ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 23 ಪು. 60-ಪು. 61 ಪ್ಯಾ. 4
  • ಯೆಹೋವನಿಗೆ ಕೊಟ್ಟ ಮಾತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಗೆ ಕೊಟ್ಟ ಮಾತು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ದೇವರು ತನ್ನ ನಿಯಮಗಳನ್ನು ಕೊಡುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಅವರು ಕೊಟ್ಟ ಮಾತನ್ನು ತಪ್ಪಿದರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಉರಿಯುತ್ತಿರುವ ಪೊದೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 23 ಪು. 60-ಪು. 61 ಪ್ಯಾ. 4
ಇಸ್ರಾಯೇಲ್ಯರು ಸಿನಾಯಿ ಬೆಟ್ಟದ ಕೆಳಗೆ ನಿಂತಿದ್ದಾರೆ

ಪಾಠ 23

ಯೆಹೋವನಿಗೆ ಕೊಟ್ಟ ಮಾತು

ಈಜಿಪ್ಟಿನಿಂದ ಬಂದ ಎರಡು ತಿಂಗಳ ನಂತರ, ಇಸ್ರಾಯೇಲ್ಯರು ಸಿನಾಯಿ ಬೆಟ್ಟದ ಹತ್ತಿರ ಡೇರೆಗಳನ್ನು ಹಾಕಿ ಅಲ್ಲಿ ವಾಸಿಸಿದರು. ಯೆಹೋವನು ಮೋಶೆಯನ್ನು ಬೆಟ್ಟಕ್ಕೆ ಕರೆದು ‘ಇಸ್ರಾಯೇಲ್ಯರನ್ನು ಕಾಪಾಡಿದ್ದು ನಾನೇ. ಅವರು ನನ್ನ ಮಾತನ್ನ ತಪ್ಪದೆ ಕೇಳಿದ್ರೆ, ನನ್ನ ನಿಯಮಗಳನ್ನು ಪಾಲಿಸಿದರೆ ಅವರು ನನಗೆ ವಿಶೇಷ ಜನರಾಗ್ತಾರೆ’ ಅಂದನು. ಮೋಶೆ ಬೆಟ್ಟದಿಂದ ಇಳಿದು ಬಂದು ಯೆಹೋವನು ಹೇಳಿದ್ದನ್ನು ಇಸ್ರಾಯೇಲ್ಯರಿಗೆ ತಿಳಿಸಿದನು. ಅವರು ಏನು ಉತ್ತರ ಕೊಟ್ಟರು ಗೊತ್ತಾ? ‘ಯೆಹೋವ ಹೇಳಿದ ಪ್ರತಿಯೊಂದನ್ನ ನಾವು ಖಂಡಿತ ಮಾಡ್ತೀವಿ’ ಅಂದರು.

ಮೋಶೆ ಪುನಃ ಬೆಟ್ಟಕ್ಕೆ ಹೋದನು. ಯೆಹೋವನು ಮೋಶೆಗೆ ‘ಮೂರು ದಿನಗಳಾದ ಮೇಲೆ ನಾನು ನಿನ್ನ ಹತ್ತಿರ ಮಾತಾಡುತ್ತೇನೆ. ಜನರು ಸಿನಾಯಿ ಬೆಟ್ಟಕ್ಕೆ ಬರದಂತೆ ಎಚ್ಚರಿಸು’ ಅಂದನು. ಮೋಶೆ ಕೆಳಗೆ ಹೋಗಿ ಇಸ್ರಾಯೇಲ್ಯರಿಗೆ ‘ಯೆಹೋವನ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಾಗಿರಿ’ ಅಂದನು.

ಸಿನಾಯಿ ಬೆಟ್ಟದ ಮೇಲೆ ಮಿಂಚು ಮತ್ತು ಕಪ್ಪು ಮೋಡ ಆವರಿಸಿರುವುದನ್ನು ನೋಡುತ್ತಿದ್ದಾರೆ

ಮೂರು ದಿನಗಳ ನಂತರ, ಇಸ್ರಾಯೇಲ್ಯರು ಬೆಟ್ಟದ ಮೇಲೆ ದಟ್ಟವಾದ ಕಪ್ಪು ಮೋಡ ಹಾಗೂ ಮಿಂಚನ್ನು ನೋಡಿದರು. ಅದರೊಟ್ಟಿಗೆ ಭಯಂಕರವಾದ ಗುಡುಗು ಮತ್ತು ಕೊಂಬೂದೋ ಶಬ್ದವನ್ನೂ ಕೇಳಿಸಿಕೊಂಡರು. ನಂತರ ಯೆಹೋವನು ಬೆಂಕಿಯಲ್ಲಿ ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದನು. ಇದನ್ನೆಲ್ಲಾ ನೋಡಿ ಇಸ್ರಾಯೇಲ್ಯರು ಭಯದಿಂದ ನಡುಗಿದರು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು ಮತ್ತು ಎಲ್ಲಾ ಕಡೆ ಹೊಗೆ ತುಂಬಿಕೊಂಡಿತು. ಕೊಂಬೂದೋ ಶಬ್ದ ಹೆಚ್ಚಾಗುತ್ತಾ ಬಂತು. ಆಮೇಲೆ ದೇವರು ‘ನಾನು ನಿಮ್ಮ ದೇವರಾದ ಯೆಹೋವ. ನನ್ನನ್ನು ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು’ ಎಂದನು.

ಮೋಶೆ ಪುನಃ ಬೆಟ್ಟಕ್ಕೆ ಹೋದನು. ಅಲ್ಲಿ ಯೆಹೋವನು ಅವನಿಗೆ ಆಜ್ಞೆಗಳನ್ನ ಕೊಟ್ಟನು. ಅದರಲ್ಲಿ ಜನರು ದೇವರನ್ನು ಹೇಗೆ ಆರಾಧಿಸಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಅಂತ ಇತ್ತು. ಮೋಶೆ ಆ ಆಜ್ಞೆಗಳನ್ನ ಬರೆದು ಇಸ್ರಾಯೇಲ್ಯರ ಮುಂದೆ ಓದಿದನು. ಆಗ ಇಸ್ರಾಯೇಲ್ಯರು ‘ಯೆಹೋವ ಹೇಳಿದ ಪ್ರತಿಯೊಂದನ್ನ ನಾವು ಖಂಡಿತ ಮಾಡ್ತೀವಿ’ ಎಂದು ಮಾತು ಕೊಟ್ಟರು. ಅವರು ಮಾತು ಕೊಟ್ಟಿದ್ದು ಸ್ವತಃ ಯೆಹೋವನಿಗೆ. ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಂಡರಾ?

“ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.”—ಮತ್ತಾಯ 22:37

ಪ್ರಶ್ನೆಗಳು: ಸಿನಾಯಿ ಬೆಟ್ಟದ ಮೇಲೆ ಏನಾಯಿತು? ಇಸ್ರಾಯೇಲ್ಯರು ಏನು ಮಾಡುತ್ತೇವೆಂದು ಮಾತು ಕೊಟ್ಟರು?

ವಿಮೋಚನಕಾಂಡ 19:1–20:21; 24:1-8; ಧರ್ಮೋಪದೇಶಕಾಂಡ 7:6-9; ನೆಹೆಮೀಯ 9:13, 14

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ