ಗೀತೆ 29
ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು
1. ಯೆಹೋವನೇ, ನ್ಯಾಯ ಮಾಡೆನಗೆ,
ನನ್ನ ಭರವಸೆ, ಹೌದು, ಸಮಗ್ರತೆ.
ಪರೀಕ್ಷಿಸು, ನನ್ನನ್ನು ಶೋಧಿಸು,
ಹೃದಯವ ತಿದ್ದು, ಹರಸು ನನ್ನನ್ನು.
(ಪಲ್ಲವಿ)
ನಾನಾದರೋ ನಿರ್ಣಯಿಸಿರುವೆ,
ಸದಾ ನಡೆಯಲು ತೋರಿ ಸಮಗ್ರತೆ.
2. ದುರ್ಜನರ ಕೂಟವು ಅಸಹ್ಯ,
ಸತ್ಯದ್ವೇಷಿಗಳ ಸಂಗ ಇಷ್ಟವಿಲ್ಲ.
ಪಾಪಿಷ್ಠರ ಜೀವದ ಜೊತೆಗೆ
ತೆಗೆಯದಿರಪ್ಪಾ ನನ್ನ ಪ್ರಾಣವನ್ನೇ.
(ಪಲ್ಲವಿ)
ನಾನಾದರೋ ನಿರ್ಣಯಿಸಿರುವೆ,
ಸದಾ ನಡೆಯಲು ತೋರಿ ಸಮಗ್ರತೆ.
3. ನಿನ್ನಾಲಯ ನನಗತಿ ಪ್ರಿಯ,
ನಿನ್ನ ಆರಾಧನೆ ದಿನಾಲೂ ಮಾಡುತ್ತ
ವೇದಿಗೆ ಮಾಡುವೆ ಪ್ರದಕ್ಷಿಣೆ,
ಕೃತಜ್ಞತಾ ಗೀತೆ ಹಾಡುತಲಿರುವೆ.
(ಪಲ್ಲವಿ)
ನಾನಾದರೋ ನಿರ್ಣಯಿಸಿರುವೆ,
ಸದಾ ನಡೆಯಲು ತೋರಿ ಸಮಗ್ರತೆ.
(ಕೀರ್ತ. 25:2 ಸಹ ನೋಡಿ.)