ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g22 ನಂ. 1 ಪು. 10-12
  • 3 | ಸಂಬಂಧಗಳನ್ನು ಕಾಪಾಡಿಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 3 | ಸಂಬಂಧಗಳನ್ನು ಕಾಪಾಡಿಕೊಳ್ಳಿ
  • ಎಚ್ಚರ!—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇದು ಯಾಕೆ ಮುಖ್ಯ
  • ಈ ಮುಂದಿನ ವಿಷಯವನ್ನ ನೆನಪಿಡಿ
  • ಈಗ ನೀವೇನು ಮಾಡಬಹುದು
  • ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಪ್ರೀತಿರಹಿತ ಜಗತ್ತಿನಲ್ಲಿ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ನೀವು ಬಾಳುವ ಗೆಳೆತನಗಳನ್ನು ಅನುಭವಿಸಬಲ್ಲಿರಿ
    ಕಾವಲಿನಬುರುಜು—1996
  • ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ
    ಎಚ್ಚರ!—2022
ಇನ್ನಷ್ಟು
ಎಚ್ಚರ!—2022
g22 ನಂ. 1 ಪು. 10-12
ಖುಷಿಯಾಗಿರೋ ವಯಸ್ಸಾದ ದಂಪತಿ ಅಪ್ಪಿಕೊಂಡಿದ್ದಾರೆ.

ಲೋಕದಲ್ಲಿದೆ ಕಷ್ಟ-ನೋವು

3 | ಸಂಬಂಧಗಳನ್ನು ಕಾಪಾಡಿಕೊಳ್ಳಿ

ಇದು ಯಾಕೆ ಮುಖ್ಯ

ಲೋಕದಲ್ಲಿ ಕಷ್ಟಗಳು ಹೆಚ್ಚಾಗುತ್ತಾ ಇರುವುದರಿಂದ ಜನರಿಗೆ ಅರಿವಿಲ್ಲದೇ ತಮ್ಮ ಸಂಬಂಧಗಳು ಹಾಳಾಗುತ್ತಿವೆ.

  • ಜನರು ತಮ್ಮ ಸ್ನೇಹಿತರಿಂದ ದೂರ ಇರಲಿಕ್ಕೆ ಇಷ್ಟಪಡುತ್ತಿದ್ದಾರೆ.

  • ಗಂಡ ಹೆಂಡತಿ ಮಧ್ಯ ಜಗಳಗಳು ಜಾಸ್ತಿ ಆಗುತ್ತಿವೆ.

  • ಮಕ್ಕಳಲ್ಲಿ ಆಗುತ್ತಿರುವ ಚಿಂತೆ ಮತ್ತು ಆತಂಕದ ಕಡೆಗೆ ಅಪ್ಪ ಅಮ್ಮ ಗಮನ ಕೊಡುತ್ತಿಲ್ಲ.

ಈ ಮುಂದಿನ ವಿಷಯವನ್ನ ನೆನಪಿಡಿ

  • ನಮ್ಮೆಲ್ಲರ ಜೀವನದಲ್ಲಿ ಸ್ನೇಹಿತರ ಅಗತ್ಯ ಇದೆ, ಕಷ್ಟಗಳು ಬಂದಾಗ ನಮಗೆ ಸಹಾಯ ಮಾಡೋದೇ ನಿಜ ಸ್ನೇಹಿತರು.

  • ಲೋಕದಲ್ಲಿ ಕಷ್ಟ, ಚಿಂತೆ ಜಾಸ್ತಿ ಆದಾಗ ನಿರೀಕ್ಷಿಸದೇ ಇರೋ ಸಮಸ್ಯೆಗಳು ನಮ್ಮ ಕುಟುಂಬದಲ್ಲಿ ಬರಬಹುದು.

  • ಮಕ್ಕಳು ಹಿಂಸೆ-ಅಪರಾಧಗಳ ಬಗ್ಗೆನೇ ನ್ಯೂಸ್‌ ನೋಡ್ತಾ ಮತ್ತು ಕೇಳಿಸಿಕೊಳ್ತಾ ಇದ್ದರೆ ಅದು ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.

ಈಗ ನೀವೇನು ಮಾಡಬಹುದು

ಬೈಬಲಲ್ಲಿ ಹೀಗಿದೆ: “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17.

ನಿಮಗೆ ಯಾವಾಗಲೂ ಸಹಾಯ ಮಾಡುವ ಮತ್ತು ಒಳ್ಳೇ ಸಲಹೆ ಕೊಡೋ ಸ್ನೇಹಿತರ ಬಗ್ಗೆ ಯೋಚಿಸಿ. ನಮಗೆ ಸಮಸ್ಯೆ ಬಂದಾಗ ಅದನ್ನು ಎದುರಿಸೋಕೆ ಧೈರ್ಯ ಕೊಡೋದೇ ಇಂಥ ಸ್ನೇಹಿತರು.

ಹೇಗೆ ಪಡೆಯೋದು ನೆಮ್ಮದಿ—ನಾವು ಹೀಗೆ ಮಾಡಿ ನೋಡಿ

ಕಷ್ಟ-ನೋವಿನ ಸಮಯದಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಈ ಹೆಜ್ಜೆಗಳನ್ನು ತೆಗೆದುಕೊಳ್ಳಿ, ನೆಮ್ಮದಿಯಾಗಿರಿ

ನಿಮ್ಮ ಮದುವೆ ಬಂಧವನ್ನು ಬಲಪಡಿಸಿ

ಖುಷಿಯಾಗಿರೋ ವಯಸ್ಸಾದ ದಂಪತಿ ಅಪ್ಪಿಕೊಂಡಿದ್ದಾರೆ.

ನಿಮ್ಮ ಮದುವೆ ಬಂಧವನ್ನು ಬಲಪಡಿಸಿ

ಬೈಬಲಲ್ಲಿ ಹೀಗಿದೆ: “ಒಬ್ಬನಿಗಿಂತ ಇಬ್ರು ಉತ್ತಮ. . . . ಒಬ್ಬ ಬಿದ್ರೆ ಏಳೋಕೆ ಇನ್ನೊಬ್ಬ ಸಹಾಯ ಮಾಡ್ತಾನೆ.” (ಪ್ರಸಂಗಿ 4:9, 10) ಗಂಡ ಹೆಂಡತಿಯ ಸಂಬಂಧ ಆನಂದ ಸಾಗರ ತರ ಖುಷಿ ಖುಷಿಯಾಗಿ ಇರಬೇಕು.

  • ನಿಮಗೆಷ್ಟೇ ಒತ್ತಡ ಇದ್ದರೂ ಅದನ್ನ ಸಂಗಾತಿ ಮೇಲೆ ತೀರಿಸಬೇಡಿ. ನೀವೆಷ್ಟು ತಾಳ್ಮೆ ತೋರಿಸುತ್ತಿರೋ ಅಷ್ಟು ನೆಮ್ಮದಿ ನಿಮ್ಮ ಜೀವನದಲ್ಲಿ ಇರುತ್ತೆ.

  • ವಾರಕ್ಕೆ ಒಂದು ಸಲ ಆದರೂ, ನಿಮ್ಮ ಸಮಸ್ಯೆ ಬಗ್ಗೆ ನಿಮ್ಮ ಸಂಗಾತಿ ಜೊತೆ ಮಾತಾಡಿ. ಸಮಸ್ಯೆಗಳ ಬಗ್ಗೆ ಪರಿಹಾರ ಹುಡುಕಿ ನೀವೇ ಸಮಸ್ಯೆಗೆ ಕಾರಣ ಆಗಬೇಡಿ.

  • ನೀವಿಬ್ಬರು ಇಷ್ಟಪಟ್ಟು ಮಾಡೋ ಕೆಲಸಗಳನ್ನು ಒಟ್ಟಿಗೆ ಸೇರಿ ಮಾಡಿ.

  • ನೀವು ಒಟ್ಟಿಗೆ ಸೇರಿ ಕಳೆದ ಸುಂದರ ಕ್ಷಣಗಳನ್ನು ಮತ್ತೆ ನೆನಪು ಮಾಡಿಕೊಳ್ಳಿ. ನಿಮ್ಮ ಮದುವೆ ಫೋಟೊ ನೋಡಿ ಖುಷಿಪಡಿ.

ಡೇವಿಡ್‌ ಹೀಗಂತಾರೆ: “ಗಂಡ ಹೆಂಡತಿಯ ಅಭಿಪ್ರಾಯ ಯಾವಾಗಲೂ ಒಂದೇ ತರ ಇರಲ್ಲ. ಹಾಗಿದ್ರು ಅವರು ಒಂದೇ ಟೀಮ್‌ ತರ ಕೆಲಸ ಮಾಡಬಹುದು. ಹೀಗೆ ಒಟ್ಟಿಗೆ ಸೇರಿ ನಿರ್ಣಯಗಳನ್ನು ಮಾಡಿದಾಗ ಅದರ ಫಲಿತಾಂಶ ಒಳ್ಳೇದಾಗಿರುತ್ತೆ.”

ಸ್ನೇಹಿತರಿಂದ ದೂರ ಆಗಬೇಡಿ

  • ಬೇರೆ ಬೇರೆ ಹಿನ್ನೆಲೆಯಿಂದ ಬಂದ ಸ್ತ್ರೀಯರು ಪರಸ್ಪರ ನಗ್ತಾ, ಖುಷಿ ಖುಷಿಯಾಗಿ ಇದ್ದಾರೆ.

    ಸ್ನೇಹಿತರಿಂದ ದೂರ ಆಗಬೇಡಿ

    ಸ್ನೇಹಿತರಿಂದ ಸಹಾಯ ಪಡೆಯೋದು ಮಾತ್ರ ಅಲ್ಲ ಅವರಿಗೆ ಹೇಗೆ ಸಹಾಯ ಮಾಡಬಹುದು ಅಂತ ಯೋಚನೆ ಮಾಡಿ. ಹೀಗೆ ನೀವು ಬೇರೆಯವರನ್ನು ಬಲಪಡಿಸಿದಾಗ ನಿಮಗೂ ಬಲ ಸಿಗುತ್ತೆ.

  • ದಿನಾಲೂ ನಿಮ್ಮ ಸ್ನೇಹಿತರ ಯೋಗ ಕ್ಷೇಮದ ಬಗ್ಗೆ ವಿಚಾರಿಸಿ.

  • ನೀವು ಎದುರಿಸುತ್ತಿರೋ ಸಮಸ್ಯೆಗಳನ್ನು ನಿಮ್ಮ ಸ್ನೇಹಿತರು ಹೇಗೆ ಎದುರಿಸಿದರು ಅಂತ ಕೇಳಿ.

ನೇಹಾ ಹೀಗಂತಾರೆ: “ಬಿರುಗಾಳಿ ಬಂದಾಗ ಹಡಗಿಗೆ ಹೇಗೆ ಚುಕ್ಕಾಣಿ ಸಹಾಯ ಮಾಡುತ್ತೋ ಅದೇ ತರ ಕಷ್ಟಗಳು ಬಂದಾಗ ಸ್ನೇಹಿತರು ನಮಗೆ ಸಹಾಯ ಮಾಡುತ್ತಾರೆ. ನಮಗೆ ಗೊತ್ತಿರೋ ವಿಷಯಗಳನ್ನು ಅವರು ನೆನಪು ಮಾಡುತ್ತಾ ಸಹಾಯ ಮಾಡುತ್ತಾರೆ. ಅವರು ನಿಮಗೆ ಕಾಳಜಿ ತೋರಿಸುತ್ತಾರೆ, ನೀವೂ ಅವರಿಗೆ ಕಾಳಜಿ ತೋರಿಸುತ್ತೀರ.”

ಮಕ್ಕಳ ಜೊತೆ ಸಮಯ ಕಳೆಯಿರಿ

ಹೆತ್ತವರು ತಮ್ಮ ಇಬ್ಬರು ಮಕ್ಕಳ ಜೊತೆ ಹಡಗು ಕಟ್ಟೆಯ ಮೇಲೆ ಕೂತು ಸುಂದರ ಪರಿಸರವನ್ನು ನೋಡಿ ಆನಂದಿಸ್ತಿದ್ದಾರೆ.

ಮಕ್ಕಳ ಜೊತೆ ಸಮಯ ಕಳೆಯಿರಿ

ಬೈಬಲಲ್ಲಿ ಹೀಗಿದೆ: “ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ.” (ಯಾಕೋಬ 1:19) ಮಕ್ಕಳು ತಮ್ಮ ಭಯ ಮತ್ತು ಚಿಂತೆಗಳನ್ನೆಲ್ಲಾ ಹೇಳಿಕೊಳ್ಳೋಕೆ ಹಿಂದೆ ಮುಂದೆ ಮಾಡುತ್ತಾರೆ. ಆದರೆ ನೀವು ಅವರು ಹೇಳೋದನ್ನು ತಾಳ್ಮೆಯಿಂದ ಕೇಳಿದರೆ ಅವರು ಮನಸ್ಸುಬಿಚ್ಚಿ ನಿಮ್ಮ ಹತ್ತಿರ ಮಾತಾಡಬಹುದು.

  • ಮಕ್ಕಳು ನಿಮ್ಮ ಜೊತೆ ಮನಸ್ಸುಬಿಚ್ಚಿ ಮಾತಾಡೋ ಸಂದರ್ಭಗಳನ್ನು ಸೃಷ್ಟಿಸಿ. ಕೆಲವು ಮಕ್ಕಳು ಎದುರುಬದುರು ಕೂತು ಮಾತಾಡೋದಕ್ಕಿಂತ ಕಾರಲ್ಲಿ ಹೋಗುವಾಗ, ವಾಕಿಂಗ್‌ ಮಾಡೋವಾಗ ಮಾತಾಡೋಕೆ ಇಷ್ಟಪಡುತ್ತಾರೆ.

  • ಹಿಂಸೆ-ಅಪರಾಧಗಳ ಬಗ್ಗೆ ಇರೋ ನ್ಯೂಸ್‌ಗಳನ್ನು ನಿಮ್ಮ ಮಕ್ಕಳು ಜಾಸ್ತಿ ನೋಡದ ಹಾಗೆ ಜಾಗ್ರತೆ ವಹಿಸಿ.

  • ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇಡೋಕೆ ನೀವು ಯಾವ ಹೆಜ್ಜೆಗಳನ್ನು ತಗೊಂಡಿದ್ದೀರ ಅಂತ ನಿಮ್ಮ ಮಕ್ಕಳಿಗೆ ಹೇಳಿ.

  • ತುರ್ತು ಪರಿಸ್ಥಿತಿ ಬಂದರೆ ಮುಂಚಿತವಾಗಿ ಏನು ಮಾಡಬೇಕು ಅಂತ ನಿಮ್ಮ ಮಕ್ಕಳ ಜೊತೆ ಪ್ರಾಕ್ಟೀಸ್‌ ಮಾಡಿ.

ಭವ್ಯ ಹೀಗಂತಾರೆ: “ಮಕ್ಕಳು ತಮ್ಮ ಭಯ, ಚಿಂತೆಯನ್ನ ಹೇಳೋಕೆ ಇಷ್ಟಪಡಲ್ಲ. ಹಾಗಾಗಿ ಅವರ ಜೊತೆ ಮಾತಾಡುತ್ತಾ ತಮ್ಮ ಭಾವನೆಗಳನ್ನು ಹೇಳಿಕೊಳ್ಳೋಕೆ ಬಿಟ್ಟುಕೊಡಿ. ಅವರ ವಯಸ್ಸಲ್ಲಿ ಇದ್ದಾಗ ನಿಮಗೂ ಈ ತರ ಅನಿಸುತ್ತಿತ್ತು. ಆಗ ನೀವೇನು ಮಾಡಿದ್ರಿ ಅಂತನೂ ಹೇಳಿ.”

“ಸುಖೀ ಸಂಸಾರ ಸಾಧ್ಯ” ವಿಡಿಯೋದ ಒಂದು ದೃಶ್ಯ. ಒಂದು ದಂಪತಿ ಕೈಹಿಡಿದು ದಾರಿಯಲ್ಲಿ ನಡಿತಿದ್ದಾರೆ.

ಹೆಚ್ಚನ್ನ ತಿಳಿಯಿರಿ. ಸುಖೀ ಸಂಸಾರ ಸಾಧ್ಯ! ಅನ್ನೋ ವಿಡಿಯೋವನ್ನು ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ