ಗೀತೆ 12
ಅತ್ಯುನ್ನತ ದೇವ - ಯೆಹೋವ!
1. ದೇವ ಯೆಹೋವ, ನೀ ಸರ್ವಶಕ್ತ,
ಸೃಷ್ಟಿಗೆಲ್ಲ ಮೂಲನು,
ಪ್ರೀತಿಯ ಸ್ವರೂಪನು,
ಎಂದೆಂದೂ ಬಾಳೋ ನೀನು ಅನಂತ
ನಮ್ಮ ದೇವನು ನೀನು!
2. ಪ್ರೀತಿ ಕಣ್ಣಿಂದ, ನಮ್ಮನ್ನು ನೋಡಿ
ಪ್ರಾರ್ಥನೆಯ ಕೇಳುತ
ಪೋಷಿಸಿ ಕಾಪಾಡಿದೆ
ಅಪ್ಪ ಈ ನಿನ್ನ, ಪ್ರೀತಿ ಸುವ್ಯಕ್ತ
ಮಾರ್ಗದರ್ಶಿಸು ಹೀಗೆ!
3. ಆಕಾಶ ಭೂಮಿ, ಎಲ್ಲೆಲ್ಲೂ ನಿನ್ನ
ಕೀರ್ತಿಯ ಕೊಂಡಾಡುತಾ
ಪ್ರೀತಿಸೋ ಮನಗಳು!
ನಮ್ಮ ಸಂಪೂರ್ಣ ಆರಾಧನೆಯ
ಸ್ವೀಕರಿಸು ನೀ ತಂದೆ.
(ಧರ್ಮೋ. 32:4; ಜ್ಞಾನೋ. 16:12; ಮತ್ತಾ. 6:10; ಪ್ರಕ. 4:11 ಸಹ ನೋಡಿ)