ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ypq ಪ್ರಶ್ನೆ 3 ಪು. 9-11
  • ಅಪ್ಪ-ಅಮ್ಮನ ಹತ್ತಿರ ಹೇಗೆ ಮಾತಾಡೋದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಪ್ಪ-ಅಮ್ಮನ ಹತ್ತಿರ ಹೇಗೆ ಮಾತಾಡೋದು?
  • ಯುವಜನರ 10 ಪ್ರಶ್ನೆಗಳಿಗೆ ಉತ್ತರ
  • ಅನುರೂಪ ಮಾಹಿತಿ
  • ಸಮೃದ್ಧವಾದ ನಮ್ಮ ಆತ್ಮಿಕ ಪರಂಪರೆ
    ಕಾವಲಿನಬುರುಜು—1995
  • ಒಂದು ಅಪೂರ್ವ ಕ್ರೈಸ್ತ ಪರಂಪರೆ
    ಕಾವಲಿನಬುರುಜು—1993
  • ದೇವರನ್ನು ಪ್ರೀತಿಸುವಂತೆ ನಮ್ಮ ಹೆತ್ತವರು ನಮಗೆ ಕಲಿಸಿಕೊಟ್ಟರು
    ಕಾವಲಿನಬುರುಜು—1999
  • ನನ್ನ ಹೆತ್ತವರ ಹೆಜ್ಜೆ ಹಿಡಿದು ಹೋಗುವುದು
    ಕಾವಲಿನಬುರುಜು—1995
ಇನ್ನಷ್ಟು
ಯುವಜನರ 10 ಪ್ರಶ್ನೆಗಳಿಗೆ ಉತ್ತರ
ypq ಪ್ರಶ್ನೆ 3 ಪು. 9-11
ತನ್ನ ತಂದೆ ಮಾತಾಡುತ್ತಿರುವಾಗ ಮುಖವನ್ನು ಬೇರೆ ಕಡೆ ತಿರುಗಿಸಿಕೊಂಡಿರುವ ಯುವಕ

ಪ್ರಶ್ನೆ 3

ಅಪ್ಪ-ಅಮ್ಮನ ಹತ್ತಿರ ಹೇಗೆ ಮಾತಾಡೋದು?

ಪ್ರಾಮುಖ್ಯವೇಕೆ?

ನೀವು ನಿಮ್ಮ ಹೆತ್ತವರೊಟ್ಟಿಗೆ ಎಷ್ಟು ಚೆನ್ನಾಗಿ ಹೊಂದುಕೊಳ್ಳುತ್ತೀರೋ ನಿಮ್ಮ ಜೀವನ ಕೂಡ ಅಷ್ಟೇ ಚೆನ್ನಾಗಿರುತ್ತೆ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಇದನ್ನು ಚಿತ್ರಿಸಿಕೊಳ್ಳಿ. ಜೆಫ್ರೀಗೆ 17 ವರ್ಷ. ಅವತ್ತು ಬುಧವಾರ ರಾತ್ರಿ. ಅವನು ತನ್ನ ಎಲ್ಲಾ ಕೆಲಸ ಮುಗಿಸಿ ಸ್ವಲ್ಪ ಸಮಯ ರೆಸ್ಟ್‌ ಮಾಡೋಣ ಅಂತ ತನಗೆ ಇಷ್ಟವಾದ ಚೇರ್‌ನಲ್ಲಿ ಕೂತುಕೊಂಡು ಟಿ.ವಿ. ಆನ್‌ ಮಾಡುತ್ತಾನೆ.

ಅಷ್ಟರಲ್ಲಿ ಜೆಫ್ರೀಯ ಅಪ್ಪ ಅಲ್ಲಿಗೆ ಬರುತ್ತಾರೆ. ಅವರು ಕೋಪದಿಂದ

“ಜೆಫ್ರೀ, ನೀನು ಇಲ್ಲಿ ಟಿ.ವಿ ನೋಡುತ್ತಾ ನಿನ್ನ ಟೈಂ ವೇಸ್ಟ್‌ ಮಾಡುತ್ತಿದ್ದಿಯಾ. ನೀನು ಈ ಟೈಮಲ್ಲಿ ಹೋಂವರ್ಕ್‌ ಮಾಡೋದಕ್ಕೆ ನಿನ್‌ ತಮ್ಮನಿಗೆ ಹೆಲ್ಪ್‌ ಮಾಡಬೇಕಿತ್ತು. ಯಾವಾಗಲೂ ಹೇಳಿದ ಮಾತು ಕೇಳೋದಿಲ್ಲ ನೀನು.”

ಇದನ್ನ ಕೇಳಿದ ಜೆಫ್ರೀ “ಮತ್ತೆ ಶುರು ಮಾಡ್ಕೋಂಡ್ರಪ್ಪ ಇವರು” ಅಂತ ಗೊಣಗುತ್ತಾನೆ.

“ಹಾಂ ಏನಂದೆ” ಅಂತ ಅಂದ್ರು ಅಪ್ಪ.

ಕಿರಿಕಿರಿಗೊಂಡು ತಲೆ ಚಚ್ಚಿಕೊಳ್ಳುತ್ತಾ “ಏನೂ ಇಲ್ಲ” ಅಂದ ಜೆಫ್ರೀ.

ಆಗ ಕೋಪ ನೆತ್ತಿಗೇರಿ “ಗೊಣಗೋದೆಲ್ಲಾ ನನ್ನ ಹತ್ರ ಇಟ್ಕೊಬೇಡ” ಅಂತ ಅಪ್ಪ ಹೇಳಿದರು.

ಜೆಫ್ರೀ ಜಾಗದಲ್ಲಿ ನೀವಿದ್ದಿದ್ದರೆ ಈ ಜಗಳವನ್ನು ಆರಂಭದಲ್ಲೇ ನಿಲ್ಲಿಸಲು ಹೇಗೆ ಪ್ರಯತ್ನಿಸುತ್ತಿದ್ದಿರಿ?

ಸ್ವಲ್ಪ ಯೋಚಿಸಿ!

ಅಪ್ಪ-ಅಮ್ಮನ ಹತ್ತಿರ ಮಾತಾಡುವುದು ರಸ್ತೆಯಲ್ಲಿ ಕಾರು ಓಡಿಸೋ ಥರ. ರಸ್ತೆಯಲ್ಲಿ ಏನಾದರೂ ಅಡ್ಡಿತಡೆ ಇದ್ದರೆ ನೀವು ಬೇರೆ ದಾರಿಯಲ್ಲಿ ಹೋಗಬಹುದು.

ಸನ್ನಿವೇಶ:

ಲೇಯ ಹೇಳುವುದು, “ನಾನು ಮಾತಾಡಿ ತುಂಬಾ ಹೊತ್ತು ಆದ ಮೇಲೆ ಅಪ್ಪ, ‘ಅಯ್ಯೋ ನೀನು ಇಷ್ಟೊತ್ತು ನನ್ನ ಹತ್ರ ಮಾತಾಡುತ್ತಿದ್ದಿಯಾ, ನಾನು ಕೇಳಿಸಿಕೊಳ್ಳಲೇ ಇಲ್ಲ, ಸ್ಸಾರಿ’ ಅಂತಿದ್ದರು. ಅದಕ್ಕೆ ನನಗೆ ಅಪ್ಪನ ಹತ್ರ ಮಾತಾಡೋಕೆ ಒಂಚೂರೂ ಇಷ್ಟ ಇಲ್ಲ.”

ಈಗ ಲೇಯಳ ಮುಂದೆ ಮೂರು ದಾರಿ ಇದೆ.

  1. 1. ಕೋಪದಿಂದ ರೇಗೋದು.

    “ಅಪ್ಪಾ!!! ಇದು ತುಂಬಾ ಮುಖ್ಯವಾದ ವಿಷಯ. ಕೇಳಿಸಿಕೊಳ್ಳಿ!” ಅಂತ ಕಿರುಚೋದು.

  2. 2. ಮಾತು ನಿಲ್ಲಿಸಿಬಿಡೋದು.

    ಸಮಸ್ಯೆ ಬಗ್ಗೆ ಹೇಳೋದನ್ನು ನಿಲ್ಲಿಸಿ ಸುಮ್ಮನಾಗೋದು.

  3. 3. ಒಳ್ಳೇ ಸಮಯಕ್ಕಾಗಿ ಕಾದು ನಂತರ ಮಾತಾಡೋದು.

    ಬೇರೊಂದು ಸಮಯದಲ್ಲಿ ಅಪ್ಪನ ಹತ್ತಿರ ಮಾತಾಡುವುದು ಅಥವಾ ಸಮಸ್ಯೆ ಬಗ್ಗೆ ಒಂದು ಪತ್ರದಲ್ಲಿ ಬರೆದು ಅಪ್ಪನಿಗೆ ಕೊಡುವುದು.

ಈ ಮೂರರಲ್ಲಿ ಲೇಯ ಯಾವುದನ್ನು ಮಾಡುವಂತೆ ನೀವು ಹೇಳುತ್ತೀರಾ?

ಯೋಚಿಸಿ: ಮೊದಲನೇ ಆಯ್ಕೆಯಂತೆ ಲೇಯ ಒಂದುವೇಳೆ ಕಿರುಚಾಡಿದರೆ ಕೆಲಸದಲ್ಲಿ ಮುಳುಗಿದ್ದ ಅವರ ಅಪ್ಪನಿಗೆ ಅವಳು ಯಾಕೆ ಕಿರುಚುತ್ತಿದ್ದಾಳೆ ಅಂತ ಗೊತ್ತಾಗಲ್ಲ. ಆಗ ಅವಳ ಅಪ್ಪ ಅವಳ ಮಾತನ್ನು ಕೇಳದೇ ಹೋಗಬಹುದು. ಅಲ್ಲದೆ ಕಿರುಚಾಡಿದರೆ ಅಪ್ಪನಿಗೆ ಗೌರವ ಕೊಟ್ಟಂತೆ ಆಗುವುದಿಲ್ಲ. (ಎಫೆಸ 6:2) ಕೋಪದಿಂದ ರೇಗಾಡುವುದರಿಂದ ಯಾರಿಗೂ ಪ್ರಯೋಜನ ಆಗುವುದಿಲ್ಲ.

ಕಾರು ಮುಂದೆ ಹೋಗಲು ರಸ್ತೆಯಲ್ಲಿ ಅಡ್ಡಿ ಇದೆ

ರಸ್ತೆಯಲ್ಲಿ ಅಡ್ಡಿ ಇದ್ದಾಗ ಹೇಗೆ ಬೇರೆ ದಾರಿ ಉಪಯೋಗಿಸುತ್ತೀರೋ ಹಾಗೇ ಹೆತ್ತವರೊಟ್ಟಿಗೆ ಸಮಸ್ಯೆ ಆದಾಗ ಅವರೊಟ್ಟಿಗೆ ಮಾತಾಡಲು ಬೇರೆ ದಾರಿ ಉಪಯೋಗಿಸಿ

ಎರಡನೇ ಆಯ್ಕೆಯಂತೆ ಮಾಡುವುದು ತುಂಬ ಸುಲಭ, ಆದರೆ ಅದರಿಂದ ಹಾನಿ ಜಾಸ್ತಿ. ಯಾಕೆ? ಲೇಯಳ ಸಮಸ್ಯೆ ಪರಿಹಾರ ಆಗಬೇಕಾದರೆ ಅವಳು ಅಪ್ಪನ ಹತ್ತಿರ ಮಾತಾಡಲೇಬೇಕು. ಅಪ್ಪನಿಗೆ ಅವಳ ಸಮಸ್ಯೆ ಏನು ಅಂತ ಗೊತ್ತಾದರೆ ತಾನೇ ಸಹಾಯ ಮಾಡುವುದಕ್ಕೆ ಆಗುವುದು. ಮೌನವಾಗಿದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ.

ಮೂರನೇ ಆಯ್ಕೆಯಂತೆ ಅಪ್ಪನ ಹತ್ತಿರ ಮಾತಾಡೋದಕ್ಕೆ ಬೇರೆ ದಾರಿ ಹುಡುಕಬಹುದು. ಬೇರೆ ಸಮಯದಲ್ಲಿ ಇದರ ಬಗ್ಗೆ ಮಾತಾಡಬಹುದು ಅಥವಾ ತನ್ನ ಸಮಸ್ಯೆ ಬಗ್ಗೆ ಪತ್ರದಲ್ಲಿ ಬರೆದು ಕೊಡಬಹುದು.

ಪತ್ರ ಬರೆಯೋದು ಒಂದು ಒಳ್ಳೆ ಆಯ್ಕೆ. ಏಕೆಂದರೆ ಲೇಯ ಏನು ಹೇಳಬೇಕು ಅಂತ ಅಂದುಕೊಂಡಿರುತ್ತಾಳೋ ಅದನ್ನು ಸ್ಪಷ್ಟವಾಗಿ ಹೇಳಬಹುದು. ಅದನ್ನು ಓದುವಾಗ ಅಪ್ಪನಿಗೆ ಲೇಯಳ ಸಮಸ್ಯೆ ಏನು ಅಂತ ಗೊತ್ತಾಗುತ್ತೆ. ಮೂರನೇ ಆಯ್ಕೆಯಂತೆ ಮಾಡುವುದಾದರೆ ಲೇಯ ಮತ್ತು ಅವಳ ಅಪ್ಪ ಇಬ್ಬರಿಗೂ ಪ್ರಯೋಜನವಾಗುತ್ತೆ. ಹೀಗೆ ನೇರವಾಗಿ ಅಥವಾ ಪತ್ರದ ಮೂಲಕ ತಿಳಿಸಿದರೆ, ಅವರು “ಶಾಂತಿಯನ್ನು ಉಂಟುಮಾಡುವ . . . ವಿಷಯಗಳನ್ನು ಬೆನ್ನಟ್ಟೋಣ” ಎಂಬ ಬೈಬಲ್‌ ಸಲಹೆಯನ್ನು ಪಾಲಿಸಿದಂತಾಗುತ್ತದೆ.—ರೋಮನ್ನರಿಗೆ 14:19.

ಲೇಯಳ ಮುಂದೆ ಬೇರೆ ಯಾವ ದಾರಿ ಇದೆ?

ಒಂದು ದಾರಿಯ ಬಗ್ಗೆ ಯೋಚನೆ ಮಾಡಿ ಮತ್ತು ಅದರ ಫಲಿತಾಂಶ ಏನು ಅಂತ ಸಹ ಯೋಚನೆ ಮಾಡಿ.

ಬೈಬಲಿನ ಕಿವಿಮಾತು

“ನಿನ್ನ ತಂದೆತಾಯಿಗಳನ್ನು ಸನ್ಮಾನಿಸು.”—ಎಫೆಸ 6:2.

‘ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿ ಇರಲಿ.’—ಕೊಲೊಸ್ಸೆ 4:6.

“ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.”—ಯಾಕೋಬ 1:19.

ಸ್ಪಷ್ಟವಾಗಿ ಹೇಳಿ

ನೀವೊಂದು ಹೇಳಿದರೆ ನಿಮ್ಮ ಹೆತ್ತವರು ಇನ್ನೊಂದು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸ್ಪಷ್ಟವಾಗಿ ಹೇಳಿ.

ಸನ್ನಿವೇಶ:

ನಿಮ್ಮ ಅಪ್ಪ-ಅಮ್ಮ ‘ಯಾಕೆ ಮೂಡ್‌ ಆಫ್‌ ಆಗಿದಿಯಾ’ ಅಂತ ಕೇಳುತ್ತಾರೆ. ಆಗ ನೀವು “ಅದರ ಬಗ್ಗೆ ನನಗೆ ಮಾತಾಡೋಕೆ ಇಷ್ಟ ಇಲ್ಲ” ಅಂತ ಹೇಳುತ್ತೀರ.

ನೀವು ಹೇಳಿದ್ದನ್ನ, “ನಾನು ನಿಮ್ಮನ್ನ ನಂಬಲ್ಲ. ನನ್ನ ಸಮಸ್ಯೆ ಬಗ್ಗೆ ನಿಮ್ಮ ಹತ್ರ ಹೇಳಲ್ಲ, ನನ್ನ ಫ್ರೆಂಡ್ಸ್‌ಗೆ ಹೇಳ್ತೀನಿ” ಅಂತ ನಿಮ್ಮ ಅಪ್ಪ-ಅಮ್ಮ ಅರ್ಥಮಾಡಿಕೊಳ್ಳುತ್ತಾರೆ.

ನೆನಸಿ, ನೀವು ಒಂದು ಸಮಸ್ಯೆಲಿ ಸಿಕ್ಕಿ ಹಾಕಿಕೊಂಡಿದ್ದೀರ. ನಿಮಗೆ ಸಹಾಯ ಮಾಡಬೇಕು ಅಂತ ನಿಮ್ಮ ಹೆತ್ತವರು ಬರುತ್ತಾರೆ. ಆಗ ನೀವು “ಪರವಾಗಿಲ್ಲ, ಅದನ್ನ ನಾನೇ ಸರಿ ಮಾಡ್ಕೊತೀನಿ” ಅಂತ ಹೇಳುತ್ತೀರ.

  • ಇದನ್ನು ನಿಮ್ಮ ಹೆತ್ತವರು ಹೇಗೆ ಅರ್ಥ ಮಾಡಿಕೊಳ್ಳಬಹುದು?

  • ನೀವು ನಿಮ್ಮ ಅಪ್ಪ-ಅಮ್ಮನ ಹತ್ರ ಯಾವ ರೀತಿ ಹೇಳಿದ್ದರೆ ಚೆನ್ನಾಗಿರುತ್ತಿತ್ತು?

ನಿಮ್ಮ ತೀರ್ಮಾನ

  • ಅಪ್ಪ-ಅಮ್ಮನ ಹತ್ತಿರ ಮಾತಾಡಬಾರದು ಅಂತ ನನಗೆ ಅನಿಸಿದರೆ ನಾನು ಏನು ಮಾಡಬೇಕು?

  • ನನಗೆ ಇಷ್ಟ ಇಲ್ಲದಿರೋ ಒಂದು ವಿಷಯದ ಬಗ್ಗೆ ಮಾತಾಡುವಂತೆ ಅಪ್ಪ-ಅಮ್ಮ ನನ್ನನ್ನ ಒತ್ತಾಯ ಮಾಡಿದರೆ ನಾನು ಏನು ಮಾಡಬೇಕು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ