ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 98 ಪು. 228-ಪು. 229 ಪ್ಯಾ. 1
  • ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಕ್ರೈಸ್ತ ಮಿಷನೆರಿ ಕೆಲಸದ ಒಂದು ಪ್ರೇರಿತ ಮಾದರಿ
    ಕಾವಲಿನಬುರುಜು—1992
  • ಯೆಹೋವನ ಜನರು ನಂಬಿಕೆಯಲ್ಲಿ ದೃಢಗೊಳಿಸಲ್ಪಟ್ಟರು
    ಕಾವಲಿನಬುರುಜು—1991
  • ‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ‘ಯೆಹೋವನಿಂದ ಶಕ್ತಿ ಪಡ್ಕೊಂಡು ಧೈರ್ಯವಾಗಿ ಮಾತಾಡಿದ್ರು’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 98 ಪು. 228-ಪು. 229 ಪ್ಯಾ. 1
ಅಪೊಸ್ತಲ ಪೌಲ ಮತ್ತು ಬಾರ್ನಬರು ಸೈಪ್ರಸ್‌ ಪ್ರಾಂತ್ಯದ ರಾಜ್ಯಪಾಲನಾದ ಸೆರ್ಗ್ಯ ಪೌಲನಿಗೆ ಸಾರುತ್ತಿದ್ದಾರೆ

ಪಾಠ 98

ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು

ಇಡೀ ಭೂಮಿಯಲ್ಲಿ ಸಿಹಿಸುದ್ದಿಯನ್ನು ಸಾರಬೇಕೆಂಬ ಯೇಸುವಿನ ಆಜ್ಞೆಯನ್ನು ಅಪೊಸ್ತಲರು ಪಾಲಿಸಿದರು. ಕ್ರಿ.ಶ. 47ರಲ್ಲಿ ಅಂತಿಯೋಕ್ಯದಲ್ಲಿದ್ದ ಸಹೋದರರು ಪೌಲ ಮತ್ತು ಬಾರ್ನಬರನ್ನು ಅನೇಕ ಊರುಗಳಿಗೆ ಸಾರಲು ಕಳುಹಿಸಿದರು. ಇವರಿಬ್ಬರೂ ಏಷ್ಯಾ ಮೈನರ್‌ನ ದೆರ್ಬೆ, ಲುಸ್ತ್ರ, ಇಕೋನ್ಯ ಮುಂತಾದ ಸ್ಥಳಗಳಿಗೆ ಹೋಗಿ ಹುರುಪಿನಿಂದ ಸಾರಿದರು.

ಪೌಲ ಮತ್ತು ಬಾರ್ನಬರು ಶ್ರೀಮಂತರು-ಬಡವರು, ಚಿಕ್ಕವರು-ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರಿಗೂ ಸಾರಿದರು. ಅನೇಕರು ಯೇಸುವಿನ ಬಗ್ಗೆ ಸತ್ಯವನ್ನು ಸ್ವೀಕರಿಸಿದರು. ಪೌಲ ಮತ್ತು ಬಾರ್ನಬರು ಸೆರ್ಗ್ಯ ಪೌಲನೆಂಬ ಸೈಪ್ರಸ್‌ ಪ್ರಾಂತ್ಯದ ರಾಜ್ಯಪಾಲನಿಗೆ ಸಾರಿದಾಗ ಒಬ್ಬ ಮಂತ್ರವಾದಿ ಅವರನ್ನು ತಡೆಯಲು ಪ್ರಯತ್ನಿಸಿದನು. ಆಗ ಪೌಲನು ಆ ಮಂತ್ರವಾದಿಗೆ, ‘ಯೆಹೋವ ನಿನಗೆ ಶಿಕ್ಷೆ ಕೊಡ್ತಾನೆ’ ಎಂದನು. ತಕ್ಷಣ, ಆ ಮಂತ್ರವಾದಿ ಕುರುಡನಾದನು. ಇದನ್ನು ನೋಡಿದ ರಾಜ್ಯಪಾಲ ಸೆರ್ಗ್ಯ ಪೌಲನು ಕ್ರೈಸ್ತನಾದನು.

ಪೌಲ ಮತ್ತು ಬಾರ್ನಬರು ಮನೆಯಿಂದ ಮನೆಗೆ, ಮಾರುಕಟ್ಟೆಗಳಲ್ಲಿ, ಬೀದಿಗಳಲ್ಲಿ ಮತ್ತು ಸಭಾಮಂದಿರಗಳಲ್ಲಿ, ಹೀಗೆ ಎಲ್ಲಾ ಕಡೆಗಳಲ್ಲಿ ಸಾರಿದರು. ಅವರು ಲುಸ್ತ್ರದಲ್ಲಿ ಒಬ್ಬ ಕುಂಟನನ್ನು ವಾಸಿ ಮಾಡಿದಾಗ ಅದನ್ನು ನೋಡಿದವರು ಪೌಲ ಮತ್ತು ಬಾರ್ನಬರನ್ನು ದೇವರು ಎಂದು ಭಾವಿಸಿ ಆರಾಧಿಸಲು ಆರಂಭಿಸಿದರು. ಆದರೆ ಪೌಲ-ಬಾರ್ನಬರು, ‘ದೇವರನ್ನ ಮಾತ್ರ ಆರಾಧಿಸಿ, ನಾವೂ ನಿಮ್ಮ ತರಾನೇ ಮನುಷ್ಯರು’ ಎಂದು ಹೇಳಿ ಆ ಜನರನ್ನು ತಡೆದರು. ನಂತರ, ಕೆಲವು ಯೆಹೂದಿಗಳು ಬಂದು ಜನರನ್ನು ಪೌಲನ ವಿರುದ್ಧ ಎತ್ತಿಕಟ್ಟಿದರು. ಆಗ ಜನರು ಪೌಲನ ಮೇಲೆ ಕಲ್ಲೆಸೆದರು. ಅವನನ್ನು ಪಟ್ಟಣದಿಂದ ಹೊರಕ್ಕೆ ಎಳೆದುಕೊಂಡು ಹೋಗಿ ಅವನು ಸತ್ತನೆಂದು ಭಾವಿಸಿ ಅಲ್ಲೇ ಬಿಟ್ಟು ಹೋದರು. ಆದರೆ, ಪೌಲನು ಇನ್ನೂ ಬದುಕಿದ್ದನು. ತಕ್ಷಣ, ಸಹೋದರರು ಅವನ ರಕ್ಷಣೆಗೆ ಬಂದರು. ಆಮೇಲೆ ಅವನನ್ನು ಪಟ್ಟಣದೊಳಕ್ಕೆ ಕರೆದುಕೊಂಡು ಹೋದರು. ನಂತರ, ಪೌಲನು ಅಂತಿಯೋಕ್ಯಕ್ಕೆ ಹಿಂದಿರುಗಿದನು.

ಕ್ರಿ.ಶ. 49ರಲ್ಲಿ ಪೌಲನು ಇನ್ನೊಂದು ಪ್ರಯಾಣ ಮಾಡಿದನು. ಏಷ್ಯಾ ಮೈನರ್‌ನಲ್ಲಿರುವ ಸಹೋದರರನ್ನು ನೋಡಲು ಹೋದನು. ನಂತರ, ಯೂರೋಪಿನಷ್ಟು ದೂರದೂರಿಗೆ ಸಿಹಿಸುದ್ದಿ ಸಾರಿದನು. ಅವನು ಅಥೆನ್ಸ್‌, ಎಫೆಸ, ಫಿಲಿಪ್ಪಿ, ಥೆಸಲೋನಿಕ ಮತ್ತು ಇತರ ಅನೇಕ ಊರುಗಳಿಗೆ ಹೋದನು. ಸೀಲ, ಲೂಕ ಮತ್ತು ಯುವ ತಿಮೊತಿ ಸಹ ಪೌಲನ ಜೊತೆಯಲ್ಲಿ ಹೋದರು. ಅವರೆಲ್ಲರೂ ಸೇರಿ ಅನೇಕ ಸಭೆಗಳನ್ನು ಸ್ಥಾಪಿಸಿದರು ಮತ್ತು ಸಹೋದರರನ್ನು ಬಲಪಡಿಸಿದರು. ಪೌಲನು ಒಂದುವರೆ ವರ್ಷ ಕೊರಿಂಥದಲ್ಲೇ ಉಳಿದು ಅಲ್ಲಿನ ಸಹೋದರರನ್ನು ಬಲಪಡಿಸಿದನು. ಅವನು ಸಾರುತ್ತಾ, ಕಲಿಸುತ್ತಾ ಅನೇಕ ಸಭೆಗಳಿಗೆ ಪತ್ರಗಳನ್ನು ಬರೆದನು. ಅವನು ಡೇರೆ ಹೊಲಿಯುವ ಕೆಲಸ ಸಹ ಮಾಡಿದನು. ಸಮಯಾನಂತರ, ಪೌಲನು ಅಂತಿಯೋಕ್ಯಕ್ಕೆ ಹಿಂದಿರುಗಿದನು.

ಅಪೊಸ್ತಲ ಪೌಲನು ಮಾರುಕಟ್ಟೆಯಲ್ಲಿ ಸಾರುತ್ತಿದ್ದಾನೆ

ಕ್ರಿ.ಶ. 52ರಲ್ಲಿ ಪೌಲನು ಮೂರನೇ ಮಿಷನರಿ ಪ್ರಯಾಣ ಮಾಡಿದನು. ಏಷ್ಯಾ ಮೈನರ್‌ನಿಂದ ಆರಂಭಿಸಿ ಉತ್ತರದ ಫಿಲಿಪ್ಪಿಗೆ ಮತ್ತು ನಂತರ ಕೊರಿಂಥಕ್ಕೆ ಹೋದನು. ಪೌಲನು ಎಫೆಸದಲ್ಲಿ ಕಲಿಸುತ್ತಾ, ವಾಸಿಮಾಡುತ್ತಾ, ಸಭೆಗೆ ಸಹಾಯ ಮಾಡುತ್ತಾ ಅನೇಕ ವರ್ಷ ಅಲ್ಲೇ ಕಳೆದನು. ಅವನು ಶಾಲೆಯ ಸಭಾಂಗಣದಲ್ಲಿ ಪ್ರತಿದಿನ ಭಾಷಣ ನೀಡಿದನು. ಅನೇಕರು ಅದನ್ನು ಕೇಳಿ ತಮ್ಮ ಜೀವನ ರೀತಿಯನ್ನು ಬದಲಾಯಿಸಿಕೊಂಡರು. ಹೀಗೆ ಅನೇಕ ಊರುಗಳಲ್ಲಿ ಸಾರಿದ ನಂತರ ಪೌಲನು ಯೆರೂಸಲೇಮಿಗೆ ಹಿಂದಿರುಗಿದನು.

“ನೀವು ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ.”—ಮತ್ತಾಯ 28:19

ಪ್ರಶ್ನೆಗಳು: ಬೈಬಲ್‌ನಲ್ಲಿರುವ ನಕ್ಷೆಯನ್ನು (ಹೊಸ ಲೋಕ ಭಾಷಾಂತರ, ಪರಿಶಿಷ್ಟ ಬಿ13) ಬಳಸಿ ಪೌಲನು ಎಲ್ಲೆಲ್ಲಾ ಪ್ರಯಾಣಿಸಿ ಸಾರಿದನೆಂದು ವಿವರಿಸಿ.

ಅಪೊಸ್ತಲರ ಕಾರ್ಯ 13:1–23:35

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ