ಭಾಗ 13
ದೇವರನ್ನು ಮೆಚ್ಚಿಸಲು ನಾವು ಏನು ಮಾಡಬೇಕು?
ಕೆಟ್ಟದ್ದನ್ನು ಮಾಡಬೇಡಿ. 1 ಕೊರಿಂಥ 6:9, 10
ಯೆಹೋವನ ಮೇಲೆ ನಮಗೆ ಪ್ರೀತಿಯಿರುವುದಾದರೆ, ಆತನಿಗೆ ಇಷ್ಟವಾಗದ ವಿಷಯಗಳನ್ನು ನಾವು ಮಾಡುವುದಿಲ್ಲ.
ಕಳ್ಳತನ, ಕುಡಿಕತನ ಹಾಗೂ ಡ್ರಗ್ಸ್ ಸೇವನೆ ಯೆಹೋವನಿಗೆ ಇಷ್ಟವಿಲ್ಲ.
ಸಲಿಂಗಕಾಮ, ಕೊಲೆ ಹಾಗೂ ಭ್ರೂಣಹತ್ಯೆ ದೇವರಿಗೆ ಅಸಹ್ಯ. ದುರಾಶೆ, ಜಗಳ-ಕಾದಾಟಗಳು ನಮ್ಮಲ್ಲಿರುವುದು ಆತನಿಗೆ ಇಷ್ಟವಿಲ್ಲ.
ಮೂರ್ತಿಪೂಜೆ, ಮಾಟಮಂತ್ರ ತಪ್ಪು.
ಕೆಟ್ಟ ಕೆಲಸಗಳನ್ನು ಮಾಡುವವರಿಗೆ ಪರದೈಸ್ ಭೂಮಿಯಲ್ಲಿ ಜೀವಿಸಲು ಆಸ್ಪದವಿರುವುದಿಲ್ಲ.
ಒಳ್ಳೆಯದ್ದನ್ನೇ ಮಾಡಿ. ಮತ್ತಾಯ 7:12
ದೇವರ ಮೆಚ್ಚಿಕೆ ಪಡೆಯಬೇಕಾದರೆ ಆತನ ಗುಣಗಳನ್ನು ಅನುಸರಿಸಬೇಕು.
ಇತರರಿಗೆ ಪ್ರೀತಿ ತೋರಿಸಿ. ದಯೆ, ಧಾರಾಳತೆಯಿಂದ ವ್ಯವಹರಿಸಿ.
ಪ್ರಾಮಾಣಿಕರಾಗಿರಿ.
ಕ್ಷಮಿಸುವವರಾಗಿರಿ.
ಯೆಹೋವನ ಕುರಿತು, ಆತನ ಉದ್ದೇಶ ಹಾಗೂ ಮಾರ್ಗಗಳ ಕುರಿತು ಜನರೊಂದಿಗೆ ಮಾತಾಡಿ.—ಯೆಶಾಯ 43:10.