ಗೀತೆ 105
ಆಕಾಶ ಘೋಷಿಸುತೆ ದೇವರ ಮಹಿಮೆ
1. ಆಕಾಶ ತಿಳಿಸುತೆ ದೇವಪ್ರಭೆ.
ಬಾನ ತೋರಿಸುತೆ ಆತನ ಕೈಕ್ರಿಯೆ.
ಪ್ರತಿ ದಿನ ತರುತೆ ಸಂಸ್ತುತಿ.
ತಾರಾ ರಾಶಿ ತೋರಿಸುತೆ ನಿನ್ನ ಪ್ರಭೆ, ಶಕ್ತಿ.
2. ಯೆಹೋವನ ನೇಮ ಜೀವದಾಯಕ,
ಜ್ಞಾಪನ ಕಾಯುತೆ ಆಬಾಲವೃದ್ಧರ.
ನಿರ್ಣಯಗಳು ಸತ್ಯ, ಉಚಿತ.
ವಾಕ್ಯ ಖಾತ್ರಿ, ನೇಮ ಶುದ್ಧ, ಎಷ್ಟೋ ರುಚಿಕರ.
3. ದೇವಭಯ ನಿರ್ಮಲ, ನಿತ್ಯ ಸ್ಥಿರ.
ಆಜ್ಞಾ ಮೌಲ್ಯ ಶ್ರೇಷ್ಠ ಅಪರಂಜಿಗಿಂತ.
ನಿಯಮ ಉಳಿಸುತೆ ದೀನರ.
ಸಮರ್ಥಿಸುವೆವಾತನ ಪವಿತ್ರ ನಾಮವ.
(ಕೀರ್ತ. 111:9; 145:5; ಪ್ರಕ. 4:11 ಸಹ ನೋಡಿ.)