಮಾಡಲ್ಲ. ನಮ್ಮಿಂದ ಸಹಾಯ ತಗೊಂಡು ಅವರಾಗೇ ಬದಲಾವಣೆ ಮಾಡಿಕೊಂಡಾಗ ಖುಷಿಪಡ್ತೀವಿ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಅನುಕಂಪ ತೋರಿಸಿ ಅನ್ನೋ ವಿಡಿಯೋ ನೋಡಿ, ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಅನುಕಂಪ ತೋರಿಸಿ’ ಅನ್ನೋ ವಿಡಿಯೋದಲ್ಲಿ ಬರೋ ಒಂದು ದೃಶ್ಯ. ಜಾಸ್ಮಿನ್‌ ನೀತಾಳನ್ನ ಕಾಫಿ ಶಾಪಲ್ಲಿ ಭೇಟಿ ಆದಾಗ ಅವತ್ತು ಯಾಕೆ ಸ್ಟಡಿ ಮಾಡಕ್ಕಾಗಲ್ಲ ಅಂತ ವಿವರಿಸ್ತಿದ್ದಾಳೆ.

    ಜಾಸ್ಮಿನ್‌ ಲೇಟಾಗಿ ಬಂದಾಗ ನೀತಾ ಹೇಗೆ ಅನುಕಂಪ ತೋರಿಸಿದಳು?

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಅನುಕಂಪ ತೋರಿಸಿ’ ಅನ್ನೋ ವಿಡಿಯೋದಲ್ಲಿ ಬರೋ ಒಂದು ದೃಶ್ಯ. ನೀತಾ ಅನುಕಂಪದಿಂದ ಕೇಳಿಸಿಕೊಳ್ತಾ ಇದ್ದಾಳೆ.

    ಇವತ್ತು ಸಿಕ್ಕಾಪಟ್ಟೆ ಕೆಲಸ ಇದೆ, ಸ್ಟಡಿ ಮಾಡೋಕೆ ಆಗಲ್ಲ ಅಂತ ಜಾಸ್ಮಿನ್‌ ಹೇಳಿದಾಗ ನೀತಾ ಹೇಗೆ ಅನುಕಂಪ ತೋರಿಸಿದಳು?

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಅನುಕಂಪ ತೋರಿಸಿ’ ಅನ್ನೋ ವಿಡಿಯೋದಲ್ಲಿ ಬರೋ ಒಂದು ದೃಶ್ಯ. ಮನೇಲಿ ವಸ್ತುಗಳನ್ನ ಅಚ್ಚುಕಟ್ಟಾಗಿ ಇಡೋಕೆ ಜಾಸ್ಮಿನ್‌ಗೆ ನೀತಾ ಸಹಾಯ ಮಾಡ್ತಿದ್ದಾಳೆ.

    ನಾವು ಅನುಕಂಪ ತೋರಿಸಿದ್ರೆ ಜನ ಯೆಹೋವನ ಬಗ್ಗೆ ತಿಳುಕೊಳ್ಳೋಕೆ ಇಷ್ಟಪಡ್ತಾರೆ

    ಅಚ್ಚುಕಟ್ಟಾಗಿ ಇಡೋಕೆ ಜಾಸ್ಮಿನ್‌ಗೆ ನೀತಾ ಹೇಗೆ ಅನುಕಂಪ ತೋರಿಸಿದಳು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ