ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g20 ನಂ. 3 ಪು. 10-11
  • ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೊಳ್ಳಿ
  • ಎಚ್ಚರ!—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾಕೆ ಪ್ರಾಮುಖ್ಯ?
  • ಪವಿತ್ರ ಗ್ರಂಥದಲ್ಲಿರೋ ಸಲಹೆ
  • ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೊಂಡ್ರೆ ಸಿಗೋ ಪ್ರಯೋಜ್ನ
  • ನೀವೇನು ಮಾಡಬಹುದು?
  • ಅವರು ಭೇದಭಾವ ಮಾಡೋದನ್ನ ಬಿಟ್ಟುಬಿಟ್ರು
    ಎಚ್ಚರ!—2020
  • ಪ್ರೀತಿ ತೋರಿಸಿ
    ಎಚ್ಚರ!—2020
  • ಈಗಿರೋ ಫ್ರೆಂಡ್ಸೂ ಇರ್ಲಿ, ಹೊಸ ಫ್ರೆಂಡ್ಸೂ ಬರ್ಲಿ
    ಯುವಜನರ ಪ್ರಶ್ನೆಗಳು
  • ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಎಚ್ಚರ!—2020
g20 ನಂ. 3 ಪು. 10-11
ಬೇರೆ ಬೇರೆ ಹಿನ್ನೆಲೆಯ ನಾಲ್ಕು ಹೆಂಗಸರು ಪಾರ್ಕ್‌ನಲ್ಲಿ ನಗ್ತಾ ಮಾತಾಡುತ್ತಿದ್ದಾರೆ ಮತ್ತು ತಮ್ಮ ಮಕ್ಕಳು ಆಟ ಆಡುವುದನ್ನು ನೋಡಿ ಆನಂದಿಸುತ್ತಿದ್ದಾರೆ.

ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೊಳ್ಳಿ

ಯಾಕೆ ಪ್ರಾಮುಖ್ಯ?

ತುಂಬ ಜನ ತಮ್ಮ ಹಾಗೇ ಯೋಚಿಸೋವ್ರ ಜೊತೆ ಮಾತ್ರ ಫ್ರೆಂಡ್‌ಷಿಪ್‌ ಬೆಳೆಸಿಕೊಳ್ಳೋಕೆ ಇಷ್ಟಪಡ್ತಾರೆ. ಬೇರೆಯವರೊಟ್ಟಿಗೆ ಅಷ್ಟು ಬೆರೆಯಲ್ಲ. ಹೀಗೆ ಮಾಡಿದ್ರೆ ಭೇದಭಾವ ನಮ್ಮ ಮನಸ್ಸಲ್ಲಿ ಬೇರೂರಿ ಬಿಡುತ್ತೆ. ಅಷ್ಟೇ ಅಲ್ಲ ನಾವು ಯೋಚಿಸೋ ಮತ್ತು ಮಾಡೋ ರೀತಿನೇ ಸರಿ ಅನ್ನೋ ಭಾವನೆನೂ ಬಂದುಬಿಡುತ್ತೆ.

ಪವಿತ್ರ ಗ್ರಂಥದಲ್ಲಿರೋ ಸಲಹೆ

‘ನಿಮ್ಮ ಹೃದಯ ವಿಶಾಲಮಾಡಿಕೊಳ್ಳಿ.’—2 ಕೊರಿಂಥ 6:13.

ಈ ಸಲಹೆಯಿಂದ ನಾವೇನು ಕಲಿಬಹುದು? ಇಲ್ಲಿ “ಹೃದಯ” ಅನ್ನೋ ಪದ ನಮ್ಮ ಇಷ್ಟಗಳನ್ನ ಮತ್ತು ಭಾವನೆಗಳನ್ನ ಸೂಚಿಸುತ್ತೆ. ನಮ್ಮ ಹಾಗೇ ಯೋಚಿಸೋ ಜನರನ್ನ ಫ್ರೆಂಡ್ಸ್‌ ಮಾಡ್ಕೊಂಡ್ರೆ ಬಾವಿಲಿರೋ ಕಪ್ಪೆ ಆಗಿಬಿಡ್ತೀವಿ. ಹಾಗಾಗಿ ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೋಬೇಕು.

ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೊಂಡ್ರೆ ಸಿಗೋ ಪ್ರಯೋಜ್ನ

ನಾವು ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೊಂಡಾಗ ಅವರ ಯೋಚ್ನೆ, ಭಾವನೆಗಳು ಯಾಕೆ ನಮ್ಮ ಹಾಗಿಲ್ಲ ಅಂತ ಅರ್ಥ ಆಗುತ್ತೆ. ನಾವು ನಿಧಾನಕ್ಕೆ ಅವ್ರಿಗೆ ಹತ್ರ ಆಗ್ತಾ ಹೋದಂತೆ ಅವರನ್ನ ಇಷ್ಟಪಡೋಕೆ ಶುರುಮಾಡ್ತೀವಿ, ಅವರ ಸುಖ ದುಃಖಗಳಲ್ಲೂ ಭಾಗಿಯಾಗ್ತೀವಿ.

ನಾರ್ವೆಯಲ್ಲಿ ಇರೋ ನಜ಼ರೀ ಅನ್ನೋ ಸ್ತ್ರೀಯ ಉದಾಹರಣೆ ನೋಡಿ. ಬೇರೆ ದೇಶದಿಂದ ಬಂದ ಜನರಂದ್ರೆ ಅವರಿಗೆ ಇಷ್ಟ ಆಗ್ತಿರಲಿಲ್ಲ. ಆದ್ರೆ ಅವರು ತಮ್ಮ ಯೋಚ್ನೆನ ಬದಲಾಯಿಸಿಕೊಂಡ್ರು. “ಜನರು ಅವರ ಬಗ್ಗೆ ಏನೇನೋ ಹೇಳೋದನ್ನ ನಾನು ಕೇಳಿಸಿಕೊಂಡಿದ್ದೆ. ಆದ್ರೆ ಅವರ ಜೊತೆ ಸ್ವಲ್ಪ ಕಾಲ ಕಳೆದಾಗ, ಕೆಲಸ ಮಾಡ್ದಾಗ ನಾನು ಕೇಳಿಸಿಕೊಂಡಿದ್ದೆಲ್ಲ ನಿಜ ಅಲ್ಲ ಅಂತ ಗೊತ್ತಾಯಿತು. ಬೇರೆಬೇರೆ ದೇಶ ಸಂಸ್ಕೃತಿಯ ಜನರನ್ನ ಫ್ರೆಂಡ್ಸ್‌ ಮಾಡ್ಕೊಂಡ್ರೆ ಅವರ ಬಗ್ಗೆ ಚೆನ್ನಾಗಿ ತಿಳುಕೊಳ್ಳೋಕೆ ಆಗುತ್ತೆ, ಅವರ ಮೇಲೆ ತಪ್ಪಭಿಪ್ರಾಯ ಬೆಳೆಯಲ್ಲ. ಅವರ ಮೇಲಿರೋ ಪ್ರೀತಿ, ಗೌರವ ಜಾಸ್ತಿ ಆಗುತ್ತೆ. ನಮ್ಮ ಮಧ್ಯೆ ಇರೋ ಫ್ರೆಂಡ್‌ಷಿಪ್ಪೂ ಗಟ್ಟಿಯಾಗುತ್ತೆ” ಅಂತ ಅವರು ಹೇಳ್ತಾರೆ.

ಫ್ರೆಂಡ್ಸ್‌ ಮಾಡಿಕೊಳ್ಳಿ, ಆದ್ರೆ ಹುಷಾರು

ಫ್ರೆಂಡ್ಸ್‌ ಮಾಡ್ಕೊಳ್ಳೋದು ಒಳ್ಳೇದೇ. ಹಾಗಂತ ಎಲ್ಲರನ್ನೂ ಫ್ರೆಂಡ್ಸ್‌ ಮಾಡ್ಕೊಳ್ಳೋಕೆ ಆಗಲ್ಲ. ಯಾಕಂದ್ರೆ ಕೆಲವರಲ್ಲಿ ಕೆಟ್ಟ ಚಟಗಳಿರುತ್ತೆ. ಅವರನ್ನ ಫ್ರೆಂಡ್ಸ್‌ ಮಾಡ್ಕೊಂಡ್ರೆ ಆ ಚಟಗಳು ನಮ್ಮಲ್ಲೂ ಬಂದುಬಿಡೋ ಸಾಧ್ಯತೆ ಇರುತ್ತೆ. ಇದರ ಅರ್ಥ ನಾವು ಭೇದ ಭಾವ ಮಾಡ್ತಿದ್ದೀವಿ, ಅವರನ್ನ ದ್ವೇಷಿಸುತ್ತಿದ್ದೀವಿ ಅಂತ ಅಲ್ಲ ಅಥವಾ ನಮ್ಮ ಇಷ್ಟ, ಭಾವನೆಗಳನ್ನ ಅವರ ಮೇಲೆ ಹೇರುತ್ತಿದ್ದೀವಿ ಅಂತನೂ ಅಲ್ಲ. ಆದ್ರೆ ಅವ್ರಿಂದ ಸ್ವಲ್ಪ ದೂರ ಇರುತ್ತೀವಿ ಅಷ್ಟೇ.—ಜ್ಞಾನೋಕ್ತಿ 13:20.

ನೀವೇನು ಮಾಡಬಹುದು?

ಬೇರೆ ದೇಶ, ಜಾತಿ, ಭಾಷೆಯ ಜನರ ಹತ್ರ ಮಾತಾಡೋ ಅವಕಾಶ ಸಿಕ್ಕಿದಾಗ ಅದನ್ನ ಚೆನ್ನಾಗಿ ಉಪಯೋಗಿಸಿಕೊಳ್ಳಿ. ನೀವು ಹೀಗೆ ಮಾಡಬಹುದು:

  • ಅವರ ಜೊತೆ ಸ್ವಲ್ಪ ಹೊತ್ತು ಮಾತಾಡಿ, ಅವರ ಬಗ್ಗೆ ತಿಳುಕೊಳ್ಳಿ.

  • ಅವರನ್ನ ನಿಮ್ಮ ಮನೆಗೆ ಊಟಕ್ಕೆ ಕರೆಯಿರಿ.

  • ಅವರು ತಮ್ಮ ಬಗ್ಗೆ ಏನಾದ್ರು ಹೇಳುವಾಗ ಅದನ್ನ ಚೆನ್ನಾಗಿ ಕೇಳಿಸಿಕೊಳ್ಳಿ ಮತ್ತು ಅವರಿಗೆ ಏನು ಇಷ್ಟ, ಏನು ಇಷ್ಟ ಇಲ್ಲ ಅಂತ ತಿಳುಕೊಳ್ಳಿ.

ಹೀಗೆ ಬೇರೆಯವರ ಬಗ್ಗೆ ತಿಳುಕೊಂಡು ಅವರನ್ನ ಅರ್ಥಮಾಡಿಕೊಂಡ್ರೆ ಅವರ ಬಗ್ಗೆ ಇದ್ದಿದ್ದ ತಪ್ಪಭಿಪ್ರಾಯ ಎಲ್ಲ ಹೋಗಿಬಿಡುತ್ತೆ.

ಬದಲಾದ ಯೋಚ್ನೆ, ಒಳ್ಳೇ ಜೀವನ: ಕಂದಸಾಮಿ ಮತ್ತು ಸೂಕಮ್ಮ (ಕೆನಡಾ)

“ನಾವು ಬೆಳೆದದ್ದು ದಕ್ಷಿಣ ಆಫ್ರಿಕಾದಲ್ಲಿ. ಆ ಸಮಯದಲ್ಲಿ ಕರಿ-ಬಿಳಿ ಜನ ಅನ್ನೋ ಭೇದಭಾವ ಇತ್ತು. ಕರಿ ಜನರು ಬೇರೆ ಏರಿಯಾದಲ್ಲಿ, ಬಿಳಿ ಜನರು ಬೇರೆ ಏರಿಯಾದಲ್ಲಿ ಜೀವಿಸುತ್ತಿದ್ರು. ಪರಿಸ್ಥಿತಿ ಹೀಗೆ ಇದ್ದಿದ್ರಿಂದ ಜನರು ಒಬ್ಬರಿಗೊಬ್ಬರು ಭೇದಭಾವ ಮಾಡೋಕೆ ಶುರುಮಾಡಿದ್ರು. ಬಿಳಿ ಜನರು ನಮ್ಮನ್ನ ಕೀಳಾಗಿ ನೋಡ್ತಿದ್ರು. ಅದಕ್ಕೆ ನಾವು ಅವರನ್ನ ದ್ವೇಷಿಸುತ್ತಿದ್ವಿ. ನಾವು ಅವ್ರಿಗೆ ಭೇದಭಾವ ಮಾಡ್ತಿದ್ದೀವಿ ಅನಿಸುತ್ತಿರಲಿಲ್ಲ ಬದಲಿಗೆ ಅವರು ನಮಗೆ ಭೇದಭಾವ ಮಾಡ್ತಿದ್ದಾರೆ ಅನಿಸುತ್ತಿತ್ತು. ನಾವೂ ಭೇದಭಾವ ಮಾಡ್ತಿದ್ದೀವಿ ಅಂತ ಗೊತ್ತೇ ಆಗಲಿಲ್ಲ.

“ಈ ತಪ್ಪಾದ ಯೋಚ್ನೆನ ಬದಲಾಯಿಸಿಕೊಳ್ಳೋಕೆ ನಾವು ಬೇರೆಬೇರೆ ಸಂಸ್ಕೃತಿಯ ಜನರನ್ನ ಫ್ರೆಂಡ್ಸ್‌ ಮಾಡ್ಕೊಬೇಕು ಅನ್ಕೊಂಡ್ವಿ. ಬಿಳಿ ಜನರ ಜೊತೆ ಬೆರಿತ-ಬೆರಿತಾ ನಮಗೂ ಅವರಿಗೂ ಅಷ್ಟೇನು ವ್ಯತ್ಯಾಸ ಇಲ್ಲ ಅಂತ ಗೊತ್ತಾಯಿತು. ನಾವು ಒಂದೇ ತರದ ಪರಿಸ್ಥಿತಿಲಿ ಇದ್ದೀವಿ ಒಂದೇ ತರದ ಕಷ್ಟಗಳನ್ನ ಅನುಭವಿಸ್ತಿದ್ದೀವಿ ಅಂತ ಅರ್ಥಮಾಡಿಕೊಂಡ್ವಿ.

“ಬಿಳಿ ಜನರ ಒಂದು ದಂಪತಿನ ನಮ್ಮ ಮನೇಲಿ ತುಂಬ ದಿನ ಉಳಿಸಿಕೊಂಡಿದ್ವಿ. ಸ್ವಲ್ಪ ದಿನಗಳಲ್ಲೇ ನಾವು ಒಳ್ಳೇ ಫ್ರೆಂಡ್ಸ್‌ ಆದ್ವಿ. ಹೀಗೆ ಬಿಳಿ ಜನರ ಮೇಲೆ ನಮ್ಮ ಮನಸ್ಸಲ್ಲಿ ಇದ್ದ ದ್ವೇಷ ಅನ್ನೋ ಬೆಂಕಿ ಆರಿಹೋಯ್ತು.”

ಶತ್ರುಗಳು ಮಿತ್ರರಾದರು

ಜಾನಿ ಮತ್ತು ಗಿಡ್ಯನ್‌ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದ ಹೊರಗಡೆ ಮಕ್ಕಳನ್ನು ಮಾತಾಡಿಸುತ್ತಿದ್ದಾರೆ.

ಗಿಡ್ಯನ್‌ ಮತ್ತು ಜಾನಿ ಬೇರೆಬೇರೆ ಬಣ್ಣದವರಾಗಿದ್ದರು, ರಾಜಕೀಯದ ವಿಷಯದಲ್ಲಿ ಇಬ್ಬರಿಗೂ ಬೇರೆಬೇರೆ ಅಭಿಪ್ರಾಯಗಳಿತ್ತು. ಆದ್ರೂ ಅವರು ಒಳ್ಳೇ ಫ್ರೆಂಡ್ಸ್‌ ಆದ್ರು.

ಜಾನಿ ಮತ್ತು ಗಿಡ್ಯನ್‌: ಬದ್ಧ ವೈರಿಗಳು ಆಪ್ತ ಸಹೋದರರಾದ್ರು ಅನ್ನೋ ವಿಡಿಯೋನ jw.org ವೆಬ್‌ಸೈಟ್‌ನಲ್ಲಿ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ