ಗೀತೆ 7
ಯೆಹೋವ, ನಮ್ಮ ಶಕ್ತಿ
1. ಯೆಹೋವ, ನೀನೇ ನಮ್ಮ ಶಕ್ತಿಯು
ಓ ದೇವ ನಾವು ನಿನ್ನ ಸಾಕ್ಷಿಯು.
ರಕ್ಷಣೆ ಮಾಡಲು ನೀ ಶಕ್ತನು
ಕಾದು ಕಾಪಾಡು ದೇವ ನಮ್ಮನ್ನು.
(ಪಲ್ಲವಿ)
ನೀನೇ ಗುರಾಣಿ, ನೀನಾದೆ ಬಂಡೆ
ನೀನೇ ಆಧಾರ, ನೀನೇ ಕೋಟೆ.
ದೇವ ಯೆಹೋವ, ಸರ್ವಶಕ್ತನೇ
ನಿನ್ನ ಬಗ್ಗೆ ಸದಾ ಸಾರುತ್ತೇವೆ.
2. ಸತ್ಯದ ದೀಪವು ದಾರಿಯಲ್ಲಿ,
ತುಂಬಿದೆ ನಿನ್ನ ಮಾತು ನಮ್ಮಲ್ಲಿ.
ಆಜ್ಞೆಯ ಪಾಲಿಸೋದು ಕರ್ತವ್ಯ
ನಿನ್ನಾಳ್ವಿಕೆ ದಿನಾಲೂ ಪ್ರಾಮುಖ್ಯ.
(ಪಲ್ಲವಿ)
ನೀನೇ ಗುರಾಣಿ, ನೀನಾದೆ ಬಂಡೆ
ನೀನೇ ಆಧಾರ, ನೀನೇ ಕೋಟೆ.
ದೇವ ಯೆಹೋವ, ಸರ್ವಶಕ್ತನೇ
ನಿನ್ನ ಬಗ್ಗೆ ಸದಾ ಸಾರುತ್ತೇವೆ.
3. ಈ ಲೋಕ ತಂದರೂ ಸಂಕಷ್ಟವ,
ಸೈತಾನ ಕೊಂದರೂ ಈ ಜೀವವ,
ನಮ್ಮಾಣೆ ಈ ನಿಯತ್ತು ನಿಂಗೆನೇ.
ನೀಡು ನಿನ್ನ ಬಲ ಯೆಹೋವನೇ.
(ಪಲ್ಲವಿ)
ನೀನೇ ಗುರಾಣಿ, ನೀನಾದೆ ಬಂಡೆ
ನೀನೇ ಆಧಾರ, ನೀನೇ ಕೋಟೆ.
ದೇವ ಯೆಹೋವ, ಸರ್ವಶಕ್ತನೇ
ನಿನ್ನ ಬಗ್ಗೆ ಸದಾ ಸಾರುತ್ತೇವೆ.
(2 ಸಮು. 22:3; ಕೀರ್ತ. 18:2; ಯೆಶಾ. 43:12 ಸಹ ನೋಡಿ)