ಗೀತೆ 34
ನಿಯತ್ತಾಗಿ ಬಾಳೋದೇ ನನ್ನಾಸೆ
1. ಓ ದೇವರೇ ಚಿನ್ನ ಸೋಸೋ ತರ
ನೀ ನಿತ್ಯ ಶೋಧಿಸು ನನ್ನ ಆಲೋಚನೆ
ನಿಷ್ಕಲ್ಮಶ ಸಂಪೂರ್ಣ ಹೃದಯ
ದಯಮಾಡಿ ನೀಡಿ ಹಾರೈಸು ನನ್ನನ್ನು.
(ಪಲ್ಲವಿ)
ನಾನಾದರೋ ನಿರ್ಧಾರ ಮಾಡಿದೆ
ಸತ್ಯ ಪ್ರಕಾರವೇ ನಿತ್ಯ ಸಾಗೋದಕೆ.
2. ನೀಚ ಜನ ಸ್ನೇಹ ಇಷ್ಟ ಇಲ್ಲ.
ಸುಳ್ಳು ಆ ಆಪ್ತರು ನೀಡೋ ಹಾರೈಕೆಯು.
ಯೆಹೋವನೇ ಕಾರುಣ್ಯ ದೇವರೇ
ಕಾಪಾಡು ನನ್ನನ್ನು ದುಷ್ಟರ ಕೈಯಿಂದ.
(ಪಲ್ಲವಿ)
ನಾನಾದರೋ ನಿರ್ಧಾರ ಮಾಡಿದೆ
ಸತ್ಯ ಪ್ರಕಾರವೇ ನಿತ್ಯ ಸಾಗೋದಕೆ.
3. ನಿನ್ನಾಲಯ ನಂಗೆ ರಕ್ಷಾನೆಲೆ
ನಿನ್ನ ಆರಾಧನೆ ನನ್ನ ಜೀವ ಸೆಲೆ.
ಸಾಕು ಇಷ್ಟೇ ನನ್ ಜೀವ ಸಾರ್ಥಕ
ನಿಯತ್ತಾಗಿ ನಿಂತು ಬಾಳೋದೇ ನನ್ನಾಸೆ.
(ಪಲ್ಲವಿ)
ನಾನಾದರೋ ನಿರ್ಧಾರ ಮಾಡಿದೆ
ಸತ್ಯ ಪ್ರಕಾರವೇ ನಿತ್ಯ ಸಾಗೋದಕೆ.
(ಕೀರ್ತ. 25:2 ಸಹ ನೋಡಿ)