ಗೀತೆ 1
ಯೆಹೋವನ ಗುಣಲಕ್ಷಣಗಳು
1. ಯೆಹೋವನೇ, ನೀ ಸರ್ವಶಕ್ತ,
ಜೀವಬುಗ್ಗೆ, ಬೆಳಕಿನ ಮೂಲ.
ಸೃಷ್ಟಿ ತಿಳಿಸುತೆ ಶಕ್ತಿಯನು,
ಮಹಾದಿನ ಇನ್ನಷ್ಟನ್ನು.
2. ನಿನ್ನಾಸನ ನ್ಯಾಯಾಧಾರಿತ,
ತಿಳಿಸುತಿ ನೀತಿ ಆಜ್ಞೆಗಳ.
ನಿನ್ನ ವಾಕ್ಯಕ್ಕೆ ನಾವು ತಿರುಗೆ,
ವಿವೇಕ ಪ್ರಜ್ವಲಿಸುತೆ.
3. ನಿನ್ನ ಪ್ರೀತಿ ಅದೆಷ್ಟೋ ಶ್ರೇಷ್ಠ.
ನಿನ್ನ ದಾನ ಎಷ್ಟೋ ಅಸಮಾನ.
ನಿನ್ನ ಗುಣ, ನಿನ್ನ ಶ್ರೇಷ್ಠ ನಾಮ,
ಸಾರುವೆವು ಹರ್ಷದಿಂದ.
(ಕೀರ್ತ. 36:9; 145:6-13; ಯಾಕೋ. 1:17 ಸಹ ನೋಡಿ.)