ಭಾಗ 10—ಪರಿಚಯ
ಯೆಹೋವನು ಇಡೀ ವಿಶ್ವದ ರಾಜ. ಈ ಮುಂಚೆ ಎಲ್ಲವೂ ಆತನ ನಿಯಂತ್ರಣದಲ್ಲಿತ್ತು, ಮುಂದೆಯೂ ಎಲ್ಲವೂ ಆತನ ನಿಯಂತ್ರಣದಲ್ಲೇ ಇರುತ್ತದೆ. ಉದಾಹರಣೆಗೆ, ಯೆಹೋವನು ಯೆರೆಮೀಯನನ್ನು ಸಾವಿನ ದವಡೆಯಿಂದ ಕಾಪಾಡಿದನು. ಶದ್ರಕ್, ಮೇಶಕ್ ಮತ್ತು ಅಬೇದ್‌ನೆಗೋರನ್ನು ಧಗಧಗನೆ ಉರಿಯುವ ಬೆಂಕಿಯಿಂದ ಕಾಪಾಡಿದನು. ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದನು. ಯೆಹೋವನು ಎಸ್ತೇರಳನ್ನು ಸಂರಕ್ಷಿಸಿದ. ಇದರಿಂದ ಅವಳು ಇಡೀ ಇಸ್ರಾಯೇಲ್ ಜನಾಂಗವನ್ನು ಕಾಪಾಡಲು ಸಾಧ್ಯವಾಯಿತು. ಕೆಟ್ಟ ವಿಷಯಗಳು ಮುಂದುವರೆಯುವಂತೆ ಯೆಹೋವನು ಬಿಡುವುದಿಲ್ಲ. ದೊಡ್ಡ ಮೂರ್ತಿ ಮತ್ತು ಮರದ ಭವಿಷ್ಯವಾಣಿಗಳು ಯೆಹೋವನ ಆಳ್ವಿಕೆ ಬೇಗನೇ ಎಲ್ಲಾ ದುಷ್ಟತನವನ್ನು ತೆಗೆದುಹಾಕಿ ಭೂಮಿಯನ್ನು ಸದಾಕಾಲ ಆಳುವುದೆಂಬ ಖಾತ್ರಿಯನ್ನು ಕೊಡುತ್ತವೆ.