ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g22 ನಂ. 1 ಪು. 13-15
  • 4 | ನಿರೀಕ್ಷೆಯನ್ನು ಕಾಪಾಡಿಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 4 | ನಿರೀಕ್ಷೆಯನ್ನು ಕಾಪಾಡಿಕೊಳ್ಳಿ
  • ಎಚ್ಚರ!—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇದು ಯಾಕೆ ಮುಖ್ಯ
  • ಈ ಮುಂದಿನ ವಿಷಯವನ್ನು ನೆನಪಿಡಿ
  • ಈಗ ನೀವೇನು ಮಾಡಬಹುದು
  • ಬೈಬಲ್‌ ನಮಗೆ ಕೊಡೋ ನಿಜ ನಿರೀಕ್ಷೆ
  • ನಿರೀಕ್ಷೆ—ಅದು ನಮ್ಗೆ ಎಲ್ಲಿ ಸಿಗುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು
    ಎಂದೆಂದೂ ಖುಷಿಯಾಗಿ ಬಾಳೋಣ!​—ದೇವರಿಂದ ಕಲಿಯಲು ಶುರುಮಾಡೋಣ
  • 2024ರಲ್ಲಿ ಏನಾದ್ರೂ ಒಳ್ಳೇದಾಗುತ್ತಾ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಇತರ ವಿಷಯಗಳು
ಇನ್ನಷ್ಟು
ಎಚ್ಚರ!—2022
g22 ನಂ. 1 ಪು. 13-15
ಹೂವಿನ ವಾಸ್‌ ಹತ್ರ ಇರೋ ತೆರೆದ ಬೈಬಲ್‌.

ಲೋಕದಲ್ಲಿದೆ ಕಷ್ಟ-ನೋವು

4 | ನಿರೀಕ್ಷೆಯನ್ನು ಕಾಪಾಡಿಕೊಳ್ಳಿ

ಇದು ಯಾಕೆ ಮುಖ್ಯ

ಲೋಕದಲ್ಲಿರೋ ಸಂಕಷ್ಟಗಳನ್ನು ನೋಡಿ ಜನರು ಶಾರೀರಿಕವಾಗಿ ಬಳಲಿ ಹೋಗ್ತಿದ್ದಾರೆ, ಭಾವನಾತ್ಮಕವಾಗಿ ಕುಗ್ಗಿಹೋಗ್ತಿದ್ದಾರೆ. ಇಂಥ ಜನರು ‘ಜೀವನ ಅಂದರೆ ಇಷ್ಟೇನಾ’ ಅಂತ ತುಂಬ ನೊಂದು ಹೋಗಿದ್ದಾರೆ. ಅಂಥವರಲ್ಲಿ ಕೆಲವರು:

  • ಭವಿಷ್ಯದ ಬಗ್ಗೆ ಯೋಚನೆ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

  • ಇನ್ನು ಕೆಲವರು ಚಿಂತೆಗಳಿಂದ ಹೊರಬರೋಕೆ ಮದ್ಯಪಾನ ಮತ್ತು ಡ್ರಗ್ಸ್‌ಗೆ ಬಲಿ ಬಿದ್ದಿದ್ದಾರೆ.

  • ಕೆಲವರು ‘ಇಂಥ ಜೀವನ ಜೀವಿಸೋದಕ್ಕಿಂತ ಸಾಯೋದೇ ಮೇಲು’ ಅಂತ ಅಂದುಕೊಂಡಿದ್ದಾರೆ.

ಈ ಮುಂದಿನ ವಿಷಯವನ್ನು ನೆನಪಿಡಿ

  • ನಾವು ಎದುರಿಸುತ್ತಾ ಇರೋ ಸಮಸ್ಯೆಗಳು ತಾತ್ಕಾಲಿಕವಾಗಿ ಇರಬಹುದು ಅಥವಾ ಸ್ವಲ್ಪ ಸಮಯದಲ್ಲಿ ಸರಿನೂ ಹೋಗಬಹುದು.

  • ನಿಮ್ಮ ಪರಿಸ್ಥಿತಿಗಳು ಬದಲಾಗದೆ ಇದ್ದರೂ ಅದನ್ನು ಎದುರಿಸೋಕೆ ನೀವು ಕೆಲವೊಂದು ಹೆಜ್ಜೆಗಳನ್ನ ತೆಗೆದುಕೊಳ್ಳಬಹುದು.

  • ನಮ್ಮ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ಆಗುತ್ತೆ ಅಂತ ಬೈಬಲ್‌ ನಮಗೆ ನಿರೀಕ್ಷೆ ಕೊಡುತ್ತೆ.

ಈಗ ನೀವೇನು ಮಾಡಬಹುದು

ಬೈಬಲಲ್ಲಿ ಹೀಗಿದೆ: “ಹಾಗಾಗಿ ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.”—ಮತ್ತಾಯ 6:34.

ನಾಳೆ ಬಗ್ಗೆ ಅತಿಯಾಗಿ ಚಿಂತಿಸಬೇಡಿ. ಹಾಗೆ ಮಾಡಿದ್ರೆ ಇವತ್ತಿನ ಕೆಲಸವನ್ನ ಚೆನ್ನಾಗಿ ಮಾಡೋಕೆ ಆಗಲ್ಲ.

ಮುಂದೆ ನಡೆಯದೇ ಇರೋ ವಿಷಯಗಳ ಬಗ್ಗೆ ‘ಅಯ್ಯೋ, ಹೀಗೆನಾದ್ರು ಆಗಿಬಿಟ್ರೆ’ ಅಂತ ನಾವು ನಕಾರಾತ್ಮಕವಾಗಿ ಯೋಚನೆ ಮಾಡಿದರೆ ನಮ್ಮ ಒತ್ತಡನೂ ಜಾಸ್ತಿ ಆಗುತ್ತೆ ಮತ್ತು ಬಲನೂ ಕಮ್ಮಿ ಆಗುತ್ತೆ. ಮುಂದೆ ಇರೋ ನಿರೀಕ್ಷೆನೂ ನಾವು ಕಳಕೊಳ್ಳುತ್ತೀವಿ.

ಹೇಗೆ ಪಡೆಯೋದು ನೆಮ್ಮದಿ—ನಾವು ಹೀಗೆ ಮಾಡಿ ನೋಡಿ

ಒಳ್ಳೇ ವಿಷಯಗಳ ಕಡೆಗೆ ಗಮನ ಕೊಡಿ

ಖುಷಿಯಾಗಿರೋ ಒಬ್ಬ ಸ್ತ್ರೀ ತೃಪ್ತಿಯಿಂದ ಕಿಟಕಿ ಹೊರಗೆ ನೋಡ್ತಿದ್ದಾಳೆ.

ಬೈಬಲಲ್ಲಿ ಹೀಗಿದೆ: “ದುಃಖದಲ್ಲಿ ಇರುವವನಿಗೆ ಜೀವನ ಯಾವಾಗ್ಲೂ ಜಿಗುಪ್ಸೆ, ಸಂತೋಷದ ಹೃದಯ ಇರುವವನಿಗೆ ದಿನಾಲೂ ಔತಣ.” (ಜ್ಞಾನೋಕ್ತಿ 15:15) ಸಮಸ್ಯೆಗಳ ಕಡೆಗೇ ಹೆಚ್ಚು ಗಮನ ಕೊಟ್ಟರೆ ಅದಕ್ಕೆ ಪರಿಹಾರ ಇದೆ ಅಂತಾನೇ ನಮಗೆ ಗೊತ್ತಾಗಲ್ಲ. ಅದರ ಬದಲು ಒಳ್ಳೇ ವಿಷಯಗಳ ಕಡೆಗೆ ಗಮನ ಕೊಟ್ಟರೆ ಆ ಸಮಸ್ಯೆಯಿಂದ ಹೊರಬರೋಕೆ ಒಂದಲ್ಲ ಒಂದು ದಾರಿ ನಮಗೆ ಸಿಗುತ್ತೆ.

  • ಯಾವಾಗಲೂ ನ್ಯೂಸ್‌ ನೋಡ್ತಾ ಇರಬೇಡಿ.

  • ಇಡೀ ದಿನದಲ್ಲಿ ನಿಮಗೆ ಯಾವ ವಿಷಯದಿಂದ ಖುಷಿ ಸಿಕ್ಕಿತೋ ಅದನ್ನ ಬರೆದಿಡಿ.

  • ಇವತ್ತು ಯಾವೆಲ್ಲ ಕೆಲಸ ಮಾಡಬೇಕು ಅಂತ ಬರೆದಿಡಿ. ತುಂಬ ಕೆಲಸಗಳಿದ್ದರೆ ಸ್ವಲ್ಪ-ಸ್ವಲ್ಪವಾಗಿ ಮಾಡಿ. ಇದರಿಂದ ನಿಮಗೆ ತೃಪ್ತಿ ಸಿಗುತ್ತೆ.

ಸಹಾಯ ಪಡೆಯಿರಿ

ಒಬ್ಬ ವಯಸ್ಸಾದ ವ್ಯಕ್ತಿ ಯುವ ವ್ಯಕ್ತಿಯನ್ನ ಬಲಪಡಿಸ್ತಿದ್ದಾನೆ.

ಬೈಬಲಲ್ಲಿ ಹೀಗಿದೆ: “ಜನ್ರ ಜೊತೆ ಸೇರದೆ ಒಂಟಿಯಾಗಿ ಇರೋಕೆ ಇಷ್ಟಪಡುವವನು ಸ್ವಾರ್ಥ ಆಸೆಗಳ ಹಿಂದೆ ಹೋಗ್ತಾನೆ, ಅವನು ವಿವೇಕವನ್ನ ಬೇಡ ಅಂತಾನೆ.” (ಜ್ಞಾನೋಕ್ತಿ 18:1) ಒಂದುವೇಳೆ ನೀವು ಆಳವಾದ ಗುಂಡಿಗೆ ಬಿದ್ದರೆ ನೀವಾಗಿಯೇ ಮೇಲೆ ಬರೋಕಾಗಲ್ಲ, ಬೇರೆಯವರ ಸಹಾಯ ಪಡಿಲೇಬೇಕು.

  • ಸಂಬಂಧಿಕರ ಅಥವಾ ಸ್ನೇಹಿತರ ಸಹಾಯ ಪಡಕೊಳ್ಳಿ.

  • ಜೊತೆಗೆ ನಿಮ್ಮಿಂದಾದಷ್ಟು ಬೇರೆಯವರಿಗೆ ಸಹಾಯ ಮಾಡಿ. ಆಗ ನಿಮಗಿರುವ ಸಮಸ್ಯೆನೇ ದೊಡ್ಡದು ಅಂತ ಅನಿಸಲ್ಲ.

  • ‘ನಾನು ಬದುಕಿನೂ ಯಾವ ಪ್ರಯೋಜನ ಇಲ್ಲ’ ಅಂತ ನಿಮಗನಿಸುತ್ತಾ ಇದ್ದರೆ ಡಾಕ್ಟರ್‌ ಸಹಾಯ ಪಡೆದುಕೊಳ್ಳಿ. ಈ ರೀತಿ ಅನಿಸೋದು ಖಿನ್ನತೆಯ ಗುರುತಾಗಿರಬಹುದು. ಅನೇಕರಿಗೆ ಚಿಕಿತ್ಸೆ ಪಡೆದಿದ್ದರಿಂದ ಸಹಾಯ ಆಗಿದೆ.a

a ಈ ಎಚ್ಚರ! ಪತ್ರಿಕೆ ಒಂದು ನಿರ್ದಿಷ್ಟ ಚಿಕಿತ್ಸೆಯ ಬಗ್ಗೆ ಹೇಳುತ್ತಿಲ್ಲ.

ಬೈಬಲ್‌ ನಮಗೆ ಕೊಡೋ ನಿಜ ನಿರೀಕ್ಷೆ

ದೇವರ ಸೇವಕ ಪ್ರಾರ್ಥನೆಯಲ್ಲಿ ಹೀಗೆ ಹೇಳಿದ: “ನಿನ್ನ ವಾಕ್ಯ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು.” (ಕೀರ್ತನೆ 119:105) ದೇವರ ವಾಕ್ಯವಾದ ಬೈಬಲ್‌ ನಿಜವಾಗಲೂ ನಮ್ಮ ಜೀವನದಲ್ಲಿ ಹೇಗೆ ಬೆಳಕಾಗಿದೆ?

ಕತ್ತಲಲ್ಲಿ ನಮ್ಮ ಹತ್ತಿರ ಟಾರ್ಚ್‌ ಇದ್ರೆ ಸರಿಯಾದ ಕಡೆ ಹೆಜ್ಜೆ ಇಡೋಕೆ ನಮಗೆ ಸಹಾಯ ಆಗುತ್ತೆ. ಅದೇ ರೀತಿ ಸರಿಯಾದ ನಿರ್ಣಯಗಳನ್ನು ಮಾಡೋಕೆ ನಮಗೆ ಬೈಬಲ್‌ನಲ್ಲಿರೋ ವಿವೇಕ ಸಹಾಯ ಮಾಡುತ್ತೆ.

ನಮ್ಮ ಹತ್ತಿರ ಟಾರ್ಚ್‌ ಇದ್ರೆ ದೂರದ ವರೆಗೂ ದಾರಿ ನಮಗೆ ಚೆನ್ನಾಗಿ ಕಾಣಿಸುತ್ತೆ. ಅದೇ ರೀತಿ ಭವಿಷ್ಯದಲ್ಲಿ ನಮ್ಮ ಮುಂದೆ ಇರೋ ನಿರೀಕ್ಷೆ ಕಡೆಗೆ ಬೈಬಲ್‌ ನಮ್ಮನ್ನು ನಡಿಸುತ್ತೆ.

ಬೈಬಲ್‌ ಪವಿತ್ರ ಪುಸ್ತಕವಾಗಿದೆ. ಇದರಲ್ಲಿ ಮನುಷ್ಯನ ಇತಿಹಾಸದ ಬಗ್ಗೆ ಅಷ್ಟೇ ಅಲ್ಲ ಭವಿಷ್ಯದ ಬಗ್ಗೆ ನಿಜ ನಿರೀಕ್ಷೆನೂ ಇದೆ. ಬೈಬಲ್‌ನಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಇದೆ:

ಹೇಗೆ?

ಕಷ್ಟಗಳು ಹೇಗೆ ಶುರು ಆಯಿತು? ಬೈಬಲ್‌ ಹೇಳೋದು, “ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.”—ರೋಮನ್ನರಿಗೆ 5:12.

ಯಾಕೆ?

ಯಾಕೆ ಮನುಷ್ಯರಿಂದ ಸಮಸ್ಯೆಗಳನ್ನ ಬಗೆಹರಿಸೋಕೆ ಆಗುತ್ತಿಲ್ಲ? ಬೈಬಲ್‌ ಹೇಳೋದು, “ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.” (ಯೆರೆಮೀಯ 10:23) ಈ ಮಾತುಗಳು ನಿಜ ಆಗ್ತಿರೋದನ್ನು ನಾವು ಕಣ್ಣಾರೆ ನೋಡ್ತಾ ಇದ್ದೀವಿ.

ಏನು?

ಈ ಲೋಕದ ಪರಿಸ್ಥಿತಿಯನ್ನ ಸರಿ ಮಾಡೋಕೆ ದೇವರು ಏನು ಮಾಡಲಿಕ್ಕಿದ್ದಾರೆ? ಬೈಬಲ್‌ ಹೇಳೋದು, “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”—ಪ್ರಕಟನೆ 21:4.

“ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು?” ವಿಡಿಯೋದ ಒಂದು ದೃಶ್ಯ. ಹೆಂಡತಿ ಬೈಬಲ್‌ನಿಂದ ಓದಿದ್ದ ವಿಷಯವನ್ನ ಗಂಡನ ಜೊತೆ ಹಂಚಿಕೊಳ್ತಿದ್ದಾಳೆ.

ಹೆಚ್ಚನ್ನ ತಿಳಿಯಿರಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೊ ವಿಡಿಯೋವನ್ನ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ