ಭಾಗ 12—ಪರಿಚಯ
ಯೇಸು ಜನರಿಗೆ ದೇವರ ಆಳ್ವಿಕೆಯ ಬಗ್ಗೆ ಕಲಿಸಿದನು. ಅಷ್ಟೇ ಅಲ್ಲ, ದೇವರ ಹೆಸರು ಪವಿತ್ರವಾಗಲಿ, ಆತನ ಆಳ್ವಿಕೆಗಾಗಿ, ಆತನ ಇಷ್ಟ ಭೂಮಿಯಲ್ಲಿ ನೇರವೇರಲಿಕ್ಕಾಗಿ ಪ್ರಾರ್ಥಿಸುವಂತೆ ಕಲಿಸಿದನು. ಹೆತ್ತವರೇ, ಈ ಪ್ರಾರ್ಥನೆಯಿಂದ ನಮಗೇನು ಪ್ರಯೋಜನ ಎಂದು ಮಕ್ಕಳಿಗೆ ವಿವರಿಸಿ. ತನ್ನ ನಿಷ್ಠೆಯನ್ನು ಮುರಿಯಲು ಯೇಸು ಸೈತಾನನಿಗೆ ಅವಕಾಶ ಕೊಡಲಿಲ್ಲ. ಯೇಸು ತನ್ನ ಅಪೊಸ್ತಲರನ್ನು ಆರಿಸಿಕೊಂಡನು. ಇವರು ದೇವರ ಆಳ್ವಿಕೆಯ ಮೊದಲ ಸದಸ್ಯರಾಗಿ ಪ್ರಾಮುಖ್ಯ ಪಾತ್ರ ವಹಿಸಲಿದ್ದರು. ಸತ್ಯಾರಾಧನೆಯ ಕಡೆಗೆ ಯೇಸುವಿಗಿದ್ದ ಹುರುಪನ್ನು ಗಮನಿಸಿ. ಬೇರೆಯವರಿಗೆ ಸಹಾಯ ಮಾಡಬೇಕೆಂದು ಯೇಸು ರೋಗಿಗಳನ್ನು ವಾಸಿ ಮಾಡಿದನು, ಹಸಿದವರಿಗೆ ಆಹಾರ ಕೊಟ್ಟನು, ಅಲ್ಲದೆ ಸತ್ತವರನ್ನು ಮತ್ತೆ ಎಬ್ಬಿಸಿದನು. ದೇವರ ಆಳ್ವಿಕೆ ಮಾನವರಿಗೆ ಏನೆಲ್ಲಾ ಮಾಡುವುದು ಎಂದು ಯೇಸು ಈ ಅದ್ಭುತಗಳ ಮೂಲಕ ತೋರಿಸಿದನು.