ಗೀತೆ1
ಯೆಹೋವನ ಗುಣಲಕ್ಷಣಗಳು
1. ಯೆಹೋವ ದೇವಾ ನಿನ್ನ ಕೀರ್ತಿಯು,
ಅತಿ ಉನ್ನತ! ಎಂದಿಗೂ ಶಾಶ್ವತ!
ಅಸಾಮಾನ್ಯ ಆ ಅಗಾಧ ಶಕ್ತಿ!
ಸೃಷ್ಟಿ ಸಾರಿದೆ ನಿನ್ನ ಯುಕ್ತಿ!
2. ನಿನ್ನ ಸಾನಿಧ್ಯ ಅತಿ ಶ್ರೇಷ್ಠವು!
ನಿಷ್ಠೆ ನ್ಯಾಯದಿ ಅದು ಶೋಭಿತವು!
ನೀನೇ ನಮ್ಮ ಜೀವದ ಮೂಲನು!
ಎಲ್ಲಾ ಘನತೆ ನಿಂಗೆ ಎಂದೂ!
3. ಇಲ್ಲ ಸಾಟಿಯೂ, ನಿನ್ನ ಪ್ರೀತಿಗೆ!
ಅಮೂಲ್ಯ ನಿನ್ನ ಕೊಡುಗೆ ನಮಗೆ!
ಸದಾ ನಿನ್ನ ಮಹಿಮೆ ಸಾರಲು,
ನಾವು ಸಿದ್ಧರು ಇಂದು, ಎಂದೂ.
(ಕೀರ್ತ. 36:9; 145:6-13; ಪ್ರಸಂ. 3:14; ಯಾಕೋ. 1:17. ಸಹ ನೋಡಿ)