ಗೀತೆ 3
ಯೆಹೋವ ನಮ್ಮ ಆಶ್ರಯ, ವಿಶ್ವಾಸ
1. ಓ ಯೆಹೋವ ನೋಡು ಹೃದಯ
ಆತಂಕದ ಗಾಯ
ನೊಂದು ಹೋಗಿದೆ ಈ ಜೀವ
ಸಾಕಾಗಿದೆ ದೇವ
ಈಗ ಬೇಕು ನಿನ್ನ ಸಾಂತ್ವನ
ನೀಡಿದೆ ನೀ ವಾಗ್ದಾನ
ಆದರೂ, ಭಯ ಯೆಹೋವ
ಸಂತೈಸು ಓ ದೇವ
(ಪಲ್ಲವಿ)
ನಿನ್ನಲ್ಲೇ ನಂಬಿಕೆ
ನೀನೇ ಆಸರೆ
ಇನ್ನಿಲ್ಲ ಭಯ ಯೆಹೋವ
ನೀಡಿದೆ ಶಕ್ತಿಯ
ನೀನೇ ಆಶ್ರಯ
ನಮ್ಮ ವಿಶ್ವಾಸ ನೀ ದೇವ
2. ಕಷ್ಟದ ಬಿಸಿ ತಾಕಿರಲು
ತಂಗಾಳಿ ನೀನಾದೆ
ನೋವಿನ ಪ್ರವಾಹದಲ್ಲೂ
ಕೈ ಚಾಚಿದೆ ತಂದೆ
ನೀನು ತೋರೊ ಪ್ರೀತಿ ನಿಸ್ವಾರ್ಥ
ಅದನ್ನೀಗ ಸಾರೋಣ
ಹೆಚ್ಚಿದೆ ನಮ್ಮ ವಿಶ್ವಾಸ
ನೀ ನೀಡಿದೆ ಧೈರ್ಯ
(ಪಲ್ಲವಿ)
ನಿನ್ನಲ್ಲೇ ನಂಬಿಕೆ
ನೀನೇ ಆಸರೆ
ಇನ್ನಿಲ್ಲ ಭಯ ಯೆಹೋವ
ನೀಡಿದೆ ಶಕ್ತಿಯ
ನೀನೇ ಆಶ್ರಯ
ನಮ್ಮ ವಿಶ್ವಾಸ ನೀ ದೇವ
(ಕೀರ್ತ. 72:13, 14; ಜ್ಞಾನೋ. 3:5, 6, 26; ಯೆರೆ. 17:7 ಸಹ ನೋಡಿ)